< عِزرا 9 >
پس از پایان این امور، سران قوم اسرائیل پیش من آمدند و گفتند که قوم و کاهنان و لاویان خود را از قومهای بتپرست ساکن این دیار جدا نکردهاند و از اعمال قبیح کنعانیها، حیتیها، فرزیها، یبوسیها، عمونیها، موآبیها، مصریها و اموریها پیروی میکنند. | 1 |
೧ಇದಾದನಂತರ ಪ್ರಧಾನಪುರುಷರು ನನ್ನ ಬಳಿಗೆ ಬಂದು, “ಇಸ್ರಾಯೇಲರಲ್ಲಿ ಸಾಧಾರಣಜನರೂ, ಯಾಜಕರೂ, ಲೇವಿಯರೂ, ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸಿಯರು, ಅಮ್ಮೋನಿಯರು, ಮೋವಾಬ್ಯರು, ಐಗುಪ್ತ್ಯರು ಮತ್ತು ಅಮೋರಿಯರು ಎಂಬ ಅನ್ಯ ದೇಶಗಳವರ ಬಳಿಕೆಯನ್ನು ತೊರೆಯದೆ ಅವರ ಅಸಹ್ಯಕಾರ್ಯಗಳನ್ನು ಅನುಸರಿಸಿದ್ದಾರೆ.
مردان یهودی از دختران این قومها برای خود و پسرانشان زنان گرفتهاند و به این وسیله قوم مقدّس را با قومهای بتپرست در هم آمیختهاند. در این فساد، سران و بزرگان قوم پیشقدم بودهاند. | 2 |
೨ಅವರು ತಮಗೂ ತಮ್ಮ ಗಂಡುಮಕ್ಕಳಿಗೂ ಅವರಿಂದ ಹೆಣ್ಣುಮಕ್ಕಳನ್ನು ತೆಗೆದುಕೊಂಡದ್ದರಿಂದ ದೇವಕುಲವು ಅನ್ಯದೇಶಗಳವರೊಡನೆ ಮಿಶ್ರವಾಯಿತು. ಪ್ರಭುಗಳೂ ಮತ್ತು ಪ್ರಧಾನರೂ ಈ ದ್ರೋಹಕ್ಕೆ ಮುಂದಾಳುಗಳಾದರು” ಎಂದು ತಿಳಿಸಿದರು.
وقتی این خبر را شنیدم، جامۀ خود را دریدم، موی سر و ریش خود را کندم و متحیر نشستم. | 3 |
೩ಈ ವರ್ತಮಾನವನ್ನು ಕೇಳಿದೊಡನೆ ನಾನು ಬಟ್ಟೆಗಳನ್ನು ಮತ್ತು ಮೇಲಂಗಿಗಳನ್ನು ಹರಿದುಕೊಂಡು ತಲೆಯ ಮತ್ತು ಗಡ್ಡದ ಕೂದಲುಗಳನ್ನು ಕಿತ್ತುಕೊಂಡು, ಸ್ತಬ್ಧನಾಗಿ ಕುಳಿತುಕೊಂಡೆನು.
سپس گروهی از کسانی که به خاطر این گناه قوم از خدای اسرائیل میترسیدند نزد من جمع شدند و من تا وقت تقدیم قربانی عصر، همانطور نشسته ماندم. | 4 |
೪ಇಸ್ರಾಯೇಲ್ ದೇವರ ವಿಧಿಗಳನ್ನು ಗೌರವಿಸಿದವರೆಲ್ಲರೂ ಸೆರೆಯಿಂದ ಬಂದವರ ದ್ರೋಹದ ಸಲುವಾಗಿ ಕಳವಳಗೊಂಡು ನನ್ನನ್ನು ಕೂಡಿಕೊಂಡರು.
در هنگام قربانی عصر از جای خود بلند شدم و با همان جامهٔ دریده زانو زدم و دستهای خود را به حضور خداوند، خدایم بلند کرده، | 5 |
೫ನಾನು ಸಂಧ್ಯಾ ನೈವೇದ್ಯ ಸಮರ್ಪಣೆಯ ಹೊತ್ತಿನವರೆಗೂ ಸ್ತಬ್ಧನಾಗಿ ಕುಳಿತುಕೊಂಡಿದ್ದೆನು. ಆ ಮೇಲೆ ದೇಹದಂಡನೆಮಾಡುವುದನ್ನು ಬಿಟ್ಟು ಹರಿದ ಬಟ್ಟೆಮೇಲಂಗಿಗಳಿಂದ ಕೂಡಿದವನಾಗಿಯೇ ಮೊಣಕಾಲೂರಿ ನನ್ನ ದೇವರಾದ ಯೆಹೋವನ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದ್ದೇನೆಂದರೆ:
گفتم: «خدایا در نزد تو شرمسارم و خجالت میکشم که در حضورت سر بلند کنم، چون گناهان ما از سر ما گذشته و خطاهای ما سر به فلک کشیده است. | 6 |
೬“ನನ್ನ ದೇವರೇ, ನಾನು ಮನಗುಂದಿದವನಾಗಿದ್ದೇನೆ, ನಿನ್ನ ಕಡೆಗೆ ತಿರುಗಿಕೊಳ್ಳಲು ನಾಚಿಕೊಳ್ಳುತ್ತೇನೆ. ನನ್ನ ದೇವರೇ, ನಮ್ಮ ಪಾಪಗಳು ನಮ್ಮ ತಲೆಮೀರಿ ಬೆಳೆದಿವೆ, ನಮ್ಮ ಅಪರಾಧವು ಆಕಾಶವನ್ನು ಮುಟ್ಟುವಷ್ಟು ದೊಡ್ಡದಾಗಿವೆ.
قوم ما از زمانهای گذشته تا به حال مرتکب گناهان زیادی شدهاند؛ به همین دلیل است که ما و پادشاهان و کاهنانمان به دست پادشاهان دیگر کشته و اسیر و غارت و رسوا شدهایم، و این رسوایی تا امروز هم باقی است. | 7 |
೭ನಾವು ನಮ್ಮ ಪೂರ್ವಿಕರ ಕಾಲದಿಂದ ಇಂದಿನ ವರೆಗೂ ಮಹಾಪರಾಧಿಗಳೇ. ನಮ್ಮ ಪಾಪಗಳ ದೆಸೆಯಿಂದ ನಾವೂ, ನಮ್ಮ ಅರಸರೂ ಮತ್ತು ಯಾಜಕರೂ ಅನ್ಯದೇಶಗಳ ರಾಜರ ಕೈಗೆ ಒಪ್ಪಿಸಲ್ಪಟ್ಟು ಈಗಿರುವಂತೆ ಕತ್ತಿಗೂ, ಸೆರೆಗೂ, ಸುಲಿಗೆಗೂ, ಅಪಮಾನಕ್ಕೂ ಗುರಿಯಾದೆವು.
«و حال مدتی است که لطف تو ای خداوند، خدای ما، شامل حال ما شده و تو عدهای از ما را از اسارت بیرون آورده در این مکان مقدّس مستقر ساختهای و به ما شادی و حیات تازه بخشیدهای. | 8 |
೮ಆದರೂ ನಮ್ಮ ದೇವರಾದ ಯೆಹೋವನು ಒಂದು ಕ್ಷಣ ನಮಗೆ ಪ್ರಸನ್ನನಾಗಿ ನಮ್ಮಲ್ಲಿ ಸ್ವಲ್ಪ ಜನರನ್ನು ರಕ್ಷಣೆಗಾಗಿ ಉಳಿಸಿ ತನ್ನ ಪರಿಶುದ್ಧಸ್ಥಳದಲ್ಲಿ ಮೊಳೆಯಂತೆ ನಮ್ಮನ್ನು ನೆಲೆಗೊಳಿಸಿ, ನಮ್ಮ ಕಣ್ಣುಗಳನ್ನು ಕಳೆಗೊಳಿಸಿ ನಮ್ಮ ದಾಸತ್ವದಲ್ಲಿ ನಮಗೆ ಸ್ವಲ್ಪಮಟ್ಟಿಗೆ ಉಜ್ಜೀವನವನ್ನು ಅನುಗ್ರಹಿಸಿದ್ದಾನೆ.
ما اسیر و برده بودیم، ولی تو ما را در حالت بردگی ترک نکردی، بلکه ما را مورد لطف پادشاهان پارس قرار دادی. تو به ما حیات تازه بخشیدهای تا بتوانیم خانهٔ تو را بازسازی کنیم و در سرزمین یهودا و شهر اورشلیم در امان باشیم. | 9 |
೯ನಾವು ದಾಸರಾದರೂ ನಮ್ಮ ದೇವರು ನಮ್ಮ ದಾಸತ್ವದಲ್ಲಿ ನಮ್ಮನ್ನು ಕೈಬಿಡಲಿಲ್ಲ; ಹಾಳುಬಿದ್ದ ನಮ್ಮ ದೇವರ ಆಲಯವನ್ನು ಪುನಃ ಕಟ್ಟಿ ಭದ್ರಪಡಿಸುವುದಕ್ಕೋಸ್ಕರ ನಮಗೆ ಉಜ್ಜೀವನ ಪ್ರಾಪ್ತವಾಗುವಂತೆಯೂ, ಯೆಹೂದದಲ್ಲಿಯೂ ಮತ್ತು ಯೆರೂಸಲೇಮಿನಲ್ಲಿಯೂ ನಮಗೆ ಅಭಯಾಶ್ರಯ ಸಿಕ್ಕುವಂತೆಯೂ ಪರ್ಷಿಯ ರಾಜರ ಮುಂದೆ ನಮಗೆ ಕೃಪೆಯನ್ನು ಅನುಗ್ರಹಿಸಿದ್ದಾನೆ.
«و حال ای خدای ما، پس از این همه لطف، چه میتوانیم بگوییم؟ در حالی که بار دیگر از دستورهای تو که توسط انبیایت به ما داده بودی، سرپیچی کردهایم. آنها به ما گفته بودند که سرزمینی که بهزودی آن را به تصرف خود در خواهیم آورد زمینی است که بر اثر اعمال قبیح ساکنان بتپرست آن نجس شده است و سراسر آن پر از فساد و پلیدی است. | 10 |
೧೦ಇಷ್ಟು ಉಪಕಾರವನ್ನು ಪಡೆದ ನಾವು ಏನು ಅರಿಕೆಮಾಡಿಕೊಳ್ಳಲು ಸಾಧ್ಯ? ನಮ್ಮ ದೇವರೇ, ನಿನ್ನ ಆಜ್ಞೆಗಳನ್ನು ಉಲ್ಲಂಘಿಸಿದ್ದೇವೆ.
೧೧ನೀನು ನಿನ್ನ ಸೇವಕರಾದ ಪ್ರವಾದಿಗಳ ಮುಖಾಂತರ ನಮಗೆ, ‘ನೀವು ಸ್ವತಂತ್ರಿಸಿಕೊಳ್ಳುವುದಕ್ಕೆ ಹೋಗುವ ದೇಶವು ಅನ್ಯದೇಶಗಳವರ ಅಶುದ್ಧತ್ವದಿಂದಲೂ, ಅವರ ವಿಗ್ರಹಗಳಿಂದಲೂ ಮಲಿನವಾಗಿದೆ. ಆ ದೇಶವು ಎಲ್ಲೆಲ್ಲೂ ಆ ವಿಗ್ರಹಗಳ ಅಸಹ್ಯತೆಯಿಂದ ತುಂಬಿರುತ್ತದೆ.
به ما فرمودند که دختران خود را به پسران اهالی آنجا ندهیم و نگذاریم پسران ما با دختران ایشان ازدواج کنند و نیز هرگز به آن قومها کمک نکنیم تا بتوانیم از آن سرزمین حاصلخیز بهرهمند شویم و آن را برای فرزندانمان تا ابد به ارث بگذاریم. | 12 |
೧೨ಹೀಗಿರಲಾಗಿ ನೀವು ನಿಮ್ಮ ಹೆಣ್ಣುಮಕ್ಕಳನ್ನು ಅವರ ಗಂಡುಮಕ್ಕಳಿಗೆ ಕೊಡಲೂ ಬಾರದು, ನಿಮ್ಮ ಗಂಡುಮಕ್ಕಳಿಗೋಸ್ಕರ ಅವರ ಹೆಣ್ಣು ಮಕ್ಕಳನ್ನು ತೆಗೆದುಕೊಳ್ಳಲೂ ಬಾರದು, ಅವರಿಗೋಸ್ಕರ ಸುಖಕ್ಷೇಮಗಳನ್ನು ಎಂದಿಗೂ ಬಯಸಬಾರದು. ಈ ಪ್ರಕಾರ ನಡೆದರೆ ನೀವು ಬಲಗೊಂಡು ಆ ದೇಶದ ಸಮೃದ್ಧಿಯನ್ನು ಅನುಭವಿಸಿ, ಅದನ್ನು ನಿಮ್ಮ ಸಂತಾನದವರಿಗೆ ಶಾಶ್ವತಸ್ವಾಸ್ಥ್ಯವನ್ನಾಗಿ ಬಿಡುವಿರಿ’ ಎಂದು ಹೇಳಿದಿಯಲ್ಲಾ.
«اما ما مرتکب اعمال زشت و گناهان بزرگی شدیم و تو ما را تنبیه کردی. ولی میدانیم کمتر از آنچه که سزاوار بودیم ما را تنبیه نمودی و گذاشتی از اسارت آزاد شویم. | 13 |
೧೩ನಮ್ಮ ದುಷ್ಕರ್ಮ ಮಹಾಪರಾಧಗಳ ನಿಮಿತ್ತವಾಗಿ ಇಷ್ಟೆಲ್ಲಾ ಕೇಡು ಬಂದರೂ ನಮ್ಮ ದೇವರಾದ ನೀನು ನಮ್ಮ ಪಾಪಗಳಿಗೆ ತಕ್ಕಂತೆ ನಮ್ಮನ್ನು ದಂಡಿಸದೆ, ನಮ್ಮಲ್ಲಿ ಇಷ್ಟು ಜನರನ್ನು ಉಳಿಸಿದಿ.
با وجود این، باز از دستورهای تو سرپیچی نمودهایم و با این قومهای فاسد وصلت کردهایم. حال، بدون شک مورد خشم تو قرار خواهیم گرفت و حتی یک نفر از ما نیز زنده باقی نخواهد ماند. | 14 |
೧೪ಹೀಗಿರುವಲ್ಲಿ ನಾವು ತಿರುಗಿ ನಿನ್ನ ಆಜ್ಞೆಗಳನ್ನು ಮೀರಿ ವಿಗ್ರಹಾರಾಧಕರಾದ ಈ ಜನರ ಸಂಗಡ ಬೀಗತನ ಮಾಡುವುದು ಯೋಗ್ಯವೋ? ಹಾಗೆ ಮಾಡಿದರೆ ನೀನು ನಮ್ಮ ಮೇಲೆ ರೌದ್ರಾವೇಶವುಳ್ಳವನಾಗಿ ಯಾರೂ ತಪ್ಪಿಸಿಕೊಂಡು ಉಳಿಯದಂತೆ ನಮ್ಮನ್ನು ಮುಗಿಸಿಬಿಡುವಿಯಲ್ಲವೋ?
ای خداوند، خدای اسرائیل، تو خدایی عادل هستی. ما بازماندگان قوم اسرائیل در حضور تو به گناه خود اعتراف میکنیم، هر چند به سبب این گناه شایسته نیستیم در حضورت بایستیم.» | 15 |
೧೫ಯೆಹೋವನೇ, ಇಸ್ರಾಯೇಲ್ ದೇವರೇ, ಈಗಿರುವಷ್ಟು ಜನರನ್ನು ನಮ್ಮಲ್ಲಿ ಉಳಿಸಿದ್ದರಿಂದ ನೀನು ಧರ್ಮಸ್ವರೂಪನೆಂದು ಪ್ರಕಟವಾಯಿತು. ನಾವಾದರೋ ನಿನ್ನ ದೃಷ್ಟಿಯಲ್ಲಿ ಅಪರಾಧಿಗಳು. ಈ ನಮ್ಮ ದುಷ್ಕೃತ್ಯದ ನಿಮಿತ್ತವಾಗಿ ನಿನ್ನೆದುರಿನಲ್ಲಿ ನಿಲ್ಲಲಾರೆವು” ಎಂದು ಬೇಡಿಕೊಂಡೆನು.