< 1 Samuels 31 >
1 Filistarane gjekk på i striden mot Israel. Israels-mennerne rømde undan for filistarane, og det låg mange falne på Gilboafjellet.
೧ಫಿಲಿಷ್ಟಿಯರು ಇಸ್ರಾಯೇಲರೊಡನೆ ಯುದ್ಧಮಾಡಿದರು. ಇಸ್ರಾಯೇಲರು ಅವರಿಂದ ಅಪಜಯಹೊಂದಿ ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2 Filistarane sette etter Saul og sønerne hans. Og filistarane felte Jonatan, Abinadab og Malkisua, Sauls-sønerne.
೨ಫಿಲಿಷ್ಟಿಯರು ಸೌಲನನ್ನೂ ಅವನ ಮಕ್ಕಳನ್ನೂ ಬಿಡದೆ ಹಿಂದಟ್ಟಿ, ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು.
3 Saul sjølv kom upp i ein hard strid. Og nokre bogeskyttarar råka innpå honom. Saul vreid seg i rædsla for skyttarane.
೩ಸೌಲನಿದ್ದ ಕಡೆಯಲ್ಲಿ ಯುದ್ಧವು ಬಹು ಘೋರವಾಗಿತ್ತು. ಬಿಲ್ಲುಗಾರನು ಅವನಿಗೆ ಗುರಿಯಿಟ್ಟನು.
4 Og han baud våpnsveinen sin: «Drag sverdet ditt, og støyt det gjenom meg, so ikkje desse u-umskorne skal koma og drepa meg, og skamfara meg!» Men våpnsveinen vilde ikkje; han var altfor rædd. Då tok Saul sverdet sjølv og stupte seg på det.
೪ಆದುದರಿಂದ ಸೌಲನು ಬಹು ಭೀತನಾಗಿ ತನ್ನ ಆಯುಧವಾಹಕನಿಗೆ “ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ತಿವಿದು ಕೊಲ್ಲು. ಇಲ್ಲವಾದರೆ ಸುನ್ನತಿಯಿಲ್ಲದ ಈ ಜನರು ಬಂದು ನನ್ನನ್ನು ತಿವಿದು, ಅಪಕೀರ್ತಿಯನ್ನು ಉಂಟುಮಾಡಾರು” ಎಂದು ಹೇಳಲು ಅವನು ಹೆದರಿ, “ನಾನು ಕೊಲ್ಲಲಾರೆ” ಎಂದನು. ಆದುದರಿಂದ ಸೌಲನು ತಾನೇ ಕತ್ತಿಯನ್ನು ಹಿರಿದು ಅದರ ಮೇಲೆ ಬಿದ್ದನು.
5 Då våpnsveinen såg Saul var dåen, stupte han seg ogso på sitt sverd og fylgde honom i dauden.
೫ಸೌಲನು ಮರಣ ಹೊಂದಿರುವುದನ್ನು ಅವನ ಆಯುಧವಾಹಕನು ಕಂಡು ತಾನೂ ತನ್ನ ಕತ್ತಿಯ ಮೇಲೆ ಬಿದ್ದು ಅಲ್ಲಿಯೇ ಸತ್ತನು.
6 Den dagen fall dei alle i hop, Saul og dei tri sønerne hans og våpnsveinen, og sameleis alle mennerne hans.
೬ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ, ಅವನ ಆಯುಧವಾಹಕನು, ಎಲ್ಲಾ ಆಳುಗಳೂ ಅದೇ ದಿನದಲ್ಲಿ ಸತ್ತರು.
7 Og då Israels-mennerne på hi sida dalen og på hi sida Jordan gådde at Israels-mennerne hadde rømt, og at Saul og sønerne hans var falne, so rømde dei ut or byarne sine; og filistarane kom og busette seg der.
೭ಇಸ್ರಾಯೇಲರ ಭಟರು ಸೋತುಹೋದರು. ಸೌಲನೂ ಅವನ ಮಕ್ಕಳೂ ಸತ್ತರು ಎಂಬ ವರ್ತಮಾನವನ್ನು ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲರು ಕೇಳಿ ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಮಾಡಿದರು.
8 Dagen etter kom filistarane og plundra liki. Dei fann Saul og dei tri sønerne hans liggjande på Gilboafjellet.
೮ಮರುದಿನ ಬೆಳಿಗ್ಗೆ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳುವುದಕ್ಕೆ ಬಂದಾಗ, ಸೌಲನೂ ಅವನ ಮೂರು ಮಂದಿ ಮಕ್ಕಳೂ ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವುದನ್ನು ಕಂಡು
9 Dei hogg hovudet av honom, og rana våpni hans og sende rundt i Filistarlandet, og let forkynna fagnadbodet i templi åt avgudarne sine og millom folket.
೯ಸೌಲನ ತಲೆಯನ್ನು ಕಡಿದು ಅವನ ಆಯುಧಗಳನ್ನು ತೆಗೆದುಕೊಂಡನು. ಅವುಗಳನ್ನು ತಮ್ಮ ದೇಶದ ಎಲ್ಲಾ ಕಡೆಗೂ ಕಳುಹಿಸಿ, ತಮ್ಮ ಎಲ್ಲ ಜನರಿಗೂ ದೇವಸ್ಥಾನಗಳಿಗೂ ಜಯವಾರ್ತೆಯನ್ನು ಮುಟ್ಟಿಸಿದರು.
10 Dei lagde våpni hans i Astarte-templet; og liket hans hengde dei upp på bymuren i Bet-San.
೧೦ಅವನ ಆಯುಧಗಳನ್ನು ಅಷ್ಟೋರೆತ್ ದೇವತೆಯ ಗುಡಿಯಲ್ಲಿಟ್ಟರು. ಅವನ ಶವವನ್ನು ಬೇತ್ಷೆಯಾನಿನ ಕೋಟೆ ಗೋಡೆಗೆ ನೇತುಹಾಕಿದರು.
11 Då folket i Jabes i Gilead høyrde gjete det filistarane hadde gjort med Saul,
೧೧ಫಿಲಿಷ್ಟಿಯರು ಸೌಲನಿಗೆ ಏನೇನು ಮಾಡಿದರೆಂಬ ವರ್ತಮಾನ ಯಾಬೆಷ್ ಗಿಲ್ಯಾದಿನವರಿಗೆ ಮುಟ್ಟಿದಾಗ
12 tok dei i veg, alle våpnføre karar, gjekk heile natti, tok ned frå muren i Bet-San Sauls lik og liki av sønerne hans, for so til Jabes og brende liki der.
೧೨ಅವರಲ್ಲಿದ್ದ ಶೂರರೆಲ್ಲರೂ ಹೊರಟು, ರಾತ್ರಿಯೆಲ್ಲಾ ನಡೆದುಹೋಗಿ, ಸೌಲನ ಮತ್ತು ಅವನ ಮಕ್ಕಳ ಶವಗಳನ್ನು ಬೇತ್ಷೆಯಾನಿನ ಗೋಡೆಯಿಂದ ಇಳಿಸಿ, ಯಾಬೇಷಿಗೆ ತೆಗೆದುಕೊಂಡು ಬಂದು ಅಲ್ಲಿ ಅವುಗಳನ್ನು ಸುಟ್ಟುಬಿಟ್ಟರು.
13 So tok dei og grov beini deira ned under tamariska i Jabes og heldt fasta i sju dagar.
೧೩ಅವರ ಎಲುಬುಗಳನ್ನು ಯಾಬೇಷಿನಲ್ಲಿದ್ದ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿನ ಉಪವಾಸ ಮಾಡಿದರು.