< Levítico 20 >
1 Falou mais o Senhor a Moisés, dizendo:
೧ಯೆಹೋವನು ಮೋಶೆಯೊಂದಿಗೆ ಮಾತನಾಡಿ,
2 Também dirás aos filhos de Israel: Qualquer que, dos filhos de Israel, ou dos estrangeiros que peregrinam em Israel, der da sua semente a Molech, certamente morrerá; o povo da terra o apedrejará com pedras.
೨“ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಾಗಲಿ ಅಥವಾ ಅವರ ನಡುವೆ ವಾಸವಾಗಿರುವ ಪರದೇಶದವರಲ್ಲಾಗಲಿ ಯಾವನಾದರೂ ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟರೆ, ಅವನಿಗೆ ಮರಣಶಿಕ್ಷೆಯಾಗಬೇಕು; ದೇಶದ ಜನರು ಅವನನ್ನು ಕಲ್ಲೆಸೆದು ಕೊಲ್ಲಬೇಕು.
3 E eu porei a minha face contra esse homem, e o extirparei do meio do seu povo, porquanto deu da sua semente a Molech, para contaminar o meu santuário e profanar o meu santo nome.
೩ಅವನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟು, ನನ್ನ ದೇವಸ್ಥಾನವನ್ನು ಅಶುದ್ಧಮಾಡಿ, ನನ್ನ ಪರಿಶುದ್ಧವಾದ ಹೆಸರನ್ನು ಅಪಕೀರ್ತಿಗೆ ಒಳಪಡಿಸಿದರೆ, ನಾನು ಅವನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.
4 E, se o povo da terra de alguma maneira esconder os seus olhos daquele homem que houver dado da sua semente a Molech, assim que o não matem,
೪ಆ ಮನುಷ್ಯನು ತನ್ನ ಮಕ್ಕಳಲ್ಲಿ ಯಾರನ್ನಾದರೂ ಮೋಲೆಕನಿಗೆ ಕೊಟ್ಟಾಗ ಸ್ವದೇಶದವರು ಅವನನ್ನು ಕೊಲ್ಲದೆ ಅವನು ಮಾಡಿದ ಕೆಲಸವನ್ನು ನೋಡಿಯೂ ನೋಡದವರಂತಿದ್ದರೆ,
5 Então eu porei a minha face contra aquele homem, e contra a sua família, e o extirparei do meio do seu povo, com todos os que fornicam após dele, fornicando após de Molech.
೫ಆಗ ನಾನು ಆ ಮನುಷ್ಯನಿಗೂ ಮತ್ತು ಅವನ ಕುಟುಂಬದವರಿಗೂ ವಿಮುಖನಾಗಿ ಅವನನ್ನು ಮಾತ್ರವಲ್ಲದೆ, ಅವನನ್ನು ಹೊಂದಿಕೊಂಡು ದೇವದ್ರೋಹಿಗಳಾಗಿ ಮೋಲೆಕನಿಗೆ ಸೇವೆ ಮಾಡಿದವರೆಲ್ಲರನ್ನು ಕುಲದಿಂದ ತೆಗೆದುಹಾಕುವೆನು.
6 Quando uma alma se virar para os adivinhadores e encantadores, para fornicar após deles, eu porei a minha face contra aquela alma, e a extirparei do meio do seu povo.
೬“‘ಯಾವನಾದರೂ ಸತ್ತವರಲ್ಲಿ ವಿಚಾರಿಸುವವರ ಅಥವಾ ಬೇತಾಳಿಕರ ಬಳಿಗೆ ಹೋಗಿ ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ, ನಾನು ಆ ಮನುಷ್ಯನಿಗೆ ವಿಮುಖನಾಗಿ ಅವನನ್ನು ಕುಲದಿಂದ ತೆಗೆದುಹಾಕುವೆನು.
7 Portanto santificai-vos, e sede santos, pois Eu sou o Senhor vosso Deus.
೭ನಾನು ನಿಮ್ಮ ದೇವರಾದ ಯೆಹೋವನಾಗಿರುವುದರಿಂದ ನೀವು ನನ್ನವರಾಗಿ ಪರಿಶುದ್ಧರಾಗಿರಬೇಕು.
8 E guardai os meus estatutos, e fazei-os: Eu sou o Senhor que vos santifica.
೮ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯಬೇಕು. ನಾನು ನಿಮ್ಮನ್ನು ಪರಿಶುದ್ಧಜನವಾಗುವಂತೆ ಮಾಡುವ ಯೆಹೋವನು.
9 Quando um homem amaldiçoar a seu pai ou a sua mãe certamente morrerá: amaldiçoou a seu pai ou a sua mãe; o seu sangue é sobre ele.
೯“‘ತಂದೆಯನ್ನಾಗಲಿ ಅಥವಾ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣಶಿಕ್ಷೆಯಾಗಬೇಕು. ತಂದೆತಾಯಿಗಳನ್ನು ದೂಷಿಸುವುದರಿಂದ ಅವನಿಗೆ ಸಂಭವಿಸಿದ ಮರಣಶಿಕ್ಷೆಗೆ ಅವನೇ ಕಾರಣನು.
10 Também o homem que adulterar com a mulher de outro, havendo adulterado com a mulher do seu próximo, certamente morrerá o adúltero e a adúltera.
೧೦“‘ಯಾವನಾದರೂ ಪರನ ಪತ್ನಿಯೊಡನೆ ವ್ಯಭಿಚಾರವನ್ನು ಮಾಡಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು.
11 E o homem que se deitar com a mulher de seu pai descobriu a nudez de seu pai; ambos certamente morrerão: o seu sangue é sobre eles.
೧೧ಯಾವನಾದರೂ ಮಲತಾಯಿಯನ್ನು ಸಂಗಮಿಸಿದರೆ ಅವನು ತಂದೆಗೆ ಮಾನಭಂಗಮಾಡಿದ ಹಾಗಾಯಿತು; ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು; ಆ ಶಿಕ್ಷೆಗೆ ಅವರೇ ಕಾರಣರು.
12 Semelhantemente, quando um homem se deitar com a sua nora, ambos certamente morrerão: fizeram confusão; o seu sangue é sobre eles.
೧೨ಯಾವನಾದರೂ ಸೊಸೆಯನ್ನು ಸಂಗಮಿಸಿದರೆ ಅವರಿಬ್ಬರಿಗೂ ಮರಣಶಿಕ್ಷೆಯಾಗಬೇಕು; ಅವರು ಧರ್ಮವಿರುದ್ಧವಾದ ಕಾರ್ಯವನ್ನು ಮಾಡಿರುವುದರಿಂದ ಆ ಶಿಕ್ಷೆಗೆ ಅವರೇ ಕಾರಣರು.
13 Quando também um homem se deitar com outro homem, como com mulher, ambos fizeram abominação; certamente morrerão; o seu sangue é sobre eles.
೧೩ಯಾವನಾದರೂ ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಿದರೆ ಅವರಿಬ್ಬರೂ ಅಸಹ್ಯವಾದ ಕೆಲಸವನ್ನು ಮಾಡಿದ್ದರಿಂದ ಅವರಿಗೆ ಮರಣಶಿಕ್ಷೆಯಾಗಬೇಕು; ಆ ಶಿಕ್ಷೆಗೆ ಅವರೇ ಕಾರಣರು.
14 E, quando um homem tomar uma mulher e a sua mãe, maldade é: a ele e a elas queimarão com fogo, para que não haja maldade no meio de vós
೧೪ಯಾವನಾದರೂ ಒಬ್ಬ ಸ್ತ್ರೀಯನ್ನು ಹಾಗೂ ಅವಳ ತಾಯಿಯನ್ನು ಸಂಗಮಿಸಿದರೆ ಅದು ಅತಿದುಷ್ಟಕಾರ್ಯವಾದುದರಿಂದ ಆ ಮೂರು ಜನರನ್ನು ಬೆಂಕಿಯಿಂದ ಸುಡಿಸಿಬಿಡಬೇಕು; ಅಂತಹ ದುರಾಚಾರವು ನಿಮ್ಮಲ್ಲಿ ಎಷ್ಟು ಮಾತ್ರವೂ ನಡೆಯಬಾರದು.
15 Quando também um homem se deitar com um animal, certamente morrerá; e matareis o animal.
೧೫ಯಾವನಾದರೂ ಪಶುಸಂಗ ಮಾಡಿದರೆ ಅವನಿಗೆ ಮರಣ ಶಿಕ್ಷೆಯಾಗಬೇಕು; ಆ ಪಶುವನ್ನು ಕೊಲ್ಲಿಸಬೇಕು.
16 Também a mulher que se chegar a algum animal, para ter ajuntamento com ele, aquela mulher matarás com o animal; certamente morrerão; o seu sangue é sobre eles.
೧೬ಯಾವ ಸ್ತ್ರೀಯಾದರೂ ಪಶುವಿನಿಂದ ಸಂಗಮಮಾಡಿಸಿಕೊಂಡರೆ ಆ ಸ್ತ್ರೀಯನ್ನು ಮತ್ತು ಪಶುವನ್ನು ಕೊಲ್ಲಿಸಬೇಕು; ಅವಳಿಗೂ ಹಾಗೂ ಅದಕ್ಕೂ ಮರಣವೇ ನಿಯಮ; ಆ ಮರಣ ಶಿಕ್ಷೆಗೆ ತಾವೇ ಕಾರಣರು.
17 E, quando um homem tomar a sua irmã, filha de seu pai, ou filha de sua mãe, e ele vir a nudez dela, e ela vir a sua, torpeza é: portanto serão extirpados aos olhos dos filhos do seu povo: descobriu a nudez de sua irmã, levará sobre si a sua iniquidade.
೧೭ಯಾವನಾದರೂ ತನ್ನ ಒಡಹುಟ್ಟಿದವಳನ್ನು ಅಂದರೆ ತಂದೆಯ ಮಗಳನ್ನಾಗಲಿ ಅಥವಾ ತಾಯಿಯ ಮಗಳನ್ನಾಗಲಿ ಕರೆದುಕೊಂಡು ಅವಳ ಮಾನವನ್ನು ಇವನೂ ಹಾಗು ಇವನ ಮಾನವನ್ನು ಅವಳೂ ನೋಡಿದರೆ ಅದು ನಾಚಿಕೆಗೇಡಾದ ಕೆಲಸವಾಗಿರುವುದರಿಂದ ಅವರ ಕುಲದವರ ಎದುರಾಗಿಯೇ ಅವರಿಗೆ ಮರಣಶಿಕ್ಷೆಯನ್ನು ಮಾಡಿಸಬೇಕು. ಆ ಮನುಷ್ಯನು ಒಡಹುಟ್ಟಿದವಳನ್ನು ಸಂಗಮಿಸಿದ್ದರಿಂದ ತನ್ನ ಪಾಪದ ಫಲವನ್ನು ಅನುಭವಿಸಬೇಕು.
18 E, quando um homem se deitar com uma mulher que tem a sua enfermidade, e descobriu a sua nudez, descobrindo a sua fonte, e ela descobrir a fonte do seu sangue, ambos serão extirpados do meio do seu povo.
೧೮ಯಾವನಾದರೂ ಮುಟ್ಟಾದ ಸ್ತ್ರೀಯನ್ನು ಸಂಗಮಿಸಿದರೆ ಅವನು ಅವಳ ರಕ್ತಸ್ರಾವದ ಸ್ಥಾನವನ್ನು ಬಯಲುಪಡಿಸಿದವನು, ಅವಳು ಬಯಲುಪಡಿಸಿಕೊಂಡವಳು; ಆದುದರಿಂದ ಅವರಿಬ್ಬರನ್ನು ಕುಲದಿಂದ ಹೊರಗೆ ಹಾಕಬೇಕು.
19 Também a nudez da irmã de tua mãe, ou da irmã de teu pai não descobrirás: porquanto descobriu a sua parenta, sobre si levarão a sua iniquidade.
೧೯ತಂದೆಯ ಅಥವಾ ತಾಯಿಯ ಒಡಹುಟ್ಟಿದವಳ ಸಂಗಮ ಮಾಡಬಾರದು; ಹಾಗೆ ಮಾಡಿದವನು ರಕ್ತಸಂಬಂಧಿಯನ್ನು ಸಂಗಮಿಸಿದವನಾದುದರಿಂದ ಅವರಿಬ್ಬರೂ ತಮ್ಮ ಪಾಪದ ಫಲವನ್ನು ಅನುಭವಿಸಬೇಕು.
20 Quando também um homem se deitar com a sua tia descobriu a nudez de seu tio: seu pecado sobre si levarão; sem filhos morrerão.
೨೦ಯಾವನಾದರೂ ದೊಡ್ಡಮ್ಮ ಅಥವಾ ಚಿಕ್ಕಮ್ಮನನ್ನಾಗಲಿ ಸಂಗಮಿಸಿದರೆ ಅವನು ದೊಡ್ಡಪ್ಪ ಮತ್ತು ಚಿಕ್ಕಪ್ಪನವರ ಮಾನವನ್ನು ಭಂಗಪಡಿಸಿದವನಾದುದರಿಂದ ಆ ಸ್ತ್ರೀಪುರುಷರು ಆ ಪಾಪದ ಫಲವನ್ನು ಅನುಭವಿಸಬೇಕು; ಅವರು ಸಂತಾನವಿಲ್ಲದೆ ಸಾಯುವರು.
21 E quando um homem tomar a mulher de seu irmão, imundícia é: a nudez de seu irmão descobriu: sem filhos ficarão.
೨೧ಯಾವನಾದರೂ ಅತ್ತಿಗೆ ಇಲ್ಲವೇ ನಾದಿನಿಯರನ್ನು ಸಂಗಮಿಸಿದರೆ ಅದು ಅಶುದ್ಧವಾದ ಕೆಲಸ; ಅವನು ಅಣ್ಣತಮ್ಮಂದಿರ ಮಾನವನ್ನೇ ಭಂಗಪಡಿಸಿದವನು; ಅವರಿಗೆ ಸಂತಾನವಿರುವುದಿಲ್ಲ.
22 Guardai pois todos os meus estatutos, e todos os meus juízos, e fazei-os, para que vos não vomite a terra, na qual eu vos meto para habitar nela.
೨೨“‘ಈ ನನ್ನ ಆಜ್ಞಾವಿಧಿಗಳನ್ನೆಲ್ಲಾ ನೀವು ಅನುಸರಿಸಿ ನಡೆಯಬೇಕು; ಹಾಗೆ ನಡೆದರೆ ನಾನು ನಿಮ್ಮನ್ನು ಯಾವ ದೇಶಕ್ಕೆ ಬರಮಾಡಿ ಅದನ್ನು ನಿವಾಸಕ್ಕಾಗಿ ಕೊಡುತ್ತೇನೋ ಆ ದೇಶವು ನಿಮ್ಮನ್ನು ತ್ಯಜಿಸುವುದಿಲ್ಲ.
23 E não andeis nos estatutos da gente que eu lanço fora diante da vossa face, porque fizeram todas estas coisas: portanto fui enfadado deles.
೨೩ನಾನು ನಿಮಗಿಂತ ಮೊದಲು ಹೊರಡಿಸಿದ ಜನಾಂಗದ ಆಚಾರಗಳನ್ನು ನೀವು ಅನುಸರಿಸಬಾರದು; ಅವರು ಈ ದುರಾಚಾರಗಳನ್ನೆಲ್ಲಾ ನಡಿಸಿದ್ದರಿಂದ ನನಗೆ ಅಸಹ್ಯವಾದಾರು.
24 E a vós vos tenho dito: Em herança possuireis a sua terra, e eu a darei a vós, para possui-la em herança, terra que mana leite e mel: Eu sou o Senhor vosso Deus, que vos separei dos povos.
೨೪ನಿಮಗಾದರೂ, ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ, ಹಾಲೂ ಮತ್ತು ಜೇನೂ ಹರಿಯುವಂಥ ಆ ದೇಶವನ್ನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವೆನು ಎಂದು ನಾನು ಮಾತುಕೊಟ್ಟೆನಲ್ಲವೇ. ನಾನು ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿದ ನಿಮ್ಮ ದೇವರಾದ ಯೆಹೋವನು.
25 Fareis pois diferença entre os animais limpos e imundos, e entre as aves imundas e as limpas; e as vossas almas não fareis abomináveis por causa dos animais, ou das aves, ou de tudo o que se arrasta sobre a terra; as quais coisas apartai de vós, para te-las por imundas.
೨೫“‘ನೀವು ಶುದ್ಧ ಮತ್ತು ಅಶುದ್ಧ ಪಶುಗಳನ್ನು ಹಾಗು ಪಕ್ಷಿಗಳನ್ನು ಪ್ರತ್ಯೇಕಿಸುವ ವಿವೇಚನೆ ಹೊಂದಿರಬೇಕು. ನಾನು ಅಶುದ್ಧವೆಂದು ನಿರ್ಣಯಿಸಿರುವ ಯಾವ ಪಶು, ಪಕ್ಷಿ ಹಾಗು ಕ್ರಿಮಿಕೀಟಗಳಿಂದಲೂ ನಿಮ್ಮನ್ನು ಅಸಹ್ಯಮಾಡಿಕೊಳ್ಳಬಾರದು.
26 E ser-me-eis santos, porque Eu, o Senhor, sou Santo, e separei-vos dos povos, para serdes meus.
೨೬ಯೆಹೋವನೆಂಬ ನಾನು ಪರಿಶುದ್ಧನಾಗಿದ್ದೇನೆ, ಮತ್ತು ನೀವು ನನ್ನ ಜನರಾಗುವಂತೆ ನಿಮ್ಮನ್ನು ಇತರ ಜನಾಂಗಗಳಿಂದ ಪ್ರತ್ಯೇಕಿಸಿದ್ದೇನೆ; ಆದುದರಿಂದ ನೀವು ನನಗೆ ಮೀಸಲಾಗಿರಬೇಕು.
27 Quando pois algum homem ou mulher em si tiver um espírito adivinho, ou for encantador, certamente morrerão: com pedras se apedrejarão; o seu sangue é sobre eles.
೨೭“‘ಸತ್ತವರಲ್ಲಿ ವಿಚಾರಿಸುವವರೂ, ಬೇತಾಳಿಕರೂ ಅವರು ಸ್ತ್ರೀಯರಾಗಲಿ ಅಥವಾ ಪುರುಷರಾಗಲಿ ಅವರು ಮರಣಶಿಕ್ಷೆ ಹೊಂದಬೇಕು. ಕಲ್ಲೆಸೆದು ಅವರನ್ನು ಕೊಲ್ಲಬೇಕು, ಆ ಶಿಕ್ಷೆಗೆ ಅವರೇ ಕಾರಣರು’” ಎಂದು ಹೇಳಿದನು.