< Esaias 7 >
1 I de dager da Akas, Jotams sønn og Ussias' sønnesønn, var konge i Juda, drog Syrias konge Resin og Pekah, Remaljas sønn, Israels konge, op mot Jerusalem for å stride imot det; men han kunde ikke komme til å stride imot det.
೧ಯೋಥಾಮನ ಮಗನೂ ಉಜ್ಜೀಯನ ಮೊಮ್ಮಗನೂ ಯೆಹೂದದ ಅರಸನಾದ ಆಹಾಜನ ಕಾಲದಲ್ಲಿ ಅರಾಮ್ಯರ ಅರಸನಾದ ರೆಚೀನ, ರೆಮಲ್ಯನ ಮಗನೂ ಇಸ್ರಾಯೇಲರ ಅರಸನಾದ ಪೆಕಹ ಎಂಬುವವರು ಯೆರೂಸಲೇಮಿನ ಮೇಲೆ ದಂಡೆತ್ತಿ ಬಂದರು. ಆದರೆ ಅದನ್ನು ಜಯಿಸುವುದಕ್ಕೆ ಸಾಧ್ಯವಾಗಲಿಲ್ಲ.
2 Og det blev meldt til Davids hus: Syrerne har slått sig ned i Efra'im. Da skalv hans hjerte og hans folks hjerte, likesom trærne i en skog skjelver for vinden.
೨ಅರಾಮ್ಯರು ಎಫ್ರಾಯೀಮ್ಯರೊಂದಿಗೆ ಹೊಂದಿಕೊಂಡಿದ್ದಾರೆಂಬ ಸುದ್ದಿಯು ದಾವೀದನ ಮನೆಗೆ ಮುಟ್ಟಿದಾಗ ಆಹಾಜನ ಮತ್ತು ಅವನ ಪ್ರಜೆಯ ಹೃದಯವು ಅರಣ್ಯದ ಗಾಳಿಯಿಂದ ವನವೃಕ್ಷಗಳು ಅಲ್ಲಾಡುವಂತೆ ನಡುಗಿದವು.
3 Men Herren sa til Esaias: Gå avsted, du og din sønn Sjear Jasjub, og møt Akas ved enden av vannledningen fra den øvre dam, ved allfarveien til Vaskervollen!
೩ಆಗ ಯೆಹೋವನು ಯೆಶಾಯನಿಗೆ ಹೀಗೆ ಹೇಳಿದನು, “ನೀನು ನಿನ್ನ ಮಗ ಶೆಯಾರ್ ಯಾಶೂಬನನ್ನು ಕರೆದುಕೊಂಡು ಹೋಗಿ, ಅಗಸರ ಹೊಲದ ಕಡೆ ಹೋಗುವ ರಾಜಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಕೊನೆಯಲ್ಲಿ ಆಹಾಜನನ್ನು ಎದುರುಗೊಂಡು ಅವನಿಗೆ ಈ ಪ್ರಕಾರ ಹೇಳಬೇಕು,
4 Og du skal si til ham: Ta dig i vare og vær rolig, frykt ikke og tap ikke motet for disse to stumper av rykende brander, for Resins og Syrias og Remaljas sønns brennende vrede!
೪‘ಜಾಗರೂಕನಾಗಿ ಸುಮ್ಮನಿರು, ಭಯಪಡಬೇಡ. ರೆಚೀನ, ಅರಾಮ್ಯರ, ಪೆಕಹ ರೆಮಲ್ಯನ ಮಗನಾದ ಪೆಕಹನ ಕೋಪವು ಎಷ್ಟು ಹೆಚ್ಚಿದರೂ ಹೊಗೆಯಾಡುವ ಈ ಎರಡು ಮೋಟುಕೊಳ್ಳಿಗಳಿಗೆ ನಿನ್ನ ಹೃದಯವು ಕುಂದದಿರಲಿ.’”
5 Fordi Syria, Efra'im og Remaljas sønn har lagt op onde råd mot dig og sagt:
೫ಅರಾಮ್ಯರೂ, ಎಫ್ರಾಯೀಮ್ಯರೂ ಮತ್ತು ರೆಮಲ್ಯನ ಮಗನೂ ನಿನ್ನ ವಿಷಯವಾಗಿ ದುರಾಲೋಚನೆ ಮಾಡಿ,
6 Vi vil dra op imot Juda og forferde det og bryte inn og ta det i eie, og vi vil sette Tabe'els sønn til konge over det -
೬“ನಾವು ಯೆಹೂದದ ಮೇಲೆ ದಂಡೆತ್ತಿ ಹೆದರಿಸಿ, ಒಳಗೆ ನುಗ್ಗಿಕೊಂಡು ಹೋಗಿ, ಅದರಲ್ಲಿ ಟಬೇಲನ ಮಗನನ್ನು ಅರಸನನ್ನಾಗಿ ನೇಮಿಸಿಕೊಳ್ಳೋಣ” ಎಂದುಕೊಂಡಿದ್ದಾರೆ.
7 derfor sier Herren, Israels Gud, således: Det skal ikke lykkes og ikke skje!
೭ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಇದು ನೆರವೇರುವುದಿಲ್ಲ; ಇದು ಆಗುವುದೇ ಇಲ್ಲ.
8 For Syrias hode er Damaskus, og Damaskus' hode er Resin, og om fem og seksti år skal Efra'im bli knust, så det ikke mere er et folk.
೮ಏಕೆಂದರೆ ಅರಾಮಿಗೆ ಶಿರಸ್ಸು ದಮಸ್ಕ, ದಮಸ್ಕಕ್ಕೆ ಶಿರಸ್ಸು ರೆಚೀನ. ಅರುವತ್ತೈದು ವರ್ಷಗಳೊಳಗೆ ಎಫ್ರಾಯೀಮ್ಯರು ಭಂಗಪಟ್ಟು ಜನಾಂಗವೆನ್ನಿಸಿಕೊಳ್ಳರು.
9 Og Efra'ims hode er Samaria, og Samarias hode er Remaljas sønn; vil I ikke tro, skal I ikke holde stand.
೯ಎಫ್ರಾಯೀಮಿಗೆ ಶಿರಸ್ಸು ಸಮಾರ್ಯ, ಸಮಾರ್ಯಕ್ಕೆ ಶಿರಸ್ಸು ರೆಮಲ್ಯನ ಮಗನು ತಾನೇ. ನೀವು ನಂಬಿಕೆಯಲ್ಲಿ ಸ್ಥಿರವಾಗಿ ನಿಲ್ಲದೆ ಹೋದರೆ ನೀವು ನಿಜವಾಗಿಯೂ ನೆಲೆಗೊಳ್ಳುವುದಿಲ್ಲ” ಎಂಬುದೇ.
10 Og Herren blev ved å tale til Akas og sa:
೧೦ಮತ್ತೆ ಯೆಹೋವನು ಆಹಾಜನಿಗೆ,
11 Krev et tegn av Herren din Gud! Krev det i det dype eller i det høie der oppe! (Sheol )
೧೧“ನಿನ್ನ ದೇವರಾದ ಯೆಹೋವನಿಂದ ಒಂದು ಗುರುತನ್ನು ಕೇಳು. ಅದು ಪಾತಾಳದಷ್ಟು ಆಳದಲ್ಲಿದ್ದರೂ, ಮೇಲೆ ಎತ್ತರದಲ್ಲಿದ್ದರೂ ಅದನ್ನು ಕೇಳಿಕೋ” ಎಂದು ಹೇಳಿದನು. (Sheol )
12 Men Akas svarte: Jeg vil ikke kreve noget og ikke friste Herren.
೧೨ಆಗ ಆಹಾಜನು, “ನಾನು ಕೇಳಿಕೊಳ್ಳುವುದಿಲ್ಲ, ಇಲ್ಲವೆ ಯೆಹೋವನನ್ನು ಪರೀಕ್ಷಿಸುವುದಿಲ್ಲ” ಎಂದನು.
13 Da sa han: Hør da, I av Davids hus! Er det eder for lite å trette mennesker siden I også tretter min Gud?
೧೩ಅದಕ್ಕೆ ಯೆಶಾಯನು ಹೀಗೆ ಹೇಳಿದನು, “ದಾವೀದನ ಮನೆತನದವರೇ ಕೇಳಿರಿ, ಮನುಷ್ಯರನ್ನು ಬೇಸರಗೊಳಿಸುವುದು ಅಷ್ಟು ದೊಡ್ಡದಲ್ಲವೆಂದೆಣಿಸಿ ನನ್ನ ದೇವರನ್ನು ಸಹ ಬೇಸರಗೊಳಿಸುವಿರಾ?
14 Derfor skal Herren selv gi eder et tegn: Se, en jomfru blir fruktsommelig og føder en sønn, og hun gir ham navnet Immanuel.
೧೪ಆದಕಾರಣ ಕರ್ತನು ತಾನೇ ನಿಮಗೆ ಒಂದು ಗುರುತನ್ನು ಕೊಡುವನು. ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹಡೆದು ಅವನಿಗೆ ಇಮ್ಮಾನುವೇಲ್ ಎಂದು ಹೆಸರಿಡುವರು.
15 Fløte og honning skal han ete ved den tid han skjønner å forkaste det onde og velge det gode;
೧೫ಆತನು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವಷ್ಟು ತಿಳಿವಳಿಕೆಯು ಬರುವ ತನಕ ಮೊಸರನ್ನು ಮತ್ತು ಜೇನುತುಪ್ಪವನ್ನು ತಿನ್ನುವನು.
16 for før gutten skjønner å forkaste det onde og velge det gode, skal det land hvis to konger du gruer for, ligge øde.
೧೬“ಏಕೆಂದರೆ ಆ ಮಗುವು ಕೆಟ್ಟದ್ದನ್ನು ನಿರಾಕರಿಸಿ ಒಳ್ಳೆಯದನ್ನು ಆರಿಸಿಕೊಳ್ಳುವುದಕ್ಕಿಂತ ಮೊದಲೇ ನೀನು ಭಯಪಡುವ ದೇಶವನ್ನು ಅದರ ಇಬ್ಬರು ಅರಸರು ತ್ಯಜಿಸಿಬಿಡುವರು.
17 Herren skal la dager komme over dig og over ditt folk og over din fars hus, dager som det ikke har vært make til like fra den dag Efra'im skilte sig fra Juda - Assurs konge.
೧೭ಯೆಹೋವನು ನಿನ್ನ ಮೇಲೆಯೂ, ನಿನ್ನ ಪ್ರಜೆಯ ಮೇಲೆಯೂ, ನಿನ್ನ ತಂದೆಯ ಮನೆಯ ಮೇಲೆಯೂ ಯೆಹೂದದಿಂದ ಎಫ್ರಾಯೀಮು ಅಗಲಿದಂದಿನಿಂದ ಅಂದರೆ ಅಶ್ಶೂರದ ಅರಸನ ಕಾಲದಿಂದಲೂ ಬಾರದೆ ಇದ್ದ ದುರ್ದಿನಗಳನ್ನು ಬರಮಾಡುವನು.”
18 På den tid skal Herren pipe til fluen lengst borte ved Egyptens strømmer og til bien i Assurs land;
೧೮ಆ ಕಾಲದಲ್ಲಿ ಐಗುಪ್ತದ ನದಿಗಳ ಕಟ್ಟಕಡೆಯಿಂದ ಬರುವ ನೊಣಕ್ಕೂ, ಅಶ್ಶೂರ ದೇಶದ ದುಂಬಿಗಳಿಗೂ ಯೆಹೋವನು ಸಿಳ್ಳುಹಾಕುವನು.
19 og de skal komme og slå sig ned alle sammen i de øde daler og i fjellkløftene og i alle tornebuskene og på alle beitemarkene.
೧೯ಅವು ಬಂದು ಕಡಿದಾದ ಕಣಿವೆಗಳಲ್ಲಿಯೂ, ಬಂಡೆಗಳ ಸಂದುಗೊಂದುಗಳಲ್ಲಿಯೂ, ಎಲ್ಲಾ ಮುಳ್ಳು ಪೊದೆಗಳಲ್ಲಿಯೂ, ಗೋಮಾಳಗಳಲ್ಲಿಯೂ ಮುತ್ತಿಕೊಳ್ಳುವವು.
20 På den tid skal Herren med en rakekniv som er leid på hin side elven, med Assurs konge, rake av alt håret både på hodet og nedentil; endog skjegget skal den ta bort.
೨೦ಆಗ ಕರ್ತನು ಯೂಫ್ರೆಟಿಸ್ ನದಿಯ ಆಚೆಗಿರುವ ಅಶ್ಶೂರದ ಅರಸನೆಂಬ ಬಾಡಿಗೆಯ ಕ್ಷೌರದ ಕತ್ತಿಯಿಂದ ಯೆಹೂದದ ತಲೆಯನ್ನೂ, ಕಾಲಿನ ಕೂದಲನ್ನೂ ಬೋಳಿಸುವನು ಹಾಗೂ ಗಡ್ಡವನ್ನೂ ಸಹ ತೆಗೆದುಬಿಡುವನು.
21 På den tid skal en mann holde en kvige og to får;
೨೧ಆ ಕಾಲದಲ್ಲಿ ಮನುಷ್ಯನು ಒಂದು ಹಸುವಿನ ಕರುವನ್ನು ಮತ್ತು ಎರಡು ಕುರಿಗಳನ್ನು ಸಾಕುವನು.
22 men på grunn av den mengde melk de gir, skal han ete fløte; for fløte og honning skal hver den ete som er blitt tilbake i landet.
೨೨ಅವು ಸಮೃದ್ಧಿಯಾಗಿ ಹೆಚ್ಚು ಹಾಲನ್ನು ಕೊಡುವುದರಿಂದ ಅವನು ಮೊಸರನ್ನು ತಿನ್ನುವನು. ಏಕೆಂದರೆ ಆ ದೇಶದಲ್ಲಿ ಉಳಿದ ಪ್ರತಿಯೊಬ್ಬನೂ ಮೊಸರನ್ನು ಮತ್ತು ಜೇನುತುಪ್ಪವನ್ನು ತಿಂದು ಜೀವಿಸುವನು.
23 Og det skal bli så på den tid at hvor det nu er tusen vintrær, verd tusen sekel sølv, der skal det overalt bare vokse torn og tistel.
೨೩ಆಗ ಸಾವಿರ ರೂಪಾಯಿ ಬೆಲೆಯ ಸಹಸ್ರ ದ್ರಾಕ್ಷಿಯ ಬಳ್ಳಿಗಳು ಬೆಳೆಯುವ ಪ್ರತಿಯೊಂದು ಪ್ರದೇಶದಲ್ಲಿಯೂ, ಮುಳ್ಳು ಮತ್ತು ದತ್ತೂರಿಗಳಿಂದ ಮುಚ್ಚಿಕೊಂಡು ಹೋಗುವುದು.
24 Med pil og bue skal folk gå dit; for hele landet skal bli til torn og tistel.
೨೪ದೇಶವೆಲ್ಲಾ ಮುಳ್ಳು ಮತ್ತು ದತ್ತೂರಿಗಳ ಪೊದೆಯಾಗಿರುವುದಿಂದ ಜನರು ಬಿಲ್ಲುಬಾಣಗಳೊಡನೆ ಸಂಚರಿಸುವರು.
25 Og i alle de lier hvor de nu bruker hakken, skal du ikke komme av frykt for torn og tistel; de skal være til å slippe okser på og til å tredes ned av får.
೨೫ಗುದ್ದಲಿಯಿಂದ ಅಗೆಯುತ್ತಿದ್ದ ಯಾವ ಗುಡ್ಡಕ್ಕೂ ನೀನು ಮುಳ್ಳು ದತ್ತೂರಿಗಳಿಗೆ ಹೆದರಿ ಅಲ್ಲಿಗೆ ಬರಲಾರದೇ ಇರುವಿ. ಆದರೆ ಅದು ದನಗಳನ್ನು ಬಿಡುವುದಕ್ಕೂ, ಕುರಿಗಳು ತುಳಿದಾಡುವುದಕ್ಕೂ ಗುರಿಯಾಗುವುದು.