< ମୋଶାଙ୍କ ଲିଖିତ ଚତୁର୍ଥ ପୁସ୍ତକ 7 >
1 ଏଥିଉତ୍ତାରେ ଯେଉଁ ଦିନ ମୋଶା ଆବାସ ସ୍ଥାପନ ସମାପ୍ତ କରି ତାହା ଅଭିଷେକ ଓ ପବିତ୍ର କଲେ ଓ ତହିଁର ସକଳ ଦ୍ରବ୍ୟ ଓ ବେଦି ଓ ତହିଁର ସକଳ ପାତ୍ର ଅଭିଷେକ କରି ପବିତ୍ର କଲେ;
ಮೋಶೆಯು ದೇವದರ್ಶನ ಗುಡಾರವನ್ನು ನಿಲ್ಲಿಸಿ, ಅಭಿಷೇಕಿಸಿ ಪರಿಶುದ್ಧ ಮಾಡಿದ ದಿನದಲ್ಲಿ ಅದರ ಎಲ್ಲಾ ಸಲಕರಣೆಗಳನ್ನೂ, ಬಲಿಪೀಠವನ್ನೂ, ಅದರ ಎಲ್ಲಾ ಸಾಮಗ್ರಿಗಳನ್ನೂ ಅಭಿಷೇಕಿಸಿ ಪರಿಶುದ್ಧ ಮಾಡಿದನು. ಅನಂತರ,
2 ସେହି ଦିନ ଇସ୍ରାଏଲର ଅଧିପତିଗଣ, ସେମାନଙ୍କ ପିତୃଗୃହର ପ୍ରଧାନଗଣ ନୈବେଦ୍ୟ ଦାନ କଲେ; ଏମାନେ ବଂଶସମୂହର ଅଧିପତି ଥିଲେ ଓ ଗଣିତ ଲୋକମାନଙ୍କ ଉପରେ ନିଯୁକ୍ତ ଥିଲେ।
ಇಸ್ರಾಯೇಲರ ಪ್ರಧಾನರು ಎಂದರೆ ಗೋತ್ರದ ಪ್ರಮುಖರು, ಕುಲಾಧಿಪತಿಗಳು ಜನಗಣತಿಯ ನೇತೃತ್ವವನ್ನು ವಹಿಸಿಕೊಂಡಿದ್ದವರು ಕಾಣಿಕೆಗಳನ್ನು ತಂದು ಸಮರ್ಪಿಸಿದರು.
3 ପୁଣି, ସେମାନେ ସଦାପ୍ରଭୁଙ୍କ ଉଦ୍ଦେଶ୍ୟରେ ନୈବେଦ୍ୟ ନିମନ୍ତେ ଛଅଗୋଟି ଆଚ୍ଛାଦିତ ଶଗଡ଼ ଓ ବାରଟି ଗୋରୁ, ଅର୍ଥାତ୍, ଦୁଇ ଦୁଇ ଅଧିପତି ଏକ ଏକ ଶଗଡ଼ ଓ ଏକ ଏକ ଜଣ ଏକ ଏକ ଗୋରୁ ଆଣି ଆବାସ ସମ୍ମୁଖରେ ଉପସ୍ଥିତ କରାଇଲେ।
ಅವರು ಯೆಹೋವ ದೇವರ ಎದುರಿನಲ್ಲಿ ತಂದ ಅರ್ಪಣೆ ಏನೆಂದರೆ ಆರು ಕಮಾನುಬಂಡಿಗಳು, ಹನ್ನೆರಡು ಎತ್ತುಗಳು, ಪ್ರಧಾನರಲ್ಲಿ ಇಬ್ಬರಿಗೆ ಒಂದು ಬಂಡಿಯಂತೆ, ಒಬ್ಬೊಬ್ಬನಿಗೆ ಒಂದೊಂದು ಎತ್ತುಗಳನ್ನು ಅವರು ದೇವದರ್ಶನ ಗುಡಾರದ ಮುಂದೆ ತಂದರು.
4 ତହୁଁ ସଦାପ୍ରଭୁ ମୋଶାଙ୍କୁ କହିଲେ,
ಯೆಹೋವ ದೇವರು ಮಾತನಾಡಿ ಮೋಶೆಗೆ ಹೇಳಿದ್ದೇನೆಂದರೆ,
5 “ତୁମ୍ଭେ ସେମାନଙ୍କଠାରୁ ତାହା ଗ୍ରହଣ କର, ତାହାସବୁ ସମାଗମ-ତମ୍ବୁର ସେବା ନିମନ୍ତେ ହେବ; ଆଉ ତୁମ୍ଭେ ପ୍ରତ୍ୟେକ ଜଣ ଆପଣା ଆପଣା ସେବାନୁସାରେ ଲେବୀୟମାନଙ୍କୁ ତାହାସବୁ ଦେବ।”
“ಅವುಗಳನ್ನು ಅವರಿಂದ ತೆಗೆದುಕೋ, ಅವು ದೇವದರ್ಶನ ಗುಡಾರದ ಸೇವೆಮಾಡುವುದಕ್ಕೋಸ್ಕರ ಇರಬೇಕು. ಅವುಗಳನ್ನು ಲೇವಿಯರಿಗೆ ಅವನವನ ಕೆಲಸಕ್ಕೆ ತಕ್ಕಂತೆ ಕೊಡಬೇಕು,” ಎಂದರು.
6 ତହୁଁ ମୋଶା ସେହି ଶଗଡ଼ ଓ ଗୋରୁ ନେଇ ଲେବୀୟମାନଙ୍କୁ ଦେଲେ।
ಆಗ ಮೋಶೆಯು ಆ ಬಂಡಿಗಳನ್ನೂ, ಎತ್ತುಗಳನ್ನೂ ತೆಗೆದುಕೊಂಡು ಅವುಗಳನ್ನು ಲೇವಿಯರಿಗೆ ಕೊಟ್ಟನು.
7 ଗେର୍ଶୋନୀୟ-ସନ୍ତାନଗଣକୁ ସେମାନଙ୍କ ସେବାନୁସାରେ ସେ ଦୁଇ ଶଗଡ଼ ଓ ଚାରି ଗୋରୁ ଦେଲେ।
ಎರಡು ಬಂಡಿಗಳನ್ನೂ, ನಾಲ್ಕು ಎತ್ತುಗಳನ್ನೂ, ಗೇರ್ಷೋನನ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕ ಪ್ರಕಾರ ಕೊಟ್ಟನು.
8 ହାରୋଣ ଯାଜକଙ୍କର ପୁତ୍ର ଈଥାମରର ହସ୍ତାଧୀନରେ ମରାରି-ସନ୍ତାନଗଣକୁ ସେମାନଙ୍କ ସେବାନୁସାରେ ସେ ଚାରି ଶଗଡ଼ ଓ ଆଠ ଗୋରୁ ଦେଲେ।
ಯಾಜಕನಾದ ಆರೋನನ ಮಗ ಈತಾಮಾರನ ಕೈಕೆಳಗಿರುವ ನಾಲ್ಕು ಬಂಡಿಗಳನ್ನೂ, ಎಂಟು ಎತ್ತುಗಳನ್ನೂ ಮೆರಾರೀಯ ಪುತ್ರರಿಗೆ ಅವರ ಕೆಲಸಕ್ಕೆ ತಕ್ಕಂತೆ ಕೊಟ್ಟನು.
9 ମାତ୍ର ସେ କହାତ-ସନ୍ତାନଗଣକୁ କିଛି ଦେଲେ ନାହିଁ, କାରଣ ପବିତ୍ର ସ୍ଥାନର ସେବାକର୍ମ ସେମାନଙ୍କର ଥିଲା; ସେମାନେ ସ୍କନ୍ଧରେ ତାହା ବୋହିଲେ।
ಆದರೆ ಕೊಹಾತ್ಯರಿಗೆ ಯಾವುದನ್ನೂ ಕೊಡಲಿಲ್ಲ. ಏಕೆಂದರೆ ಅವರು ತಮ್ಮ ಹೆಗಲುಗಳ ಮೇಲೆ ಪರಿಶುದ್ಧಸ್ಥಳದ ವಸ್ತುಗಳನ್ನು ಹೊತ್ತುಕೊಂಡು ಹೋಗುವುದೇ ಅವರಿಗೆ ಸೇವೆಯಾಗಿತ್ತು.
10 ଆଉ ବେଦିର ଅଭିଷେକ ଦିନ ଅଧିପତିଗଣ ତହିଁର ପ୍ରତିଷ୍ଠା ନିମନ୍ତେ ଦାନ କଲେ, ଅର୍ଥାତ୍, ସେହି ଅଧିପତିଗଣ ବେଦି ସମ୍ମୁଖରେ ଆପଣା ଆପଣା ଉପହାର ଉତ୍ସର୍ଗ କଲେ।
ಬಲಿಪೀಠವನ್ನು ಅಭಿಷೇಕಿಸಿದ ದಿನದಂದು ಪ್ರತಿಷ್ಠೆಗಾಗಿ ಅದರ ಮುಂದೆ ಬಂದು, ಪ್ರಧಾನರು ತಮ್ಮ ಕಾಣಿಕೆಗಳನ್ನು ಅರ್ಪಿಸಿದರು.
11 ତହିଁରେ ସଦାପ୍ରଭୁ ମୋଶାଙ୍କୁ କହିଲେ, “ପ୍ରତ୍ୟେକ ଅଧିପତି ଆପଣା ଆପଣା ଦିନରେ ବେଦିର ପ୍ରତିଷ୍ଠା ନିମନ୍ତେ ଉପହାର ଉତ୍ସର୍ଗ କରିବେ।”
ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ, “ಒಬ್ಬೊಬ್ಬ ಪ್ರಧಾನನು ತನ್ನ ತನ್ನ ದಿವಸದಲ್ಲಿ ಬಲಿಪೀಠದ ಪ್ರತಿಷ್ಠೆಗಾಗಿ ತಮ್ಮ ಕಾಣಿಕೆಯನ್ನು ಅರ್ಪಿಸಬೇಕು.”
12 ତହିଁରେ ପ୍ରଥମ ଦିନ ଯିହୁଦା ବଂଶଜାତ ଅମ୍ମୀନାଦବର ପୁତ୍ର ନହଶୋନ ଆପଣା ଉପହାର ଉତ୍ସର୍ଗ କଲା;
ಮೊದಲನೆಯ ದಿವಸದಲ್ಲಿ ತನ್ನ ಕಾಣಿಕೆಯನ್ನು ಅರ್ಪಿಸಿದವನು ಯೆಹೂದ ಗೋತ್ರದ ಅಮ್ಮೀನಾದಾಬನ ಮಗ ನಹಶೋನನು.
13 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଶହେ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ; ଏହି ଦୁଇ ଭକ୍ଷ୍ୟ-ନୈବେଦ୍ୟାର୍ଥେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಚೊಕ್ಕ ಬೆಳ್ಳಿಯ ಒಂದು ತಟ್ಟೆ ಮತ್ತು 70 ಶೆಕೆಲ್ ತೂಕದ ಬೆಳ್ಳಿಯ ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಇವೆರಡು ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
14 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
15 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
16 ପାପାର୍ଥକ ବଳିଦାନ ନିମନ୍ତେ ଏକ ଛାଗ
ದೋಷಪರಿಹಾರಕ ಬಲಿಗಾಗಿ ಒಂದು ಹೋತ,
17 ଓ ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ ଏହା ଅମ୍ମୀନାଦବର ପୁତ୍ର ନହଶୋନର ଉପହାର।
ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳೂ ಸಮಾಧಾನದ ಬಲಿಗಾಗಿ ಸಮರ್ಪಿಸಬೇಕು. ಇದು ಅಮ್ಮೀನಾದಾಬನ ಮಗ ನಹಶೋನನ ಅರ್ಪಣೆಯು.
18 ଦ୍ୱିତୀୟ ଦିନ ଇଷାଖରର ଅଧିପତି ସୂୟାରର ପୁତ୍ର ନଥନେଲ ଆପଣା ଉପହାର ଉତ୍ସର୍ଗ କଲା,
ಎರಡನೆಯ ದಿವಸದಲ್ಲಿ ಇಸ್ಸಾಕಾರನ ಗೋತ್ರದ ಪ್ರಧಾನನಾಗಿರುವ ಚೂವಾರನ ಮಗ ನೆತನೆಯೇಲ್ ಅರ್ಪಿಸಿದನು.
19 ସେ ଆପଣା ଉପହାର ନିମନ୍ତେ ପବିତ୍ର ସ୍ଥାନର ଶେକଲ ଅନୁସାରେ ଏହା ଦେଲା, ଅର୍ଥାତ୍, ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
20 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
21 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
22 ପାପାର୍ଥକ ବଳିଦାନ ନିମନ୍ତେ ଏକ ଛାଗ,
ಪಾಪ ಪರಿಹಾರದ ಬಲಿಗಾಗಿ ಒಂದು ಹೋತ,
23 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ସୂୟାରର ପୁତ୍ର ନଥନେଲର ଉପହାର।
ಸಮಾಧಾನದ ಬಲಿಗಳ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚೂವಾರನ ಮಗ ನೆತನೆಯೇಲ್ ಇವನ ಅರ್ಪಣೆಯು.
24 ତୃତୀୟ ଦିନ ସବୂଲୂନ-ସନ୍ତାନଗଣର ଅଧିପତି ହେଲୋନର ପୁତ୍ର ଇଲୀୟାବ୍ ଆଣିଲା;
ಮೂರನೆಯ ದಿವಸದಲ್ಲಿ ಜೆಬುಲೂನ್ ಮಕ್ಕಳಿಗೆ ಪ್ರಧಾನನಾಗಿರುವ ಹೇಲೋನನ ಮಗ ಎಲೀಯಾಬನು ಅರ್ಪಿಸಿದ್ದು.
25 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆ ಏನೆಂದರೆ: ದೇವರ ಸೇವೆಗೆ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
26 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
27 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
28 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
29 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ହେଲୋନର ପୁତ୍ର ଇଲୀୟାବ୍ର ଉପହାର।
ಮತ್ತು ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಹೇಲೋನನ ಮಗ ಎಲೀಯಾಬನ ಸಮರ್ಪಣೆಯು.
30 ଚତୁର୍ଥ ଦିନ ରୁବେନ୍-ସନ୍ତାନଗଣର ଅଧିପତି ଶଦେୟରର ପୁତ୍ର ଇଲୀଷୂର ଆଣିଲା;
ನಾಲ್ಕನೆಯ ದಿನದಲ್ಲಿ ರೂಬೇನನ ಮಕ್ಕಳಿಗೆ ಪ್ರಧಾನನಾಗಿರುವ ಶೆದೇಯೂರನ ಮಗ ಎಲೀಚೂರನು ಅರ್ಪಿಸಿದನು.
31 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
32 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
33 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
34 ପାପାର୍ଥକ ବଳିଦାନ ନିମନ୍ତେ ଏକ ଛାଗ;
ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
35 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ଶଦେୟରର ପୁତ୍ର ଇଲୀଷୂରର ଉପହାର।
ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಶೆದೇಯೂರನ ಮಗ ಎಲೀಚೂರನ ಅರ್ಪಣೆಯು.
36 ପଞ୍ଚମ ଦିନ ଶିମୀୟୋନ-ସନ୍ତାନଗଣର ଅଧିପତି ସୂରୀଶଦ୍ଦୟର ପୁତ୍ର ଶଲୁମୀୟେଲ ଆଣିଲା;
ಐದನೆಯ ದಿನದಲ್ಲಿ ಸಿಮೆಯೋನನ ಗೋತ್ರದ ಪ್ರಧಾನನಾಗಿರುವ ಚುರೀಷದ್ದೈಯನ ಮಗ ಶೆಲುಮೀಯೇಲನು ಅರ್ಪಿಸಿದನು.
37 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାରେ ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ; ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಒಂದು ಬೆಳಿಯ್ಳ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
38 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
39 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
40 ପାପାର୍ଥକ ବଳିଦାନ ନିମନ୍ତେ ଏକ ଛାଗ,
ಪಾಪ ಪರಿಹಾರದ ಬಲಿಗಾಗಿ ಒಂದು ಹೋತವನ್ನೂ,
41 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ ଏହା ସୂରୀଶଦ୍ଦୟର ପୁତ୍ର ଶଲୁମୀୟେଲର ଉପହାର।
ಸಮಾಧಾನದ ಬಲಿಗಾಗಿ ಎರಡು ಹೋರಿಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಚುರೀಷದ್ದೈಯನ ಮಗ ಶೆಲುಮೀಯೇಲನ ಅರ್ಪಣೆಯು.
42 ଷଷ୍ଠ ଦିନ ଗାଦ୍-ସନ୍ତାନଗଣର ଅଧିପତି ଦ୍ୟୂୟେଲର ପୁତ୍ର ଇଲୀୟାସଫ୍ ଆଣିଲା;
ಆರನೆಯ ದಿನದಲ್ಲಿ ಗಾದನ ಗೋತ್ರದ ಪ್ರಧಾನನಾಗಿರುವ ದೆವುಯೇಲನ ಮಗ ಎಲ್ಯಾಸಾಫನು ಅರ್ಪಿಸಿದನು.
43 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
44 ଆଉ ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ ಹತ್ತು ಶೆಕೆಲ್ ತೂಕದ ಬಂಗಾರದ ಒಂದು ಚಮಚ,
45 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
46 ପାପାର୍ଥକ ବଳିଦାନ ନିମନ୍ତେ ଏକ ଛାଗ;
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
47 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ଦ୍ୟୂୟେଲର ପୁତ୍ର ଇଲୀୟାସଫ୍ର ଉପହାର।
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ದೆವುಯೇಲನ ಮಗ ಎಲ್ಯಾಸಾಫನ ಅರ್ಪಣೆಯು.
48 ସପ୍ତମ ଦିନ ଇଫ୍ରୟିମ-ସନ୍ତାନଗଣର ଅଧିପତି ଅମ୍ମୀହୂଦର ପୁତ୍ର ଇଲୀଶାମା ଆଣିଲା;
ಏಳನೆಯ ದಿನದಲ್ಲಿ ಎಫ್ರಾಯೀಮ್ ಗೋತ್ರದ ಪ್ರಧಾನನಾದ ಅಮ್ಮೀಹೂದನ ಮಗ ಎಲೀಷಾಮನು ಅರ್ಪಿಸಿದನು.
49 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆ ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
50 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
51 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
52 ପାପାର୍ଥକ ବଳିଦାନ ନିମନ୍ତେ ଏକ ଛାଗ;
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
53 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ଅମ୍ମୀହୂଦର ପୁତ୍ର ଇଲୀଶାମାର ଉପହାର।
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಅಮ್ಮೀಹೂದನ ಮಗ ಎಲೀಷಾಮನ ಅರ್ಪಣೆಯು.
54 ଅଷ୍ଟମ ଦିନ ମନଃଶି-ସନ୍ତାନଗଣର ଅଧିପତି ପଦାହସୂରର ପୁତ୍ର ଗମଲୀୟେଲ ଆଣିଲା;
ಎಂಟನೆಯ ದಿನದಲ್ಲಿ ಮನಸ್ಸೆ ಗೋತ್ರದ ಪ್ರಧಾನನಾದ ಪೆದಾಚೂರನ ಮಗ ಗಮಲಿಯೇಲನು ಅರ್ಪಿಸಿದನು.
55 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ಒಂದು ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
56 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
57 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
58 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
59 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ପଦାହସୂରର ପୁତ୍ର ଗମଲୀୟେଲର ଉପହାର।
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಪೆದಾಚೂರನ ಮಗ ಗಮಲಿಯೇಲನ ಅರ್ಪಣೆಯು.
60 ନବମ ଦିନ ବିନ୍ୟାମୀନ୍-ସନ୍ତାନଗଣର ଅଧିପତି ଗିଦିୟୋନିର ପୁତ୍ର ଅବୀଦାନ୍ ଆଣିଲା;
ಒಂಬತ್ತನೆಯ ದಿನದಲ್ಲಿ ಬೆನ್ಯಾಮೀನನ ಗೋತ್ರದ ಪ್ರಧಾನನಾದ ಗಿದ್ಯೋನಿಯ ಮಗ ಅಬೀದಾನನು ಅರ್ಪಿಸಿದನು.
61 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
62 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
63 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಒಂದು ಕುರಿಮರಿ,
64 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
65 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ; ଏହା ଗିଦିୟୋନିର ପୁତ୍ର ଅବୀଦାନ୍ର ଉପହାର।
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಗಿದ್ಯೋನಿಯ ಮಗ ಅಬೀದಾನನ ಅರ್ಪಣೆಯು.
66 ଦଶମ ଦିନ ଦାନ୍-ସନ୍ତାନଗଣର ଅଧିପତି ଅମ୍ମୀଶଦ୍ଦୟର ପୁତ୍ର ଅହୀୟେଷର ଆଣିଲା;
ಹತ್ತನೆಯ ದಿನದಲ್ಲಿ ದಾನನ ಗೋತ್ರದ ಪ್ರಧಾನವಾದ ಅಮ್ಮೀಷದ್ದೈಯನ ಮಗ ಅಹೀಗೆಜೆರನು ಅರ್ಪಿಸಿದನು.
67 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
68 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
69 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
70 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
71 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ ଏହା ଅମ୍ମୀଶଦ୍ଦୟର ପୁତ୍ର ଅହୀୟେଷରର ଉପହାର।
ಸಮಾಧಾನದ ಬಲಿಗಾಗಿ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರುಷದ ಐದು ಕುರಿಮರಿಗಳು. ಇದು ಅಮ್ಮೀಷದ್ದೈಯನ ಮಗ ಅಹೀಗೆಜೆರನ ಅರ್ಪಣೆಯು.
72 ଏକାଦଶ ଦିନ ଆଶେର-ସନ୍ତାନଗଣର ଅଧିପତି ଅକ୍ରଣର ପୁତ୍ର ପଗୀୟେଲ ଆଣିଲା;
ಹನ್ನೊಂದನೆಯ ದಿನದಲ್ಲಿ ಆಶೇರನ ಗೋತ್ರದ ಪ್ರಧಾನನಾದ ಒಕ್ರಾನನ ಮಗ ಪಗೀಯೇಲನು ಅರ್ಪಿಸಿದನು.
73 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, ಪರಿಶುದ್ಧಸ್ಥಳದ ಪ್ರಕಾರ 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು.
74 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
75 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ;
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
76 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತ,
77 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ ଏହା ଅକ୍ରଣର ପୁତ୍ର ପଗୀୟେଲର ଉପହାର।
ಸಮಾಧಾನದ ಬಲಿಗಾಗಿ ಒಂದು ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಒಕ್ರಾನನ ಮಗ ಪಗೀಯೇಲನ ಅರ್ಪಣೆಯು.
78 ଦ୍ୱାଦଶ ଦିନ ନପ୍ତାଲି-ସନ୍ତାନଗଣର ଅଧିପତି ଐନନର ପୁତ୍ର ଅହୀର ଆଣିଲା;
ಹನ್ನೆರಡನೆಯ ದಿನದಲ್ಲಿ ನಫ್ತಾಲಿಯ ಗೋತ್ರದ ಪ್ರಧಾನನಾದ ಏನಾನನ ಮಗ ಅಹೀರನು ಅರ್ಪಿಸಿದನು.
79 ତାହାର ଉପହାର ପବିତ୍ର ସ୍ଥାନର ଶେକଲ ଅନୁସାରେ ଏକ ଶହ ତିରିଶ ଶେକଲ ପରିମିତ ରୂପାର ଏକ ଥାଳୀ ଓ ସତୁରି ଶେକଲ ପରିମିତ ରୂପାର ଏକ କୁଣ୍ଡ, ଏହି ଦୁଇ ଭକ୍ଷ୍ୟ ନୈବେଦ୍ୟ ନିମନ୍ତେ ତୈଳ ମିଶ୍ରିତ ସରୁ ମଇଦାରେ ପୂର୍ଣ୍ଣ;
ಅವನ ಅರ್ಪಣೆಯು ಏನೆಂದರೆ: ಪರಿಶುದ್ಧಸ್ಥಳದ ಸಮರ್ಪಣೆ ಮಾಡಬೇಕಾದ ತೂಕ ನೇಮಕವಾದ ಪ್ರಕಾರ, 130 ಶೆಕೆಲ್ ತೂಕದ ಬೆಳ್ಳಿಯ ತಟ್ಟೆ, 70 ಶೆಕೆಲ್ ತೂಕದ ಬೆಳ್ಳಿಯ ಒಂದು ಬಟ್ಟಲು, ಧಾನ್ಯ ಸಮರ್ಪಣೆಗಾಗಿ ಈ ಎರಡೂ ಎಣ್ಣೆ ಬೆರೆಸಿದ ನಯವಾದ ಹಿಟ್ಟಿನಿಂದ ತುಂಬಿದ್ದವು,
80 ଧୂପରେ ପରିପୂର୍ଣ୍ଣ ଦଶ ଶେକଲ ପରିମିତ ସ୍ୱର୍ଣ୍ଣର ଏକ ଚାମଚ;
ಧೂಪದಿಂದ ತುಂಬಿದ್ದ 10 ಶೆಕೆಲ್ ತೂಕದ ಬಂಗಾರದ ಒಂದು ಚಮಚ,
81 ହୋମ ନିମନ୍ତେ ଏକ ଗୋବତ୍ସ, ଏକ ମେଷ ଓ ଏକ ବର୍ଷୀୟ ଏକ ମେଷବତ୍ସ,
ದಹನಬಲಿಗಾಗಿ ಒಂದು ಎಳೆಯ ಹೋರಿ, ಒಂದು ಟಗರು, ಒಂದು ವರ್ಷದ ಕುರಿಮರಿ,
82 ପାପାର୍ଥକ ବଳିଦାନ ନିମନ୍ତେ ଏକ ଛାଗ,
ದೋಷಪರಿಹಾರಕ ಬಲಿಗಾಗಿ ಒಂದು ಹೋತವನ್ನೂ,
83 ମଙ୍ଗଳାର୍ଥକ ବଳିଦାନ ନିମନ୍ତେ ଦୁଇ ଗୋରୁ, ପାଞ୍ଚ ମେଷ, ପାଞ୍ଚ ଛାଗ ଓ ଏକ ବର୍ଷୀୟ ପାଞ୍ଚ ମେଷବତ୍ସ ଏହା ଐନନର ପୁତ୍ର ଅହୀରର ଉପହାର।
ಸಮಾಧಾನದ ಸಮರ್ಪಣೆಯ ಎರಡು ಎತ್ತುಗಳೂ, ಐದು ಟಗರುಗಳೂ, ಐದು ಹೋತಗಳೂ, ಒಂದು ವರ್ಷದ ಐದು ಕುರಿಮರಿಗಳು. ಇದು ಏನಾನನ ಮಗ ಅಹೀರನ ಅರ್ಪಣೆಯು.
84 ବେଦିର ଅଭିଷେକ ଦିନ, ତହିଁର ପ୍ରତିଷ୍ଠାର୍ଥକ ଏହି ଉପହାର ଇସ୍ରାଏଲର ଅଧିପତିଗଣ ଦ୍ୱାରା ଦତ୍ତ ହୋଇଥିଲା; ରୂପାର ଦ୍ୱାଦଶ ଥାଳୀ, ରୂପାର ଦ୍ୱାଦଶ କୁଣ୍ଡ ଓ ସ୍ୱର୍ଣ୍ଣର ଦ୍ୱାଦଶ ଚାମଚ;
ಇದು ಬಲಿಪೀಠದ ಪ್ರತಿಷ್ಠೆಗಾಗಿ ಅದನ್ನು ಅಭಿಷೇಕ ಮಾಡಿದ ದಿನದಲ್ಲಿ ಇಸ್ರಾಯೇಲಿನ ಪ್ರಧಾನರು ಅರ್ಪಿಸಿದ್ದು: ಬೆಳ್ಳಿಯ 12 ತಟ್ಟೆಗಳೂ, ಬೆಳ್ಳಿಯ 12 ಬಟ್ಟಲುಗಳೂ, ಬಂಗಾರದ 12 ಚಮಚಗಳೂ,
85 ତହିଁର ପ୍ରତ୍ୟେକ ରୂପାଥାଳୀ ଏକ ଶହ ତିରିଶ ଶେକଲ ଓ ପ୍ରତ୍ୟେକ କୁଣ୍ଡ ସତୁରି ଶେକଲ ପରିମିତ; ସମସ୍ତ ପାତ୍ରର ରୂପା ପବିତ୍ର ସ୍ଥାନର ଶେକଲ ଅନୁସାରେ ଦୁଇ ହଜାର ଚାରି ଶହ ଶେକଲ ଥିଲା;
ಬೆಳ್ಳಿಯ ಒಂದೊಂದು ತಟ್ಟೆಗಳ ತೂಕವು 130 ಶೆಕೆಲ್, ಒಂದೊಂದು ಬಟ್ಟಲಿನ ತೂಕವು 70 ಶೆಕೆಲ್. ಬೆಳ್ಳಿಯ ಎಲ್ಲಾ ಸಾಮಗ್ರಿಗಳ ತೂಕ ಪರಿಶುದ್ಧಸ್ಥಳದ ನೇಮದ ಪ್ರಕಾರ 2,400 ಶೆಕೆಲ್.
86 ପୁଣି, ଧୂପପୂର୍ଣ୍ଣ ଦ୍ୱାଦଶ ସ୍ୱର୍ଣ୍ଣ ଚାମଚ, ପ୍ରତ୍ୟେକେ ପବିତ୍ର ସ୍ଥାନର ଶେକଲ ଅନୁସାରେ ଦଶ ଶେକଲ ପରିମିତ; ଚାମଚର ସମସ୍ତ ସ୍ୱର୍ଣ୍ଣ ଶହେ କୋଡ଼ିଏ ଶେକଲ ଥିଲା।
ಧೂಪ ತುಂಬಿದ್ದ 12 ಬಂಗಾರದ ಚಮಚಗಳು, ಪರಿಶುದ್ಧಸ್ಥಳದ ಪ್ರಕಾರ ಒಂದೊಂದಕ್ಕೆ 10 ಚಮಚಗಳ ಬಂಗಾರವೆಲ್ಲಾ 120 ಶೆಕೆಲ್,
87 ହୋମ ନିମନ୍ତେ ସମୁଦାୟ ଦ୍ୱାଦଶ ଗୋରୁ, ଦ୍ୱାଦଶ ମେଷ, ଏକ ବର୍ଷୀୟ ଦ୍ୱାଦଶ ମେଷବତ୍ସ ଓ ସେସବୁର ଭକ୍ଷ୍ୟ ନୈବେଦ୍ୟ; ଆଉ ପାପାର୍ଥକ ବଳିଦାନ ନିମନ୍ତେ ଦ୍ୱାଦଶ ଛାଗ;
ದಹನಬಲಿಗಾಗಿ ಇರುವ ಒಟ್ಟು ಪಶುಗಳು: 12 ಹೋರಿಗಳು, 12 ಟಗರುಗಳು, ಒಂದು ವರ್ಷದ ಕುರಿಮರಿಗಳು 12, ಅವುಗಳೊಂದಿಗೆ ಧಾನ್ಯ ಸಮರ್ಪಣೆ. ದೋಷಪರಿಹಾರಕ ಬಲಿಗಾಗಿ 12 ಹೋತಗಳು,
88 ପୁଣି, ମଙ୍ଗଳାର୍ଥକ ବଳିଦାନ ନିମନ୍ତେ ସମୁଦାୟ ଚବିଶ ଗୋରୁ, ଷାଠିଏ ମେଷ, ଷାଠିଏ ଛାଗ ଓ ଏକ ବର୍ଷୀୟ ଷାଠିଏ ମେଷବତ୍ସ; ଏହା ବେଦିର ଅଭିଷେକ ଉତ୍ତାରେ ତହିଁର ପ୍ରତିଷ୍ଠା ନିମନ୍ତେ ଦତ୍ତ ଉପହାର।
ಸಮಾಧಾನದ ಬಲಿಗಾಗಿರುವ ಒಟ್ಟು ಪಶುಗಳು: 24 ಹೋರಿಗಳು, 60 ಟಗರುಗಳು, 60 ಹೋತಗಳು, ಒಂದು ವರ್ಷದ ಗಂಡು ಕುರಿಮರಿಗಳು 60. ಅದನ್ನು ಅಭಿಷೇಕಿಸಿದ ತರುವಾಯ ಬಲಿಪೀಠಕ್ಕೆ ಮಾಡಿದ ಪ್ರತಿಷ್ಠೆ ಇದಾಗಿತ್ತು.
89 ଏଉତ୍ତାରେ ମୋଶା ତାହାଙ୍କ ସହିତ କଥା କହିବାକୁ ସମାଗମ-ତମ୍ବୁରେ ପ୍ରବେଶ କରନ୍ତେ, ସାକ୍ଷ୍ୟ-ସିନ୍ଦୁକର ଉପରିସ୍ଥିତ ପାପାଚ୍ଛାଦନର ଉପରୁ, କିରୂବ ଦ୍ୱୟ ମଧ୍ୟରୁ ଆପଣା ପ୍ରତି ବାକ୍ୟବାଦୀ ରବ ଶୁଣିଲେ; ପୁଣି, ସେ ତାଙ୍କ ସହିତ କଥା କହିଲେ।
ಮೋಶೆಯು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದಾಗ, ಅವನು ಒಡಂಬಡಿಕೆಯ ಮಂಜೂಷದ ಮೇಲೆ ಇರುವ ಕರುಣಾಸನದ ಮೇಲಿನಿಂದ ಎರಡು ಕೆರೂಬಿಗಳ ಮಧ್ಯದಿಂದ ತನ್ನ ಸಂಗಡ ಮಾತನಾಡುವ ಧ್ವನಿಯನ್ನು ಮೋಶೆಯು ಕೇಳಿದನು. ಹೀಗೆ ದೇವರು ಅವನ ಸಂಗಡ ಮಾತನಾಡಿದರು.