< Matei 10 >

1 Yesu avakemili pamonga vawuliwa vaki kumi na vavili, akavapela uhotola wa kuvinga mizuka na kulamisa utamu ndalindali.
ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಎಲ್ಲಾ ತರವಾದ ವ್ಯಾಧಿಯನ್ನೂ ರೋಗವನ್ನೂ ಸ್ವಸ್ಥಮಾಡುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
2 Mahina ga vamitumi vaki kumi na vavili vala ndi aga: Kutumbula Simoni mweikemiwa Petili na Andelea mlongo waki na Yakobo mwana wa Zebedayo, na Yohani mlongo waki,
ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿದ್ದವು: ಮೊದಲನೆಯವನು, ಪೇತ್ರ ಎಂದು ಎನಿಸಿಕೊಂಡ ಸೀಮೋನ, ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನ;
3 vangi ndi Filipi na Batolomei na Tomasi na Matei mtola kodi na Yakobo mwana wa Alufayo na Tadei,
ಫಿಲಿಪ್ಪ, ಬಾರ್ತೊಲೊಮಾಯ; ತೋಮ, ಸುಂಕದವನಾದ ಮತ್ತಾಯ; ಅಲ್ಫಾಯನ ಮಗ ಯಾಕೋಬ, ತದ್ದಾಯ;
4 Simoni mweavi mundu wa kukengelela mulima waki na Yuda Isikalioti, mwenuyu ndi mweamng'anamukili Yesu.
ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.
5 Yesu avatumili kumi na vavili avo na kuvapela uhotola uwu, “Mkoto kuhamba kwa vandu vangali Vayawudi, mewa mkoto kuyingila kumiji ya Vasamaliya.
ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟಿದ್ದೇನೆಂದರೆ: “ಯೆಹೂದ್ಯರಲ್ಲದವರ ಬಳಿಗೆ ಹೋಗಬೇಡಿರಿ, ಸಮಾರ್ಯರ ಊರನ್ನೂ ಪ್ರವೇಶಿಸಬೇಡಿರಿ.
6 Nambu mhamba kwa vandu va Isilaeli vevayagili ngati limbelele.
ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.
7 Pemwihamba mvakokosela aga, ‘Unkosi wa kunani kwa Chapanga uvi papipi!’
ನೀವು ಹೋಗುತ್ತಾ, ‘ಪರಲೋಕ ರಾಜ್ಯವು ಸಮೀಪವಾಯಿತು,’ ಎಂದು ಸಾರಿ ಹೇಳಿರಿ.
8 Mvalamisa vatamu, muvayusa vandu vevafwili, muvanyambisa vevavi na mabudi, mvinga mizuka. Mupatili waka muwusa waka.
ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.
9 Mkoto kugega zahabu amala feza amala shaba mumahaku ginu.
“ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ.
10 Mewawa mkoto kugega lihaku la lugendu amala magwanda gavili, amala champali amala mkongojo, mhengalihengu iganikiwa kupewa chakulya.”
ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು.
11 “Pemwiyingila pamuji wowoha, amala muchijiji chochoha mulonda mundu mweigana kuvapokela kunyumba yaki, ndi mumgendela na mtama kwa mwenuyu mbaka pemwiwuka pandu apo.
ನೀವು ಯಾವುದಾದರೂ ಒಂದು ಪಟ್ಟಣವನ್ನು, ಇಲ್ಲವೆ ಹಳ್ಳಿಯನ್ನು ಪ್ರವೇಶಿಸುವಾಗ, ಅದರಲ್ಲಿ ಯೋಗ್ಯ ವ್ಯಕ್ತಿ ಯಾರೆಂದು ವಿಚಾರಿಸಿರಿ, ಅಲ್ಲಿಂದ ಹೊರಡುವವರೆಗೆ ಅಲ್ಲಿಯೇ ತಂಗಿರಿ.
12 Pamuyingila panyumba muvajambusa vakolonjinji.
ನೀವು ಒಂದು ಮನೆಯೊಳಗೆ ಪ್ರವೇಶಿಸಿದಾಗ, ಆ ಮನೆಯವರನ್ನು ಹರಸಿರಿ.
13 Ngati vandu va nyumba yeniyo vavapokili nyenye, jambusa yeniyo ya uteke yati yitama bahapo. Nambu ngati vavapokili lepi, jambusa yinu yati yikuvawuyila mwavene.
ಆ ಮನೆಯು ಅಯೋಗ್ಯವಾಗಿದ್ದರೆ, ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.
14 Ngati vakolo nyumba, vabeli kuvapokela amala kuvayuwanila malovi ginu, hinu pemwiwuka munyumba yeniyo amala muji wenuwo muvakung'undila lububu lwa mumagendelu ginu kulangisa kuvya vene vavabeli nyenye.
ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ, ನೀವು ಆ ಮನೆಯನ್ನು ಇಲ್ಲವೆ ಆ ಪಟ್ಟಣವನ್ನು ಬಿಟ್ಟು ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.
15 Nikuvajovela chakaka, pa ligono la uhamula yati yivya mbanga kwa miji ya Sodoma na Gomola kuliku muji wenuwo.”
ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯು ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
16 “Hinu nene nikuvatuma nyenye ngati limbelele pagati ya libwa la mudahi. Mvya na luhala ngati liyoka na muvya ngolongondi ngati ngunda.
“ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.
17 Mujiyangalila na vandu, muni vakuvatakila nyenye mumabanji ga mihalu na valavatova mchapilu munyumba zavi za kukonganekela Vayawudi.
ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು.
18 Yati vakuvapeleka palongolo ya vachilongosi na vankosi ndava ya nene, penapo muhotola kuvajovela vandu malovi gangu na vandu vangali Vayawudi.
ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರ ಮುಂದೆ ಒಯ್ಯುವರು. ಹೀಗೆ ಅವರಿಗೂ ಯೆಹೂದ್ಯರಲ್ಲದವರಿಗೂ ನೀವು ಸಾಕ್ಷಿಗಳಾಗುವಿರಿ.
19 Hinu vakavatakila nyenye mumabanji ga mihalu, mkoto kung'ahika kuholelela tijova kyani, ndava muni yati mwipewa gakujova lukumbi peluhika.
ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು,
20 Muni nyenye lepi mwemjova, nambu Mpungu wa Dadi winu yati wijova mugati yinu.”
ಏಕೆಂದರೆ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮೊಳಗಿಂದ ಮಾತನಾಡುವರು.
21 “Mlongo alamgotola mlongo waki akomiwa na dadi alamgotola mwana waki, mewawa vana yati vakuvang'anamukila vadadi na vanyina vavi na kuvakoma.
“ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
22 Vandu voha vakuvayomela ndava nyenye mukunisadika nene. Nambu mweisindimala mbaka pamwishu yati isanguliwa.
ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
23 Vandu vakavavinga kumuji umonga mjumbila pamuji wungi. Nikuvajovela chakaka, mwakona kumala mumiji yoha ya Isilaeli kwakona Mwana wa Mundu kubwela.”
ಒಂದು ಸ್ಥಳದಲ್ಲಿ ನಿಮಗೆ ಹಿಂಸೆಯಾದರೆ ಇನ್ನೊಂದು ಸ್ಥಳಕ್ಕೆ ಓಡಿಹೋಗಿರಿ. ಮನುಷ್ಯಪುತ್ರನು ಬರುವಷ್ಟರಲ್ಲಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
24 “Muwuliwa akumpita lepi muwula waki, mewawa na mtumisi akumpita lepi mkulu waki.
“ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ತನ್ನ ಯಜಮಾನನಿಗಿಂತ ಶ್ರೇಷ್ಠನಲ್ಲ.
25 Yikola muwuliwa kuvya ngati muwula waki, mewawa na mvanda kuvya ngati mkulu waki. Ngati vamkemili mkulu mkolo nyumba Belizebuli, wu, yati vakuvakemela lepi vandu vangi va lukolo lwenulo mahina gahakau neju?”
ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!
26 “Hinu mkoto kuvayogopa vandu muni chindu chochoha chechigubikwi yati chigubukuliwa na chindu chochoha chechifiyiki yati chifiyuliwa.
“ಆದ್ದರಿಂದ ಅವರಿಗೆ ಹೆದರಬೇಡಿರಿ, ಪ್ರಕಟಗೊಳ್ಳದಂತೆ ಯಾವುದೂ ಮುಚ್ಚಿಡಲಾಗುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ.
27 Genikuvajovela nyenye muchitita, mulijovai mululangasa na lijambu lemwayuwini pachinunu, mulikokosa pavandu.
ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ. ನೀವು ಕಿವಿಯಲ್ಲಿ ಕೇಳುವುದನ್ನು ಮಾಳಿಗೆಯ ಮೇಲೆ ಸಾರಿರಿ.
28 Mkoto kuvayogopa vala vevikoma higa, nambu nakuhotola kukoma mpungu. Mbanga neju kumuyogopa yula mweihotola kukoma higa pamonga na mpungu mumotu wa magono goha wangajimika. (Geenna g1067)
ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ. (Geenna g1067)
29 Mayeluyelu gavili gegiguliswa kwa lishonga limonga lidebe. Nambu hati limonga lihotola lepi kugwa pandima changagana Dadi winu.
ಒಂದು ರೂಪಾಯಿಗೆ ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ.
30 Nambu kwa upandi winu, mwene amanyili mvalangu wa mayunju goha ga mitu yinu.
ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
31 Hinu mkoto kuyogopa, muni nyenye mwitopeswa neju kuliku mayeluyelu gamahele.”
ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
32 “Kila mundu mweakuniyidakila nene palongolo ya vandu, na nene yati nikumyidakila palongolo ya Dadi wangu mweavi kunani.
“ಜನರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.
33 Nambu mundu yeyoha mweakunibela nene palongolo ya vandu, na nene yati nikumbelela palongolo ya Dadi wangu mweavi kunani.”
ಯಾವನಾದರೂ ಜನರ ಮುಂದೆ ನನ್ನನ್ನು ನಿರಾಕರಿಸಿದರೆ, ನಾನು ಸಹ ಅವನನ್ನು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಿರಾಕರಿಸುವೆನು.
34 “Mkoto kuhololela ngati nibweli kuleta uteke pamulima. Nibweli lepi kuleta uteke nambu ngondo.
“ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು.
35 Muni nivaletili mpechenganu pagati yinu, mwana na dadi waki, msikana na nyina waki na mkamwana na nayala waki.
ಹೇಗೆಂದರೆ, “‘ಮಗನಿಗೂ ಅವನ ತಂದೆಗೂ, ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವುದಕ್ಕೆ ನಾನು ಬಂದೆನು.
36 Na vamakoko va mundu, ndi vala va panyumba yaki.”
ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’
37 “Mwene mweakumgana neju dadi amala nyina waki kuliku nene, iganikiwa lepi kuvya muwuliwa wangu. Mewawa mundu yeyoha mweakumgana neju msongolo amala msikana waki kuliku nene, iganikiwa lepi kuvya muwuliwa wangu.
“ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
38 Mundu angagega msalaba waki mwene na kunilanda nene, iganikiwa lepi kuvya wangu.
ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
39 Mundu mweikamulila wumi waki yati akuuyagisa, nambu mundu mweakuuyagisa wumi waki ndava ya kunisadika nene yati akugapata.”
ತನ್ನ ಪ್ರಾಣವನ್ನು ಕಂಡುಕೊಳ್ಳುವವನು ಅದನ್ನು ಕಳೆದುಕೊಳ್ಳುವನು. ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
40 “Mundu mweavapokela nyenye, akunipokela nene, mundu mweakunipokela nene, akumpokela yula mweanitumili.
“ನಿಮ್ಮನ್ನು ಸ್ವಾಗತಿಸುವವರು ನನ್ನನ್ನು ಸ್ವಾಗತಿಸುತ್ತಾರೆ. ನನ್ನನ್ನು ಸ್ವಾಗತಿಸಿದವರು, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವಾಗತಿಸುತ್ತಾರೆ.
41 Mundu mweakumpokela mlota wa Chapanga, ndava mlota wa Chapanga yati ipokela njombi ya ulota wa Chapanga. Mewawa Mundu mweakumpokela mundu mbwina palongolo ya Chapanga, ndava mundu mbwina yati ipokela njombi ya mundu mbwina.
ಪ್ರವಾದಿಯೆಂದು ಪ್ರವಾದಿಯನ್ನು ಸ್ವಾಗತಿಸುವವರು ಪ್ರವಾದಿಯ ಪ್ರತಿಫಲವನ್ನು ಪಡೆಯುವರು; ನೀತಿವಂತನೆಂದು ನೀತಿವಂತನನ್ನು ಸ್ವಾಗತಿಸುವವರು ನೀತಿವಂತನ ಪ್ರತಿಫಲವನ್ನು ಪಡೆಯುವರು.
42 Nikuvajovela chakaka, mundu yeyoha mweakumpela mmonga pagati ya vandu ava vangamanyikana chikombi cha manji gasisimu ndava mulanda wangu, chakaka ikosa lepi njombi yaki.”
ಯಾವನಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಕೇವಲ ಒಂದು ಲೋಟ ತಣ್ಣೀರನ್ನು ಕುಡಿಯುವುದಕ್ಕೆ ಕೊಡುವವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ಸತ್ಯವಾಗಿ ನಾನು ನಿಮಗೆ ಹೇಳುತ್ತೇನೆ.”

< Matei 10 >