< I Kronik 1 >

1 Adam, Set, Enosz;
ಆದಾಮ, ಸೇತ್, ಎನೋಷ್,
2 Kenan, Mahalaleel, Jered;
ಕೇನಾನ್, ಮಹಲಲೇಲ್ ಯೆರೆದ್,
3 Henoch, Matuzalem, Lamech;
ಹನೋಕ್, ಮೆತೂಷೆಲಹ, ಲೆಮೆಕ್, ನೋಹ.
4 Noe, Sem, Cham i Jafet.
ನೋಹನ ಮಕ್ಕಳು: ಶೇಮ್, ಹಾಮ್, ಯೆಫೆತ್.
5 Synowie Jafeta: Gomer, Magog, Madaj, Jawan, Tubal, Meszek i Tiras.
ಯೆಫೆತನ ಪುತ್ರರು: ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
6 A synowie Gomera: Aszkenaz, Rifat i Togarma.
ಗೋಮೆರನ ಪುತ್ರರು: ಅಷ್ಕೆನಜ್, ರೀಫತ್, ತೋಗರ್ಮ.
7 A synowie Jawana: Elisa i Tarszisz, Cytym i Dodanim.
ಯಾವಾನನ ಮಕ್ಕಳು: ಎಲೀಷಾ, ತಾರ್ಷೀಷ್, ಕಿತ್ತೀಮ್, ದೋದಾನೀಮ್.
8 Synowie Chama: Kusz, Misraim, Put i Kanaan.
ಹಾಮನ ಪುತ್ರರು: ಕೂಷ್, ಈಜಿಪ್ಟ್, ಪೂಟ್, ಕಾನಾನ್.
9 A synowie Kusza: Seba, Chaawila, Sabta, Rama i Sabteka. A synowie Ramy: Szeba i Dedan.
ಕೂಷನ ಪುತ್ರರು: ಸೆಬ, ಹವೀಲ, ಸಬ್ತಾ, ರಾಮ, ಸಬ್ತೆಕ. ರಾಮನ ಪುತ್ರರು: ಶೆಬಾ ಮತ್ತು ದೆದಾನ್.
10 Kusz spłodził Nimroda, który zaczął być mocarzem na ziemi.
ಕೂಷನು ನಿಮ್ರೋದನ ತಂದೆಯಾಗಿದ್ದನು, ಇವನು ಭೂಮಿಯ ಮೇಲೆ ಬಲಿಷ್ಠ ಯುದ್ಧವೀರನಾದನು.
11 Misraim spłodził Ludima, Ananima, Lahabima i Naftuchima;
ಈಜಿಪ್ಟನವರಿಂದ, ಲೂದ್ಯರು, ಅನಾಮ್ಯರು, ಲೆಹಾಬ್ಯರು, ನಫ್ತುಹ್ಯರು,
12 Oraz Patrusyma, Kasluchima, od których wywodzą się Filistyni, i Kaftoryma.
ಪತ್ರುಸ್ಯರು, ಕಸ್ಲುಹ್ಯರು, ಕಫ್ತೋರ್ಯರು ಹುಟ್ಟಿದರು. ಕಸ್ಲುಹ್ಯರಿಂದ ಫಿಲಿಷ್ಟಿಯರು ಬಂದವರು.
13 Kanaan zaś spłodził Sidona, swego pierworodnego, i Cheta;
ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್, ಆಮೇಲೆ ಹೇತನು ಹುಟ್ಟಿದನು.
14 Jebusytę, Amorytę i Girgaszytę;
ಯೆಬೂಸಿಯರು, ಅಮೋರಿಯರು, ಗಿರ್ಗಾಷಿಯರು,
15 Chiwwitę, Arkitę i Sinitę;
ಹಿವ್ವಿಯರು, ಅರ್ಕಿಯರು, ಸೀನಿಯರು,
16 Arwadytę, Semarytę i Chamatytę.
ಅರ್ವಾದಿಯರು, ಚೆಮಾರಿಯರು, ಹಮಾತಿಯರು, ಕಾನಾನನಿಂದ ಹುಟ್ಟಿದರು.
17 Synowie Sema: Elam, Assur, Arpachszad, Lud, Aram, Us, Chul, Geter i Meszek.
ಶೇಮನ ಪುತ್ರರು: ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್, ಅರಾಮ್, ಅರಾಮನ ಪುತ್ರರು: ಊಚ್, ಹೂಲ್, ಗೆತೆರ್ ಮತ್ತು ಮೆಷೆಕ್.
18 Arpachszad spłodził Szelacha, a Szelach spłodził Ebera.
ಅರ್ಪಕ್ಷದ್ ಶೆಲಹನ ತಂದೆ; ಶೆಲಹ ಏಬೆರನ ತಂದೆ.
19 Eberowi zaś urodzili się dwaj synowie: jeden [miał] na imię Peleg, gdyż za jego czasów ziemia została rozdzielona, a imię brata jego – Joktan.
ಏಬೆರನಿಗೆ ಇಬ್ಬರು ಪುತ್ರರು ಹುಟ್ಟಿದರು. ಒಬ್ಬನಿಗೆ ಪೆಲೆಗ್ ಎಂದು ಹೆಸರಿಡಲಾಯಿತು, ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಅವನ ತಮ್ಮನ ಹೆಸರು ಯೊಕ್ತಾನ್.
20 Joktan spłodził Almodada, Szelefa, Chasarmaweta i Jeracha;
ಯೊಕ್ತಾನನ ಸಂತಾನದವರು: ಅಲ್ಮೋದಾದ್, ಶೆಲೆಪ್, ಹಜರ್ಮಾವೆತ್, ಯೆರಹ,
21 Hadorama, Uzala i Diklę;
ಹದೋರಾಮ್, ಊಜಾಲ್, ದಿಕ್ಲಾ,
22 Ebala, Abimaela i Szeba;
ಏಬಾಲ್, ಅಬೀಮಯೇಲ್, ಶೆಬಾ,
23 Ofira, Chawila i Jobaba. Wszyscy ci byli synami Joktana.
ಓಫೀರ್, ಹವೀಲಾ ಹಾಗೂ ಯೋಬಾಬ್ ಹುಟ್ಟಿದರು. ಇವರೆಲ್ಲರೂ ಯೊಕ್ತಾನನ ಪುತ್ರರು.
24 Sem, Arpachszad, Szelach;
ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು. ಅರ್ಪಕ್ಷದ್, ಶೆಲಹ,
25 Eber, Peleg, Reu;
ಏಬೆರ್, ಪೆಲೆಗ್, ರೆಗೂ,
26 Serug, Nachor, Terach;
ಸೆರೂಗ್, ನಾಹೋರ್, ತೆರಹ,
27 Abram, to jest Abraham.
ಅಬ್ರಾಮ್ ಇವನು ಅಬ್ರಹಾಮ ಎಂಬ ಹೆಸರು ಹೊಂದಿದವನು.
28 Synowie Abrahama: Izaak i Izmael.
ಅಬ್ರಹಾಮನಿಗೆ ಇಬ್ಬರು ಮಕ್ಕಳು: ಇಸಾಕ ಮತ್ತು ಇಷ್ಮಾಯೇಲ್.
29 A oto [są] ich rody: pierworodny Izmaela – Nebajot, następnie Kedar, Abdeel i Mibsam;
ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು ನೆಬಾಯೋತ್, ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ, ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
30 Miszma, Duma, Massa, Hadad i Tema;
ಮಿಷ್ಮಾ, ದೂಮಾ, ಮಸ್ಸಾ, ಹದದ್, ತೇಮ,
31 Jetur, Nafisz i Kedma. [Byli] oni synami Izmaela.
ಯೆಟೂರ್, ನಾಫೀಷ್, ಕೇದೆಮ. ಇಷ್ಮಾಯೇಲನ ಸಂತಾನದವರು ಇವರೇ.
32 A [oto] synowie Ketury, nałożnicy Abrahama: urodziła ona Zimrana, Jokszana, Medana, Midiana, Jiszbaka i Szuacha. A synowie Jokszana: Szeba i Dedan.
ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು. ಅವಳಿಂದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬ ಆರು ಜನ ಮಕ್ಕಳು ಜನಿಸಿದರು. ಯೊಕ್ಷಾನನಿಗೆ ಶೆಬಾ ಮತ್ತು ದೆದಾನ್ ಹುಟ್ಟಿದರು.
33 Synowie Midiana: Efa, Efer, Henoch, Abida i Eldaa. Oni wszyscy [byli] synami Ketury.
ಮಿದ್ಯಾನನ ಪುತ್ರರು: ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ. ಇವರೆಲ್ಲರೂ ಕೆಟೂರಳ ಸಂತತಿಯವರು.
34 I Abraham spłodził Izaaka. Synowie Izaaka: Ezaw i Izrael.
ಅಬ್ರಹಾಮನು ಸಾರಳಿಂದ ಇಸಾಕನನ್ನು ಪಡೆದನು. ಇಸಾಕನಿಗೆ ಇಬ್ಬರು ಮಕ್ಕಳು ಏಸಾವ ಮತ್ತು ಯಾಕೋಬ.
35 A synowie Ezawa: Elifaz, Rehuel, Jeusz, Jalam i Korach.
ಏಸಾವನ ಪುತ್ರರು ಎಲೀಫಜ್, ರೆಯೂವೇಲ, ಯೆಯೂಷ್, ಯಳಾಮ್ ಹಾಗೂ ಕೋರಹ ಎಂಬವರು.
36 Synowie Elifaza: Teman, Omar, Sefo, Gatam, Kenaz, Timna i Amalek.
ಎಲೀಫಜನ ಮಕ್ಕಳು ತೇಮಾನ್, ಓಮಾರ್, ಚೆಫೀ, ಗತಾಮ್, ಕೆನಜ್; ತಿಮ್ನಾ ಅವಳಿಂದ ಜನಿಸಿದ ಅಮಾಲೇಕ್ ಎಂಬವರು.
37 Synowie Rehuela: Nachat, Zerach, Szamma i Mizza.
ರೆಯೂವೇಲನ ಮಕ್ಕಳು ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ ಎಂಬವರು.
38 A synowie Seira: Lotan, Szobal, Sibeon, Ana, Diszon, Eser i Diszan.
ಈ ಕೆಳಗೆ ನಮೂದಿಸಿದ ಎದೋಮಿನ ಮೂಲ ನಿವಾಸಿಗಳು ಸೇಯೀರನಿಂದ ಹುಟ್ಟಿದವರು ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ, ದೀಶೋನ್, ಏಚೆರ್, ದೀಶಾನ್.
39 A synowie Lotana: Chori, Homam; a siostrą Lotana [była] Timna.
ಲೋಟಾನನ ಪುತ್ರರು ಯಾರೆಂದರೆ: ಹೋರಿ ಮತ್ತು ಹೋಮಾಮ್. ಲೋಟಾನನಿಗೆ ತಿಮ್ನಾ ಎಂಬ ಸಹೋದರಿ ಇದ್ದಳು.
40 Synowie Szobala: Alian, Manachat, Ebal, Szefo i Onam. A synowie Sibeona: Ajja i Ana.
ಶೋಬಾಲನ ಮಕ್ಕಳು ಯಾರೆಂದರೆ: ಅಲ್ವಾನ್, ಮಾನಹತ್, ಏಬಾಲ್, ಶೆಫೋ ಮತ್ತು ಓನಾಮ್. ಸಿಬೆಯೋನನ ಮಕ್ಕಳು ಅಯ್ಯಾಹ ಮತ್ತು ಅನಾಹ ಎಂಬುವರು.
41 Synowie Any: Diszon. Synowie Diszona: Chamran i Eszban, Jitran i Keran.
ಅನಾಹನ ಮಗನು ದೀಶೋನ್. ದೀಶೋನನ ಮಕ್ಕಳು ಯಾರೆಂದರೆ: ಹಮ್ರಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
42 Synowie Esera: Bilhan, Zaawan i Jaakan. Synowie Diszana: Us i Aran.
ಏಚೆರನ ಮಕ್ಕಳು ಯಾರೆಂದರೆ: ಬಿಲ್ಹಾನ್, ಜಾವಾನ್ ಮತ್ತು ಆಕಾನ್. ದೀಶಾನನ ಮಕ್ಕಳು ಯಾರೆಂದರೆ: ಊಚ್ ಮತ್ತು ಅರಾನ್.
43 To byli królowie, którzy panowali w ziemi Edomu, zanim zapanował król nad synami Izraela: Bela, syn Beora, a jego miasto nazywało się Dinhaba.
ಇಸ್ರಾಯೇಲರನ್ನು ಯಾವ ಅರಸನೂ ಆಳುವುದಕ್ಕಿಂತ ಮುಂಚೆ ಎದೋಮ್ ದೇಶದಲ್ಲಿ ಆಳಿದ ಅರಸರು ಇವರೇ: ಬೆಯೋರನ ಮಗನಾದ ಬೆಲಗನು; ಅವನ ಪಟ್ಟಣದ ಹೆಸರು ದಿನ್ಹಾಬಾ.
44 A gdy Bela umarł, królował w jego miejsce Jobab, syn Zeracha z Bosry.
ಬೆಲಗನ ಮರಣದ ನಂತರ ಅವನ ಬದಲಾಗಿ ಬೊಚ್ರದವನಾದ ಜೆರಹನ ಮಗ ಯೋಬಾಬನು ಉತ್ತರಾಧಿಕಾರಿಯಾದನು.
45 A gdy Jobab umarł, królował w jego miejsce Chuszam z ziemi Temanitów.
ಯೋಬಾಬನ ಮರಣದ ನಂತರ ಅವನ ಬದಲಾಗಿ ತೇಮಾನೀಯರ ದೇಶದ ಹುಷಾಮನು ಅರಸನಾದನು.
46 A gdy Chuszam umarł, królował w jego miejsce Hadad, syn Bedada, który pobił Midianitów na polu Moabu. A jego miasto nazywało się Awit.
ಹುಷಾಮನ ಮರಣದ ನಂತರ ಅವೀತದ ಬೆದದನ ಮಗ ಹದದ ಅರಸನಾದನು. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
47 A gdy Hadad umarł, królował w jego miejsce Samla z Masreki.
ಹದದ ಮೃತನಾದ ಮೇಲೆ ಅವನ ಬದಲಾಗಿ ಮಸ್ರೇಕದವನಾದ ಸಮ್ಲಾಹನು ಅರಸನಾದನು.
48 A gdy Samla umarł, królował w jego miejsce Szaul z Rechobot nad Rzeką.
ಸಮ್ಲಾಹನ ಮರಣದ ನಂತರ ಅವನ ಬದಲಾಗಿ ಯೂಫ್ರೇಟೀಸ್ ನದಿತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದನು.
49 A gdy Szaul umarł, królował w jego miejsce Baalchanan, syn Akbora.
ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ ಹಾನಾನ್ ಅರಸನಾದನು.
50 A gdy Baalchanan umarł, królował w jego miejsce Hadad. Jego miasto nazywało się Pai, a jego żona miała na imię Mehetabel, [była to] córka Matredy, córki Mezahaba.
ಬಾಳ್ ಹಾನಾನನು ಮೃತನಾದ ಮೇಲೆ ಅವನ ಬದಲಾಗಿ ಹದದನು ಆಳಿದನು. ಅವನ ಪಟ್ಟಣದ ಹೆಸರು ಪಾವು. ಅವನ ಹೆಂಡತಿಯ ಹೆಸರು ಮೆಹೇಟಬೇಲ್. ಈಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
51 I Hadad umarł. A książętami Edomu byli: książę Timna, książę Alia, książę Jetet;
ಹದದನು ಮೃತನಾದನು. ಎದೋಮ್ಯರ ಮುಖಂಡರ ಹೆಸರುಗಳು ಯಾವುವೆಂದರೆ: ತಿಮ್ನಾ, ಅಲ್ವಾ, ಯೆತೇತ,
52 Książę Oholibama, książę Ela, książę Pinon;
ಒಹೊಲೀಬಾಮ, ಏಲಾ, ಪೀನೋನ್
53 Książę Kenaz, książę Teman, książę Mibsar;
ಕೆನಜ್, ತೇಮಾನ್, ಮಿಬ್ಜಾರ,
54 Książę Magdiel, książę Iram. Oni [byli] książętami Edomu.
ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಎದೋಮ್ಯರ ಮುಖಂಡರು.

< I Kronik 1 >