< ମୋଶାଙ୍କ ଲିଖିତ ଚତୁର୍ଥ ପୁସ୍ତକ 1 >

1 ଏଥିଉତ୍ତାରେ ଲୋକମାନେ ମିସର ଦେଶରୁ ବାହାର ହେବାର ଦ୍ୱିତୀୟ ବର୍ଷର ଦ୍ୱିତୀୟ ମାସର ପ୍ରଥମ ଦିନରେ ସଦାପ୍ରଭୁ ସୀନୟ ପ୍ରାନ୍ତରରେ ସମାଗମ-ତମ୍ବୁ ମଧ୍ୟରେ ମୋଶାଙ୍କୁ କହିଲେ,
ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಯೆಹೋವ ದೇವರು ಸೀನಾಯಿ ಮರುಭೂಮಿಯಲ್ಲಿ ದೇವದರ್ಶನದ ಗುಡಾರದೊಳಗೆ ಮೋಶೆಯ ಸಂಗಡ ಹೀಗೆ ಮಾತನಾಡಿದರು:
2 “ତୁମ୍ଭେମାନେ ଇସ୍ରାଏଲ-ସନ୍ତାନଗଣର ସମସ୍ତ ମଣ୍ଡଳୀର ବଂଶ ଅନୁସାରେ ଓ ପିତୃଗୃହ ଅନୁସାରେ ଓ ନାମ-ସଂଖ୍ୟାନୁସାରେ ପ୍ରତ୍ୟେକ ପୁରୁଷର ମସ୍ତକ ଗଣନା କର।
“ಇಸ್ರಾಯೇಲ್ ಜನಸಮೂಹದ ಗಂಡಸರನ್ನು ಗೋತ್ರ ಹಾಗೂ ಕುಟುಂಬಗಳಿಗೆ ಅನುಗುಣವಾಗಿ ಹೆಸರು ಹಿಡಿದು ಒಬ್ಬೊಬ್ಬರನ್ನಾಗಿ ಎಣಿಸಬೇಕು.
3 କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ଯେତେ ପୁରୁଷ ଇସ୍ରାଏଲ ମଧ୍ୟରୁ ଯୁଦ୍ଧକୁ ଯିବାର ଯୋଗ୍ୟ, ସେମାନଙ୍କ ସୈନ୍ୟାନୁସାରେ ତୁମ୍ଭେ ଓ ହାରୋଣ ସେମାନଙ୍କୁ ଗଣନା କର।
ಇಸ್ರಾಯೇಲರಲ್ಲಿ ಸೈನಿಕ ಸೇವೆ ಸಲ್ಲಿಸತಕ್ಕವರನ್ನು ಅಂದರೆ, ಇಪ್ಪತ್ತು ವರ್ಷಕ್ಕಿಂತಲೂ ಹೆಚ್ಚಾದ ವಯಸ್ಸುಳ್ಳ ಎಲ್ಲರನ್ನು ಸೈನ್ಯಸೈನ್ಯವಾಗಿ ನೀನು ಮತ್ತು ಆರೋನನು ಪಟ್ಟಿಮಾಡಬೇಕು.
4 ପୁଣି, ପ୍ରତ୍ୟେକ ବଂଶରୁ ଏକ ଏକ ଜଣ, ଅର୍ଥାତ୍‍, ଆପଣା ଆପଣା ପିତୃବଂଶର ପ୍ରଧାନ ଲୋକ ତୁମ୍ଭମାନଙ୍କର ସହକାରୀ ହେବେ।
ಪ್ರತಿಯೊಂದು ಗೋತ್ರದ ಒಬ್ಬೊಬ್ಬ ಮುಖ್ಯಸ್ಥನು ನಿಮಗೆ ಸಹಾಯಕನಾಗಿರಲಿ.
5 ଆଉ ଯେଉଁମାନେ ତୁମ୍ଭମାନଙ୍କର ସହକାରୀ ହେବେ, ସେମାନଙ୍କର ନାମ ଏହି: ଯଥା, ରୁବେନ୍‍ ବଂଶର ଶଦେୟରର ପୁତ୍ର ଇଲୀଷୂର।
“ನಿಮಗೆ ಸಹಾಯ ಮಾಡಬೇಕಾದ ಪುರುಷರ ಹೆಸರುಗಳು: “ರೂಬೇನ್ ಗೋತ್ರದಿಂದ ಶೆದೇಯೂರನ ಮಗ ಎಲೀಚೂರ್,
6 ଶିମୀୟୋନ ବଂଶର ସୂରୀଶଦ୍ଦୟର ପୁତ୍ର ଶଲୁମୀୟେଲ।
ಸಿಮೆಯೋನ್ ಗೋತ್ರದಿಂದ ಚುರೀಷದ್ದೈಯನ ಮಗ ಶೆಲುಮೀಯೇಲ್,
7 ଯିହୁଦା ବଂଶର; ଅମ୍ମୀନାଦବର ପୁତ୍ର ନହଶୋନ
ಯೆಹೂದ ಗೋತ್ರದಿಂದ ಅಮ್ಮೀನಾದಾಬನ ಮಗ ನಹಶೋನ್,
8 ଇଷାଖର ବଂଶର; ସୂୟାରର ପୁତ୍ର ନଥନେଲ।
ಇಸ್ಸಾಕರ್ ಗೋತ್ರದಿಂದ ಚೂವಾರನ ಮಗ ನೆತನೆಯೇಲ್,
9 ସବୂଲୂନ ବଂଶର ହେଲୋନର ପୁତ୍ର ଇଲୀୟାବ୍‍
ಜೆಬುಲೂನ್ ಗೋತ್ರದಿಂದ ಹೇಲೋನನ ಮಗ ಎಲೀಯಾಬ್,
10 ଯୋଷେଫର ପୁତ୍ରଗଣ ମଧ୍ୟରୁ ଇଫ୍ରୟିମ ବଂଶର; ଅମ୍ମୀହୂଦର ପୁତ୍ର ଇଲୀଶାମା; ମନଃଶି ବଂଶର; ପଦାହସୂରର ପୁତ୍ର ଗମଲୀୟେଲ।
ಯೋಸೇಫನ ಗೋತ್ರದಲ್ಲಿ, ಎಫ್ರಾಯೀಮ್‌ನಿಂದ ಅಮ್ಮೀಹೂದನ ಮಗ ಎಲೀಷಾಮಾ, ಮನಸ್ಸೆ ಗೋತ್ರದಿಂದ ಪೆದಾಚೂರನ ಮಗನಾದ ಗಮಲಿಯೇಲ್,
11 ବିନ୍ୟାମୀନ୍ ବଂଶର; ଗିଦୀୟୋନର ପୁତ୍ର ଅବୀଦାନ୍‍।
ಬೆನ್ಯಾಮೀನ್ ಗೋತ್ರದಿಂದ ಗಿದ್ಯೋನಿನ ಮಗನಾದ ಅಬೀದಾನ,
12 ଦାନ୍ ବଂଶର; ଅମ୍ମୀଶଦ୍ଦୟର ପୁତ୍ର ଅହୀୟେଷର।
ದಾನ್ ಗೋತ್ರದಿಂದ ಅಮ್ಮೀಷದ್ದೈಯನ ಮಗ ಅಹೀಗೆಜೆರ್,
13 ଆଶେର ବଂଶର; ଅକ୍ରଣର ପୁତ୍ର ପଗୀୟେଲ।
ಆಶೇರ್ ಗೋತ್ರದಿಂದ ಒಕ್ರಾನನ ಮಗ ಪಗೀಯೇಲ್,
14 ଗାଦ୍‍ ବଂଶର; ଦ୍ୟୂୟେଲର ପୁତ୍ର ଇଲୀୟାସଫ୍‍।
ಗಾದ್ ಗೋತ್ರದಿಂದ ದೆವುಯೇಲನ ಮಗ ಎಲ್ಯಾಸಾಫ್,
15 ନପ୍ତାଲି ବଂଶର; ଐନନର ପୁତ୍ର ଅହୀର।”
ನಫ್ತಾಲಿ ಗೋತ್ರದಿಂದ ಏನಾನನ ಮಗ ಅಹೀರನು.”
16 ଏମାନେ ମଣ୍ଡଳୀର ଆହୂତ ଲୋକ, ଆପଣା ଆପଣା ପିତୃବଂଶର ଅଧିପତି, ଆଉ ଇସ୍ରାଏଲର ସହସ୍ରପତି ଥିଲେ।
ಇವರು ಸರ್ವಸಮೂಹದೊಳಗಿಂದ ಆಯ್ದುಕೊಂಡು ನೇಮಕವಾದವರು. ಇವರು ತಮ್ಮ ಪುರಾತನ ಗೋತ್ರಗಳ ನಾಯಕರು. ಇವರು ಇಸ್ರಾಯೇಲಿನ ಗೋತ್ರಗಳ ಪ್ರಮುಖರು.
17 ତେବେ ମୋଶା ଓ ହାରୋଣ ଏହିସବୁ ନାମବିଶିଷ୍ଟ ଲୋକମାନଙ୍କୁ ଗ୍ରହଣ କଲେ।
ಹೆಸರಿನಿಂದ ಸೂಚಿತರಾದ ಈ ಪುರುಷರನ್ನು ಮೋಶೆ ಮತ್ತು ಆರೋನನು ತಮ್ಮ ಜೊತೆ ತೆಗೆದುಕೊಂಡರು.
18 ପୁଣି, ଦ୍ୱିତୀୟ ମାସର ପ୍ରଥମ ଦିନରେ ସମଗ୍ର ମଣ୍ଡଳୀକୁ ଏକତ୍ର କରି ମସ୍ତକ-ସଂଖ୍ୟାରେ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ଲୋକମାନଙ୍କ ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ସେମାନଙ୍କର ବଂଶାବଳୀ ଲେଖିଲେ।
ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಮಸ್ತ ಪುರುಷರನ್ನೂ ಸಮೂಹದವರೆಲ್ಲರನ್ನೂ ಕೂಡಿಸಿದರು. ಜನರು ತಮ್ಮ ಗೋತ್ರ ಮತ್ತು ಕುಟುಂಬಗಳ ಅನುಸಾರವಾಗಿ ತಮ್ಮ ವಂಶಾವಳಿಯನ್ನು ನೊಂದಾಯಿಸಿದರು. ಹಾಗೂ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಾದ ವಯಸ್ಸಿನವರ ಹೆಸರುಗಳನ್ನು ಒಬ್ಬೊಬ್ಬರಾಗಿ ಪಟ್ಟಿಮಾಡಲಾಯಿತು.
19 ଏହିରୂପେ ମୋଶା ସଦାପ୍ରଭୁଙ୍କ ଆଜ୍ଞାନୁସାରେ ସୀନୟ ପ୍ରାନ୍ତରରେ ସେମାନଙ୍କୁ ଗଣନା କଲେ।
ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಮೋಶೆ ಸೀನಾಯಿ ಮರುಭೂಮಿಯಲ್ಲಿ ಜನಗಣತಿ ಮಾಡಿದನು.
20 ଇସ୍ରାଏଲଙ୍କର ଜ୍ୟେଷ୍ଠ ପୁତ୍ର ଯେ ରୁବେନ୍‍, ତାହାର ସନ୍ତାନଗଣର ବଂଶ, ପିତୃଗୃହ, ନାମସଂଖ୍ୟା ଓ ମସ୍ତକ ଗଣନାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಇಸ್ರಾಯೇಲಿನ ಚೊಚ್ಚಲ ಮಗ ರೂಬೇನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
21 ରୁବେନ୍‍ ବଂଶର ଗଣିତ ଲୋକମାନଙ୍କ ସଂଖ୍ୟା ଛୟାଳିଶ ହଜାର ପାଞ୍ଚ ଶହ ହେଲା।
ರೂಬೇನನ ಗೋತ್ರದಲ್ಲಿ ಎಣಿಕೆಯಾದವರು 46,500 ಜನರು.
22 ଶିମୀୟୋନ-ସନ୍ତାନଗଣ ମଧ୍ୟରୁ ବଂଶ ଓ ପିତୃଗୃହ ଅନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ଯେଉଁ ପୁରୁଷମାନେ ନାମସଂଖ୍ୟା ଓ ମସ୍ତକ ଗଣନାନୁସାରେ ଗଣାଗଲେ, ସେମାନଙ୍କର ବଂଶାବଳୀ;
ಸಿಮೆಯೋನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
23 ଶିମୀୟୋନ ବଂଶର ଗଣିତ ଲୋକମାନଙ୍କ ସଂଖ୍ୟା ଊଣଷଠି ହଜାର ତିନି ଶହ ହେଲା।
ಸಿಮೆಯೋನನ ಗೋತ್ರದಲ್ಲಿ ಎಣಿಕೆಯಾದವರು 59,300 ಜನರು.
24 ଗାଦ୍‍-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಗಾದನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
25 ଗାଦ୍‍ ବଂଶର ଗଣିତ ଲୋକମାନଙ୍କ ସଂଖ୍ୟା ପଞ୍ଚଚାଳିଶ ହଜାର ଛଅ ଶହ ପଚାଶ ହେଲା।
ಗಾದನ ಗೋತ್ರದಲ್ಲಿ ಎಣಿಕೆಯಾದವರು 45,650 ಜನರು.
26 ଯିହୁଦା-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಯೆಹೂದ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
27 ଯିହୁଦା ବଂଶର ଗଣିତ ଲୋକମାନଙ୍କ ସଂଖ୍ୟା ଚଉସ୍ତରି ହଜାର ଛଅ ଶହ ହେଲା।
ಯೆಹೂದ ಗೋತ್ರದಲ್ಲಿ ಎಣಿಕೆಯಾದವರು 74,600 ಜನರು.
28 ଇଷାଖର-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಇಸ್ಸಾಕಾರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
29 ଇଷାଖର ବଂଶର ଗଣିତ ଲୋକ ସଂଖ୍ୟା ଚଉବନ ହଜାର ଚାରି ଶହ ହେଲା।
ಇಸ್ಸಾಕಾರನ ಗೋತ್ರದಲ್ಲಿ ಎಣಿಕೆಯಾದವರು 54,400 ಜನರು.
30 ସବୂଲୂନ-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಜೆಬುಲೂನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
31 ସବୂଲୂନ ବଂଶର ଗଣିତ ଲୋକମାନଙ୍କ ସଂଖ୍ୟା ସତାବନ ହଜାର ଚାରି ଶହ ହେଲା।
ಜೆಬುಲೂನ್ ಗೋತ್ರದಲ್ಲಿ ಎಣಿಕೆಯಾದವರು 57,400 ಜನರು.
32 ଯୋଷେଫ-ସନ୍ତାନଗଣର, ଯଥା, ଇଫ୍ରୟିମ-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କ ବଂଶାବଳୀ;
ಯೋಸೇಫನ ಮಕ್ಕಳಾದ ಎಫ್ರಾಯೀಮನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
33 ଇଫ୍ରୟିମ ବଂଶର ଗଣିତ ଲୋକମାନଙ୍କ ସଂଖ୍ୟା ଚାଳିଶ ହଜାର ପାଞ୍ଚ ଶହ ହେଲା।
ಎಫ್ರಾಯೀಮನ ಗೋತ್ರದಲ್ಲಿ ಎಣಿಕೆಯಾದವರು 40,500 ಜನರು.
34 ମନଃଶି-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಮನಸ್ಸೆಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
35 ମନଃଶି ବଂଶର ଗଣିତ ଲୋକମାନଙ୍କ ସଂଖ୍ୟା ବତ୍ରିଶ ହଜାର ଦୁଇ ଶହ ହେଲା।
ಮನಸ್ಸೆಯ ಗೋತ್ರದಲ್ಲಿ ಎಣಿಕೆಯಾದವರು 32,200 ಜನರು.
36 ବିନ୍ୟାମୀନ୍-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କ ବଂଶାବଳୀ;
ಬೆನ್ಯಾಮೀನ್ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
37 ବିନ୍ୟାମୀନ୍ ବଂଶର ଗଣିତ ଲୋକମାନଙ୍କ ସଂଖ୍ୟା ପଞ୍ଚତିରିଶ ହଜାର ଚାରି ଶହ ହେଲା।
ಬೆನ್ಯಾಮೀನನ ಗೋತ್ರದಲ್ಲಿ ಎಣಿಕೆಯಾದವರು 35,400 ಜನರು.
38 ଦାନ୍-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ದಾನನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
39 ଦାନ୍ ବଂଶର ଗଣିତ ଲୋକମାନଙ୍କ ସଂଖ୍ୟା ବାଷଠି ହଜାର ସାତ ଶହ ହେଲା।
ದಾನನ ಗೋತ್ರದಲ್ಲಿ ಎಣಿಕೆಯಾದವರು 62,700 ಜನರು.
40 ଆଶେର-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କର ବଂଶାବଳୀ;
ಆಶೇರನ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
41 ଆଶେର ବଂଶର ଗଣିତ ଲୋକମାନଙ୍କର ସଂଖ୍ୟା ଏକଚାଳିଶ ହଜାର ପାଞ୍ଚ ଶହ ହେଲା।
ಆಶೇರನ ಗೋತ್ರದಲ್ಲಿ ಎಣಿಕೆಯಾದವರು 41,500 ಜನರು.
42 ନପ୍ତାଲି-ସନ୍ତାନଗଣର ବଂଶ, ପିତୃଗୃହ ଓ ନାମ-ସଂଖ୍ୟାନୁସାରେ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ପୁରୁଷମାନଙ୍କ ବଂଶାବଳୀ;
ನಫ್ತಾಲಿಯ ಸಂತತಿಯವರಲ್ಲಿ: ಯುದ್ಧಕ್ಕೆ ಶಕ್ತರಾದ ಪುರುಷರೆಲ್ಲರೂ ಅಂದರೆ ಇಪ್ಪತ್ತು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಗೋತ್ರ ಹಾಗೂ ಕುಟುಂಬಗಳ ಪ್ರಕಾರ ಒಬ್ಬೊಬ್ಬರಾಗಿ ಹೆಸರೆಸರಾಗಿ ಪಟ್ಟಿಮಾಡಲಾದರು.
43 ନପ୍ତାଲି ବଂଶର ଗଣିତ ଲୋକମାନଙ୍କ ସଂଖ୍ୟା ତେପନ ହଜାର ଚାରି ଶହ ହେଲା।
ನಫ್ತಾಲಿಯ ಗೋತ್ರದಲ್ಲಿ ಎಣಿಕೆಯಾದವರು 53,400 ಜನರು.
44 ଏହି ଲୋକମାନେ ଗଣିତ ହେଲେ; ମୋଶା, ହାରୋଣ ଓ ଇସ୍ରାଏଲର ବାର ଜଣ ଅଧିପତି, ଅର୍ଥାତ୍‍, ଏକ ଏକ ପିତୃଗୃହ ନିମନ୍ତେ ଏକ ଏକ ଅଧିପତି ସେମାନଙ୍କୁ ଗଣନା କଲେ।
ಮೋಶೆ, ಆರೋನ್ ಮತ್ತು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ನಾಯಕರು ಲೆಕ್ಕಮಾಡಿದ ಇಸ್ರಾಯೇಲರ ಜನರು ಇವರೇ. ಪ್ರತಿಯೊಬ್ಬರೂ ತಮ್ಮ ತಮ್ಮ ಕುಟುಂಬವನ್ನು ಪ್ರತಿನಿಧಿಸುತ್ತಿದ್ದರು.
45 ଏହିରୂପେ ଇସ୍ରାଏଲ-ସନ୍ତାନଗଣ ଆପଣା ଆପଣା ପିତୃଗୃହାନୁସାରେ ଇସ୍ରାଏଲ ମଧ୍ୟରୁ ଯୁଦ୍ଧକୁ ଯିବା ଯୋଗ୍ୟ କୋଡ଼ିଏ ବର୍ଷରୁ ଅଧିକ ବର୍ଷ ବୟସ୍କ ଲୋକମାନେ ଗଣିତ ହେଲେ।
ಹೀಗೆ ಇಸ್ರಾಯೇಲರಲ್ಲಿ ಎಣಿಕೆಯಾದವರೆಲ್ಲರೂ ಅವರ ಕುಟುಂಬಗಳ ಪ್ರಕಾರ ಇಪ್ಪತ್ತು ವರ್ಷದವರೂ, ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳವರೂ, ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಶಕ್ತರಾದವರೂ ಆಗಿದ್ದರು.
46 ଏହିସବୁ ଗଣିତ ଲୋକମାନଙ୍କ ସଂଖ୍ୟା ଛଅ ଲକ୍ଷ ତିନି ହଜାର ପାଞ୍ଚ ଶହ ପଚାଶ ଜଣ ହେଲା।
ಎಣಿಕೆಯಾದವರು ಒಟ್ಟು 6,03,550 ಮಂದಿಯಾಗಿದ್ದರು.
47 ମାତ୍ର ଲେବୀୟମାନେ ଆପଣା ପିତୃବଂଶାନୁସାରେ ସେମାନଙ୍କ ମଧ୍ୟରେ ଗଣାଗଲେ ନାହିଁ।
ಲೇವಿಯರ ತಂದೆಗಳ ಗೋತ್ರವನ್ನು ಇತರರೊಂದಿಗೆ ಎಣಿಸಲಿಲ್ಲ.
48 କାରଣ ସଦାପ୍ରଭୁ ମୋଶାଙ୍କୁ କହିଥିଲେ,
ಇದಲ್ಲದೆ ಯೆಹೋವ ದೇವರು ಮೋಶೆಗೆ ಹೇಳಿದ್ದೇನೆಂದರೆ:
49 “ତୁମ୍ଭେ କେବଳ ଲେବୀୟ ବଂଶର ଗଣନା କରିବ ନାହିଁ, କିଅବା ଇସ୍ରାଏଲ-ସନ୍ତାନଗଣ ମଧ୍ୟରେ ସେମାନଙ୍କର ସଂଖ୍ୟା ନେବ ନାହିଁ;
“ನೀವು ಲೇವಿಯ ಕುಲವನ್ನು ಎಣಿಸಬಾರದು ಅಥವಾ ಇತರ ಇಸ್ರಾಯೇಲರ ಜನಗಣತಿಯಲ್ಲಿ ಅವರನ್ನು ಸೇರಿಸಬಾರದು.
50 ମାତ୍ର ତୁମ୍ଭେ ସାକ୍ଷ୍ୟର ଆବାସ, ତହିଁର ସକଳ ଦ୍ରବ୍ୟ ଓ ତତ୍‍ସମ୍ବନ୍ଧୀୟ ସମସ୍ତ ବିଷୟ ଉପରେ ଲେବୀୟମାନଙ୍କୁ ନିଯୁକ୍ତ କରିବ; ସେମାନେ ଆବାସ ଓ ତହିଁର ସମସ୍ତ ଦ୍ରବ୍ୟ ବହିବେ ଓ ସେମାନେ ତହିଁର ସେବା କରିବେ ଓ ଆବାସର ଚାରିଆଡ଼େ ଛାଉଣି କରି ରହିବେ।
ಆದರೆ ನೀನು ಸಾಕ್ಷಿಯ ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಅದಕ್ಕೆ ಬೇಕಾದ ಎಲ್ಲವನ್ನೂ ನೋಡಿಕೊಳ್ಳಲು ಲೇವಿಯರನ್ನು ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಹೊತ್ತುಕೊಳ್ಳುವರು. ಅದರ ಸೇವೆಮಾಡಿ, ಗುಡಾರದ ಸುತ್ತುಮುತ್ತಲೂ ಇಳಿದುಕೊಳ್ಳಬೇಕು.
51 ପୁଣି, ଆବାସ ଆଗକୁ ଯିବା ସମୟରେ ଲେବୀୟମାନେ ତାହା ଭାଙ୍ଗିବେ ଓ ଆବାସ ସ୍ଥାପନ କରିବା ସମୟରେ ଲେବୀୟମାନେ ତାହା ସ୍ଥାପନ କରିବେ ଓ ଅନ୍ୟ ବଂଶୀୟ ଲୋକ ତାହା ନିକଟକୁ ଗଲେ, ତାହାର ପ୍ରାଣଦଣ୍ଡ ହେବ।
ದೇವದರ್ಶನ ಗುಡಾರವು ಹೊರಡುವಾಗ ಲೇವಿಯರು ಅದನ್ನು ತೆಗೆಯಲಿ. ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ. ಬೇರೆ ಯಾವನಾದರೂ ಸಮೀಪಿಸಿದರೆ ಅವನು ಸಾಯಬೇಕು.
52 ଇସ୍ରାଏଲ-ସନ୍ତାନଗଣ ଆପଣା ଆପଣା ସୈନ୍ୟାନୁସାରେ ଆପଣା ଆପଣା ଛାଉଣିରେ ଆପଣା ଆପଣା ଧ୍ୱଜା ନିକଟରେ ତମ୍ବୁ ସ୍ଥାପନ କରିବେ।
ಇಸ್ರಾಯೇಲರು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಧ್ವಜದ ಬಳಿ ಇಳಿದುಕೊಳ್ಳಬೇಕು.
53 ମାତ୍ର ଇସ୍ରାଏଲ-ସନ୍ତାନଗଣର ମଣ୍ଡଳୀ ପ୍ରତି ଯେପରି କ୍ରୋଧ ନ ଘଟେ, ଏଥିପାଇଁ ଲେବୀୟମାନେ ସାକ୍ଷ୍ୟ-ଆବାସର ଚାରିଆଡ଼େ ଛାଉଣି ସ୍ଥାପନ କରିବେ; ପୁଣି, ଲେବୀୟମାନେ ସାକ୍ଷ୍ୟ-ଆବାସ ରକ୍ଷା କରିବେ।”
ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದುಕೊಳ್ಳಬೇಕು. ಹೀಗೆ ಇಸ್ರಾಯೇಲರ ಸಭೆಯ ಮೇಲೆ ನನ್ನ ಕೋಪಕ್ಕೆ ಆಸ್ಪದವಿರದು. ಲೇವಿಯರು ಸಭೆಯ ಗುಡಾರ ಕಾಯುವ ಜವಾಬ್ದಾರಿಕೆಯುಳ್ಳವರಾಗಿರಬೇಕು.”
54 ଇସ୍ରାଏଲ-ସନ୍ତାନଗଣ ଏହିରୂପେ କଲେ; ସଦାପ୍ରଭୁ ମୋଶାଙ୍କୁ ଯେଉଁ ସମସ୍ତ ଆଜ୍ଞା ଦେଇଥିଲେ, ତଦନୁସାରେ ସେମାନେ କଲେ।
ಇಸ್ರಾಯೇಲರು ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದರು.

< ମୋଶାଙ୍କ ଲିଖିତ ଚତୁର୍ଥ ପୁସ୍ତକ 1 >