< Esaias 22 >
1 Framsegn um Synedalen. Kva er på ferd, sidan alt folket ditt stig upp på taki?
೧ದಿವ್ಯದರ್ಶನದ ಕಣಿವೆಯ ವಿಷಯವಾದ ದೈವೋಕ್ತಿ. ಯಾವ ಕಾರಣಕ್ಕಾಗಿ ನಿನ್ನ ಜನರೆಲ್ಲರೂ ಮಾಳಿಗೆಗಳನ್ನು ಹತ್ತಿದರು?
2 Du bråkande, du ståkande by, du jublande borg! Dine falne menner er ikkje slegne med sverd, ikkje drepne i strid.
೨ಕೋಲಾಹಲದಿಂದ ತುಂಬಿ ಆರ್ಭಟಿಸುವ ಪಟ್ಟಣವೇ, ಸಂಭ್ರಮದ ಪಟ್ಟಣವೇ; ನಿನ್ನಲ್ಲಿ ಹತರಾದವರು ಕತ್ತಿಯಿಂದ ಸಾಯಲಿಲ್ಲ, ಅವರು ಯುದ್ಧದಲ್ಲಿ ಸತ್ತವರಲ್ಲ.
3 Hovdingarne dine tok alle saman til rømings, utan bogeskot let dei seg taka til fanga. Dei som fanst i deg, hev vorte fanga alle saman, langt burt hev det rømt.
೩ನಿನ್ನ ಅಧಿಕಾರಿಗಳು ಒಟ್ಟಿಗೆ ಓಡಿ ಬಿಲ್ಲುಗಾರರಿಲ್ಲದೆ ಸೆರೆಯಾಗಿದ್ದಾರೆ; ದೂರದಿಂದ ಓಡುತ್ತಾ ಶತ್ರುವಿಗೆ ಸಿಕ್ಕಿದ ನಿನ್ನ ಜನರೆಲ್ಲರೊಂದಿಗೆ ಕಟ್ಟುಬಿದ್ದಿದ್ದಾರೆ.
4 Difor segjer eg: Sjå burt ifrå meg, lat meg gråta sårt! truga ikkje trøyst på meg for at dotteri, folket mitt, hev vorte herja!
೪ಹೀಗಿರಲು, “ನನ್ನ ಕಡೆಯಿಂದ ದೃಷ್ಟಿ ತಿರುಗಿಸಿರಿ, ಬಹು ಸಂಕಟದಿಂದ ನಾನು ಅಳುವೆನು, ನನ್ನ ಜನವೆಂಬ ಯುವತಿಯು ಹಾಳಾದ ವಿಷಯದಲ್ಲಿ ನನ್ನನ್ನು ಸಂತೈಸುವುದಕ್ಕೆ ತವಕಗೊಳ್ಳದಿರಿ.
5 For ein upprivande dag med nedtrakking og forfjetring kjem frå Herren, Allhers-Herren, i Synedalen; murar vert nedbrotne, naudropet stig mot fjellet.
೫ಸೇನಾಧೀಶ್ವರನಾದ ಯೆಹೋವನೆಂಬ ಕರ್ತನಿಂದ ದಿವ್ಯದರ್ಶನದ ಕಣಿವೆಗೆ ಗಲಿಬಿಲಿಯ ದಿನ, ತುಳಿದಾಟದ ದಿನ, ಭ್ರಾಂತಿಯ ದಿನ, ಕೋಟೆಯು ಒಡೆದು ಹೋಗಲು, ಕೂಗು ಬೆಟ್ಟವನ್ನು ಮುಟ್ಟುವ ದಿನ ಬಂದಿದೆ.
6 Elam tok pilehuset, han drog fram med vogn-stridsmenner og med hestfolk; Kir nækte skjoldarne.
೬ಏಲಾಮು ಕುದರೆಗಳ ರಥಗಳ ಸಂಗಡ ಬತ್ತಳಿಕೆಯನ್ನು ಹೊತ್ತುಕೊಂಡು ಬಂದರು. ಕೀರಿನವರು ಗುರಾಣಿಯನ್ನು ತೆಗೆದರು.
7 Dei fagraste dalarne dine vart fyllt med stridsvogner, og hestfolk tok post framfor porten.
೭ನಿಮ್ಮ ಪ್ರಿಯವಾದ ಕಣಿವೆಗಳಲ್ಲಿ ರಥಗಳು ತುಂಬಿದವು, ರಾಹುತರು ಬಾಗಿಲಿನ ಹತ್ತಿರ ವ್ಯೂಹಕಟ್ಟಿದರು.”
8 Han tok vern frå Juda. Då såg du deg um etter herbunad - i skoghuset.
೮ಅವನು ಯೆಹೂದದ ರಕ್ಷಣೆಯ ಮುಸುಕನ್ನು ತೆಗೆದಿದ್ದಾನೆ. ಆ ದಿನದಲ್ಲಿ (ಲೆಬನೋನಿನ) ತೋಪು ಎನಿಸಿಕೊಳ್ಳುವ ಮಂದಿರದಲ್ಲಿನ ಆಯುಧಗಳ ಕಡೆಗೆ ದೃಷ್ಟಿಹಾಕಿದಿರಿ.
9 Og de såg at Davidsbyen hadde mange rivnor, og de samlar upp vatnet i Nedredammen;
೯ದಾವೀದನ ಪಟ್ಟಣದ ಕೋಟೆಯ ಒಡಕುಗಳು ಬಹಳವೆಂದು ನೋಡಿದಿರಿ; ಕೆಳಗಿನ ಕೊಳಕ್ಕೆ ನೀರನ್ನು ಹಾಯಿಸಿದಿರಿ.
10 de talde husi i Jerusalem, og de reiv ned husi og vilde gjera muren traust.
೧೦ಯೆರೂಸಲೇಮಿನ ಮನೆಗಳನ್ನು ಲೆಕ್ಕಿಸಿ, ಪೌಳಿಗೋಡೆಯನ್ನು ಭದ್ರಪಡಿಸುವುದಕ್ಕೆ ಮನೆಗಳನ್ನು ಒಡೆದು ಹಾಕಿಬಿಟ್ಟಿರಿ.
11 Og imillom båe murarne gjorde de ein kulp for vatnet frå Gamledammen. Men på honom som hadde sett dette i verk, gav det ikkje gaum; til honom som longe sidan hadde laga dette til, såg de ikkje.
೧೧ಎರಡು ಗೋಡೆಗಳ ನಡುವೆ ಹಳೆಯ ಕೊಳದ ನೀರಿಗಾಗಿ ತೊಟ್ಟಿಯನ್ನು ಮಾಡಿದ್ದೀರಿ; ಆದರೆ ಇದನ್ನೆಲ್ಲಾ ನಡೆಸಿದಾತನ ಕಡೆಗೆ ನೀವು ದೃಷ್ಟಿಯಿಡಲಿಲ್ಲ, ಪುರಾತನ ಕಾಲದಲ್ಲಿ ಸಂಕಲ್ಪಿಸಿದಾತನನ್ನು ನೀವು ಲಕ್ಷಿಸಲಿಲ್ಲ.
12 Herren, Allhers-Herren, kalla på den dagen til gråt og øying, til å raka hovudet og sveipa seg i syrgjeklæde.
೧೨ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು, ಆ ದಿನದಲ್ಲಿ ನಿಮಗೆ ಆಜ್ಞಾಪಿಸಿದನು. ಕಣ್ಣೀರು ಸುರಿಸಿ, ಗೋಳಾಡಿರಿ, ತಲೆಬೋಳಿಸಿಕೊಳ್ಳಿರಿ, ಗೋಣಿತಟ್ಟನ್ನು ಸುತ್ತಿಕೊಳ್ಳಿರಿ ಎಂಬುದೇ.
13 Men her er gleda og gaman, ukseslagting og saueslagting, kjøteting og vindrikking. «Lat oss eta og drikka; for i morgon døyr me!»
೧೩ಆದರೆ ಇಗೋ, ಉಲ್ಲಾಸ, ಹರ್ಷ, ಕುರಿದನಗಳನ್ನು ಕಡಿಯುವುದು, ಮಾಂಸ ತಿನ್ನುವುದು, ದ್ರಾಕ್ಷಾರಸ ಕುಡಿಯುವುದು, ನಾಳೆ ಸಾಯುತ್ತೇವೆಂದು ಇಂದು ತಿಂದು ಕುಡಿಯುವುದೇ ನಿಮ್ಮ ಕಾರ್ಯ.
14 Difor ljomar openberringi frå Herren, allhers drott, i øyro mine: Den syndi fer de ikkje sona til dess de døyr, segjer Herren, Allhers-Herren.
೧೪ಹೀಗಿರಲು, ಸೇನಾಧೀಶ್ವರನಾದ ಯೆಹೋವನು ನನ್ನ ಕಿವಿಗಳಲ್ಲಿ ಪ್ರಕಟಿಸಿದ್ದೇನೆಂದರೆ, “ನೀವು ಸಾಯುವ ತನಕ ಈ ಅಧರ್ಮಕ್ಕೆ ಪ್ರಾಯಶ್ಚಿತ್ತವು ಇಲ್ಲವೇ ಇಲ್ಲ ಎಂದು ಸೇನಾಧೀಶ್ವರನಾಗಿರುವ ಯೆಹೋವನೆಂಬ ಕರ್ತನಾದ ನಾನು ನುಡಿದಿದ್ದೇನೆ” ಎಂಬುದೇ.
15 So sagde Herren, Allhers-Herren: «Gakk til denne drottseten Sebna, han som stend fyre huset, og seg til honom:
೧೫ಸೇನಾಧೀಶ್ವರನಾದ ಯೆಹೋವನೆಂಬ ಕರ್ತನು ಹೀಗೆ ನುಡಿದಿದ್ದಾನೆ, “ಹೋಗು, ಅರಮನೆಯ ಮೇಲ್ವಿಚಾರಕನಾದ ಶೆಬ್ನನೆಂಬ ಈ ಅಧ್ಯಕ್ಷನ ಬಳಿಗೆ ಹೋಗಿ ಅವನಿಗೆ ಹೇಳತಕ್ಕದ್ದೇನೆಂದರೆ,
16 Kva hev du her å gjera, og kven tenkjer du å leggja her, sidan du her høgg deg ut ei grav? Du som høgg gravi di ut på so høg ein stad og holar deg bustad i berget,
೧೬‘ಇಲ್ಲಿ ನಿನಗೇನು ಕೆಲಸ? ಇಲ್ಲಿ ನಿನಗಾಗಿ ಸಮಾಧಿಯನ್ನು ತೋಡಿಸಿಕೊಂಡಿರುವ ನೀನು ಯಾರು? ಉನ್ನತದಲ್ಲಿ ನಿನಗೆ ಸಮಾಧಿಯನ್ನು ಕೊರೆಸುತ್ತಾ, ಬಂಡೆಯನ್ನು ಕೆತ್ತಿಸಿ, ನಿನಗಾಗಿ ವಿಶ್ರಾಂತಿಯ ಸ್ಥಳವನ್ನು ತೋಡಿಸಿದಿ ಅಲ್ಲವೇ?’”
17 du skal vita at Herren skal slengja deg langt av leid, du mann! Han skal rulla deg saman til ein klump;
೧೭ಇಗೋ, ಬಲಿಷ್ಠ ಮನುಷ್ಯನಾದ ನಿನ್ನನ್ನು ಯೆಹೋವನು ಎಸೆಯುವನು, ನಿನ್ನನ್ನು ಕೆಳಗೆ ಎಸೆಯುವನು, ನಿನ್ನನ್ನು ಗಟ್ಟಿಯಾಗಿ ಹಿಡಿಯುವನು.
18 han skal vinda deg saman til eit nysta og kasta deg som ein ball ut på vidvangen. Der skal du døy, og dit skal dei gilde vognerne dine koma, du skamflekk for huset åt herren din.
೧೮ನಿನ್ನನ್ನು ಚೆಂಡಿನಂತೆ ಸುತ್ತಿ ಸುತ್ತಿ ವಿಸ್ತಾರವಾದ ದೇಶಕ್ಕೆ ಬಿಸಾಡುವನು; ದಣಿಯ ಮನೆಗೆ ಅವಮಾನ ತಂದವನೇ, ಅಲ್ಲೇ ಸಾಯುವಿ, ನಿನ್ನ ವೈಭವದ ರಥಗಳು ಅಲ್ಲೇ ಇರುವವು.
19 Eg vil støyta deg ned frå romet ditt, og frå posten din skal du verta avjaga.
೧೯ಯೆಹೋವನಾದ ನಾನು, “ನಿನ್ನನ್ನು ಉದ್ಯೋಗದಿಂದ ತಳ್ಳಿಬಿಡುವೆನು, ನಿನ್ನ ಪದವಿಯಿಂದ ನಿನ್ನನ್ನು ಎಳೆದು ಹಾಕುವೆನು.
20 Og på den dagen vil eg kalla på tenaren min, Eljakim, son åt Hilkia;
೨೦ಆ ದಿನದಲ್ಲಿ ನನ್ನ ಸೇವಕನೂ, ಹಿಲ್ಕೀಯನ ಮಗನೂ ಆದ ಎಲ್ಯಾಕೀಮನನ್ನು ಕರೆಯುವೆನು.
21 og eg vil klæda honom i din bunad, og beltet ditt vil eg binda um honom, og ditt rådvelde vil eg gjeva i hans hender. Han skal vera ein far for deim som bur i Jerusalem og for Juda-huset.
೨೧ನಿನ್ನ ನಿಲುವಂಗಿಯನ್ನು ಅವನಿಗೆ ತೊಡಿಸಿ, ನಿನ್ನ ನಡುಕಟ್ಟನ್ನು ಅವನಿಗೆ ಕಟ್ಟಿ, ನಿನ್ನ ಅಧಿಕಾರವನ್ನು ಅವನ ಕೈಗೆ ಕೊಡುವೆನು; ಅವನು ಯೆರೂಸಲೇಮಿನ ನಿವಾಸಿಗಳಿಗೂ, ಯೆಹೂದದ ಮನೆತನದವರಿಗೂ ತಂದೆಯಾಗುವನು.
22 Og eg vil leggja lykelen til Davids hus på herdi hans, og når han let upp, skal ingen læsa att, og når han læser att, skal ingen lata upp.
೨೨ನಾನು ದಾವೀದನ ಮನೆಯ ಬೀಗದ ಕೈಯನ್ನು ನಿನ್ನ ಹೊಣೆಗಾರಿಕೆಗೆ ಕೊಡುವೆನು; ಅವನು ತೆರೆದರೆ ಯಾರೂ ಮುಚ್ಚರು, ಮುಚ್ಚಿದರೆ ಯಾರೂ ತೆರೆಯರು.
23 Eg set honom som ein spikar på ein fast stad, og han skal verta eit æresete for farshuset sitt.
೨೩ಗಟ್ಟಿಯಾದ ಸ್ಥಳದಲ್ಲಿ ಮೊಳೆಯನ್ನು ಹೊಡೆದ ಹಾಗೆ ಅವನನ್ನು ಭದ್ರಪಡಿಸುವೆನು. ಅವನು ತನ್ನ ವಂಶದವರಿಗೆ ವೈಭವವುಳ್ಳ ಸಿಂಹಾಸನವಾಗಿರುವನು.
24 Men so framt heile tyngdi av farshuset hengjer seg på honom med alle sine ætlingar og frendar - alle småkjerald, frå fati til leirkrukkorne -
೨೪ಬಟ್ಟಲು ಮೊದಲುಗೊಂಡು ಕೊಡದ ತನಕ ಸಕಲ ಸಾಧಾರಣ ಪಾತ್ರೆಗಳನ್ನು ಅಂದರೆ ತಂದೆಯ ಸಂತಾನ, ಸಂತತಿಯಾದ ಅವನ ಮನೆಯ ವೈಭವವನ್ನು ಅವರು ಆ ದಿನದಲ್ಲಿ ಅವನಿಗೆ ವಹಿಸುವರು” ಎಂಬುದೇ.
25 På den dagen, segjer Herren, allhers drott, skal spikaren i den faste veggen losna, han skal ganga av og detta ned, og byrdi som hekk på honom, skal krasast. For Herren hev tala.»
೨೫ಸೇನಾಧೀಶ್ವರನಾದ ಯೆಹೋವನು ಹೀಗೆ ನುಡಿಯುತ್ತಾನೆ. “ಗಟ್ಟಿಯಾದ ಸ್ಥಳದಲ್ಲಿ ಹೊಡೆದ ಮೊಳೆಯು ಆ ದಿನದಲ್ಲಿ ಕುಸಿದು ಹೋಗುವುದು; ಅದು ಬಡಿಯಲ್ಪಟ್ಟು ಬೀಳಲಾಗಿ ಅದರ ಮೇಲೆ ಇದ್ದ ಭಾರವೂ ತೆಗೆದು ಹಾಕಲ್ಪಡುವುದು ಯೆಹೋವನೇ ಇದನ್ನು ನುಡಿದಿದ್ದಾನೆ” ಎಂಬುದೇ.