< गन्ती 12 >
1 मोशाले विवाह गरेका कूशी महिलाको कारण हारून र मिरियम मोशाको विरुद्धमा बोले ।
೧ಮೋಶೆ ಕೂಷ್ ದೇಶದ ಸ್ತ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಆ ಕಾರಣಕ್ಕಾಗಿ ಮಿರ್ಯಾಮಳೂ ಹಾಗೂ ಆರೋನನೂ ಅವನಿಗೆ ವಿರುದ್ಧವಾಗಿ ಮಾತನಾಡಿದರು.
2 तिनीहरूले भने, “के परमप्रभु मोशासँग मात्र बोल्नुभएको छ र? के उहाँ हामीसँगचाहिँ बोल्नुभएको छैन र?” तिनीहरूले भनेका कुरा परमप्रभुले सुन्नुभयो ।
೨ಅವರು, “ಯೆಹೋವನು ಮೋಶೆಯ ಮೂಲಕವಾಗಿ ಮಾತ್ರವೇ ಮಾತನಾಡುತ್ತಾನೋ? ನಮ್ಮ ಮೂಲಕ ಆತನು ಮಾತನಾಡುವುದಿಲ್ಲವೇ?” ಎಂದು ಹೇಳಿಕೊಂಡರು. ಅವರು ಆಡಿದ ಮಾತು ಯೆಹೋವನಿಗೆ ಕೇಳಿಸಿತು.
3 मोशा साह्रै नम्र मानिस थिए, तिनी संसारका सबैभन्दा नम्र थिए ।
೩ಮೋಶೆಯು ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹು ಸಾತ್ವಿಕನು.
4 त्यसै बेला परमप्रभु मोशा, हारून र मिरियमसित बोल्नुभयो, “तिमीहरू तिनै जना भेट हुने पालमा आओ ।” त्यसैले तिनै जना बाहिर आए ।
೪ಹೀಗಿರಲಾಗಿ ಅವರು ಆಡಿದ ಮಾತನ್ನು ಯೆಹೋವನು ಕೇಳಿ ಫಕ್ಕನೆ ಮೋಶೆ, ಆರೋನ್ ಮತ್ತು ಮಿರ್ಯಾಮರಿಗೆ, “ನೀವು ಮೂರು ಮಂದಿಯೂ ದೇವದರ್ಶನದ ಗುಡಾರಕ್ಕೆ ಬರಬೇಕು” ಎಂದು ಆಜ್ಞಾಪಿಸಿದನು. ಆಗ ಆ ಮೂವರು ಹೊರಗೆ ಬಂದರು.
5 अनि परमप्रभु बादलको खामोमा ओर्लेर आउनुभयो । उहाँ पालको प्रवेश-द्वारमा खडा हुनुभयो अनि हारून र मिरियमलाई बोलाउनुभयो । तिनीहरू दुवै अगि आए ।
೫ಯೆಹೋವನು ಮೇಘಸ್ತಂಭದೊಳಗೆ ಇಳಿದು ಬಂದು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ನಿಂತು ಆರೋನನ್ನು ಮತ್ತು ಮಿರ್ಯಾಮಳನ್ನು ಹತ್ತಿರಕ್ಕೆ ಕರೆದನು. ಅವರು ಮುಂದೆ ಬಂದರು.
6 परमप्रभुले भन्नुभयो, “मेरो वचन सुन । मेरो अगमवक्ता तिमीहरूसँग हुँदा म आफैलाई त्यससँग दर्शनमा प्रकट गर्नेछु र त्यससँग सपनामा कुरा गर्छु ।
೬ಯೆಹೋವನು ಅವರಿಗೆ, “ನನ್ನ ಮಾತನ್ನು ಕೇಳಿರಿ. ನಿಮ್ಮಲ್ಲಿ ಪ್ರವಾದಿಯಿದ್ದರೆ ನಾನು ಅವನಿಗೆ ಜ್ಞಾನದೃಷ್ಟಿಯಲ್ಲಿ ಪ್ರಕಟಿಸುವೆನು, ಮತ್ತು ಕನಸಿನಲ್ಲಿ ಅವನ ಸಂಗಡ ಮಾತನಾಡುವೆನು.
7 मेरो दास मोशा त्यस्तो होइन । त्यो मेरा सबै घरानामा विश्वासयोग्य छ ।
೭ನನ್ನ ಸೇವಕನಾದ ಮೋಶೆಯು ಅಂಥವನಲ್ಲ. ಅವನು ನನ್ನ ಮನೆಯಲ್ಲೆಲ್ಲಾ ನಂಬಿಗಸ್ತನಾಗಿದ್ದಾನೆ.
8 म मोशासँग दर्शन वा अड्कोमा होइन प्रत्यक्ष रूपमा बोल्छु । त्यसले मेरो रूप देख्छ । यसैले तिमीहरूलाई मेरो दास मोशा विरुद्ध बोल्न किन डर लागेन?”
೮ನಾನು ಅವನ ಸಂಗಡ ಗುಪ್ತವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ಅವನ ಸಂಗಡ ಮಾತನಾಡುತ್ತೇನೆ. ಅವನು ಯೆಹೋವನ ಸ್ವರೂಪವನ್ನೇ ದೃಷ್ಟಿಸುವನು. ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರುದ್ಧವಾಗಿ ಮಾತನಾಡುವುದಕ್ಕೆ ಏಕೆ ಭಯಪಡಲಿಲ್ಲ?” ಎಂದನು.
9 परमप्रभुको क्रोध तिनीहरू विरुद्ध दन्कियो, र उहाँ तिनीहरूबाट जानुभयो ।
೯ನಂತರ ಯೆಹೋವನು ಅವರ ಮೇಲೆ ಕೋಪಗೊಂಡು ಹೊರಟುಹೋದನು.
10 बादल पालमाथिबाट हट्यो र मिरियम अचानक कुष्ठरोगी भइन् । तिनी हिउँजस्तै सेतो भइन् । हारून मिरियमतिर फर्कंदा तिनले तिनलाई कुष्ठ रोग लागेको देखे ।
೧೦ಆ ಮೇಘವು ದೇವದರ್ಶನದ ಗುಡಾರದ ಮೇಲಿನಿಂದ ಬಿಟ್ಟುಹೋಯಿತು. ಪಕ್ಕನೆ ಮಿರ್ಯಾಮಳಿಗೆ ತೊನ್ನು ಹತ್ತಿದ್ದರಿಂದ ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿ ಹೋಯಿತು. ಆರೋನನು ಮಿರ್ಯಾಮಳನ್ನು ನೋಡಿದಾಗ ಆಕೆಗೆ ತೊನ್ನು ಹಿಡಿದಿದೆ ಎಂದು ತಿಳಿದುಕೊಂಡನು.
11 हारूनले मोशालाई भने, “हे मेरा मालिक, बिन्ती छ यो पाप हाम्रो विरुद्ध नलिनुहोस् । हामीले मूर्खतापूर्वक बोलेका छौँ र हामीले पाप गरेका छौँ ।
೧೧ಆಗ ಆರೋನನು ಮೋಶೆಗೆ, “ನನ್ನ ಒಡೆಯನೇ, ನಾವು ವಿವೇಕವಿಲ್ಲದೆ ನಡೆದು ದೋಷಿಗಳಾದೆವು. ಈ ದೋಷದ ಫಲವನ್ನು ನಾವು ಅನುಭವಿಸುವಂತೆ ಮಾಡಬೇಡ ಎಂದು ನಿನ್ನನ್ನು ಬೇಡಿಕೊಳ್ಳುತ್ತೇನೆ.
12 बिन्ती छ, तिनी आफ्नो आमाको गर्भबाट निस्कँदा नै आधा मासु कुहेको मृत जन्मेकोजस्तो नहोऊन् ।”
೧೨ಅರ್ಧ ಮಾಂಸ ಕೊಳೆತುಹೋಗಿ ಹುಟ್ಟಿದ ಶಿಶುವಿನಂತೆ ಈಕೆ ಆಗಬಾರದು” ಎಂದು ಬೇಡಿದನು.
13 यसैले मोशाले परमप्रभुलाई पुकारे, “हे परमेश्वर, बिन्ती छ, उनलाई निको पारिदिनुहोस् ।”
೧೩ಆಗ ಮೋಶೆ ಯೆಹೋವನಿಗೆ, “ದೇವಾ, ಆಕೆಯನ್ನು ವಾಸಿಮಾಡಬೇಕೆಂದು ಬೇಡುತ್ತೇನೆ” ಎಂದು ಮೊರೆಯಿಟ್ಟನು.
14 परमप्रभुले मोशालाई भन्नुभयो, “यदि त्यसको बुबाले त्यसलाई अनुहारमा थुकेको भए, त्यो सात दिनसम्म अपमानित हुन्थ्यो । त्यसलाई छाउनी बाहिर लगेर थुन् । त्यसपछि त्यसलाई फेरि ले ।”
೧೪ಅದಕ್ಕೆ ಯೆಹೋವನು ಮೋಶೆಗೆ, “ಆಕೆಯ ತಂದೆ ಆಕೆಯ ಮುಖದ ಮೇಲೆ ಉಗುಳಿದರೆ, ಆಕೆ ಏಳು ದಿನ ನಾಚಿಕೆಯಿಂದ ಮರೆಯಾಗುತ್ತಿದ್ದಳಲ್ಲವೇ? ಹಾಗಾದರೆ ಆಕೆ ಏಳು ದಿನ ಪಾಳೆಯದ ಹೊರಗೆ ಇರಲಿ, ತರುವಾಯ ನೀನು ಆಕೆಯನ್ನು ಪಾಳೆಯದೊಳಗೆ ಸೇರಿಸಿಕೊಳ್ಳಬಹುದು” ಎಂದು ಉತ್ತರಕೊಟ್ಟನು.
15 यसैले मिरियमलाई छाउनीबाहिर सात दिनसम्म थुनियो । तिनी छाउनीमा नफर्केसम्म मानिसहरूले यात्रा गरेनन् ।
೧೫ಹಾಗೆಯೇ ಮಿರ್ಯಾಮಳು ಏಳು ದಿನಗಳವರೆಗೆ ಪಾಳೆಯದ ಹೊರಗೆ ಇರಬೇಕಾಯಿತು. ಆಕೆಯನ್ನು ತಿರುಗಿ ಸೇರಿಸಿಕೊಳ್ಳುವ ವರೆಗೆ ಇಸ್ರಾಯೇಲರು ಪ್ರಯಾಣಮಾಡಲಿಲ್ಲ.
16 त्यसपछि, मानिसहरू हसेरोतबाट यात्रा गरेर पारानको मरुभूमिमा छाउनी लगाए ।
೧೬ತರುವಾಯ ಅವರು ಹಚೇರೋತಿನಿಂದ ಹೊರಟು ಪಾರಾನ್ ಅರಣ್ಯದಲ್ಲಿ ಇಳಿದುಕೊಂಡರು.