< रोमी 3 >
1 त्यसो भए यहूदीलाई के फाइदा छ त? अनि खतनाको के फाइदा छ त?
೧ಹಾಗಾದರೆ ಯೆಹೂದ್ಯರ ವೈಶಿಷ್ಟ್ಯವೇನು? ಸುನ್ನತಿ ಮಾಡಿಸಿಕೊಂಡದರಿಂದ ಲಾಭವೇನು?
2 यो हरतरहले महान् छ । सर्वप्रथम त परमेश्वरको प्रकाश यहूदीलाई सुम्पिएको थियो ।
೨ಎಲ್ಲಾ ವಿಷಯಗಳನ್ನು ಕುರಿತು ಹೇಳಲು ಬಹಳ ಉಂಟು. ಮೊದಲನೇಯದಾಗಿ ದೈವೋಕ್ತಿಗಳು ಅವರ ವಶಕ್ಕೆ ಸಮರ್ಪಿಸಿ ಒಪ್ಪಿಸಲ್ಪಟ್ಟಿವೆ.
3 किनकि केही यहूदीहरू विनाविश्वासका भए भन्दैमा के भयो त? के तिनीहरूको अविश्वासले परमेश्वरको विश्वासयोग्यतालाई अमान्य तुल्याउँछ र?
೩ಅವರಲ್ಲಿ ಕೆಲವರಿಗೆ ನಂಬಿಕೆ ಇರಲಿಲ್ಲವಾದರೂ? ಅವರ ಅಪನಂಬಿಕೆಯಿಂದ ದೇವರು ನಂಬಿಕೆಗೆ ತಪ್ಪುವವನಾದಾನೋ? ಎಂದಿಗೂ ಇಲ್ಲ.
4 कहिल्यै यस्तो नहोस् । यसको सट्टा, सबै मानिस झुटा ठहरिए तापनि परमेश्वर नै सत्य भेट्टाइनुभएको होस् । यस्तो लेखिएको छ, “तपाईंलाई आफ्ना वचनहरूमा धर्मी देखाइयोस्, अनि न्यायको दिनमा आउनुहुँदा तपाईं विजय हुनसक्नुभएको होस् ।”
೪ಬದಲಾಗಿ, “ನಿನ್ನ ಮಾತಿನಲ್ಲೇ ನೀನು ನೀತಿವಂತನೆಂದು ವ್ಯಕ್ತವಾಗಬೇಕು, ವ್ಯಾಜ್ಯವೆದ್ದಾಗ ನೀನು ವಿಜಯಶಾಲಿ ಆಗಬೇಕು.” ಎಂದು ಗ್ರಂಥಗಳಲ್ಲಿ ಬರೆದಿರುವ ಹಾಗೆಯೇ, ಎಲ್ಲಾ ಮಾನವರು ಸುಳ್ಳುಗಾರರಾದರೂ, ದೇವರು ಮಾತ್ರ ಸತ್ಯವಂತನೇ.
5 तर यदि हाम्रो अधार्मिकताले परमेश्वरको धार्मिकतालाई देखाउँछ भने हामी के भन्न सक्छौ र? परमेश्वरले उहाँको क्रोध प्रकट गर्नुहुँदा उहाँ अधर्मी ठहरिनुहुन्न, के अधर्मी ठहरिनुहुन्छ त? म मानवीय तर्कअनुसार बोलिरहेको छु ।
೫ಆದರೆ ನಮ್ಮ ಅನ್ಯಾಯದ ನಡವಳಿಕೆಯಿಂದ ದೇವರು ನೀತಿವಂತನೆಂದು ಪ್ರಸಿದ್ಧಿಗೆ ಬರುವುದಾದರೆ ನಾವು ಏನು ಹೇಳೋಣ? ಉಗ್ರದಂಡನೆಯನ್ನು ಮಾಡುವ ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. ಈ ಮಾತನ್ನು ಮನುಷ್ಯನ ರೀತಿಯಲ್ಲಿ ಆಡುತ್ತಿದ್ದೇನೆ.
6 कहिल्यै यस्तो नहोस्! किनकि त्यसो भए त परमेश्वरले कसरी संसारको न्याय गर्नुहुन्छ?
೬ದೇವರು ಅನ್ಯಾಯಗಾರನಾಗಿದ್ದರೆ ಲೋಕಕ್ಕೆ ನ್ಯಾಯ ತೀರ್ಪಾಗುವುದಾದರೂ ಹೇಗೆ?
7 तर यदि मेरो झुटद्वारा परमेश्वरको सत्यताले उहाँको निम्ति प्रशस्त प्रशंसा प्रदान गर्छ भने मलाई अझ पनि किन पापीको रूपमा न्याय गरिन्छ त?
೭ನನ್ನ ಸುಳ್ಳಿನಿಂದ ದೇವರ ಸತ್ಯವು ಪ್ರಸಿದ್ಧಿಗೆ ಬಂದು ಆತನ ಮಹಿಮೆ ಹೆಚ್ಚಾಗುವುದಾದರೆ ಇನ್ನು ನನ್ನನ್ನು ಪಾಪಿಯೆಂದು ಪರಿಗಣಿಸುವುದು ಯಾಕೆ?
8 किन नभनौँ, जसरी हामीलाई झुटो रूपमा आरोप लगाइन्छ, र केहीले पुष्टि गर्छन्, कि हामी भन्छौँ, “दुष्ट काम गरौँ, ताकि असल आओस् ।” तिनीहरूमाथिको न्याय उचित छ ।
೮“ಒಳ್ಳೆಯದಾಗುವಂತೆ, ಕೆಟ್ಟದ್ದನ್ನೇ ಏಕೆ ಮಾಡಬಾರದು?” ಈ ರೀತಿ ಸ್ವತಃ ನಾನೇ ಬೋಧಿಸುತ್ತಿರುವುದಾಗಿ ಕೆಲವರು ನನ್ನನ್ನು ದೂಷಿಸಿ ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಅಂಥವರಿಗೆ ತಕ್ಕ ಶಿಕ್ಷೆಯಾಗುವುದು ನ್ಯಾಯಸಮ್ಮತವಾದುದು.
9 त्यसो भए के त? के हामी आफैँले आफ्नो सफाइ दिँदै छौँ? त्यसो नहोस्! किनकि यहूदीहरू र ग्रिकहरू सबै पापको अधीनमा थिए भनी हामीले पहिले नै दोष लगाइसकेका छौँ ।
೯ಹಾಗಾದರೆ ಏನು ಹೇಳಬೇಕು? ನಾವು ಅನ್ಯರಿಗಿಂತ ಶ್ರೇಷ್ಠರೋ? ಎಷ್ಟು ಮಾತ್ರಕ್ಕೂ ಇಲ್ಲ. ಯೆಹೂದ್ಯರೇ ಆಗಲಿ ಗ್ರೀಕರೇ ಆಗಲಿ ಎಲ್ಲರೂ ಪಾಪಕ್ಕೆ ಒಳಗಾಗಿ ಅಪರಾಧಿಗಳಾಗಿದ್ದಾರೆಂದು ಮೊದಲೇ ತೋರಿಸಿಕೊಟ್ಟಿದ್ದೇವಲ್ಲಾ.
10 यस्तो लेखिएको छ, “धर्मी कोही छैन, एक जना पनि छैन ।
೧೦ಧರ್ಮಶಾಸ್ತ್ರದಲ್ಲಿ ಬರೆದಿರುವಂತೆ, “ನೀತಿವಂತನು ಇಲ್ಲ, ಒಬ್ಬನಾದರೂ ಇಲ್ಲ;
11 बुझ्ने कोही पनि छैन । परमेश्वरलाई खोज्ने कोही पनि छैन ।
೧೧ತಿಳಿವಳಿಕೆಯುಳ್ಳವನು ಇಲ್ಲ, ದೇವರನ್ನು ಹುಡುಕುವವನು ಇಲ್ಲ.
12 तिनीहरू सबै तर्केर गएका छन् । तिनीहरू सबै जना एकैसाथ अनुपयोगी भएका छन् । असल गर्ने कोही पनि छैन, अहँ, एक जना पनि छैन ।
೧೨ಎಲ್ಲರೂ ದಾರಿತಪ್ಪಿ ನಡೆಯುತ್ತಾ, ಕೆಟ್ಟುಹೋಗಿದ್ದಾರೆ. ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ.
13 तिनीहरूको घाँटी खुल्ला चिहान हो । तिनीहरूका जिब्राले छल गरेका छन् । तिनीहरूका ओठहरूमा सर्पको विष छ ।
೧೩ಅವರ ಗಂಟಲು ತೆರೆದಿರುವ ಸಮಾಧಿಯಾಗಿದೆ. ಅವರು ನಾಲಿಗೆಯಿಂದ ವಂಚನೆಯ ಮಾತುಗಳನ್ನಾಡುತ್ತಾರೆ. ಅವರ ತುಟಿಯ ಹಿಂದೆ ಹಾವಿನ ವಿಷವಿದೆ.
14 तिनीहरूका मुख श्राप र तिक्तताले भरिएका छन् ।
೧೪ಅವರ ಬಾಯಿ ಶಾಪದಿಂದಲೂ ಕ್ರೋಧದ ಮಾತುಗಳಿಂದಲೂ, ತುಂಬಿದೆ.
15 तिनीहरूका खुट्टा रगत बगाउनमा द्रूत छन् ।
೧೫ಅವರ ಕಾಲುಗಳು ರಕ್ತವನ್ನು ಸುರಿಸಲು ಆತುರಪಡುತ್ತವೆ.
16 विनाश र कष्ट तिनीहरूका मार्गहरूमा छन् ।
೧೬ಅವರು ಹೋದ ದಾರಿಗಳಲ್ಲಿ ನಾಶಸಂಕಟಗಳು ಪೀಡೆಗಳು ಉಂಟಾಗುತ್ತವೆ.
17 यी मानिसहरूले शान्तिको मार्ग जानेका छैनन् ।
೧೭ಸಮಾಧಾನದ ಮಾರ್ಗವನ್ನೇ ಅರಿಯರು.
18 तिनीहरूका आँखाको सामुन्ने परमेश्वरको डर छैन ।
೧೮ಅವರ ದೃಷ್ಟಿಯಲ್ಲಿ ದೇವರ ಭಯವೇ ಇಲ್ಲ” ಎಂದು ಹೀಗೆ ಬರೆದಿದೆಯಲ್ಲಾ.
19 अब हामी जान्दछौँ, कि व्यवस्थाले जे भन्दछ त्यो व्यवस्थाको अधीनमा बस्नेहरू कै लागि भन्छ । यो हरेक मुख बन्द होस् भन्नाका लागि हो, ताकि सारा संसार परमेश्वरप्रति जवाफदेही हुन सकून् ।
೧೯ಧರ್ಮಶಾಸ್ತ್ರದ ನುಡಿಗಳೆಲ್ಲವು ಆ ಶಾಸ್ತ್ರಕ್ಕೆ ಒಳಗಾದವರಿಗೆ ಹೇಳಿವೆಯೆಂದು ಬಲ್ಲೆವಷ್ಟೆ. ಹೀಗೆ ಎಲ್ಲರ ಬಾಯಿ ಕಟ್ಟಿಹೋಗುವುದು. ಲೋಕವೆಲ್ಲಾ ದೇವರ ಮುಂದೆ ಅಪರಾಧಿಯಾಗಿ ನಿಲ್ಲುವುದು.
20 उहाँको दृष्टिमा व्यवस्थाका कामहरूद्वारा कुनै पनि मानिस धर्मी नठहरिने हुनाले यसो भएको हो । किनकि व्यवस्थाद्वारा नै पापको ज्ञान आउँछ ।
೨೦ಯಾಕೆಂದರೆ ಯಾವ ಮನುಷ್ಯನಾದರೂ ನೇಮನಿಷ್ಠೆಗಳನ್ನು ಅನುಸರಿಸಿ ದೇವರ ಸನ್ನಿಧಿಯಲ್ಲಿ ನೀತಿವಂತನೆಂದು ನಿರ್ಣಯಿಸಲ್ಪಡುವುದಿಲ್ಲ. ಧರ್ಮಶಾಸ್ತ್ರದಿಂದ ಪಾಪದ ಅರಿವು ಉಂಟಾಗುತ್ತದಷ್ಟೆ.
21 तर अब व्यवस्थाविना नै परमेश्वरको धर्मीकता प्रकट गरिएको छ । यसलाई व्यवस्था र अगमवक्ताहरूद्वारा साक्षी दिइएको छ,
೨೧ಈಗಲಾದರೋ ದೇವರಿಂದ ದೊರಕುವ ನೀತಿಯು ನಂಬುವವರೆಲ್ಲರಿಗೆ ಧರ್ಮಶಾಸ್ತ್ರ ನಿಯಮಗಳಿಲ್ಲದೆ ಪ್ರಕಟವಾಗಿದೆ. ಅದು ಮೋಶೆಯ ಧರ್ಮಶಾಸ್ತ್ರದಿಂದಲೂ ಪ್ರವಾದಿಗಳ ನುಡಿಗಳಿಂದಲೂ ಸಾಕ್ಷಿಗೊಂಡಿರುತ್ತವೆ.
22 अर्थात् यो विश्वास गर्ने सबैका निम्ति येशू ख्रीष्टमा विश्वासद्वारा आउने परमेश्वरको धार्मिकता हो । किनकि त्यहाँ कुनै भेदभाव छैन ।
೨೨ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರ ಮೂಲಕವೇ ವಿಶ್ವಾಸಿಗಳೆಲ್ಲರಿಗೆ ದೇವರ ನೀತಿಯು ಉಂಟಾಗುತ್ತದೆ. ಇದರಲ್ಲಿ ಯಾವ ತಾರತಮ್ಯವನ್ನು ಮಾಡುವುದಿಲ್ಲ.
23 किनकि सबैले पाप गरेका छन् र परमेश्वरको महिमासम्म पुग्न चुकेका छन् ।
೨೩ಎಲ್ಲರೂ ಪಾಪ ಮಾಡಿ ದೇವರ ಮಹಿಮೆಯನ್ನು ಹೊಂದದೇ ಹೋಗಿದ್ದಾರೆ.
24 ख्रीष्टमा भएको छुटकाराद्वारा तिनीहरू सित्तैँमा धर्मी ठहराइन्छन् ।
೨೪ಅವರು ನೀತಿವಂತರೆಂದು ನಿರ್ಣಯ ಹೊಂದುವುದು ದೇವರ ಉಚಿತಾರ್ಥವಾದ ಕೃಪೆಯಿಂದಲೇ ಅದು ಕ್ರಿಸ್ತ ಯೇಸುವಿನಿಂದಾದ ಪಾಪ ವಿಮೋಚನೆಯ ಮೂಲಕವಾಗಿ ಆಗುವುದು.
25 किनकि परमेश्वरले येशू ख्रीष्टको रगतमा विश्वासद्वारा प्रायश्चित्तको रूपमा उहाँलाई अर्पण गर्नुभयो । उहाँको धैर्यमा विगतका पापको बेवास्ता गर्नुभएकोले उहाँले ख्रीष्टलाई उहाँको न्यायको प्रमाणको रूपमा अर्पण गर्नुभयो ।
೨೫ಪೂರ್ವ ಕಾಲದಲ್ಲಿ ಮಾನವರ ಪಾಪವನ್ನು ದಂಡಿಸದೆ ತಾಳ್ಮೆಯಿಂದಿದ್ದ ದೇವರು, ನಂಬಿಕೆಯುಳ್ಳವರಿಗೆ ಪಾಪಕ್ಷಮೆಯನ್ನು ತರುವ ಸಲುವಾಗಿ ಯೇಸುಕ್ರಿಸ್ತನನ್ನು ರಕ್ತಧಾರೆ ಎರೆಯುವಂತೆ ಮಾಡಿದನು.
26 यी सबै कुरा वर्तमान समयमा उहाँको धार्मिकता प्रदर्शन गर्नका निम्ति भएका थिए । उहाँ आफैँलाई न्यायी प्रमाणित गर्न सक्नुभएको होस् र उहाँले येशूमाथिको विश्वासले कुनैलाई पनि धर्मी ठहराउनुहुन्छ भन्ने देखाउन यसो भयो ।
೨೬ಯೇಸುಕ್ರಿಸ್ತನಲ್ಲಿ ನಂಬಿಕೆ ಇಡುವವರನ್ನು ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುವುದಕ್ಕಾಗಿಯು ತಾನು ಸತ್ಯಸ್ವರೂಪನೂ, ನೀತಿವಂತನೂ ಎಂದು ವ್ಯಕ್ತಪಡಿಸುವ ಸಲುವಾಗಿಯೂ ಪ್ರಸ್ತುತ ಕಾಲದಲ್ಲಿ ದೇವರು ಹೀಗೆ ಮಾಡಿದರು.
27 घमण्ड कहाँ गर्ने? यो त हटाइएको छ । केको आधारमा? कामहरूको आधारमा? होइन, तर विश्वासको आधारमा हो ।
೨೭ಹಾಗಾದರೆ ನಮ್ಮನ್ನು ನಾವು ಹೊಗಳಿಕೊಳ್ಳುವುದಕ್ಕೆ ಅವಕಾಶವೆಲ್ಲಿ? ಅದು ಇಲ್ಲದೆ ಹೋಯಿತು. ಯಾವ ಆಧಾರದಿಂದ? ಕರ್ಮಮಾರ್ಗವನ್ನು ಅನುಸರಿಸುವುದರಿಂದಲೋ? ಅಲ್ಲ. ನಂಬಿಕೆಮಾರ್ಗವನ್ನು ಅನುಸರಿಸುವುದರಿಂದಲೇ.
28 तब हामी निचोडमा आउँछौँ, कि कुनै पनि व्यक्ति व्यवस्थाका कामहरूविना नै विश्वासद्वारा धर्मी ठहरिन्छ ।
೨೮ಧರ್ಮಶಾಸ್ತ್ರ ಸಂಬಂಧವಾದ ಕರ್ಮಗಳಿಲ್ಲದೆ ನಂಬಿಕೆಯಿಂದಲೇ ಮನುಷ್ಯರು ನೀತಿವಂತರೆಂದು ನಿರ್ಣಯಿಸಲ್ಪಡುವರೆಂಬುದಾಗಿ ನಿಶ್ಚಯಮಾಡಿಕೊಂಡಿದ್ದೇವಲ್ಲಾ
29 अथवा के परमेश्वर यहूदीहरूका मात्रै परमेश्वर हुनुहुन्छ त? के उहाँ गैरयहूदीहरूका परमेश्वर हुनुहुन्न र? हो, उहाँ गैरयहूदीहरूका पनि परमेश्वर हुनुहुन्छ ।
೨೯ದೇವರು ಯೆಹೂದ್ಯರಿಗೆ ಮಾತ್ರ ದೇವರಾಗಿದ್ದಾನೋ? ಹೌದು ದೇವರು ಒಬ್ಬನೇ ಹೀಗಿರಲಾಗಿ ಆತನು ಅನ್ಯಜನರಿಗೂ ಸಹ ದೇವರಾಗಿದ್ದಾನೆ.
30 यदि वास्तवमै परमेश्वर एक हुनुहुन्छ भने उहाँले खतना भएकाहरूलाई विश्वासद्वारा धर्मी ठहराउनुहुन्छ, र खतना नभएकाहरूलाई पनि विश्वासद्वारा नै धर्मी ठहराउनुहुन्छ ।
೩೦ಆತನು ಸುನ್ನತಿಯವರನ್ನು ನೀತಿವಂತರೆಂದು ನಿರ್ಣಯಿಸುವುದಕ್ಕೆ ಅವರ ನಂಬಿಕೆಯೇ ಆಧಾರ. ಹಾಗೆಯೇ ಸುನ್ನತಿಯಿಲ್ಲದವರನ್ನು ನಿರ್ಣಯಿಸುವುದಕ್ಕೂ ನಂಬಿಕೆಯೇ ಕಾರಣ.
31 के हामीले विश्वासद्वारा व्यवस्थालाई रद्द गर्छौं त? कहिल्यै यस्तो नहोस्! बरु, हामीले व्यवस्थालाई कायम पो राख्छौँ ।
೩೧ಹಾಗಾದರೆ ನಂಬಿಕೆಯಿಂದ ಧರ್ಮಶಾಸ್ತ್ರವನ್ನು ತೆಗೆದು ಹಾಕುತ್ತೇವೋ? ಎಂದಿಗೂ ಇಲ್ಲ. ಧರ್ಮಶಾಸ್ತ್ರವನ್ನು ಸ್ಥಿರಪಡಿಸುತ್ತೇವಷ್ಟೇ.