< 2 Samuel 9 >
1 E disse David: há ainda alguém que ficasse da casa de Saul, para que lhe faça beneficência por amor de Jonathan?
೧ಒಂದು ದಿನ ದಾವೀದನು, “ಸೌಲನ ಮನೆಯವರಲ್ಲಿ ಯಾರಾದರೂ ಉಳಿದಿದ್ದರೆ, ನಾನು ಅವರಿಗೆ ಯೋನಾತಾನನ ಸಲುವಾಗಿ ದಯೆತೋರಿಸಬೇಕೆಂದಿರುತ್ತೇನೆ” ಎನ್ನಲು,
2 E havia um servo na casa de Saul cujo nome era Ziba: e o chamaram que viesse a David, e disse-lhe o rei: És tu Ziba? E ele disse: Servo teu.
೨ಅದಕ್ಕೆ ಅವರು ಸೌಲನ ಮನೆಯಲ್ಲಿ ದಾಸನಾಗಿದ್ದ ಚೀಬನೆಂಬ ಒಬ್ಬ ಮನುಷ್ಯನನ್ನು ಕರೆದುಕೊಂಡು ಬಂದರು. ಅರಸನು ಅವನನ್ನು, “ನೀನು ಚೀಬನೋ?” ಎಂದು ಕೇಳಲು ಅವನು, “ನಿನ್ನ ಸೇವಕನಾದ ನಾನು ಚೀಬನೆ” ಎಂದು ಉತ್ತರ ಕೊಟ್ಟನು.
3 E disse o rei: Não há ainda algum da casa de Saul para que use com ele de beneficência de Deus? Então disse Ziba ao rei: Ainda há um filho de Jonathan, aleijado de ambos os pés.
೩ಅರಸನು ಅವನಿಗೆ, “ಸೌಲನ ಕುಟುಂಬದಲ್ಲಿ ಯಾರಾದರೂ ಉಳಿದಿದ್ದರೆ ಹೇಳು, ನಾನು ದೇವರನ್ನು ನೆನಸಿ ಅವರಿಗೆ ದಯೆತೋರಿಸುತ್ತೇನೆ” ಎಂದನು. ಆಗ ಚೀಬನು ಅರಸನಿಗೆ “ಯೋನಾತಾನನಿಗೆ ಎರಡೂ ಕಾಲು ಕುಂಟಾದ ಒಬ್ಬ ಮಗನಿದ್ದಾನೆ” ಎಂದು ಹೇಳಿದನು.
4 E disse-lhe o rei: Onde está? E disse Ziba ao rei: Eis que está em casa de Machir, filho de Ammiel, em Lo-debar.
೪ಅರಸನು, “ಅವನು ಎಲ್ಲಿರುತ್ತಾನೆ?” ಎಂದು ಅವನನ್ನು ಕೇಳಲು ಚೀಬನು, “ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಲ್ಲಿರುತ್ತಾನೆ” ಎಂದು ಉತ್ತರಕೊಟ್ಟನು.
5 Então mandou o rei David, e o tomou da casa de Machir, filho de Ammiel. de Lo-debar.
೫ಕೂಡಲೆ ಅರಸನು ದೂತರನ್ನು ಕಳುಹಿಸಿ ಅವನನ್ನು ಲೋದೆಬಾರಿನಲ್ಲಿರುವ ಅಮ್ಮೀಯೇಲನ ಮಗನಾದ ಮಾಕೀರನ ಮನೆಯಿಂದ ಕರೆಯಿಸಿದನು.
6 E entrando Mephiboseth, filho de Jonathan, o filho de Saul, a David, se prostrou com o rosto por terra e se inclinou; e disse David: Mephiboseth! E ele disse: Eis aqui teu servo.
೬ಸೌಲನ ಮೊಮ್ಮಗನೂ, ಯೋನಾತಾನನ ಮಗನೂ ಆದ ಮೆಫೀಬೋಶೆತನು ಬಂದಾಗ ದಾವೀದನಿಗೆ ಸಾಷ್ಟಾಂಗನಮಸ್ಕಾರ ಮಾಡಿದನು. ದಾವೀದನು ಮೆಫೀಬೋಶೆತನೇ ಅನ್ನಲು ಅವನು, “ನಿನ್ನ ಸೇವಕನಾದ ನಾನು ಇಲ್ಲಿದ್ದೇನೆ” ಎಂದನು.
7 E disse-lhe David: Não temas, porque decerto usarei contigo de beneficência por amor de Jonathan, teu pai, e te restituirei todas as terras de Saul, teu pai, e tu de contínuo comerás pão à minha mesa.
೭ಆಗ ದಾವೀದನು ಅವನಿಗೆ, “ಹೆದರಬೇಡ, ನಿನ್ನ ತಂದೆಯಾದ ಯೋನಾತಾನನನ್ನು ನೆನಸಿ ನಿನಗೆ ದಯೆತೋರಿಸುತ್ತೇನೆ. ನಿನ್ನ ಅಜ್ಜನಾದ ಸೌಲನ ಭೂಮಿಯನ್ನೆಲ್ಲಾ ನಿನಗೆ ಹಿಂದಕ್ಕೆ ಕೊಡುತ್ತೇನೆ, ಮತ್ತು ನೀನು ಪ್ರತಿ ದಿನ ನನ್ನ ಪಂಕ್ತಿಯಲ್ಲೇ ಊಟಮಾಡಬೇಕು” ಎಂದು ಹೇಳಿದನು.
8 Então se inclinou, e disse: Quem é teu servo, para tu teres olhado para um cão morto tal como eu
೮ಮೆಫೀಬೋಶೆತನು ಇದನ್ನು ಕೇಳಿ ಅರಸನಿಗೆ ಸಾಷ್ಟಾಂಗನಮಸ್ಕಾರಮಾಡಿ, “ಸತ್ತ ನಾಯಿಯಂತಿರುವ ನನ್ನನ್ನು ನೀನು ಕಟಾಕ್ಷಿಸಲು ನಿನ್ನ ದಾಸನಾದ ನಾನು ಎಷ್ಟರವನು?” ಎಂದು ಹೇಳಿದನು.
9 Então chamou David a Ziba, moço de Saul, e disse-lhe: Tudo o que pertencia a Saul, e de toda a sua casa, tenho dado ao filho de teu senhor.
೯ಅನಂತರ ದಾವೀದನು ಸೌಲನ ಸೇವಕನಾದ ಚೀಬನನ್ನು ಕರೆದು ಅವನಿಗೆ, “ನಿನ್ನ ಯಜಮಾನನಾದ ಸೌಲನಿಗೂ, ಅವನ ಕುಟುಂಬದವರಿಗೂ ಇದ್ದ ಎಲ್ಲವನ್ನು ಅವನ ಮೊಮ್ಮಗನಿಗೆ ಕೊಟ್ಟಿದ್ದೇನೆ.
10 Trabalhar-lhe-eis pois a terra, tu e teus filhos, e teus servos, e recolherás os frutos, para que o filho de teu senhor tenha pão que coma, e Mephiboseth, filho de teu senhor, de contínuo comerá pão à minha mesa. E tinha Ziba quinze filhos e vinte servos.
೧೦ನೀನು, ನಿನ್ನ ಮಕ್ಕಳೂ ಮತ್ತು ನಿನ್ನ ದಾಸರು ನಿನ್ನ ಯಜಮಾನನ ಮೊಮ್ಮಗನ ಆಹಾರಕ್ಕಾಗಿ ಭೂಮಿಯನ್ನು ವ್ಯವಸಾಯ ಮಾಡಿ, ಅದರ ಬೆಳೆಯನ್ನು ಇವರ ಮನೆಯವರ ಅಶನಾರ್ಥವಾಗಿ (ಜೀವನಾಂಶಕ್ಕಾಗಿ) ತಂದು ಕೊಡಬೇಕು. ಆದರೆ ಮೆಫೀಬೋಶೆತ್ತಿಗಾದರೋ ನಿತ್ಯವೂ ನನ್ನ ಪಂಕ್ತಿಯಲ್ಲಿ ಭೋಜನವಾಗುವುದು” ಎಂದು ಹೇಳಿದನು. ಚೀಬನಿಗೆ ಹದಿನೈದು ಮಂದಿ ಗಂಡು ಮಕ್ಕಳೂ, ಇಪ್ಪತ್ತು ಮಂದಿ ಸೇವಕರು ಇದ್ದರು.
11 E disse Ziba ao rei: Conforme a tudo quanto meu senhor, o rei, manda a seu servo, assim fará teu servo; porém Mephiboseth comerá à minha mesa como um dos filhos do rei
೧೧ಚೀಬನು ಅರಸನಿಗೆ, “ಒಡೆಯನಾದ ಅರಸನ ಅಪ್ಪಣೆಯಂತೆ ನಿನ್ನ ಸೇವಕನು ನಡೆಯುವನು” ಎಂದು ಉತ್ತರಕೊಟ್ಟನು. ಈ ಪ್ರಕಾರ ಮೆಫೀಬೋಶೆತನು ರಾಜಪುತ್ರರಂತೆ ಅರಸನ ಪಂಕ್ತಿಯಲ್ಲಿ ಊಟಮಾಡುವವನಾದನು.
12 E tinha Mephiboseth um filho pequeno, cujo nome era Mica: e todos quantos moravam em casa de Ziba eram servos de Mephiboseth.
೧೨ಅವನಿಗೆ ಮೀಕನೆಂಬೊಬ್ಬ ಚಿಕ್ಕ ಮಗನಿದ್ದನು. ಚೀಬನ ಮನೆಯವರೆಲ್ಲರೂ, ಅವನ ಸೇವಕರಾದರು.
13 Morava pois Mephiboseth em Jerusalém, porquanto de contínuo comia à mesa do rei, e era coxo de ambos os pés.
೧೩ಮೆಫೀಬೋಶೆತನಿಗೆ ಪ್ರತಿದಿನವೂ ರಾಜಪಂಕ್ತಿಯಲ್ಲಿ ಊಟವಾಗುತ್ತಿದ್ದರಿಂದ ಅವನು ಯೆರೂಸಲೇಮಿನಲ್ಲೇ ವಾಸಮಾಡಿದನು. ಅವನ ಎರಡು ಕಾಲುಗಳು ಕುಂಟಾಗಿದ್ದವು.