< 2 Crônicas 30 >
1 Depois disto Ezequias enviou por todo o Israel e Judá, e escreveu também cartas a Ephraim e a Manasseh que viessem à casa do Senhor a Jerusalém, para celebrarem a pascoa ao Senhor Deus de Israel.
೧ತರುವಾಯ ಹಿಜ್ಕೀಯನು, ಇಸ್ರಾಯೇಲ್ ದೇವರಾದ ಯೆಹೋವನ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಬರಬೇಕೆಂದು, ಎಲ್ಲಾ ಇಸ್ರಾಯೇಲರಿಗೂ, ಯೆಹೂದ್ಯರಿಗೂ, ಎಫ್ರಾಯೀಮ್ಯರಿಗೂ, ಮನಸ್ಸೆಯವರಿಗೂ ದೂತರ ಮುಖಾಂತರವಾಗಿ ಮತ್ತು ಪತ್ರಗಳ ಮೂಲಕವಾಗಿ ತಿಳಿಯಪಡಿಸಿದನು.
2 Porque o rei tivera conselho com os seus maiorais, e com toda a congregação em Jerusalém, para celebrarem a pascoa no segundo mês.
೨ಎರಡನೆಯ ತಿಂಗಳಿನಲ್ಲಿ ಪಸ್ಕಹಬ್ಬವನ್ನು ಯೆರೂಸಲೇಮಿನಲ್ಲಿ ಆಚರಿಸಬೇಕೆಂದು ಅರಸನು, ಪದಾಧಿಕಾರಿಗಳು ಅಭಿಪ್ರಾಯಪಟ್ಟರು.
3 Porquanto no mesmo tempo não a puderam celebrar, porque se não tinham santificado bastantes sacerdotes, e o povo se não tinha ajuntado em Jerusalém.
೩ಯಾಕೆಂದರೆ ಯಾಜಕರಲ್ಲಿ ಸಾಕಷ್ಟು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಒಟ್ಟಾಗಿ ಸೇರಿ ಬಂದಿರಲಿಲ್ಲವಾದುದರಿಂದ ಕೂಡಲೆ ಪಸ್ಕಹಬ್ಬವನ್ನು ಆಚರಿಸಲು ಸಾಧ್ಯವಾಗುವುದಿಲ್ಲವೆಂದು ಅರಸನಿಗೂ ಅವನ ಸರದಾರರಿಗೂ ಯೆರೂಸಲೇಮಿನ ಸರ್ವಸಂಘದವರಿಗೂ ತಿಳಿದುಕೊಂಡರು.
4 E foi isto reto aos olhos do rei, e aos olhos de toda a congregação.
೪ಈ ಅಭಿಪ್ರಾಯವು ಅರಸನಿಗೂ ಸರ್ವಸಮೂಹಕ್ಕೂ ಸರಿಕಂಡದ್ದರಿಂದ
5 E ordenaram que se fizesse passar pregão por todo o Israel, desde Berseba até Dan, para que viessem a celebrar a pascoa ao Senhor, Deus de Israel, a Jerusalém; porque muitos a não tinham celebrado como estava escrito.
೫ಅವರು, “ಸರ್ವಜನರು ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿಗೆ ಬರಬೇಕು” ಎಂಬುದಾಗಿ ಬೇರ್ಷೆಬದಿಂದ ದಾನ್ ವರೆಗೂ ವಾಸಮಾಡುತ್ತಿದ್ದ ಇಸ್ರಾಯೇಲರೊಳಗೆ ಡಂಗುರ ಹೊಡಿಸಬೇಕೆಂದು ನಿರ್ಣಯಿಸಿದರು. ಜನರಲ್ಲಿ ಹೆಚ್ಚು ಮಂದಿ ಆ ವರೆಗೂ ಧರ್ಮಶಾಸ್ತ್ರವಿಧಿಯ ಪ್ರಕಾರ ಪಸ್ಕಹಬ್ಬವನ್ನು ಆಚರಿಸಿರಲಿಲ್ಲ.
6 Foram pois os correios com as cartas, da mão do rei e dos seus príncipes, por todo o Israel e Judá, e segundo o mandado do rei, dizendo: Filhos de Israel, convertei-vos ao Senhor, Deus de Abraão, de Isaac e de Israel; para que ele se torne para aqueles de vós que escaparam, e ficaram da mão dos reis d'Assyria.
೬ಅರಸನ ಮತ್ತು ಅವನ ಪದಾಧಿಕಾರಿಗಳಿಂದ ಪತ್ರಗಳನ್ನು ತೆಗೆದುಕೊಂಡು ಹೋದ ದೂತರು ಇಸ್ರಾಯೇಲ್ ಮತ್ತು ಯೆಹೂದ ದೇಶಗಳಲ್ಲೆಲ್ಲಾ ಸಂಚರಿಸಿ ರಾಜಾಜ್ಞೆಯಂತೆ ಹೀಗೆಂದು ಪ್ರಕಟಿಸಿದರು: “ಇಸ್ರಾಯೇಲರೇ, ಅಬ್ರಹಾಮ್, ಇಸಾಕ್ ಮತ್ತು ಇಸ್ರಾಯೇಲರ ದೇವರಾದ ಯೆಹೋವನ ಕಡೆಗೆ ತಿರುಗಿಕೊಳ್ಳಿರಿ. ಆಗ ಆತನು ನಿಮ್ಮಲ್ಲಿ ಅಶ್ಶೂರದ ಅರಸನ ಕೈಗೆ ಸಿಕ್ಕದಂತೆ ತಪ್ಪಿಸಿಕೊಂಡು ಉಳಿದಿರುವ ನಿಮ್ಮ ಕಡೆಗೆ ತಿರುಗಿಕೊಳ್ಳುವನು.
7 E não sejais como vossos pais e como vossos irmãos, que transgrediram contra o Senhor, Deus de seus pais, pelo que os deu em assolação como o vêdes.
೭ನಿಮ್ಮ ಪೂರ್ವಿಕರು ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪೂರ್ವಿಕರ ದೇವರಾದ ಯೆಹೋವನಿಗೆ ವಿರೋಧವಾಗಿ ದ್ರೋಹಿಗಳಾಗಿದ್ದುದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು.
8 Não endureçais agora a vossa cerviz, como vossos pais; dai a mão ao Senhor, e vinde ao seu santuário que ele santificou para sempre, e servi ao Senhor vosso Deus, para que o ardor da sua ira se desvie de vós.
೮ಈಗ ನೀವು ನಿಮ್ಮ ಪೂರ್ವಿಕರಂತೆ ರಾಜಾಜ್ಞೆಗೆ ಮಣಿಯದವರಾಗಿರಬೇಡಿರಿ, ಯೆಹೋವನಿಗೆ ಅಧೀನರಾಗಿರಿ. ನಿಮ್ಮ ದೇವರಾದ ಯೆಹೋವನು ಸದಾಕಾಲಕ್ಕೂ ಪ್ರತಿಷ್ಠಿಸಿಕೊಂಡಿರುವ ಪವಿತ್ರಾಲಯಕ್ಕೆ ಬಂದು ಆತನನ್ನು ಆರಾಧಿಸಿರಿ. ಆಗ ನಿಮ್ಮ ಮೇಲಿರುವ ಆತನ ಉಗ್ರಕೋಪವು ತೊಲಗಿಹೋಗುವುದು.
9 Porque, em vos convertendo ao Senhor, vossos irmãos e vossos filhos acharão misericórdia perante os que os levaram cativos, e tornarão a esta terra; porque o Senhor vosso Deus é piedoso e misericordioso, e não desviará de vós o seu rosto, se vos converterdes a ele
೯ನೀವು ಯೆಹೋವನ ಕಡೆಗೆ ತಿರುಗಿಕೊಳ್ಳವುದಾದರೆ ನಿಮ್ಮ ಸಹೋದರರೂ, ಮಕ್ಕಳೂ ತಮ್ಮನ್ನು ಸೆರೆ ಒಯ್ದವರ ದೃಷ್ಟಿಯಲ್ಲಿ ದಯೆಗೆ ಪಾತ್ರರಾಗಿ, ತಿರುಗಿ ಸ್ವದೇಶಕ್ಕೆ ಬರುವರು. ನಿಮ್ಮ ದೇವರಾದ ಯೆಹೋವನು ದಯೆಯೂ, ಕನಿಕರವೂ ಉಳ್ಳವನಾಗಿದ್ದಾನೆ. ಆತನು ತನ್ನ ಕಡೆಗೆ ತಿರುಗಿಕೊಳ್ಳುವ ನಿಮ್ಮನ್ನು ಕಟಾಕ್ಷಿಸದೆ ಇರುವುದಿಲ್ಲ.”
10 E os correios foram passando de cidade em cidade, pela terra de Ephraim e Manasseh até Zebulon; porém riram-se e zombaram deles.
೧೦ದೂತರು ಎಫ್ರಾಯೀಮ್, ಮನಸ್ಸೆ, ಜೆಬುಲೂನ್ ಪ್ರಾಂತ್ಯಗಳಲ್ಲಿ, ಪಟ್ಟಣದಿಂದ ಪಟ್ಟಣಕ್ಕೆ ಹೋದರು. ಜನರು ಅವರನ್ನು ಕಂಡು ನಕ್ಕು ಗೇಲಿಮಾಡಿದರು.
11 Todavia alguns de Aser, e de Manasseh, e de Zebulon, se humilharam, e vieram a Jerusalém.
೧೧ಕೆಲವು ಮಂದಿ ಆಶೇರ್ಯರೂ, ಮನಸ್ಸೆಯವರೂ, ಜೆಬುಲೂನ್ಯರೂ ಮಾತ್ರ ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
12 E em Judá esteve a mão de Deus, dando-lhes um só coração, para fazerem o mandado do rei e dos príncipes, conforme à palavra do Senhor.
೧೨ಯೆಹೂದ್ಯರಾದರೋ ದೇವರ ಕೃಪಾಹಸ್ತದಿಂದ ಪ್ರೇರಣೆಹೊಂದಿ ಏಕ ಮನಸ್ಸುಳ್ಳವರಾಗಿ, ಯೆಹೋವನ ವಾಕ್ಯಕ್ಕೆ ಅನುಸಾರವಾಗಿ ಅರಸನಿಂದಲೂ, ಪದಾಧಿಕಾರಿಗಳಿಂದಲೂ ಹೊರಟ ಆಜ್ಞೆಯನ್ನು ಕೈಕೊಂಡರು.
13 E ajuntou-se em Jerusalém muito povo, para celebrar a festa dos pães asmos, no segundo mes; uma mui grande congregação.
೧೩ಹೀಗೆ, ಅನೇಕಾನೇಕ ಜನರು ಎರಡನೆಯ ತಿಂಗಳಿನಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕಾಗಿ ಯೆರೂಸಲೇಮಿನಲ್ಲಿ ಸೇರಿಬಂದರು; ಆ ಜನಸಮೂಹವು ಮಹಾಸಮೂಹವಾಗಿತ್ತು.
14 E levantaram-se, e tiraram os altares que havia em Jerusalém: também tiraram todos os vasos de incenso, e os lançaram no ribeiro de Cedron.
೧೪ಅವರು ಯೆರೂಸಲೇಮಿನಲ್ಲಿದ್ದ ಯಜ್ಞವೇದಿಗಳನ್ನೂ ಎಲ್ಲಾ ಧೂಪವೇದಿಗಳನ್ನೂ ತೆಗೆದುಕೊಂಡು ಹೋಗಿ ಕಿದ್ರೋನ್ ಹಳ್ಳದಲ್ಲಿ ಬಿಸಾಡಿಬಿಟ್ಟರು.
15 Então sacrificaram a pascoa no dia décimo quarto do segundo mes; e os sacerdotes e levitas se envergonharam e se santificaram e trouxeram holocaustos à casa do Senhor.
೧೫ನಂತರ ಎರಡನೆಯ ತಿಂಗಳಿನ ಹದಿನಾಲ್ಕನೆಯ ದಿನದಲ್ಲಿ ಪಸ್ಕಹಬ್ಬಕ್ಕಾಗಿ ಕುರಿಮರಿಗಳನ್ನು ಕೊಯ್ದರು. ಆಗ ಯಾಜಕರೂ, ಲೇವಿಯರೂ ನಾಚಿಕೆಪಟ್ಟು, ತಮ್ಮನ್ನು ಶುದ್ಧಿಪಡಿಸಿಕೊಂಡು ಯೆಹೋವನ ಆಲಯದಲ್ಲಿ ಸರ್ವಾಂಗಹೋಮಗಳನ್ನ ಸಮರ್ಪಿಸಿದರು.
16 E puseram-se no seu posto, segundo o seu costume, conforme a lei de Moisés o homem de Deus: e os sacerdotes espargiam o sangue, tomando-o da mão dos levitas.
೧೬ಅವರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತು, ದೇವರ ಮನುಷ್ಯನಾದ ಮೋಶೆಯ ಧರ್ಮಶಾಸ್ತ್ರದಿಂದ ತಮಗೆ ನೇಮಕವಾದ ಸೇವೆಯನ್ನು ಮಾಡುತ್ತಿದ್ದರು. ಯಾಜಕರೂ ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಅದನ್ನು ಪ್ರೋಕ್ಷಿಸಿದರು.
17 Porque havia muitos na congregação que se não tinham santificado; pelo que os levitas tinham cargo de matarem os cordeiros da pascoa por todo aquele que não estava limpo, para o santificarem ao Senhor.
೧೭ಸಮೂಹದಲ್ಲಿ ಅನೇಕರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಇದ್ದುದರಿಂದ ಅಶುದ್ಧರಾದವರೆಲ್ಲರ, ಪಸ್ಕಹಬ್ಬದ ಯಜ್ಞಪಶುಗಳು ಯೆಹೋವನಿಗೆ ಮೀಸಲಾಗುವಂತೆ ಅವುಗಳನ್ನು ಲೇವಿಯರೇ ವಧಿಸಿದರು.
18 Porque uma multidão do povo, muitos de Ephraim e Manasseh, Issacar e Zebulon, se não tinham purificado, e contudo comeram a pascoa, não como está escrito; porém Ezequias orou por eles, dizendo: O Senhor, que é bom, faça reconciliação com aquele
೧೮ಜನರಲ್ಲಿ ಅನೇಕರು ಅಂದರೆ, ಹೆಚ್ಚಾಗಿ ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಹಾಗು ಜೆಬುಲೂನ್ ಪ್ರಾಂತ್ಯಗಳವರು ತಮ್ಮನ್ನು ಶುದ್ಧಿಪಡಿಸಿಕೊಳ್ಳದೆ ಧರ್ಮಶಾಸ್ತ್ರಕ್ಕೆ ವಿರುದ್ಧವಾದ ರೀತಿಯಿಂದ ಪಸ್ಕದ (ಹಬ್ಬ) ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು, “ಯೆಹೋವನೇ, ದಯಾಪರನಾದ ದೇವರೇ, ಅವರೆಲ್ಲರಿಗೆ ಕ್ಷಮೆಯನ್ನು ಅನುಗ್ರಹಿಸು” ಎಂದು ವಿಜ್ಞಾಪನೆ ಮಾಡಿದನು.
19 Que tem preparado o seu coração para buscar ao Senhor, Deus, o Deus de seus pais, ainda que não esteja purificado segundo a purificação do santuário.
೧೯ದೇವಾಲಯಕ್ಕೆ ಯಾತ್ರಿಕರಾಗಿ ಬಂದಿರುವವರಲ್ಲಿ ಇರಬೇಕಾದ ಪರಿಶುದ್ಧತ್ವವು ಅನೇಕರಲ್ಲಿ ಇಲ್ಲದಿದ್ದರೂ ಪೂರ್ವಿಕರ ದೇವರಾದ ಯೆಹೋವನನ್ನು ಹುಡುಕಬೇಕೆಂದು ಮನಸ್ಸುಮಾಡಿರುವವರಿಗೆಲ್ಲರಿಗೂ ಕ್ಷಮೆಯನ್ನು ಅನುಗ್ರಹಿಸು ಎಂದು ವಿಜ್ಞಾಪನೆ ಮಾಡಿದನು.
20 E ouviu o Senhor a Ezequias, e sarou o povo.
೨೦ಯೆಹೋವನು ಹಿಜ್ಕೀಯನ ಪ್ರಾರ್ಥನೆಯನ್ನು ಲಾಲಿಸಿ ಜನರನ್ನು ಸ್ವಸ್ಥಗೊಳಿಸಿದನು.
21 E os filhos de Israel, que se acharam em Jerusalém, celebraram a festa dos pães asmos sete dias com grande alegria: e os levitas e os sacerdotes louvaram ao Senhor de dia em dia com instrumentos fortemente retinintes ao Senhor.
೨೧ಯೆರೂಸಲೇಮಿನಲ್ಲಿ ಸೇರಿಬಂದಿದ್ದ ಇಸ್ರಾಯೇಲರು ಏಳು ದಿನಗಳವರೆಗೂ ಮಹಾ ಸಂತೋಷದಿಂದ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುತ್ತಾ ಇದ್ದರು. ಲೇವಿಯರೂ, ಯಾಜಕರೂ ಮಹಾವಾದ್ಯಗಳೊಡನೆ ಯೆಹೋವನನ್ನು ಪ್ರತಿದಿನವೂ ಸ್ತುತಿ ಕೀರ್ತಿಸುತ್ತಾ ಇದ್ದರು.
22 E Ezequias falou benignamente a todos os levitas, que tinham entendimento no bom conhecimento do Senhor: e comeram as ofertas da solenidade por sete dias, oferecendo ofertas pacíficas, e louvando ao Senhor, Deus de seus pais.
೨೨ಹಿಜ್ಕೀಯನು ಯೆಹೋವನ ಸೇವೆಯಲ್ಲಿ ನಿಪುಣರಾದ ಎಲ್ಲಾ ಲೇವಿಯರೊಡನೆ ಪ್ರೀತಿಯಿಂದ ಮಾತನಾಡಿದನು. ನೇಮಕವಾದ ಏಳು ದಿನಗಳ ಹಬ್ಬದವರೆಗೂ ಜನರು ಸಮಾಧಾನ ಯಜ್ಞಗಳನ್ನು ಅರ್ಪಿಸುತ್ತಾ ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತಮ್ಮ ದೇವರೆಂದು ಅರಿಕೆಮಾಡಿಕೊಳ್ಳುತ್ತಾ ಔತಣಮಾಡಿದರು.
23 E, tendo toda a congregação conselho para celebrarem outros sete dias, celebraram ainda sete dias com alegria.
೨೩ಅಲ್ಲದೆ ಸಮೂಹದವರು ಇನ್ನೂ ಏಳು ದಿನಗಳ ಕಾಲ ಹಬ್ಬವನ್ನು ಆ ಆಚರಿಸಬೇಕೆಂದು ತೀರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು
24 Porque Ezequias, rei de Judá, apresentou à congregação mil novilhos e sete mil ovelhas; e os príncipes apresentaram à congregação mil novilhos e dez mil ovelhas: e os sacerdotes se santificaram em grande número.
೨೪ಹೂದದ ಅರಸನಾದ ಹಿಜ್ಕೀಯನು ಹಿಂಡುಗಳಿಂದ ಸಾವಿರ ಹೋರಿಗಳನ್ನೂ, ಏಳು ಸಾವಿರ ಕುರಿಗಳನ್ನೂ, ಪದಾಧಿಕಾರಿಗಳು ಸಾವಿರ ಹೋರಿಗಳನ್ನೂ, ಹತ್ತು ಸಾವಿರ ಕುರಿಗಳನ್ನೂ ಯಜ್ಞಕ್ಕಾಗಿ ದಾನಮಾಡಿದರು. ಯಾಜಕರಲ್ಲಿ ಬಹು ಮಂದಿ ತಮ್ಮನ್ನು ಶುದ್ಧಿಪಡಿಸಿಕೊಂಡರು.
25 E alegraram-se, toda a congregação de Judá, e os sacerdotes, e os levitas, toda a congregação de todos os que vieram de Israel; como também os estrangeiros que vieram da terra de Israel e os que habitavam em Judá.
೨೫ಯೆಹೂದ್ಯರ ಸರ್ವಸಮೂಹದವರೂ, ಯಾಜಕರು, ಲೇವಿಯರೂ, ಇಸ್ರಾಯೇಲ್ ಪ್ರಾಂತ್ಯಗಳಿಂದ ಸೇರಿಬಂದವರೆಲ್ಲರೂ ಹಾಗು ಇಸ್ರಾಯೇಲ್ ಯೆಹೂದ ಪ್ರಾಂತ್ಯಗಳಲ್ಲಿದ್ದ ಪ್ರವಾಸಿಗಳು ಈ ಉತ್ಸವದಲ್ಲಿ ಪಾಲುಗೊಂಡಿದ್ದರು.
26 E houve grande alegria em Jerusalém; porque desde os dias de Salomão, filho de David, rei de Israel, tal não houve em Jerusalém.
೨೬ದಾವೀದನ ಮಗನೂ ಇಸ್ರಾಯೇಲರ ಅರಸನೂ ಆದ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥ ಉತ್ಸವವು ನಡೆದಿರಲಿಲ್ಲವಾದುದರಿಂದ ಯೆರೂಸಲೇಮಿನಲ್ಲಿ ಮಹಾಸಂತೋಷವುಂಟಾಯಿತು.
27 Então os sacerdotes, os levitas, se levantaram e abençoaram o povo; e a sua voz foi ouvida: porque a sua oração chegou até à sua santa habitação, aos céus.
೨೭ಆಮೇಲೆ ಯಾಜಕರಾಗಿದ್ದ ಲೇವಿಯರು ಎದ್ದು ನಿಂತು ಜನರನ್ನು ಆಶೀರ್ವದಿಸಿದರು. ಅವರ ಪ್ರಾರ್ಥನೆಯ ಸ್ವರವು ದೇವರಿಗೆ ಕೇಳಿಸಿತು; ಅವರ ಪ್ರಾರ್ಥನೆಯು ಪರಲೋಕದಲ್ಲಿರುವ ಆತನ ಪರಿಶುದ್ಧ ನಿವಾಸಕ್ಕೆ ತಲುಪಿತು.