< نحمیا 10 >
نحمیای حاکم پسر حَکَلیا، اولین کسی بود که این پیمان را امضا کرد. بعد از او صدقیا، سپس افراد زیر آن را امضا کردند: | 1 |
೧ಲೇಖನ ರೂಪವಾದ ಪ್ರತಿಜ್ಞೆಗೆ ಸಹಿಮಾಡಿದವರು ಯಾರಾರೆಂದರೆ: ಹಕಲ್ಯನ ಮಗನಾದ ನೆಹೆಮೀಯನೆಂಬ ದೇಶಾಧಿಪತಿ ಹಾಗೂ ಯಾಜಕನಾದ ಚಿದ್ಕೀಯ,
کاهنان: سرایا، عزریا، ارمیا، فشحور، امریا، ملکیا، حطوش، شبنیا، ملوک، حاریم، مریموت، عوبدیا، دانیال، جنتون، باروک، مشلام، ابیا، میامین، معزیا، بلجای، شمعیا. | 2 |
೨ಸೆರಾಯ, ಅಜರ್ಯ, ಯೆರೆಮೀಯ,
೪ಹಟ್ಟೂಷ್, ಶೆಬನ್ಯ, ಮಲ್ಲೂಕ್,
೫ಹಾರಿಮ್, ಮೆರೇಮೋತ್, ಓಬದ್ಯ,
೬ದಾನೀಯೇಲ್, ಗಿನ್ನೆತೋನ್, ಬಾರೂಕ್,
೭ಮೆಷುಲ್ಲಾಮ್, ಅಬೀಯ, ಮಿಯ್ಯಾಮೀನ್,
೮ಮಾಜ್ಯ, ಬಿಲ್ಗೈ, ಶೆಮಾಯ ಎಂಬ ಯಾಜಕರು.
لاویان: یشوع (پسر ازنیا)، بنوی (پسر حیناداد)، قدمیئیل، شبنیا، هودیا، قلیطا، فلایا، حانان، میخا، رحوب، حشبیا، زکور، شربیا، شبنیا، هودیا، بانی، بنینو. | 9 |
೯ಲೇವಿಯರಲ್ಲಿ: ಅಜನ್ಯನ ಮಗನಾದ ಯೇಷೂವ, ಹೇನಾದಾದ್, ಬಿನ್ನೂಯ್, ಕದ್ಮೀಯೇಲ್ ಎಂಬುವರು.
೧೦ಇವರ ಬಂಧುಗಳಾದ ಶೆಬನ್ಯ, ಹೋದೀಯ. ಕೆಲೀಟ, ಪೆಲಾಯ, ಹಾನಾನ್,
೧೨ಜಕ್ಕೂರ್, ಶೇರೇಬ್ಯ, ಶೆಬನ್ಯ,
೧೩ಹೋದೀಯ, ಬಾನೀ, ಬೆನೀನೂ ಎಂಬುವರು.
سران قوم: فرعوش، فحت موآب، عیلام، زتو، بانی، بونی، عزجد، ببای، ادونیا، بغوای، عودین، عاطیر، حِزِقیا، عزور، هودیا، حاشوم، بیصای، حاریف، عناتوت، نیبای، مجفیعاش، مشلام، حزیر، مشیزبئیل، صادوق، یدوع، فلطیا، حانان، عنایا، هوشع، حننیا، حشوب، هلوحیش، فلحا، شوبیق، رحوم، حشبنا، معسیا، اخیا، حانان، عانان، ملوک، حاریم، بعنه. | 14 |
೧೪ಜನಪ್ರಧಾನರಲ್ಲಿ ಪರೋಷ್, ಪಹತ್ ಮೋವಾಬ್, ಏಲಾಮ್, ಜತ್ತೂ, ಬಾನೀ,
೧೭ಆಟೇರ್, ಹಿಜ್ಕೀಯ, ಅಜ್ಜೂರ್,
೨೦ಮಗ್ಪೀಯಾಷ್, ಮೆಷುಲ್ಲಾಮ್, ಹೇಜೀರ್,
೨೧ಮೆಷೇಜಬೇಲ್, ಚಾದೋಕ್, ಯದ್ದೂವ,
೨೪ಹಲೋಹೇಷ್, ಪಿಲ್ಹ, ಶೋಬೇಕ್,
೨೭ಮಲ್ಲೂಕ್, ಹಾರಿಮ್, ಬಾನ ಎಂಬುವರು.
ما مردم اسرائیل، کاهنان، لاویان، نگهبانان، دسته سرایندگان، خدمتگزاران خانهٔ خدا، و تمام کسانی که با زنان، پسران و دختران بالغ خویش که با اطاعت از تورات خدا، خود را از قومهای بیگانه جدا کردهایم، | 28 |
೨೮ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ದೇವಾಲಯದ ಸೇವಕರು ಉಳಿದ ಜನರು ಇವರಲ್ಲಿ ದೇವರ ಧರ್ಮೋಪದೇಶದ ನಿಮಿತ್ತವಾಗಿ ಅನ್ಯದೇಶದವರ ಗೊಡವೆಯನ್ನು ತೊರೆದುಬಿಟ್ಟವರು ತಮ್ಮ ತಮ್ಮ ಹೆಂಡತಿಯರು, ಗ್ರಹಿಸಿಕೊಳ್ಳಲು ಶಕ್ತರಾದ ಗಂಡು ಹೆಣ್ಣು ಮಕ್ಕಳು ಇವರೊಡನೆ ಬಂದರು.
به این وسیله با برادران و سران قوم خود متحد شده، قسم میخوریم که دستورهای خدا را که توسط خدمتگزارش موسی داده شد اطاعت کنیم؛ و اگر از احکام و اوامر او سرپیچی کنیم لعنت خدا بر ما باشد. | 29 |
೨೯ಮುಖಂಡರು ತಮ್ಮ ಸಹೋದರರೊಂದಿಗೆ ಸೇರಿಕೊಂಡು, ತಾವು ದೇವರ ಸೇವಕನಾದ ಮೋಶೆಯ ಮುಖಾಂತರ ಕೊಡಲ್ಪಟ್ಟ ದೇವರ ಧರ್ಮೋಪದೇಶವನ್ನು ಅನುಸರಿಸಿ ತಮ್ಮ ಕರ್ತನಾದ ಯೆಹೋವನ ಎಲ್ಲಾ ಆಜ್ಞಾನಿಯಮವಿಧಿಗಳನ್ನು ಅನುಸರಿಸಿ ನಡೆಯುವುದಾಗಿ ಆಣೆಯಿಟ್ಟು ಪ್ರಮಾಣ ಮಾಡಿದರು. ಹೇಗೆಂದರೆ:
قول میدهیم که نه دختران خود را به پسران غیریهودی بدهیم و نه بگذاریم پسران ما با دختران غیریهودی ازدواج کنند. | 30 |
೩೦ಈ ದೇಶನಿವಾಸಿಗಳಿಗೆ ನಮ್ಮ ಹೆಣ್ಣುಗಳನ್ನು ಕೊಡುವುದಿಲ್ಲ ಮತ್ತು ನಮ್ಮ ಗಂಡು ಮಕ್ಕಳಿಗೋಸ್ಕರ ಅವರಿಂದ ಹೆಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ.
همچنین قول میدهیم که اگر قومهای بیگانه در روز شَبّات یا در یکی از روزهای مقدّس دیگر بخواهند به ما غله یا چیز دیگری بفروشند، از ایشان نخریم و هر هفت سال یک بار چیزی در زمین نکاریم و قرض برادران یهودی خود را ببخشیم. | 31 |
೩೧ದೇಶನಿವಾಸಿಗಳು ಮಾರುವುದಕ್ಕೋಸ್ಕರ ತರುವ ಯಾವ ಸರಕುಗಳನ್ನೂ, ಧಾನ್ಯವನ್ನೂ, ಸಬ್ಬತ್ ಮೊದಲಾದ ಪರಿಶುದ್ಧ ದಿನಗಳಲ್ಲಿ ಅವುಗಳನ್ನು ನಾವು ಕೊಂಡುಕೊಳ್ಳುವುದಿಲ್ಲ. ಪ್ರತಿ ಏಳನೆಯ ವರ್ಷದ ಭೂಮಿಯ ಸಾಗುವಳಿಯನ್ನೂ ಇತರರು ಕೊಡಬೇಕಾದ ಸಾಲವನ್ನೂ ಮನ್ನಾ ಮಾಡಿಬಿಡುತ್ತೇವೆ.
عهد میبندیم که هر سال هر یک از ما یک سوم مثقال نقره برای مخارج خانهٔ خدا تقدیم کنیم، | 32 |
೩೨ವರ್ಷಕ್ಕೆ ಒಂದು ಶೆಕೆಲಿನ ಮೂರನೆಯ ಒಂದು ಭಾಗವನ್ನು ದೇವಾಲಯದ ಸೇವೆಗಾಗಿ ಕೊಡಬೇಕೆಂಬ ನಿಯಮವನ್ನು ಪಾಲಿಸಿಕೊಳ್ಳುತ್ತೇವೆ.
یعنی برای نان حضور، هدیهٔ آردی و قربانیهای سوختنی روزانه، قربانیهای روزهای شَبّات و جشنهای ماه نو و جشنهای سالیانه، هدایای مقدّس دیگر، قربانی گناه برای کفاره قوم اسرائیل، و برای تمام خدمات خانهٔ خدای ما. | 33 |
೩೩ಆ ಹಣವು ದೇವರ ಸನ್ನಿಧಿಯಲ್ಲಿ ಇಡತಕ್ಕ ರೊಟ್ಟಿ, ನಿತ್ಯಧಾನ್ಯ, ನೈವೇದ್ಯ ಇವುಗಳಿಗಾಗಿಯೂ, ನಿತ್ಯ ಸರ್ವಾಂಗಹೋಮ, ಸಬ್ಬತ್ ದಿನ, ಅಮಾವಾಸ್ಯೆ ಮತ್ತು ಜಾತ್ರೆ ಉತ್ಸವ ಇವುಗಳಲ್ಲಿ ಮಾಡಬೇಕಾಗಿರುವ ಸರ್ವಾಂಗಹೋಮ, ಸಮಾಧಾನಯಜ್ಞ, ಇಸ್ರಾಯೇಲರ ದೋಷಪರಿಹಾರಕ ಯಜ್ಞ ಇವುಗಳಿಗಾಗಿಯೂ ನಮ್ಮ ದೇವರ ದೇವಾಲಯಕ್ಕೆ ಸಂಬಂಧವಾದ ಬೇರೆ ಎಲ್ಲಾ ಕೆಲಸಕಾರ್ಯಗಳಿಗಾಗಿಯೂ ವೆಚ್ಚವಾಗಬೇಕು.
ما کاهنان، لاویان و مردم قول میدهیم که مطابق دستور تورات، هیزم مورد نیاز مذبح خانهٔ خداوند، خدایمان را تهیه کنیم و هر سال قرعه خواهیم انداخت تا معلوم شود چه قبیلهای باید این کار را انجام دهد. | 34 |
೩೪ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಮ್ಮ ದೇವರಾದ ಯೆಹೋವನ ಯಜ್ಞವೇದಿಯ ಮೇಲೆ ಬೆಂಕಿ ಉರಿಸುವುದಕ್ಕಾಗಿ, ಪ್ರತಿ ವರ್ಷವೂ ನಿಯಮಿತ ಕಾಲಗಳಲ್ಲಿ ನಮ್ಮ ದೇವಾಲಯಕ್ಕೆ ಕಟ್ಟಿಗೆ ದೊರಕುವ ಹಾಗೆ, ಆಯಾ ಗೋತ್ರಾನುಸಾರ ಕಟ್ಟಿಗೆ ದಾನ ಮಾಡತಕ್ಕವರು ಇಂಥವರೇ ಎಂಬುದನ್ನು ಯಾಜಕರೂ, ಲೇವಿಯರೂ, ಸಾಧಾರಣ ಜನರೂ ಆಗಿರುವ ನಮ್ಮಲ್ಲಿ ಚೀಟು ಹಾಕಿ ಗೊತ್ತುಮಾಡಿಕೊಳ್ಳುತ್ತೇವೆ.
قول میدهیم نوبر غله و میوهٔ خود را هر سال به خانهٔ خداوند بیاوریم. | 35 |
೩೫ನಮ್ಮ ಭೂಮಿಯ ಬೆಳೆಗಳ ಮತ್ತು ಎಲ್ಲಾ ಹಣ್ಣಿನ ಮರಗಳ ಪ್ರಥಮ ಫಲಗಳನ್ನು ಪ್ರತಿ ವರ್ಷವೂ ಯೆಹೋವನ ಆಲಯಕ್ಕೆ ತಂದುಕೊಂಡುವೆವು.
قول میدهیم که پسران ارشد و تمام نخستزادههای گله و رمه خود را مطابق دستور تورات به خانهٔ خدای خود بیاوریم و به دست کاهنانی که در آنجا خدمت میکنند بسپاریم. | 36 |
೩೬ನಮ್ಮ ಚೊಚ್ಚಲಮಕ್ಕಳ ವಿಷಯದಲ್ಲೂ, ನಮ್ಮ ಪಶುಗಳ ಹಿಂಡುಗಳಲ್ಲಿ ಚೊಚ್ಚಲಮರಿಗಳ ವಿಷಯದಲ್ಲೂ ಧರ್ಮಶಾಸ್ತ್ರವಿಧಿಗಳಿಗೆ ಅನುಸಾರವಾಗಿ ನಡೆದುಕೊಳ್ಳುವೆವು. ನಮ್ಮ ಚೊಚ್ಚಲ ಕರುಗಳನ್ನೂ, ಚೊಚ್ಚಲ ಆಡು, ಕುರಿಮರಿಗಳನ್ನೂ ನಮ್ಮ ದೇವಾಲಯಕ್ಕೆ ತಂದು ಅಲ್ಲಿ ಕೆಲಸ ನಡೆಸುತ್ತಿರುವ ಯಾಜಕರಿಗೆ ಕೊಡುವೆವು.
همچنین قول میدهیم خمیری را که از نوبر غله تهیه میکنیم همراه نوبر انواع میوهها و نوبر شراب تازه و روغن زیتون خود به کاهنانی که در خانهٔ خدا هستند بدهیم. ما دهیک تمام محصولات زمین خود را به لاویانی که در روستاهای ما مسئول جمعآوری دهیک هستند خواهیم داد. | 37 |
೩೭ನಾವು ದೇವರಿಗಾಗಿ ಪ್ರತ್ಯೇಕಿಸಿ ಇಡತಕ್ಕ ಪ್ರಥಮಫಲದ ಹಿಟ್ಟು, ಹಣ್ಣುಹಂಪಲು, ದ್ರಾಕ್ಷಾರಸ, ಎಣ್ಣೆ ಮೊದಲಾದವುಗಳನ್ನು ಯಾಜಕ ಸೇವೆಗೋಸ್ಕರ ನಮ್ಮ ದೇವರ ಆಲಯದ ಕೊಠಡಿಗಳಲ್ಲಿ ತಂದು ಇಡುವೆವು. ನಮ್ಮ ಭೂಮಿಯ ಹುಟ್ಟುವಳಿಯ ದಶಮಾಂಶವು ಲೇವಿಯರದಾಗಿರುತ್ತದೆ. ಲೇವಿಯರು ತಾವೇ ಬಂದು, ನಮ್ಮ ಸಾಗುವಳಿಯ ಊರುಗಳಲ್ಲಿ ಅದನ್ನು ಶೇಖರಿಸಿಕೊಳ್ಳಬೇಕು.
در وقت جمعآوری دهیک، کاهنی (که از نسل هارون است) همراه لاویان خواهد بود و لاویان یک دهم از دهیکها را به خانۀ خدای ما خواهند آورد و آنجا انبار خواهند کرد. | 38 |
೩೮ಅವರು ದಶಮಾಂಶವನ್ನು ಕೂಡಿಸುವಾಗ ಆರೋನನ ವಂಶದವನಾದ ಯಾಜಕನೊಬ್ಬನು ಅವರ ಸಂಗಡ ಇರಬೇಕು. ಲೇವಿಯರು ತಮಗೆ ದೊರಕಿರುವ ಭಾಗದ ದಶಮಾಂಶವನ್ನು ದೇವಾಲಯದ ಭಂಡಾರದ ಕೊಠಡಿಗಳಲ್ಲಿ ಇರಿಸಬೇಕು.
ما مردم اسرائیل و لاویان، این هدایای غله، شراب تازه و روغن زیتون را به خانۀ خدا خواهیم آورد و در اتاقهایی که وسایل خانهٔ خدا نگهداری میشود و کاهنان، نگهبانان و سرایندگان در آنجا زندگی میکنند، انبار خواهیم کرد. قول میدهیم که از خانهٔ خدا غافل نشویم. | 39 |
೩೯ಇಸ್ರಾಯೇಲರೂ ಮತ್ತು ಲೇವಿಯರೂ ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳನ್ನು, ದೇವರಿಗಾಗಿ ಪ್ರತ್ಯೇಕಿಸತಕ್ಕ ಕಾಣಿಕೆಗಳನ್ನು ತಂದು ದೇವಾಲಯದಲ್ಲಿ ಸೇವೆ ನಡೆಸುತ್ತಿರುವ ಯಾಜಕರೂ, ದ್ವಾರಪಾಲಕರು, ಗಾಯಕರು ಇರುವ ಕೊಠಡಿಗಳಲ್ಲಿಯೂ ಹಾಗು ಪವಿತ್ರಾಲಯದ ಪಾತ್ರೆಗಳನ್ನು ಇಡುವ ಕೊಠಡಿಗಳಲ್ಲಿಯೂ ಇರಿಸಬೇಕು. ಅಲ್ಲದೆ ನಮ್ಮ ದೇವರ ಆಲಯವನ್ನು ಎಂದೂ ಅಲಕ್ಷ್ಯ ಮಾಡುವುದಿಲ್ಲ ಎಂದು ಬರೆದುಕೊಟ್ಟರು.