< اعداد 29 >
«و در روز اول ماه هفتم، محفل مقدس برای شما باشد؛ در آن هیچ کار خدمت مکنید و برای شما روز نواختن کرنا باشد. | ۱ 1 |
“‘ಏಳನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ನೀವು ಮಾಡಬಾರದು. ಅದು ನಿಮಗೆ ತುತೂರಿಗಳನ್ನು ಊದುವ ದಿವಸವಾಗಿರುವುದು.
وقربانی سوختنی بجهت عطر خوشبوی خداوندبگذرانید، یک گاو جوان و یک قوچ، و هفت بره نرینه یک ساله بیعیب. | ۲ 2 |
ನೀವು ಯೆಹೋವ ದೇವರಿಗೆ ಸುವಾಸನೆಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ ದಹನಬಲಿಯಾಗಿ ಅರ್ಪಿಸಬೇಕು.
و هدیه آردی آنها، سه عشر آرد نرم سرشته شده با روغن برای هر گاو، ودو عشر برای هر قوچ. | ۳ 3 |
ಅವುಗಳಿಗೆ ಧಾನ್ಯ ಸಮರ್ಪಣೆಯಾಗಿ ಎಣ್ಣೆಯಿಂದ ಕಲಸಿದ ಹಿಟ್ಟನ್ನು ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಹತ್ತನೇ ಎರಡು ಭಾಗ,
و یک عشر برای هر بره، از آن هفت بره. | ۴ 4 |
ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
و یک بز نر بجهت قربانی گناه تابرای شما کفاره شود. | ۵ 5 |
ನಿಮಗೋಸ್ಕರ ಪ್ರಾಯಶ್ಚಿತ್ತ ಮಾಡುವುದಕ್ಕೆ ಪಾಪ ಪರಿಹಾರಕ ಬಲಿಗಾಗಿ ಒಂದು ಹೋತವನ್ನು ಸಮರ್ಪಿಸಬೇಕು.
سوای قربانی سوختنی اول ماه و هدیه آردیاش، و قربانی سوختنی دائمی با هدیه آردیاش، با هدایای ریختنی آنهابرحسب قانون آنها تا عطر خوشبو و هدیه آتشین خداوند باشد. | ۶ 6 |
ಇದಲ್ಲದೆ ಪ್ರತಿ ತಿಂಗಳಿನ ಮತ್ತು ನಿತ್ಯವಾದ ದಹನಬಲಿಗಳಿಗೆ ಹೆಚ್ಚುವರಿಯಾಗಿ ಅವುಗಳ ಧಾನ್ಯ ಅರ್ಪಣೆಯನ್ನು ಮತ್ತು ಪಾನ ಅರ್ಪಣೆಗಳನ್ನು ನಿರ್ದಿಷ್ಟಪಡಿಸಿದಂತೆ ಸಮರ್ಪಣೆಯಾಗಬೇಕು, ಅವು ಯೆಹೋವ ದೇವರಿಗೆ ಸುವಾಸನೆಗಾಗಿ ಅರ್ಪಿಸುವ ದಹನಬಲಿಯಾಗಿರುವುವು.
«و در روز دهم این ماه هفتم، محفل مقدس برای شما باشد. جانهای خود را ذلیل سازید وهیچ کار مکنید. | ۷ 7 |
“‘ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯನ್ನು ಕೂಡಿಸಬೇಕು. ನೀವು ಎಲ್ಲವನ್ನು ವರ್ಜಿಸಿ, ಯಾವ ಕೆಲಸವನ್ನೂ ಮಾಡಬಾರದು.
و قربانی سوختنی عطر خوشبوبرای خداوند بگذرانید، یک گاو جوان و یک قوچ و هفت بره نرینه یک ساله که برای شما بیعیب باشند. | ۸ 8 |
ಆದರೆ ಯೆಹೋವ ದೇವರಿಗೆ ಸುವಾಸನೆಯಾದ ದಹನಬಲಿಗಾಗಿ ದೋಷವಿಲ್ಲದ ಒಂದು ಎಳೆಯ ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ,
و هدیه آردی آنها سه عشر آرد نرم سرشته شده با روغن برای هر گاو، و دو عشر برای هر قوچ. | ۹ 9 |
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು, ಹೋರಿಗೆ ಎಫಾದ ಹತ್ತನೇ ಮೂರು ಭಾಗ, ಟಗರಿಗೆ ಎಫಾದ ಹತ್ತನೇ ಎರಡು ಭಾಗ,
و یک عشر برای هر بره، از آن هفت بره. | ۱۰ 10 |
ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಹತ್ತನೇ ಒಂದು ಭಾಗ,
و یک بز نر برای قربانی گناه سوای قربانی گناه کفارهای و قربانی سوختنی دائمی با هدیه آردیاش و هدایای ریختنی آنها. | ۱۱ 11 |
ಪಾಪ ಪರಿಹಾರಕ ಬಲಿಗಾಗಿ ಒಂದು ಹೋತನ್ನು ಅರ್ಪಿಸುವದರ ಜೊತೆಗೆ ಪ್ರಾಯಶ್ಚಿತ್ತದ ಪಾಪ ಪರಿಹಾರಕ ಬಲಿಯನ್ನೂ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆಯನ್ನೂ ಅವುಗಳಿಗೆ ತಕ್ಕ ಪಾನದ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز پانزدهم ماه هفتم، محفل مقدس برای شما باشد، هیچ کار خدمت مکنید و هفت روز برای خداوند عید نگاه دارید. | ۱۲ 12 |
“‘ಏಳನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ನೀವು ಪರಿಶುದ್ಧ ಸಭೆಯಾಗಿ ಕೂಡಿಬರಬೇಕು. ದೈನಂದಿನ ಉದ್ಯೋಗವನ್ನು ಮಾಡಬಾರದು. ಯೆಹೋವ ದೇವರಿಗೆ ಏಳು ದಿವಸ ಹಬ್ಬವನ್ನು ಮಾಡಬೇಕು.
و قربانی سوختنی هدیه آتشین عطر خوشبو برای خداوندبگذرانید. سیزده گاو جوان و دو قوچ و چهارده بره نرینه یک ساله که برای شما بیعیب باشند. | ۱۳ 13 |
ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಯಾಗಿ ಬಲಿಯನ್ನು ಅರ್ಪಿಸಬೇಕು. ಏನೆಂದರೆ, ದೋಷವಿಲ್ಲದ ಹದಿಮೂರು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
و بجهت هدیه آردی آنها سه عشر آرد نرم سرشته شده با روغن برای هر گاو از آن سیزده گاو، و دو عشر برای هر قوچ از آن دو قوچ. | ۱۴ 14 |
ಅವುಗಳ ಧಾನ್ಯ ಸಮರ್ಪಣೆಗಾಗಿ ಎಣ್ಣೆ ಕಲಸಿದ ಹಿಟ್ಟನ್ನು ಹದಿಮೂರು ಹೋರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಮೂರು ಭಾಗ, ಎರಡು ಟಗರುಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಎರಡು ಭಾಗ,
ویک عشر برای هر بره از آن چهارده بره. | ۱۵ 15 |
ಹದಿನಾಲ್ಕು ಕುರಿಮರಿಗಳಲ್ಲಿ ಒಂದೊಂದಕ್ಕೆ ಎಫಾದ ಹತ್ತನೇ ಒಂದು ಭಾಗ,
و یک بز نر بجهت قربانی گناه، سوای قربانی سوختنی دائمی، با هدیه آردی و هدیه ریختنی آن. | ۱۶ 16 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯ ಸಮರ್ಪಣೆ ಮತ್ತು ಪಾನದ ಅರ್ಪಣೆಯನ್ನೂ ಸಮರ್ಪಿಸಬೇಕು.
«و در روز دوم، دوازده گاو جوان و دو قوچ و چهارده بره نرینه یک ساله بیعیب. | ۱۷ 17 |
“‘ಎರಡನೆಯ ದಿವಸದಲ್ಲಿ ಕಳಂಕವಿಲ್ಲದ ಹನ್ನೆರಡು ಎಳೆಯ ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
وهدایای آردی و هدایای ریختنی آنها برای گاوهاو قوچها و برهها به شماره آنها برحسب قانون. | ۱۸ 18 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
و یک بز نر بجهت قربانی گناه، سوای قربانی سوختنی دائمی با هدیه آردیاش، و هدایای ریختنی آنها. | ۱۹ 19 |
ದೋಷಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز سوم، یازده گاو جوان و دو قوچ و چهارده بره نرینه یک ساله بیعیب. | ۲۰ 20 |
“‘ಮೂರನೆಯ ದಿವಸದಲ್ಲಿ ದೋಷವಿಲ್ಲದ ಹನ್ನೊಂದು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
وهدایای آردی و هدایای ریختنی آنها برای گاوهاو قوچها و برهها به شماره آنها برحسب قانون. | ۲۱ 21 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
و یک بز نر بجهت قربانی گناه سوای قربانی سوختنی دائمی با هدیه آردیاش و هدیه ریختنی آن. | ۲۲ 22 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز چهارم ده گاو جوان و دو قوچ وچهارده بره نرینه یک ساله بیعیب. | ۲۳ 23 |
“‘ನಾಲ್ಕನೆಯ ದಿವಸದಲ್ಲಿ ದೋಷವಿಲ್ಲದ ಹತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
و هدایای آردی و هدایای ریختنی آنها برای گاوها وقوچها و برهها به شماره آنها برحسب قانون. | ۲۴ 24 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ
ویک بز نر بجهت قربانی گناه، سوای قربانی سوختنی دائمی، و هدیه آردیاش و هدیه ریختنی آن. | ۲۵ 25 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತವನ್ನೂ ಇದಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز پنجم، نه گاو جوان و دو قوچ وچهارده بره نرینه یک ساله بیعیب. | ۲۶ 26 |
“‘ಐದನೆಯ ದಿವಸದಲ್ಲಿ ದೋಷವಿಲ್ಲದ ಒಂಬತ್ತು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
و هدایای آردی و هدایای ریختنی آنها برای گاوها وقوچها و برهها به شماره آنها برحسب قانون. | ۲۷ 27 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯಪಾನ ಬಲಿಗಳನ್ನೂ,
ویک بز نر بجهت قربانی گناه، سوای قربانی سوختنی دائمی و هدیه آردیاش و هدیه ریختنی آن. | ۲۸ 28 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز ششم، هشت گاو جوان و دوقوچ و چهارده بره نرینه یک ساله بیعیب. | ۲۹ 29 |
“‘ಆರನೆಯ ದಿವಸದಲ್ಲಿ ದೋಷವಿಲ್ಲದ ಎಂಟು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ,
وهدایای آردی و هدایای ریختنی آنها برای گاوهاو قوچها و برهها به شماره آنها برحسب قانون. | ۳۰ 30 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
و یک بز نر بجهت قربانی گناه سوای قربانی سوختنی دائمی و هدیه آردیاش و هدایای ریختنی آن. | ۳۱ 31 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز هفتم، هفت گاو جوان و دو قوچ و چهارده بره نرینه یک ساله بیعیب. | ۳۲ 32 |
“‘ಏಳನೆಯ ದಿವಸದಲ್ಲಿ ದೋಷವಿಲ್ಲದ ಏಳು ಹೋರಿಗಳನ್ನೂ ಎರಡು ಟಗರುಗಳನ್ನೂ ಒಂದು ವರ್ಷದ ಹದಿನಾಲ್ಕು ಕುರಿಮರಿಗಳನ್ನೂ
وهدایای آردی و هدایای ریختنی آنها برای گاوهاو قوچها و برهها به شماره آنها برحسب قانون. | ۳۳ 33 |
ಹೋರಿಗಳಿಗೆ, ಟಗರುಗಳಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
و یک بز نر بجهت قربانی گناه، سوای قربانی سوختنی دائمی و هدیه آردیاش و هدیه ریختنی آن. | ۳۴ 34 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
«و در روز هشتم، برای شما جشن مقدس باشد؛ هیچ کار خدمت مکنید. | ۳۵ 35 |
“‘ಎಂಟನೆಯ ದಿನದಲ್ಲಿ ನೀವು ಹಬ್ಬದ ಸಭೆಯಾಗಿ ಕೂಡಿಬರಬೇಕು. ದೈನಂದಿನ ಕೆಲಸವನ್ನು ನೀವು ಮಾಡಬಾರದು.
و قربانی سوختنی هدیه آتشین عطر خوشبو برای خداوندبگذرانید، یک گاو جوان و یک قوچ و هفت بره نرینه یک ساله بیعیب. | ۳۶ 36 |
ಯೆಹೋವ ದೇವರಿಗೆ ಸುವಾಸನೆಯ ಬೆಂಕಿಯಿಂದ ಮಾಡಿದ ದಹನಬಲಿಗಾಗಿ ದೋಷವಿಲ್ಲದ ಒಂದು ಹೋರಿಯನ್ನೂ ಒಂದು ಟಗರನ್ನೂ ಒಂದು ವರ್ಷದ ಏಳು ಕುರಿಮರಿಗಳನ್ನೂ
و هدایای آردی وهدایای ریختنی آنها برای گاو و قوچ و برهها به شماره آنها برحسب قانون. | ۳۷ 37 |
ಹೋರಿಗೆ, ಟಗರಿಗೆ ಮತ್ತು ಕುರಿಮರಿಗಳಿಗೆ ಅವುಗಳ ಲೆಕ್ಕದ ಪದ್ಧತಿಯ ಪ್ರಕಾರ ಅವುಗಳ ಧಾನ್ಯ ಪಾನಗಳ ಅರ್ಪಣೆಗಳನ್ನೂ,
و یک بز نر برای قربانی گناه سوای قربانی سوختنی دائمی، باهدیه آردیاش و هدیه ریختنی آن. | ۳۸ 38 |
ಪಾಪ ಪರಿಹಾರಕ ಬಲಿಯಾಗಿ ಒಂದು ಹೋತನ್ನಲ್ಲದೆ ನಿತ್ಯ ದಹನಬಲಿಯನ್ನೂ ಅದರ ಧಾನ್ಯಪಾನ ಅರ್ಪಣೆಗಳನ್ನೂ ಸಮರ್ಪಿಸಬೇಕು.
اینها را شما در موسمهای خود برای خداوند بگذرانید، سوای نذرها و نوافل خودبرای قربانی های سوختنی و هدایای آردی وهدایای ریختنی و ذبایح سلامتی خود.» | ۳۹ 39 |
“‘ಇದಲ್ಲದೆ ನಿಮ್ಮ ಹರಕೆಯನ್ನೂ ನಿಮ್ಮ ಉಚಿತವಾದ ಬಲಿಗಳನ್ನೂ ನಿಮ್ಮ ದಹನಬಲಿಗಳನ್ನೂ ನಿಮ್ಮ ಧಾನ್ಯಪಾನ ಅರ್ಪಣೆಗಳನ್ನೂ ನಿಮ್ಮ ಸಮಾಧಾನ ಬಲಿಗಳನ್ನೂ ನೀವು ನಿಮ್ಮ ಹಬ್ಬಗಳಲ್ಲಿ ಯೆಹೋವ ದೇವರಿಗೆ ಮಾಡತಕ್ಕೆ ಸಮರ್ಪಣೆಗಳು ಇವೇ.’”
پس برحسب هرآنچه خداوند به موسیامر فرموده بود، موسی بنیاسرائیل را اعلام نمود. | ۴۰ 40 |
ಯೆಹೋವ ದೇವರು ತನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮೋಶೆಯು ಇಸ್ರಾಯೇಲರಿಗೆ ಹೇಳಿದನು.