< خروج 25 >
و خداوند موسی را خطاب کرده، گفت: | ۱ 1 |
ಯೆಹೋವ ದೇವರು ಮೋಶೆಗೆ,
«به بنیاسرائیل بگو که برای من هدایا بیاورند؛ از هرکه به میل دل بیاورد، هدایای مرا بگیرید. | ۲ 2 |
“ನನಗೆ ಕಾಣಿಕೆಗಳನ್ನು ತೆಗೆದುಕೊಂಡು ಬರುವಂತೆ ಇಸ್ರಾಯೇಲರ ಸಂಗಡ ಮಾತನಾಡು. ಯಾರ ಹೃದಯದಲ್ಲಿ ಕಾಣಿಕೆ ಕೊಡಬೇಕೆಂಬ ಪ್ರೇರಣೆ ಹುಟ್ಟುತ್ತದೋ, ಅಂಥವರ ಕಾಣಿಕೆಯನ್ನು ನೀನು ತೆಗೆದುಕೊಳ್ಳಬೇಕು.
و این است هدایا که از ایشان میگیرید: طلا و نقره و برنج، | ۳ 3 |
“ನೀನು ಅವರಿಂದ ತೆಗೆದುಕೊಳ್ಳಬೇಕಾದ ಕಾಣಿಕೆಗಳು: “ಚಿನ್ನ, ಬೆಳ್ಳಿ, ಕಂಚು,
و لاجورد وارغوان و قرمز و کتان نازک و پشم بز، | ۴ 4 |
ನೀಲಿ, ಧೂಮ್ರ, ರಕ್ತವರ್ಣದಾರಗಳು, ನಾರುಬಟ್ಟೆಗಳು, ಮೇಕೆಯ ಕೂದಲು,
و پوست قوچ سرخ شده و پوست خز و چوب شطیم، | ۵ 5 |
ಕೆಂಪು ಬಣ್ಣದಲ್ಲಿ ಅದ್ದಿದ ಟಗರುಗಳ ಚರ್ಮಗಳು, ಕಡಲುಹಂದಿಯ ಚರ್ಮಗಳು, ಜಾಲಿ ಮರದ ಕಟ್ಟಿಗೆ.
وروغن برای چراغها، و ادویه برای روغن مسح، وبرای بخور معطر، | ۶ 6 |
ದೀಪಕ್ಕಾಗಿ ಓಲಿವ್ ಎಣ್ಣೆ ಮತ್ತು ಅಭಿಷೇಕಿಸುವ ಎಣ್ಣೆಗೋಸ್ಕರ ಪರಿಮಳ ಧೂಪಕ್ಕೋಸ್ಕರ ಸುಗಂಧ ದ್ರವ್ಯಗಳು,
و سنگهای عقیق و سنگهای مرصعی برای ایفود و سینه بند. | ۷ 7 |
ಏಫೋದ್ ಕವಚಕ್ಕಾಗಿ ಗೋಮೇಧಿಕಗಳು ಮತ್ತು ಎದೆಪದಕದಲ್ಲಿ ಹಚ್ಚಬೇಕಾದ ನಾನಾ ರತ್ನಗಳು ಇವೆ.
و مقامی ومقدسی برای من بسازند تا در میان ایشان ساکن شوم. | ۸ 8 |
“ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
موافق هرآنچه به تو نشان دهم از نمونه مسکن و نمونه جمیع اسبابش، همچنین بسازید. | ۹ 9 |
ಗುಡಾರದ ಮಾದರಿಯನ್ನೂ, ಅದರ ಎಲ್ಲಾ ಸಲಕರಣೆಗಳ ಮಾದರಿಯನ್ನೂ ನಾನು ನಿನಗೆ ತೋರಿಸುವಂತೆಯೇ ನೀನು ಮಾಡಬೇಕು.
«و تابوتی از چوب شطیم بسازند که طولش دو ذراع و نیم، و عرضش یک ذراع و نیم وبلندیش یک ذراع و نیم باشد. | ۱۰ 10 |
“ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರವಾಗಿರುವ ಮಂಜೂಷವನ್ನು ಮಾಡಬೇಕು.
و آن را به طلای خالص بپوشان. آن را از درون و بیرون بپوشان، وبر زبرش به هر طرف تاجی زرین بساز. | ۱۱ 11 |
ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಬೇಕು. ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿಸಬೇಕು.
وبرایش چهار حلقه زرین بریز، و آنها را بر چهارقایمهاش بگذار، دو حلقه بر یک طرفش و دوحلقه بر طرف دیگر. | ۱۲ 12 |
ಅದಕ್ಕೆ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇಡಬೇಕು.
و دو عصا از چوب شطیم بساز، و آنها را به طلا بپوشان. | ۱۳ 13 |
ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು.
و آن عصاها رادر حلقه هایی که بر طرفین تابوت باشد بگذران، تاتابوت را به آنها بردارند. | ۱۴ 14 |
ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಬೇಕು.
و عصاها درحلقه های تابوت بماند و از آنها برداشته نشود. | ۱۵ 15 |
ಮಂಜೂಷದ ಬಳೆಗಳಲ್ಲಿಯೇ ಕೋಲುಗಳನ್ನು ಇಡಬೇಕು. ಅವುಗಳೊಳಗಿಂದ ಕೋಲುಗಳನ್ನು ತೆಗೆಯಬಾರದು.
و آن شهادتی را که به تو میدهم، در تابوت بگذار. | ۱۶ 16 |
ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನದ ಹಲಗೆಯನ್ನು ಇಡಬೇಕು.
و تخت رحمت را از طلای خالص بساز. طولش دو ذراع و نیم، و عرضش یک ذراع ونیم. | ۱۷ 17 |
“ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಬೇಕು.
و دو کروبی از طلا بساز، آنها را ازچرخکاری از هر دو طرف تخت رحمت بساز. | ۱۸ 18 |
ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿಸಬೇಕು.
و یک کروبی در این سر و کروبی دیگر در آن سر بساز، کروبیان را از تخت رحمت بر هر دوطرفش بساز. | ۱۹ 19 |
ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿಸಬೇಕು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿಸಬೇಕು.
و کروبیان بالهای خود را بر زبرآن پهن کنند، و تخت رحمت را به بالهای خودبپوشانند. و رویهای ایشان به سوی یکدیگرباشد، و رویهای کروبیان به طرف تخت رحمت باشد. | ۲۰ 20 |
ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿರಬೇಕು.
و تخت رحمت را بر روی تابوت بگذارو شهادتی را که به تو میدهم در تابوت بنه. | ۲۱ 21 |
ಕರುಣಾಸನವನ್ನು ಮಂಜೂಷದ ಮೇಲಿಡಬೇಕು ಮತ್ತು ಮಂಜೂಷದಲ್ಲಿ ನಾನು ನಿನಗೆ ಕೊಡುವ ಒಡಂಬಡಿಕೆಯ ಶಾಸನಗಳನ್ನು ಇಡಬೇಕು.
ودر آنجا با تو ملاقات خواهم کرد و از بالای تخت رحمت از میان دو کروبی که بر تابوت شهادت میباشند، با تو سخن خواهم گفت، درباره همه اموری که بجهت بنیاسرائیل تو را امر خواهم فرمود. | ۲۲ 22 |
ನಾನು ಅಲ್ಲಿ ನಿನಗೆ ದರ್ಶನವನ್ನು ಕೊಟ್ಟು, ಕರುಣಾಸನದ ಮೇಲೆ ಒಡಂಬಡಿಕೆಯ ಮಂಜೂಷದ ಮೇಲಿರುವ ಎರಡು ಕೆರೂಬಿಗಳ ಮಧ್ಯದಿಂದ ಇಸ್ರಾಯೇಲರ ವಿಷಯದಲ್ಲಿ ನಾನು ನಿನಗೆ ಆಜ್ಞಾಪಿಸುವವುಗಳನ್ನೆಲ್ಲಾ ನಿನಗೆ ತಿಳಿಸುವೆನು.
«و خوانی از چوب شطیم بساز که طولش دو ذراع، و عرضش یک ذراع، و بلندیش یک ذراع و نیم باشد. | ۲۳ 23 |
“ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಬೇಕು.
و آن را به طلای خالص بپوشان، و تاجی از طلا به هر طرفش بساز. | ۲۴ 24 |
ಶುದ್ಧ ಬಂಗಾರದಿಂದ ಮೇಜನ್ನು ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.
وحاشیهای به قدر چهار انگشت به اطرافش بساز، و برای حاشیهاش تاجی زرین از هر طرف بساز. | ۲۵ 25 |
ಮೇಜಿನ ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಮಾಡಬೇಕು.
و چهار حلقه زرین برایش بساز، و حلقهها را برچهار گوشه چهار قایمهاش بگذار. | ۲۶ 26 |
ಇದಲ್ಲದೆ ಆ ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಮಾಡಿ, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಬೇಕು.
و حلقه هادر برابر حاشیه باشد، تا خانهها باشد بجهت عصاها برای برداشتن خوان. | ۲۷ 27 |
ಅಂಚಿಗೆ ಸಮೀಪವಾಗಿ ಮೇಜನ್ನು ಹೊತ್ತುಕೊಂಡು ಹೋಗಲು ಇರುವ ಕೋಲುಗಳಿಗೆ ಬಳೆಗಳು ಇರಬೇಕು.
و عصاها را ازچوب شطیم بساز، و آنها را به طلا بپوشان تاخوان را بدانها بردارند. | ۲۸ 28 |
ಮೇಜನ್ನು ಹೊರುವುದಕ್ಕಾಗಿ ಕೋಲುಗಳನ್ನು, ತೋರಣವನ್ನು ಜಾಲಿ ಮರದಿಂದ ಮಾಡಿ, ಬಂಗಾರದಿಂದ ಹೊದಿಸಬೇಕು.
و صحنها و کاسهها وجامها و پیاله هایش را که به آنها هدایای ریختنی میریزند بساز، آنها را از طلای خالص بساز. | ۲۹ 29 |
ಇದಲ್ಲದೆ ನೀನು ಪಾತ್ರೆಗಳನ್ನು, ಧೂಪಾರತಿಗಳನ್ನು, ಮುಚ್ಚಳಗಳನ್ನು ಪಾನಾರ್ಪಣೆಗೆ ಹೂಜೆಗಳನ್ನೂ ಬೇಕಾದ ಬಟ್ಟಲುಗಳನ್ನೂ, ಶುದ್ಧ ಬಂಗಾರದಿಂದ ಮಾಡಬೇಕು.
ونان تقدمه را بر خوان، همیشه به حضور من بگذار. | ۳۰ 30 |
ಮೇಜಿನ ಮೇಲೆ ನೈವೇದ್ಯದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
«و چراغدانی از طلای خالص بساز، و ازچرخکاری چراغدان ساخته شود، قاعدهاش وپایهاش و پیاله هایش و سیبهایش و گلهایش ازهمان باشد. | ۳۱ 31 |
“ಶುದ್ಧ ಬಂಗಾರದಿಂದ ದೀಪಸ್ತಂಭವನ್ನು ಮಾಡಬೇಕು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಬೇಕು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇರಬೇಕು.
و شش شاخه از طرفینش بیرون آید، یعنی سه شاخه چراغدان از یک طرف و سه شاخه چراغدان از طرف دیگر. | ۳۲ 32 |
ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿರಬೇಕು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬರಬೇಕು.
سه پیاله بادامی با سیبی و گلی در یک شاخه و سه پیاله بادامی با سیبی و گلی در شاخه دیگر و هم چنین در شش شاخهای که از چراغدان بیرون میآید. | ۳۳ 33 |
ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿರಬೇಕು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇರಬೇಕು.
و درچراغدان چهار پیاله بادامی با سیبها و گلهای آنهاباشد. | ۳۴ 34 |
ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇರಬೇಕು.
و سیبی زیر دو شاخه آن و سیبی زیر دوشاخه آن و سیبی زیر دو شاخه آن بر شش شاخهای که از چراغدان بیرون میآید. | ۳۵ 35 |
ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿರಬೇಕು. ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳು ಇರಬೇಕು.
وسیبها و شاخه هایش از همان باشد، یعنی از یک چرخکاری طلای خالص. | ۳۶ 36 |
ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿರಬೇಕು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿರಬೇಕು.
و هفت چراغ برای آن بساز، و چراغهایش را بر بالای آن بگذار تاپیش روی آن را روشنایی دهند. | ۳۷ 37 |
“ಅದರ ಏಳು ದೀಪಗಳನ್ನು ಮಾಡಿ ಅವು ಮುಂದುಗಡೆಯಲ್ಲಿ ಪ್ರಕಾಶಕೊಡುವಂತೆ ಅವುಗಳನ್ನು ಹೊತ್ತಿಸಬೇಕು.
و گل گیرها وسینیهایش از طلای خالص باشد. | ۳۸ 38 |
ಇದಲ್ಲದೆ ಅದರ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಬೇಕು.
خودش باهمه اسبابش از یک وزنه طلای خالص ساخته شود. | ۳۹ 39 |
ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಬೇಕು.
و آگاه باش که آنها را موافق نمونه آنها که در کوه به تو نشان داده شد بسازی. | ۴۰ 40 |
ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಅವುಗಳನ್ನು ಮಾಡುವಂತೆ ನೋಡಿಕೋ.