< गन्ती 2 >

1 परमप्रभु फेरि पनि मोशा र हारूनलाई भन्‍नुभयो,
ಯೆಹೋವನು ಮಾತನಾಡಿ ಮೋಶೆ ಮತ್ತು ಆರೋನರಿಗೆ ಹೇಳಿದ್ದೇನೆಂದರೆ,
2 “हरेक इस्राएलीले आ-आफ्ना पुर्खाहरूको घरानाअनुसार आ-आफ्नो झन्डाको वरिपरि छाउनी लगाउनू ।
“ಇಸ್ರಾಯೇಲರೆಲ್ಲರೂ ಒಬ್ಬೊಬ್ಬರಾಗಿ ಕುಟುಂಬದ ಗುರುತುಗಳ ಪ್ರಕಾರ ದೇವದರ್ಶನದ ಗುಡಾರದ ಸುತ್ತಲೂ ಸ್ವಲ್ಪ ದೂರವಾಗಿ ಡೇರೆಗಳನ್ನು ತಮ್ಮ ತಮ್ಮ ದಂಡಿನ ಧ್ವಜದ ಹತ್ತಿರದಲ್ಲಿ ಹಾಕಿಕೊಳ್ಳಬೇಕು. ಅವರು ದೇವದರ್ಶನದ ಗುಡಾರದ ಎದುರಿನಲ್ಲಿ ಇಳಿದುಕೊಳ್ಳಬೇಕು.”
3 तिनीहरूले भेट हुने पालको वरिपरि छाउनी लगाऊन् । भेट हुने पालको पूर्वतिर अर्थात् घाम झुल्कनेतिर छाउनी लगाउनेहरू यहूदाको दल होस् र तिनीहरूले आफ्नो झन्डामुनि छाउनी लगाऊन् । अम्मीनादाबको छोरो नहशोन यहूदाका मानिसको अगुवा होस् ।
ದೇವದರ್ಶನ ಗುಡಾರದ ಪೂರ್ವದಿಕ್ಕಿನಲ್ಲಿ ಸೂರ್ಯೋದಯವಾಗುವ ಕಡೆಗೆ ಯೆಹೂದ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ದಂಡಿನ ಧ್ವಜದ ಹತ್ತಿರ ಡೇರೆಗಳನ್ನು ಹಾಕಿಕೊಳ್ಳಬೇಕು. ಯೆಹೂದ ಕುಲದ ಸೈನ್ಯಾಧಿಪತಿಯು ಅಮ್ಮೀನಾದಾಬನ ಮಗನಾದ ನಹಶೋನನು.
4 यहूदाका मानिसहरूको सङ्ख्या ७४,६०० छ ।
ಅವನ ಸೈನಿಕರ ಸಂಖ್ಯೆ 74,600 ಮಂದಿ.
5 इस्साखारको कुलले यहूदापछि छाउनी लगाउनू । सूआरका छोरो नतनेलले इस्साखारको फौजको नेतृत्व गर्नुपर्छ ।
ಯೆಹೂದ ಕುಲದ ಬಳಿಯಲ್ಲಿ ಇಳಿದುಕೊಳ್ಳುವವರು ಇಸ್ಸಾಕಾರನ ಕುಲದವರು. ಚೂವಾರನ ಮಗನಾದ ನೆತನೇಲನು ಇಸ್ಸಾಕಾರರ ಸೈನ್ಯಾಧಿಪತಿ.
6 तिनको दलमा भएकाहरूको सङ्ख्या ५४,४०० पुरुष छन् ।
ಅವನ ಸೈನಿಕರ ಸಂಖ್ಯೆ 54,400 ಮಂದಿ.
7 जबूलूनको कुलले इस्साखारपछि छाउनी लगाउनू । हेलोनका छोरा एलीआबले जबूलूनको फौजको नेतृत्व गर्नुपर्छ ।
ಇಸ್ಸಾಕಾರರ ಬಳಿಯಲ್ಲಿ ಇಳಿದುಕೊಳ್ಳುವವರು ಜೆಬುಲೂನ್ ಕುಲದವರು. ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ಯರ ಸೈನ್ಯಾಧಿಪತಿ.
8 तिनको दलमा भएकाहरूको सङ्ख्या ५७,४०० छ ।
ಅವನ ಸೈನಿಕರ ಸಂಖ್ಯೆ 57,400 ಮಂದಿ.
9 यहूदाको छाउनीको कुल सङ्ख्या १,८६,४०० छ ।
ಹೀಗೆ ಯೆಹೂದ ಕುಲದ ದಂಡಿಗೆ ಸೇರಿದವರ ಸೈನಿಕರ ಒಟ್ಟು ಸಂಖ್ಯೆ 1,86,400 ಮಂದಿ. ಇವರು ಮುಂಭಾಗದಲ್ಲಿ ಹೊರಡಬೇಕು.
10 तिनीहरू अग्रस्थानमा हिँड्नेछन् । दक्षिणपट्टि रूबेनको छाउनी तिनीहरूको झन्डामुनि हुनेछ । रूबेनको छाउनीको अगुवा शदेऊरका छोरा एलीसूर होस् ।
೧೦ದಕ್ಷಿಣ ದಿಕ್ಕಿನಲ್ಲಿ ರೂಬೇನ್ ಕುಲದ ದಂಡಿಗೆ ಸೇರಿದವರು ಸೈನ್ಯ ಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೈನ್ಯಾಧಿಪತಿ.
11 तिनको दलमा हुनेको सङ्ख्या ४६,५०० छ ।
೧೧ಅವನ ಸೈನಿಕರ ಸಂಖ್ಯೆ 46,500 ಮಂದಿ.
12 शिमियोनले रूबेनपछि छाउनी लगाओस् । शिमियोनका मानिसहरूको अगुवा सूरीशद्दैका छोरा शलूमीएल होस् ।
೧೨ರೂಬೇನ್ ಕುಲದವರ ಬಳಿಯಲ್ಲಿ ಇಳಿದುಕೊಳ್ಳುವವರು ಸಿಮೆಯೋನ್ ಕುಲದವರು. ಚೂರೀಷದ್ದೈಯನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೈನ್ಯಾಧಿಪತಿ.
13 तिनको दलमा हुनेहरूको सङ्ख्या ५९,३०० छ ।
೧೩ಅವನ ಸೈನಿಕರ ಸಂಖ್ಯೆ 59,300 ಮಂದಿ.
14 त्यसपछि गादको कुल हुन्छ । गादका मानिसहरूको अगुवा दूएलका छोरा एल्यासाप होस् ।
೧೪ತರುವಾಯ ಗಾದ್ಯರ ಕುಲದವರು. ರೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೈನ್ಯಾಧಿಪತಿ.
15 तिनको दलमा हुनेहरूको सङ्ख्या ४५,६५० छ ।
೧೫ಅವನ ಸೈನಿಕರ ಸಂಖ್ಯೆ 45,650 ಮಂದಿ.
16 आ-आफ्नो दलअनुसार खटाइएका रूबेनको छाउनीका सबै मानिसहरू १,५१,४५० छन् । तिनीहरू दोस्रो लश्करमा हिँड्नेछन् ।
೧೬ಹೀಗೆ ರೂಬೇನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,51,450 ಮಂದಿ. ಇವರು ಎರಡನೆಯ ದಂಡಾಗಿ ಹೊರಡಬೇಕು.
17 त्यसपछि सबै छाउनीका बिचमा लेवीहरूसँगै छाउनीबाट भेट हुने पाल जानुपर्छ । तिनीहरू छाउनीबाट गएबमोजिम नै छाउनीमा आउनुपर्छ । हरेक मानिस आफ्नो झन्डामुनि आफ्‍नै स्थानमा हुनुपर्छ ।
೧೭ಅನಂತರ ಸೈನ್ಯಗಳ ಮಧ್ಯದಲ್ಲಿ ದೇವದರ್ಶನದ ಗುಡಾರವು ಲೇವಿಯರ ಪಾಳೆಯದಿಂದ ಹೊರಡಬೇಕು. ಅವರು ಇಳಿದುಕೊಳ್ಳುವ ಪ್ರಕಾರವೇ ತಮ್ಮ ತಮ್ಮ ಧ್ವಜಗಳನ್ನು ಹಿಡಿದುಕೊಂಡು ತಮಗೆ ಗೊತ್ತಾದ ಸ್ಥಾನದಲ್ಲಿ ಹೊರಡಬೇಕು.
18 एफ्राइमको छाउनीका दलहरू आफ्‍नै झन्डामुनि हुन्छन् । एफ्राइमको मानिसहरूको अगुवा अम्मीहूदका छोरा एलीशामा होस् ।
೧೮ಪಶ್ಚಿಮ ದಿಕ್ಕಿನಲ್ಲಿ ಎಫ್ರಾಯೀಮ್ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಹೂದನ ಮಗನಾದ ಎಲೀಷಾಮಾನು ಎಫ್ರಾಯೀಮ್ ಕುಲದ ಸೈನ್ಯಾಧಿಪತಿ.
19 तिनको दलमा हुनेहरूको सङ्ख्या ४०,५०० छ ।
೧೯ಅವನ ಸೈನಿಕರ ಸಂಖ್ಯೆ 40,500 ಮಂದಿ.
20 तिनीहरूपछि मनश्‍शेको कुल हुन्छ । मनश्‍शेको अगुवा पदासूरका छोरा गमलिएल होस् ।
೨೦ಎಫ್ರಾಯೀಮ್ ಬಳಿಯಲ್ಲಿ ಮನಸ್ಸೆ ಕುಲದವರೂ ತಮ್ಮ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಪೆದಾಚೂರನ ಮಗನಾದ ಗಮ್ಲೀಯೇಲ್ ಮನಸ್ಸೆ ಕುಲದ ಸೈನ್ಯಾಧಿಪತಿ.
21 तिनको दलमा हुनेहरूको सङ्ख्या ३२,२०० छ ।
೨೧ಅವನ ಸೈನಿಕರ ಸಂಖ್ಯೆ 32,200 ಮಂದಿ.
22 त्यपछि बेन्यामीनको कुल हुनेछ । बेन्यामीनको अगुवा गिदेओनीका छोरा अबीदान होस् ।
೨೨ತರುವಾಯ ಬೆನ್ಯಾಮೀನ ಕುಲದವರು. ಗಿದ್ಯೋನಿಯ ಮಗನಾದ ಅಬೀದಾನ್ ಬೆನ್ಯಾಮೀನ ಕುಲದ ಸೈನ್ಯಾಧಿಪತಿ.
23 तिनको दलमा भएकाहरूको सङ्ख्या ३५,४०० छ ।
೨೩ಅವನ ಸೈನಿಕರ ಸಂಖ್ಯೆ 35,400 ಮಂದಿ.
24 एफ्राइमको छाउनीका गन्ती गरिएका सबैको सङ्ख्या १,०८,१०० छ । तिनीहरू तेस्रो लश्करमा हिँड्नेछन् ।
೨೪ಹೀಗೆ ಎಫ್ರಾಯೀಮ್ಯರ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,08,100 ಮಂದಿ. ಇವರು ಮೂರನೆಯ ದಂಡಾಗಿ ಹೊರಡಬೇಕು.
25 उत्तरमा दानको छाउनीको दल हुनेछ । दानका मानिसहरूका अगुवा अम्मीशद्दैका छोरा अहीएजेर होस् ।
೨೫ಉತ್ತರ ದಿಕ್ಕಿನಲ್ಲಿ ದಾನ್ ಕುಲದ ದಂಡಿಗೆ ಸೇರಿದವರು ಸೈನ್ಯಸೈನ್ಯವಾಗಿ ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಅಮ್ಮೀಷದ್ದೈಯ ಮಗನಾದ ಅಹೀಗೆಜೆರ್ ದಾನ್ ಕುಲದ ಸೈನ್ಯಾಧಿಪತಿ.
26 तिनको दलमा भएकाहरूको सङ्ख्या ६२,७०० छ ।
೨೬ಅವನ ಸೈನಿಕರ ಸಂಖ್ಯೆ 62,700 ಮಂದಿ.
27 दानको छाउनीपछि आशेरको कुलका मानिसहरू हुनेछन् । आशेरको अगुवा ओक्रानको छोरा पगीएल होस् ।
೨೭ದಾನ್ ಕುಲದ ಬಳಿಯಲ್ಲಿ ಆಶೇರ್ ಕುಲದವರು ತಮ್ಮ ಡೇರೆಗಳನ್ನು ಹಾಕಿಕೊಳ್ಳಬೇಕು. ಒಕ್ರಾನನ ಮಗನಾದ ಪಗೀಯೇಲನು ಆಶೇರ್ ಕುಲದವರ ಸೈನ್ಯಾಧಿಪತಿ.
28 तिनको दलमा भएकाहरूको सङ्ख्या ४१,५०० छ । त्यपछि नप्‍तालीको कुल हुनेछ । नप्‍तालीको अगुवा एनानका छोरा अहीरा होस् ।
೨೮ಅವನ ಸೈನಿಕರ ಸಂಖ್ಯೆ 41,500 ಮಂದಿ.
29 तिनको दलमा भएकाहरूको सङ्ख्या ५३,४०० छन् ।
೨೯ತರುವಾಯ ನಫ್ತಾಲಿ ಕುಲದವರು, ಏನಾನನ ಮಗನಾದ ಅಹೀರನು ನಫ್ತಾಲಿ ಕುಲದ ಸೈನ್ಯಾಧಿಪತಿ.
30 दानको छाउनीमा हुनेहरूका सबै सङ्ख्या १,५७,६०० छ ।
೩೦ಅವನ ಸೈನಿಕರ ಸಂಖ್ಯೆ 53,400 ಮಂದಿ.
31 तिनीहरू छाउनीबाट तिनीहरूको झन्डामुनि अन्तिममा जानेछन् ।”
೩೧ಹೀಗೆ ದಾನ್ ಕುಲದ ದಂಡಿಗೆ ಸೇರಿದ ಸೈನಿಕರ ಒಟ್ಟು ಸಂಖ್ಯೆ 1,57,600 ಮಂದಿ. ಇವರು ಕಡೆಯ ದಂಡಾಗಿ ಹೊರಡಬೇಕು.
32 आ-आफ्नो परिवार-परिवारअनुसार गन्ती गरिएका इस्राएलीहरू यिनै हुन् । आ-आफ्नो दलअनुसार तिनीहरूको छाउनीमा गणना गरिएकाहरू ६,०३,५५० छन् ।,
೩೨ಮೋಶೆ ಮತ್ತು ಆರೋನರು ಇಸ್ರಾಯೇಲರ ಗೋತ್ರಗಳ ಪ್ರಕಾರ ದಂಡುಗಳಲ್ಲಿ ಸೈನಿಕರಾಗಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ 6,03,550 ಮಂದಿ.
33 तर मोशा र हारूनले लेवीहरूलाई इस्राएलका मानिसहरूमा गन्ती गरेनन् ।
೩೩ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಲೇವಿಯರು ಇಸ್ರಾಯೇಲರ ಸಂಗಡ ಲೆಕ್ಕಹಾಕಲಿಲ್ಲ.
34 यो परमप्रभुले आज्ञा गर्नुभएबमोजिम गरिएको थियो । इस्राएलीका मानिसहरूले परमप्रभुले आज्ञा गर्नुभएका सबै कुरा गरे । तिनीहरूले आ-आफ्नो झन्डाअनुसार छाउनी लगाए । तिनीहरू आ-आफ्ना पुर्खाहरूको परिवार-परिवारअनुसार आ-आफ्नो छाउनीबाट निस्कन्थे ।
೩೪ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು. ಹಾಗೆಯೇ ದಂಡು ದಂಡಾಗಿ ಡೇರೆಗಳನ್ನು ಹಾಕಿಕೊಳ್ಳುತ್ತಿದ್ದರು ಮತ್ತು ಗೋತ್ರಕುಟುಂಬಗಳ ಪ್ರಕಾರವೇ ಹೊರಡುತ್ತಿದ್ದರು.

< गन्ती 2 >