< تثنیه 23 >

جماعت خداوند شخصی که کوبیده بیضه و آلت بریده باشد داخل جماعت خداوند نشود. ۱ 1
ಬೀಜಹೊಡಿಸಿಕೊಂಡವರು ಅಥವಾ ರಹಸ್ಯಾಂಗವನ್ನು ಛೇದಿಸಿಕೊಂಡವರು ಯೆಹೋವನ ಸಭೆಯಲ್ಲಿ ಸೇರಬಾರದು.
حرام زاده‌ای داخل جماعت خداوند نشود، حتی تا پشت دهم احدی از او داخل جماعت خداوند نشود. ۲ 2
ಅನೈತಿಕ ಸಂಬಂಧದಿಂದ ಹುಟ್ಟಿದ ಸಂತತಿಯವರು, ಹತ್ತನೆಯ ತಲೆಯವರಾದರೂ ಅವರು ಯೆಹೋವನ ಸಭೆಗೆ ಸೇರಬಾರದು.
عمونی و موآبی داخل جماعت خداوند نشوند. حتی تا پشت دهم، احدی ازایشان هرگز داخل جماعت خداوند نشود. ۳ 3
ಅಮ್ಮೋನಿಯರಾಗಲಿ ಅಥವಾ ಮೋವಾಬ್ಯರಾಗಲಿ ಯೆಹೋವನ ಸಭೆಗೆ ಎಂದೆಂದಿಗೂ ಸೇರಬಾರದು. ಅವರ ಸಂತತಿಯವರು ಹತ್ತನೆಯ ತಲೆಯವರಾದರೂ ಯೆಹೋವನ ಸಭೆಗೆ ಸೇರಬಾರದು.
زیراوقتی که شما از مصر بیرون آمدید، شما را در راه به نان و آب استقبال نکردند، و از این جهت که بلعام بن بعور را از فتور ارام نهرین اجیر کردند تا تو را لعنت کند. ۴ 4
ಯಾಕೆಂದರೆ ನೀವು ಐಗುಪ್ತದೇಶದಿಂದ ಬಂದಾಗ ಅಮ್ಮೋನಿಯರು ಅನ್ನಪಾನಗಳನ್ನು ತಂದು ನಿಮ್ಮನ್ನು ಎದುರುಗೊಳ್ಳಲಿಲ್ಲ; ಮೋವಾಬ್ಯರು ನಿಮ್ಮನ್ನು ಶಪಿಸುವುದಕ್ಕಾಗಿ ಬೆಯೋರನ ಮಗನಾದ ಬಿಳಾಮನಿಗೆ ಹಣಕೊಟ್ಟು ಎರಡು ನದಿಗಳ ಮಧ್ಯದಲ್ಲಿರುವ ಅರಾಮಿನ ಪೆತೋರ್ ಊರಿನಿಂದ ಅವನನ್ನು ಕರೆಯಿಸಿದರು.
لیکن یهوه خدایت نخواست بلعام را بشنود، پس یهوه خدایت لعنت را به جهت تو، به برکت تبدیل نمود، چونکه یهوه خدایت تو را دوست می‌داشت. ۵ 5
ಆದರೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಪ್ರೀತಿಸಿದ್ದರಿಂದ ಬಿಳಾಮನ ಮಾತಿಗೆ ಸಮ್ಮತಿಸದೆ ಅವನಿಂದ ಶಾಪವನ್ನು ನುಡಿಸದೆ ಆಶೀರ್ವಾದವನ್ನೇ ಹೇಳಿಸಿದನು.
ابد در تمامی عمرت جویای خیریت و سعادت ایشان مباش. ۶ 6
ನಿಮ್ಮ ಜೀವಮಾನಕಾಲವೆಲ್ಲಾ ಅವರ ಯೋಗಕ್ಷೇಮವನ್ನು ಬಯಸಲೇ ಬಾರದು.
ادومی را دشمن مدار چونکه برادر توست، ومصری را دشمن مدار چونکه در زمین وی غریب بودی. ۷ 7
ಎದೋಮ್ಯರನ್ನು ಸಂಪೂರ್ಣವಾಗಿ ನಿಷೇಧಿಸಬಾರದು; ಅವರು ನಮ್ಮ ಹತ್ತಿರ ಸಂಬಂಧಿಕರು. ಐಗುಪ್ತ್ಯರನ್ನೂ ಸಂಪೂರ್ಣವಾಗಿ ನಿಷೇಧಿಸಬಾರದು; ಅವರ ದೇಶದಲ್ಲಿ ನೀವು ಪ್ರವಾಸಿಗಳಾಗಿದ್ದಿರಲ್ಲಾ.
اولادی که از ایشان زاییده شوند درپشت سوم داخل جماعت خداوند شوند. ۸ 8
ಅವರ ಸಂತತಿಯವರಲ್ಲಿ ಮೂರನೆಯ ತಲೆಯವರು ಯೆಹೋವನ ಸಭೆಗೆ ಸೇರಬಹುದು.
چون در اردو به مقابله دشمنانت بیرون روی خویشتن را از هر چیز بد نگاه دار. ۹ 9
ನೀವು ಶತ್ರುಗಳೊಡನೆ ಯುದ್ಧಕ್ಕೆ ಹೊರಟು ಪಾಳೆಯದಲ್ಲಿರುವಾಗ ಯಾವ ಅಶುದ್ಧ ಕಾರ್ಯಗಳು ನಡೆಯದಂತೆ ಎಚ್ಚರದಿಂದಿರಬೇಕು.
اگر در میان شما کسی باشد که از احتلام شب نجس شود، از اردو بیرون رود و داخل اردونشود. ۱۰ 10
೧೦ರಾತ್ರಿಕಾಲದಲ್ಲಿ ವೀರ್ಯಸ್ಖಲನದಿಂದ ಯಾವನಾದರೂ ಅಶುದ್ಧನಾದರೆ, ಅವನು ಪಾಳೆಯದೊಳಗೆ ಇರದೆ ಹೊರಗೆ ಇರಬೇಕು.
چون شب نزدیک شود با آب غسل کند، و چون آفتاب غروب کند، داخل اردو شود. ۱۱ 11
೧೧ಅವನು ಸಂಜೆಯ ವೇಳೆಯಲ್ಲಿ ಸ್ನಾನಮಾಡಿ ಸೂರ್ಯನು ಮುಳುಗಿದ ಮೇಲೆ ಪಾಳೆಯದೊಳಗೆ ಬರಬಹುದು.
و تو را مکانی بیرون از اردو باشد تا به آنجابیرون روی. ۱۲ 12
೧೨ಪಾಳೆಯದ ಹೊರಗೆ ಪಾಯಖಾನೆಗಾಗಿ ಒಂದು ಸ್ಥಳವನ್ನು ಗೊತ್ತುಮಾಡಬೇಕು.
و در میان اسباب تو میخی باشد، و چون بیرون می‌نشینی با آن بکن و برگشته، فضله خود را از آن بپوشان. ۱۳ 13
೧೩ಯುದ್ಧದ ಸಾಮಾನುಗಳಲ್ಲದೆ ನಿಮ್ಮ ಬಳಿಯಲ್ಲಿ ಸಲಿಕೆ ಇರಬೇಕು; ನೀವು ಬಹಿರ್ಭೂಮಿಗೆ ಹೋದಾಗ ಆ ಸಲಿಕೆಯಿಂದ ಅಗೆದು ಕಲ್ಮಷವನ್ನು ಮುಚ್ಚಿಬಿಡಬೇಕು.
زیرا که یهوه خدایت درمیان اردوی تو می‌خرامد تا تو را رهایی داده، دشمنانت را به تو تسلیم نماید، پس اردوی تومقدس باشد، مبادا چیز پلید را در میان تو دیده، ازتو روگرداند. ۱۴ 14
೧೪ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಕಾಪಾಡುವುದಕ್ಕೂ, ಶತ್ರುಗಳನ್ನು ನಿಮ್ಮ ಕೈವಶಮಾಡುವುದಕ್ಕೂ ನಿಮ್ಮ ಪಾಳೆಯದೊಳಗೆ ಸಂಚಾರಮಾಡುತ್ತಾನಲ್ಲಾ; ಆದುದರಿಂದ ಪಾಳೆಯವು ನಿಮರ್ಲವಾಗಿರಬೇಕು; ನಿಮ್ಮಲ್ಲಿ ಅಶುದ್ಧವೇನಾದರೂ ಕಂಡುಬಂದರೆ ಆತನು ನಿಮ್ಮನ್ನು ಬಿಟ್ಟುಹೋದಾನು.
غلامی را که از آقای خود نزد تو بگریزد به آقایش مسپار. ۱۵ 15
೧೫ತಪ್ಪಿಸಿಕೊಂಡ ಗುಲಾಮನು ನಿಮ್ಮಲ್ಲಿರುವುದಕ್ಕೆ ಬಂದರೆ ಅವನನ್ನು ಅವನ ದಣಿಗೆ ಪುನಃ ವಶಪಡಿಸಬಾರದು.
با تو در میان تو در مکانی که برگزینند در یکی از شهرهای تو که به نظرش پسند آید، ساکن شود. و بر او جفامنما. ۱۶ 16
೧೬ನಿಮ್ಮ ಊರುಗಳಲ್ಲಿ ಯಾವ ಸ್ಥಳವು ಅವನಿಗೆ ಇಷ್ಟವಾಗಿದೆಯೋ ಅಲ್ಲೇ ಅವನು ವಾಸವಾಗಿರಬಹುದು; ಅವನನ್ನು ನಿರ್ಬಂಧಪಡಿಸಬಾರದು ಹಾಗೂ ನೀವು ಅವನನ್ನು ಮತ್ತೆ ಶೋಷಣೆಗೆ ಗುರಿಮಾಡಬಾರದು.
از دختران اسرائیل فاحشه‌ای نباشد و ازپسران اسرائیل لواطی نباشد. ۱۷ 17
೧೭ಇಸ್ರಾಯೇಲರಲ್ಲಿ ಯಾವ ಸ್ತ್ರೀಯೂ ದೇವದಾಸಿಯಾಗಬಾರದು; ಯಾವ ಪುರುಷನೂ ಅಂತಹ ವೇಶ್ಯೆತನಕ್ಕೆ ಇಳಿಯಬಾರದು.
اجرت فاحشه وقیمت سگ را برای هیچ نذری به خانه یهوه خدایت میاور، زیرا که این هر دو نزد یهوه خدایت مکروه است. ۱۸ 18
೧೮ಇಸ್ರಾಯೇಲರ ಪುರುಷ ಅಥವಾ ಸ್ತ್ರೀಯೂ ವ್ಯಭಿಚಾರದಿಂದ ಸಂಪಾದಿಸಿದ ಹಣವನ್ನು ಹರಕೆಯಾಗಿ ನಿಮ್ಮ ದೇವರಾದ ಯೆಹೋವನ ಆಲಯದೊಳಗೆ ತರಲೇಬಾರದು. ಈ ಎರಡೂ ಯೆಹೋವನಿಗೆ ಅಸಹ್ಯವಾದ ವಿಷಯ.
برادر خود را به سود قرض مده نه به سودنقره و نه به سود آذوقه و نه به سود هر چیزی که به سود داده می‌شود. ۱۹ 19
೧೯ಹಣವನ್ನಾಗಲಿ, ಆಹಾರಪದಾರ್ಥಗಳನ್ನಾಗಲಿ ಬೇರೆ ಯಾವುದನ್ನಾಗಲಿ ಪರದೇಶದವನಿಗೆ ಬಡ್ಡಿಗೆ ಕೊಡಬಹುದೇ ಹೊರತು ಸ್ವದೇಶದವನಿಗೆ ಕೊಡಬಾರದು.
غریب را می‌توانی به سودقرض بدهی، اما برادر خود را به سود قرض مده تایهوه خدایت در زمینی که برای تصرفش داخل آن می‌شوی تو را به هر‌چه دستت را بر آن درازمی کنی، برکت دهد. ۲۰ 20
೨೦ಹೀಗೆ ನಡೆದರೆ ನೀವು ಸ್ವದೇಶವಾಗಿ ಪಡೆಯಲಿರುವ ದೇಶದಲ್ಲಿ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಅಭಿವೃದ್ಧಿಪಡಿಸುವನು.
چون نذری برای یهوه خدایت می‌کنی دروفای آن تاخیر منما، زیرا که یهوه خدایت البته آن را از تو مطالبه خواهد نمود، و برای تو گناه خواهد بود. ۲۱ 21
೨೧ನಿಮ್ಮ ದೇವರಾದ ಯೆಹೋವನಿಗೆ ಹರಕೆಮಾಡಿದ ಮೇಲೆ ಅದನ್ನು ತಡಮಾಡದೆ ತೀರಿಸಬೇಕು; ಆತನು ತಪ್ಪದೆ ಅದನ್ನು ವಿಚಾರಿಸುವನು; ತೀರಿಸದೆ ಹೋಗುವುದು ಪಾಪ.
اما اگر از نذر کردن ابا نمایی، تو راگناه نخواهد بود. ۲۲ 22
೨೨ನೀವು ಹರಕೆಮಾಡದಿದ್ದರೆ ದೋಷವೇನೂ ಇರಲಿಲ್ಲ;
آنچه را که از دهانت بیرون آید، هوشیار باش که بجا آوری، موافق آنچه برای یهوه خدایت از اراده خود نذر کرده‌ای و به زبان خود گفته‌ای. ۲۳ 23
೨೩ಆದರೆ ಬಾಯಿಂದ ನುಡಿದದ್ದನ್ನು ನೆರವೇರಿಸಲೇಬೇಕು. ನಿಮ್ಮ ದೇವರಾದ ಯೆಹೋವನಿಗೆ ಬಾಯಿಂದ ಹರಕೆಮಾಡಿಕೊಂಡಂತೆಯೇ ಅದನ್ನು ಒಪ್ಪಿಸಿಬಿಡಬೇಕು.
چون به تاکستان همسایه خود درآیی، ازانگور، هر‌چه می‌خواهی به سیری بخور، اما درظرف خود هیچ مگذار. ۲۴ 24
೨೪ಮತ್ತೊಬ್ಬನ ದ್ರಾಕ್ಷಿತೋಟದಲ್ಲಿ ನೀವು ಹೋಗುತ್ತಿರುವಾಗ ಇಷ್ಟಾನುಸಾರವಾಗಿ ಹಣ್ಣುಗಳನ್ನು ತಿನ್ನಬಹುದೇ ಹೊರತು ಪಾತ್ರೆಯಲ್ಲಿ ತುಂಬಿಕೊಂಡು ಹೋಗಬಾರದು.
چون به کشتزار همسایه خود داخل شوی، خوشه‌ها را به‌دست خود بچین، اما داس بر کشت همسایه خود مگذار. ۲۵ 25
೨೫ಮತ್ತೊಬ್ಬನ ಪೈರಿನಲ್ಲಿ ಹೋಗುತ್ತಿರುವಾಗ ತೆನೆಗಳನ್ನು ಕೈಯಿಂದ ಮುರಿದುಕೊಳ್ಳಬಹುದೇ ಹೊರತು ಆ ಪೈರಿಗೆ ಕುಡುಗೋಲು ಹಾಕಬಾರದು.

< تثنیه 23 >