< Objawienie 6 >
1 I widziałem, gdy otworzył Baranek jedną z onych pieczęci, i słyszałem jedno ze czterech zwierząt mówiące, jako głos gromu: Chodź, a patrzaj!
೧ಕುರಿಮರಿಯಾದಾತನು ಆ ಏಳು ಮುದ್ರೆಗಳಲ್ಲಿ ಒಂದು ಮುದ್ರೆಯನ್ನು ಒಡೆಯುವಾಗ ನಾನು ನೋಡಿದೆನು ಮತ್ತು ಆ ನಾಲ್ಕು ಜೀವಿಗಳಲ್ಲಿ ಒಂದು ಜೀವಿಯು ಗುಡುಗಿನಂತಿದ್ದ ಸ್ವರದಿಂದ “ಬಾ!” ಎಂದು ಹೇಳುವುದನ್ನು ಕೇಳಿದೆನು.
2 I widziałem, a oto koń biały, a ten, który na nim siedział, miał łuk, i dano mu koronę, i wyszedł jako zwycięzca, ażeby zwyciężał.
೨ನಾನು ನೋಡಲು ಇಗೋ ಒಂದು ಬಿಳಿ ಕುದುರೆ ಕಾಣಿಸಿತು. ಅದರ ಮೇಲೆ ಕುಳಿತಿದ್ದವನು ಕೈಯಲ್ಲಿ ಒಂದು ಬಿಲ್ಲನ್ನು ಹಿಡಿದಿದ್ದನು. ಅವನಿಗೆ ಒಂದು ಕಿರೀಟವು ಕೊಡಲ್ಪಟ್ಟಿತು. ಅವನು ಜಯಿಸುವವನಾಗಿ ಜಯಿಸುವುದಕ್ಕೋಸ್ಕರ ಹೊರಟನು.
3 A gdy otworzył wtórą pieczęć, słyszałem wtóre zwierzę mówiące: Chodź, a patrzaj!
೩ಆತನು ಎರಡನೆಯ ಮುದ್ರೆಯನ್ನು ಒಡೆದಾಗ ಎರಡನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು.
4 I wyszedł drugi koń rydzy; a temu, który na nim siedział, dano, aby odjął pokój z ziemi, a iżby jedni drugich zabijali, i dano mu miecz wielki.
೪ಆಗ ಕೆಂಪಾಗಿರುವ ಮತ್ತೊಂದು ಕುದುರೆಯು ಹೊರಟು ಬಂದಿತು. ಅದರ ಮೇಲೆ ಸವಾರಿಮಾಡುವವನಿಗೆ ಭೂಲೋಕದಿಂದ ಸಮಾಧಾನವನ್ನು ತೆಗೆದುಬಿಡುವುದಕ್ಕೆ ಅಧಿಕಾರ ಕೊಡಲ್ಪಟ್ಟಿತು, ಇದರಿಂದ ಜನರು ಒಬ್ಬರನ್ನೊಬ್ಬರು ಕೊಲ್ಲುವವರಾದರು. ಅವನಿಗೆ ದೊಡ್ಡದೊಂದು ಖಡ್ಗವೂ ಕೊಡಲ್ಪಟ್ಟಿತು.
5 A gdy otworzył trzecią pieczęć, słyszałem trzecie zwierzę mówiące: Chodź, a patrzaj! I widziałem, a oto koń wrony, a ten, co na nim siedział, miał szalę w ręce swojej.
೫ಆತನು ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು “ಬಾ”! ಎಂದು ಹೇಳುವುದನ್ನು ಕೇಳಿದೆನು. ಆಗ, ನಾನು ನೋಡಲು ಇಗೋ, ನನಗೆ ಕಪ್ಪು ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಕೈಯಲ್ಲಿ ತಕ್ಕಡಿ ಇತ್ತು.
6 I słyszałem głos z pośrodku onych czworga zwierząt mówiący: Miarka pszenicy za grosz, a trzy miarki jęczmienia za grosz; a nie szkodź oliwie i winu.
೬ಆ ಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಒಂದು “ದೀನಾರಿಗೆ ಒಂದು ಸೇರು ಗೋದಿ ಮತ್ತು ಒಂದು ದೀನಾರಿಗೆ ಮೂರು ಸೇರು ಜವೆಗೋದಿ, ಆದರೆ ಎಣ್ಣೆಯನ್ನು ಮತ್ತು ದ್ರಾಕ್ಷಾರಸವನ್ನು ಕೆಡಿಸಬೇಡ” ಎಂದು ಹೇಳಿತು.
7 A gdy otworzył czwartą pieczęć, słyszałem głos czwartego zwierzęcia mówiący: Chodź, a patrzaj!
೭ಆತನು ನಾಲ್ಕನೆಯ ಮುದ್ರೆಯನ್ನು ಒಡೆದಾಗ ನಾಲ್ಕನೆಯ ಜೀವಿಯು “ಬಾ”! ಎನ್ನುವ ಶಬ್ದವನ್ನು ಕೇಳಿದೆನು.
8 I widziałem, a oto koń płowy, a tego, który siedział na nim, imię było śmierć, a piekło szło za nim; i dana im jest moc nad czwartą częścią ziemi, aby zabijali mieczem i głodem, i morem, i przez zwierzęta ziemskie. (Hadēs )
೮ಆಗ ನಾನು ನೋಡಲು ಇಗೋ, ನಸು ಹಸಿರು ಬಣ್ಣದ ಕುದುರೆಯು ಕಾಣಿಸಿತು. ಅದರ ಮೇಲೆ ಕುಳಿತಿದ್ದವನ ಹೆಸರು ಮೃತ್ಯು ಎಂದು. ಮೃತ್ಯುಲೋಕ ಅವನನ್ನು ಹಿಂಬಾಲಿಸುತ್ತಿತ್ತು. ಅವನಿಗೆ ಭೂಮಿಯ ನಾಲ್ಕನೇ ಒಂದು ಭಾಗವನ್ನು ಕತ್ತಿಯಿಂದಲೂ, ಕ್ಷಾಮದಿಂದಲೂ, ಅಂಟುರೋಗದಿಂದಲೂ, ಭೂಮಿಯ ಕಾಡುಮೃಗಗಳಿಂದಲೂ ಕೊಂದುಹಾಕುವುದಕ್ಕೆ ಅಧಿಕಾರ ಕೊಡಲಾಗಿತ್ತು. (Hadēs )
9 A gdy otworzył piątą pieczęć, widziałem pod ołtarzem dusze pobitych dla słowa Bożego i dla świadectwa, które wydawali;
೯ಆತನು ಐದನೆಯ ಮುದ್ರೆಯನ್ನು ಒಡೆದಾಗ, ದೇವರ ವಾಕ್ಯದ ನಿಮಿತ್ತವಾಗಿಯೂ, ತಮಗಿದ್ದ ದೃಢವಾದ ಸಾಕ್ಷಿಯ ನಿಮಿತ್ತವಾಗಿಯೂ, ಹತರಾದವರ ಆತ್ಮಗಳು ಯಜ್ಞವೇದಿಯ ಕೆಳಗಿರುವುದನ್ನು ಕಂಡೆನು.
10 I wołali głosem wielkim, mówiąc: Dokądże, Panie święty i prawdziwy! nie sądzisz i nie mścisz się krwi naszej nad tymi, którzy mieszkają na ziemi?
೧೦ಅವರು, “ಸರ್ವಶಕ್ತನಾದ ಕರ್ತನೇ, ಪರಿಶುದ್ಧನೂ, ಸತ್ಯವಂತನೂ, ಆಗಿರುವಾತನೇ, ನಮ್ಮ ರಕ್ತವನ್ನು ಸುರಿಸಿದ ಭೂಲೋಕ ನಿವಾಸಿಗಳಿಗೆ ನೀನು ಇನ್ನೆಷ್ಟು ಸಮಯ ನ್ಯಾಯತೀರಿಸದೆಯೂ, ಪ್ರತಿದಂಡನೆ ಮಾಡದೆಯೂ ಇರುವಿ?” ಎಂದು ಮಹಾಶಬ್ದದಿಂದ ಕೂಗಿದರು.
11 I dane są każdemu z nich szaty białe, i powiedziano im, aby odpoczywali jeszcze na mały czas, ażby się dopełnił poczet spółsług ich i braci ich, którzy mają być pobici, jako i oni.
೧೧ಆಗ ಅವರಲ್ಲಿ ಪ್ರತಿಯೊಬ್ಬನಿಗೆ ಒಂದೊಂದು ಬಿಳೀ ನಿಲುವಂಗಿಯು ಕೊಡಲ್ಪಟ್ಟಿತು ಇನ್ನೂ ಸ್ವಲ್ಪ ಸಮಯ ವಿಶ್ರಮಿಸಿಕೊಂಡಿರಬೇಕು. ನಿಮ್ಮ ಹಾಗೆ ವಧಿಸಲ್ಪಡಬೇಕಾಗಿರುವ ನಿಮ್ಮ ಸಹೋದರರ ಮತ್ತು ನಿಮ್ಮ ಜೊತೆ ಸೇವಕರ ಸಂಖ್ಯೆ ಪೂರ್ಣವಾಗುವ ತನಕ ಕಾದಿರಬೇಕೆಂದು ಅವರಿಗೆ ಅಪ್ಪಣೆಯಾಯಿತು.
12 I widziałem, gdy otworzył szóstą pieczęć, a oto stało się wielkie trzęsienie ziemi, a słońce sczerniało jako wór włosiany i księżyc wszystek stał się jako krew;
೧೨ಆತನು ಆರನೆಯ ಮುದ್ರೆಯನ್ನು ಒಡೆಯುವುದನ್ನು ಕಂಡೆನು. ಆಗ ಮಹಾಭೂಕಂಪ ಉಂಟಾಯಿತು. ಸೂರ್ಯನು ಕರೀಕಂಬಳಿಯಂತೆ ಕಪ್ಪಾದನು ಮತ್ತು ಪೂರ್ಣಚಂದ್ರನು ರಕ್ತದಂತಾದನು.
13 A gwiazdy niebieskie padały na ziemię, tak jako drzewo figowe zrzuca z siebie figi swoje niedostałe, gdy od wiatru wielkiego bywa zachwiane.
೧೩ಅಂಜೂರದ ಮರವು ಬಿರುಗಾಳಿಯಿಂದ ಬಡಿಯಲ್ಪಟ್ಟು ತನ್ನ ಕಾಯಿಗಳನ್ನು ಉದುರಿಸುವ ಹಾಗೆ ಆಕಾಶದಿಂದ ನಕ್ಷತ್ರಗಳು ಭೂಮಿಗೆ ಉದುರಿ ಬಿದ್ದವು.
14 A niebo ustąpiło jako księgi zwinione, a wszelka góra i wyspy z miejsca się swego poruszyły;
೧೪ಆಕಾಶವು ಸುರುಳಿಯಂತೆ ಸುತ್ತಲ್ಪಟ್ಟು ಮರೆಯಾಯಿತು. ಎಲ್ಲಾ ಬೆಟ್ಟಗಳು ಮತ್ತು ದ್ವೀಪಗಳು ತಮ್ಮತಮ್ಮ ಸ್ಥಳಗಳಿಂದ ಕದಲಿದವು.
15 A królowie ziemi i książęta, i bogacze, i hetmani, i mocarze, i każdy niewolnik, i każdy wolny pokryli się w jaskinie i w skały gór,
೧೫ಆಗ ಭೂರಾಜರುಗಳೂ, ಮಹಾಪುರುಷರೂ, ಸಹಸ್ರಾಧಿಪತಿಗಳೂ, ಐಶ್ವರ್ಯವಂತರೂ, ಪರಾಕ್ರಮಶಾಲಿಗಳೂ, ಎಲ್ಲಾ ದಾಸರೂ ಮತ್ತು ಸ್ವತಂತ್ರರೂ ಬೆಟ್ಟಗಳ ಗವಿಗಳಿಗೂ ಮತ್ತು ಬಂಡೆಗಳ ಸಂದುಗಳಿಗೂ ಓಡಿಹೋಗಿ ತಮ್ಮನ್ನು ಮರೆಮಾಡಿಕೊಂಡರು.
16 I rzekli górom i skałom: Upadnijcie na nas i zakryjcie nas przed obliczem tego, który siedzi na stolicy i przed gniewem tego Baranka;
೧೬ಬೆಟ್ಟಗಳಿಗೂ ಬಂಡೆಗಳಿಗೂ, “ನಮ್ಮ ಮೇಲೆ ಬೀಳಿರಿ!, ಸಿಂಹಾಸನದ ಮೇಲೆ ಕುಳಿತಿರುವಾತನ ಮುಖವನ್ನು ನೋಡದ ಹಾಗೆಯೂ ಕುರಿಮರಿಯ ಕೋಪಾಗ್ನಿಯು ತಟ್ಟದ ಹಾಗೆಯೂ ನಮ್ಮನ್ನು ಮರೆಮಾಡಿರಿ.
17 Albowiem przyszedł dzień on wielki gniewu jego, i któż się ostać może?
೧೭ಏಕೆಂದರೆ ಅವರ ಕೋಪಾಗ್ನಿಯು ಕಾಣಿಸುವ ಮಹಾ ದಿನವು ಬಂದಿದೆ, ಅದರ ಮುಂದೆ ನಿಲ್ಲುವುದಕ್ಕೆ ಯಾರಿಂದಾದೀತು?” ಎಂದು ಹೇಳಿದರು.