< लेवीहरू 16 >

1 हारूनका दुई छोरा परमप्रभुको अगि गएका कारण तिनीहरूको मृत्‍यु भएपछि परमप्रभु मोशासँग बोल्‍नुभयो ।
ಆರೋನನ ಇಬ್ಬರು ಮಕ್ಕಳು ಯೆಹೋವನ ಸನ್ನಿಧಿಗೆ ಬಂದು ನಾಶವಾದ ಮೇಲೆ ಯೆಹೋವನು ಮೋಶೆಯ ಸಂಗಡ ಮಾತನಾಡಿ,
2 परमप्रभुले मोशालाई भन्‍नुभयो, “तेरा दाजु हारूनलाई मनपरी समयमा सन्दूकमाथिको प्रायश्‍चित्त-आसनको अगि पर्दाभित्रको महा-पवित्र स्थानमा नआओस् भन् । त्यसले त्यस्तो गरे त्यो मर्ने छ, किनभने प्रायश्‍चित्त-आसनमाथि बादलमा म प्रकट हुने छु ।
“ನಿನ್ನ ಅಣ್ಣನಾದ ಆರೋನನು ಮನಸ್ಸಿಗೆ ಬಂದಾಗೆಲ್ಲಾ ತೆರೆಯನ್ನು ದಾಟಿ ಮಹಾಪವಿತ್ರವಾದ ಸ್ಥಾನದೊಳಕ್ಕೆ ಮಂಜೂಷದ ಮೇಲಣ ಕೃಪಾಸನದ ಹತ್ತಿರಕ್ಕೆ ಬರಬಾರದೆಂದು ಅವನಿಗೆ ಹೇಳು. ನಾನು ಕೃಪಾಸನದ ಮೇಲೆ ಮೇಘದಲ್ಲಿ ಕಾಣಿಸಿಕೊಳ್ಳುವುದರಿಂದ ಅವನು ನಾಶವಾಗುವನು.
3 यसैकारण हारून महा-पवित्र स्थानभित्र यसरी प्रवेश गरोस् । त्यसले पापबलिको रूपमा एउटा साँढे र होमबलिको निम्ति एउटा भेडा लिएर आओस् ।
ಆರೋನನು ಮಹಾಪವಿತ್ರಸ್ಥಾನದೊಳಗೆ ಬರುವಾಗ ಮುಂದೆ ಹೇಳುವ ರೀತಿಯಲ್ಲಿ ಬರಬೇಕು. ಅವನು ದೋಷಪರಿಹಾರಕ ಯಜ್ಞಕ್ಕಾಗಿ ಹೋರಿಯನ್ನು ಮತ್ತು ಸರ್ವಾಂಗಹೋಮಕ್ಕಾಗಿ ಟಗರನ್ನು ತರಬೇಕು.
4 त्यसले सूतीको पवित्र दौरा, र सूतीको भित्री वस्‍त्र पहिरोस्, र सूतीको पटुका र सूतीको फेटा लगाओस् । यी पवित्र पोशाक हुन् । त्यसले आफ्‍नो शरीर पानीले नुहाएर यी पोशाक लगाओस् ।
ಅವನು ಪರಿಶುದ್ಧವಾದ ನಾರಿನ ನಿಲುವಂಗಿಯನ್ನು ತೊಟ್ಟುಕೊಂಡು, ನಾರಿನ ಒಳಉಡುಪನ್ನು ಹಾಕಿಕೊಂಡು, ನಾರಿನ ನಡುಕಟ್ಟನ್ನು ಕಟ್ಟಿಕೊಂಡು ಮತ್ತು ತಲೆಗೆ ನಾರಿನ ಪೇಟವನ್ನು ಸುತ್ತಿಕೊಳ್ಳಬೇಕು. ಅವು ದೀಕ್ಷಾವಸ್ತ್ರಗಳಾದುದರಿಂದ ಅವನು ಅವುಗಳನ್ನು ಧರಿಸಿಕೊಳ್ಳುವುದಕ್ಕೆ ಮುಂಚೆ ಸ್ನಾನಮಾಡಬೇಕು.
5 त्यसले इस्राएलका मानिसहरूको समुदायबाट पापबलिको रूपमा दुईवटा बोका र होमबलिको रूपमा एउटा भेडा लेओस् ।
ಇಸ್ರಾಯೇಲರ ಜನಸಮೂಹದಿಂದ ದೋಷಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಂಡು ಬರಬೇಕು.
6 अनि हारूनले साँढेलाई पापबलिको रूपमा अर्पण गरोस्, जुन त्यो आफै र आफ्‍नो परिवारको लागि प्रायश्‍चित्त गर्नका निम्ति हुने छ ।
ಆರೋನನು ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರ ಮಾಡಬೇಕು.
7 त्यसपछि त्यसले दुईवटा बोका लिएर भेट हुने पालको प्रवेशद्वारमा परमप्रभुको अगि तयार गरोस् ।
ಆ ಎರಡು ಹೋತಗಳನ್ನು ಅವನು ದೇವದರ್ಶನದ ಗುಡಾರದ ಬಾಗಿಲಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಲ್ಲಿಸಬೇಕು.
8 अनि हारूनले ती दुई बोकाका निम्ति चिट्ठा हालोस्, एउटा चिट्ठाचाहिँ परमप्रभुको निम्ति अर्पण गर्नलाई, र अर्कोचाहिँ छोडिने बोकाको निम्ति ।
ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು.
9 चिट्ठामा परमप्रभुको भागमा परेको बोकालाई हारूनले पापबलिको निम्ति अर्पण गरोस् ।
ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು.
10 तर छोडिनको निम्ति चिट्ठा परेको बोकालाईचाहिँ उजाड-स्थानमा छोडेर प्रायश्‍चित्त गर्नको निम्ति परमप्रभुको अगि जीवितै ल्याइयोस् ।
೧೦ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
11 त्यसपछि हारूनले आफ्‍नै निम्ति साँढेलाई पापबलिको रूपमा अर्पण गरोस् । त्यसले आफ्नो र आफ्नो परिवारको निम्ति प्रायश्‍चित्त गरोस्, र यसैकारण आफ्नै निम्ति पापबलिको रूपमा त्यसले साँढेलाई मारोस् ।
೧೧“ಆರೋನನು ತನಗಾಗಿ ದೋಷಪರಿಹಾರಕ ಯಜ್ಞದ ಹೋರಿಯನ್ನು ಸಮರ್ಪಿಸಿ ತನಗಾಗಿಯೂ ಮತ್ತು ತನ್ನ ಮನೆತನದವರಿಗಾಗಿಯೂ ದೋಷಪರಿಹಾರವನ್ನು ಮಾಡಬೇಕು.
12 हारूनले वेदीबाट आगोका फिलिङ्गाहरूले भरिएको एउटा धुपौरो र आफ्ना हातमा मसिनो गरी पिसिएको सुगन्धित धुप लिएर पर्दाभित्र परमप्रभुको सामु ल्याओस् ।
೧೨ಅವನು ತನಗೋಸ್ಕರ ಹೋರಿಯನ್ನು ವಧಿಸಿದ ಮೇಲೆ ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಕೆಂಡಗಳನ್ನು ಧೂಪಾರತಿಯಲ್ಲಿ ತುಂಬಿಸಿ, ಪರಿಮಳಧೂಪದ್ರವ್ಯದ ಚೂರ್ಣದಲ್ಲಿ ಎರಡು ಹಿಡಿ ತೆಗೆದುಕೊಂಡು ಅವುಗಳನ್ನು ತೆರೆಯೊಳಗೆ ತರಬೇಕು.
13 त्यहाँ त्यसले परमप्रभुको सामु भएको आगोमा धुप राखोस् ताकि करारको सन्दुकमाथिको प्रायश्‍चित्त-आसनलाई त्यस धुपबाट निस्‍केको बादलले ढाकोस् । त्यो नमरोस् भनेर त्यसले यो गरोस् ।
೧೩ಅವನು ಆ ಧೂಪವನ್ನು ಯೆಹೋವನ ಸನ್ನಿಧಿಯಲ್ಲಿಯೇ ಕೆಂಡಗಳ ಮೇಲೆ ಹಾಕಬೇಕು. ಅವನಿಗೆ ಪ್ರಾಣನಷ್ಟವಾಗದಂತೆ ಆ ಧೂಪದ ಹೊಗೆಯು ಮೇಘದೋಪಾದಿಯಲ್ಲಿ ಆಜ್ಞಾಶಾಸನಗಳ ಮೇಲಣ ಕೃಪಾಸನವನ್ನು ಆವರಿಸಿಕೊಳ್ಳುವುದು.
14 अनि त्यसले साँढेको केही रगत लिएर प्रायश्‍चित्त-आसनको सामु आफ्नो औँलाले छर्कोस् । त्यसले प्रायश्‍चित्त-आसनको सामु औँलाले सात पटक रगत छर्कोस् ।
೧೪ಆಗ ಅವನು ಆ ಹೋರಿಯ ರಕ್ತದಲ್ಲಿ ಸ್ವಲ್ಪವನ್ನು ತೆಗೆದುಕೊಂಡು ಕೃಪಾಸನದ ಪೂರ್ವಭಾಗದ ಮೇಲೆ ಬೆರಳಿನಿಂದ ಚಿಮುಕಿಸಿ ಕೃಪಾಸನದ ಎದುರಾಗಿಯೂ ಏಳು ಸಾರಿ ಚಿಮುಕಿಸಬೇಕು.
15 त्यसपछि त्यसले मानिसहरूका निम्ति पापबलिको बोकालाई मारोस् र त्यसको रगत पर्दाभित्र ल्याओस् । त्यसले त्यहाँ साँढेको रगतलाई जे गरेको थियो, बोकाको रगतलाई पनि त्यस्‍तै गरोस्, अर्थात् त्यसले त्यो रगत प्रायश्‍चित्त-आसनमाथि र त्यसपछि प्रायश्‍चित्त-आसनको सामु छर्कोस् ।
೧೫“ತರುವಾಯ ಅವನು ಜನರಿಗಾಗಿ ಮಾಡಿದ ದೋಷಪರಿಹಾರಕ ಯಜ್ಞದ ಹೋತವನ್ನು ವಧಿಸಿ, ಅದರ ರಕ್ತವನ್ನು ತೆರೆಯೊಳಗೆ ತಂದು, ಹೋರಿಯ ರಕ್ತದಿಂದ ಮಾಡಿದಂತೆಯೇ ಇದರ ರಕ್ತದಿಂದಲೂ ಮಾಡಿ, ಕೃಪಾಸನದ ಮೇಲೆಯೂ ಮತ್ತು ಅದರ ಎದುರಾಗಿಯೂ ಚಿಮುಕಿಸಬೇಕು.
16 इस्राएलका मानिसहरूका अशुद्ध कामहरू, तिनीहरूको विद्रोह र तिनीहरूका सारा पापको कारण पवित्रस्थानको निम्ति त्यसले प्रायश्‍चित्त गरोस् । त्यसले यो भेट हुने पालको निम्ति पनि गरोस्, जहाँ तिनीहरूका अशुद्ध कामहरूका बिचमा परमप्रभु तिनीहरू माझमा बास गर्नुहुन्छ ।
೧೬ಹೀಗೆ ಇಸ್ರಾಯೇಲರು ನಾನಾ ವಿಧವಾದ ಅಶುದ್ಧತ್ವ, ಅಪರಾಧ, ದ್ರೋಹ ಇವುಗಳಿಂದ ಮಹಾಪವಿತ್ರಸ್ಥಾನಕ್ಕೆ ಉಂಟುಮಾಡಿದ ದೋಷವನ್ನು ಆರೋನನು ಪರಿಹರಿಸುವನು. ಅಶುದ್ಧರಾದ ಅವರ ನಡುವೆ ಇರುವ ದೇವದರ್ಶನದ ಗುಡಾರಕ್ಕೋಸ್ಕರವೂ ಅವನು ಹಾಗೆಯೇ ದೋಷಪರಿಹಾರ ಮಾಡುವನು.
17 हारून महा-पवित्र स्थानमा प्रायश्‍चित्त गर्नको निम्ति प्रवेश गरेपछि त्यसले आफ्नो, आफ्नो परिवार र इस्राएलका सबै समुदायको निम्ति प्रायश्‍चित्त गर्न सकेर बाहिर नआएसम्म कोही पनि भेट हुने पालभित्र नपसोस् ।
೧೭ಅವನು ದೋಷಪರಿಹಾರ ಮಾಡುವುದಕ್ಕಾಗಿ ಮಹಾ ಪವಿತ್ರಸ್ಥಾನದೊಳಗೆ ಹೋಗಿ ಹೊರಗೆ ಬರುವ ತನಕ ಯಾರೂ ದೇವದರ್ಶನದ ಗುಡಾರದಲ್ಲಿ ಹೋಗಬಾರದು. ಹಾಗೆ ತನಗಾಗಿಯೂ, ತನ್ನ ಮನೆತನದವರಿಗಾಗಿಯೂ ಮತ್ತು ಇಸ್ರಾಯೇಲರ ಎಲ್ಲಾ ಜನಸಮೂಹಕ್ಕಾಗಿಯೂ ದೋಷಪರಿಹಾರ ಮಾಡುವನು.
18 परमप्रभुको सामु भएको वेदीको नजिक त्यो जाओस् र त्यसको निम्ति प्रायश्‍चित्त गरोस्, र साँढे र बोकाको केही रगत लिएर त्यसले वेदीका सिङहरूका चारैतिर लगाओस् ।
೧೮ತರುವಾಯ ಅವನು ಹೊರಗೆ ಬಂದು ಯೆಹೋವನ ಸನ್ನಿಧಿಯಲ್ಲಿರುವ ಯಜ್ಞವೇದಿಯ ಬಳಿಗೆ ಹೋಗಿ ಅದಕ್ಕಾಗಿ ದೋಷಪರಿಹಾರ ಮಾಡಬೇಕು. ಆ ಹೋರಿಯ ರಕ್ತದಲ್ಲಿಯೂ ಹಾಗೂ ಆ ಹೋತದ ರಕ್ತದಲ್ಲಿಯೂ ಸ್ವಲ್ಪವನ್ನು ತೆಗೆದುಕೊಂಡು ಯಜ್ಞವೇದಿಯ ಕೊಂಬುಗಳಿಗೆ ಸುತ್ತಲೂ ಹಚ್ಚಬೇಕು.
19 त्यसले त्यसलाई शुद्ध गर्न र इस्राएलका मानिसहरूका अशुद्ध कामहरूबाट टाढा गरी परमप्रभुको निम्ति अलग्‍ग गर्नलाई त्यसमाथि आफ्नो औँलाले केही रगत सात पटक छर्कोस् ।
೧೯ಅವನು ಆ ರಕ್ತದಲ್ಲಿ ಸ್ವಲ್ಪವನ್ನು ಅದರ ಮೇಲೆ ಏಳು ಸಾರಿ ಬೆರಳಿನಿಂದ ಚಿಮುಕಿಸಿ ಇಸ್ರಾಯೇಲರಿಂದ ಅದಕ್ಕೆ ಉಂಟಾದ ಅಶುದ್ಧತ್ವವನ್ನು ಹೋಗಲಾಡಿಸಿ ಅದನ್ನು ಪರಿಶುದ್ಧಪಡಿಸಬೇಕು.
20 त्यसले महा-पवित्र स्थान, भेट हुने पाल र वेदीको निम्ति प्रायश्‍चित्त गरेर सक्‍काएपछि त्यसको जिउँदो बोका अर्पण गरोस् ।
೨೦“ಆರೋನನು ಮಹಾಪವಿತ್ರಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ ಇವುಗಳಿಗೋಸ್ಕರ ದೋಷಪರಿಹಾರ ಮಾಡಿ ಮುಗಿಸಿದ ಮೇಲೆ ಆ ಸಜೀವವಾದ ಹೋತವನ್ನು ತರಿಸಬೇಕು.
21 हारूनले आफ्ना दुवै हात त्यस जिउँदो बोकाको शिरमा राखोस् र त्यसमाथि इस्राएलका मानिसहरूका सबै दुष्‍टता, तिनीहरूका सबै विद्रोह, र सबै पापलाई मानिलिओस् । त्यसपछि त्यसले त्यस बोकाको शिरमाथि त्यो पाप राखोस् र त्यस बोकालाई उजाड-स्थानतर्फ डोर्‍याउन तयार भएको मानिसको जिम्मामा दिओस् ।
೨೧ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು.
22 त्यस बोकाले मानिसहरूका सबै दुष्‍टतालाई आफूमाथि बोकी एउटा एकान्‍त ठाउँमा जाओस् । उता उजाड-स्थानमा त्यस मानिसले त्यो बोकालाई छोडिदिओस् ।
೨೨ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
23 त्यसपछि हारून फर्केर भेट हुने पालमा जाओस् र महा-पवित्र स्थानमा जानुअगि त्यसले लगाएका सूतीका लुगाहरू फुकालोस्, र ती लुगाहरूलाई त्यहीँ नै छोडोस् ।
೨೩“ತರುವಾಯ ಆರೋನನು ದೇವದರ್ಶನದ ಗುಡಾರದೊಳಗೆ ಬಂದು ತಾನು ಮಹಾಪವಿತ್ರಸ್ಥಾನದೊಳಗೆ ಹೋಗುವುದಕ್ಕಾಗಿ ಧರಿಸಿಕೊಂಡಿದ್ದ ನಾರುಮಡಿಗಳನ್ನು ತೆಗೆದು ಅಲ್ಲೇ ಇಡಬೇಕು.
24 त्यसले कुनै पवित्र स्थानमा आफ्नो शरीर पानीले नुहाओस्, र आफ्ना साधारण लुगा लगाओस्, र त्यसपछि त्यो गएर आफ्ना मानिसहरूका निम्ति होमबलि अर्पण गरोस् अनि यसरी आफ्नो र मानिसहरूका निम्ति प्रायश्‍चित्त गरोस् ।
೨೪ಅವನು ಪವಿತ್ರ ಸ್ಥಳದ ಪ್ರಾಕಾರದಲ್ಲಿ ಸ್ನಾನಮಾಡಿ, ತನ್ನ ವಸ್ತ್ರಗಳನ್ನು ಧರಿಸಿಕೊಳ್ಳಬೇಕು. ಆಗ ಅವನು ಹೊರಗೆ ಬಂದು ತನಗಾಗಿಯೂ ಮತ್ತು ಜನಸಮೂಹಕ್ಕಾಗಿಯೂ ಸರ್ವಾಂಗಹೋಮಗಳನ್ನು ಸಮರ್ಪಿಸಿ, ತನಗಾಗಿಯೂ ಮತ್ತು ಜನರಿಗಾಗಿಯೂ ದೋಷಪರಿಹಾರ ಮಾಡಬೇಕು.
25 त्यसले वेदीमा पापबलिको बोसोलाई जलाओस् ।
೨೫ಅವನು ದೋಷಪರಿಹಾರಕ ಯಜ್ಞಪಶುಗಳ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು.
26 छोडिने बोकालाई जान दिने मानिसले आफ्ना लुगाहरू र आफ्नो शरीर पानीले धोओस्, र त्यसपछि त्यो छाउनीभित्र फर्कन सक्‍छ ।
೨೬“ಅಜಾಜೇಲನಿಗೆ ಹೋತವನ್ನು ಬಿಟ್ಟುಬಂದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯಕ್ಕೆ ಬರಬೇಕು.
27 पापबलिको निम्ति साँढे र बोका, जसको रगत पवित्र स्थानमा प्रायश्‍चित्त गर्नका निम्ति ल्याइएको थियो, ती दुवैलाई छाउनीभन्दा बाहिर लगिओस् । त्यहाँ तिनीहरूले त्यसका छाला, मासु र गोबर जलाउने छन् ।
೨೭ದೋಷಪರಿಹಾರಕ ಯಜ್ಞಪಶುಗಳಾದ ಹೋರಿ ಮತ್ತು ಹೋತಗಳ ರಕ್ತವನ್ನು ಮಹಾಪವಿತ್ರಸ್ಥಾನದಲ್ಲಿ ದೋಷಪರಿಹಾರ ಮಾಡುವುದಕ್ಕಾಗಿ ತಂದ ಮೇಲೆ ಅವುಗಳ ಶರೀರಗಳನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ, ಚರ್ಮ, ಮಾಂಸ ಮತ್ತು ಕಲ್ಮಷಗಳೆಲ್ಲವನ್ನು ಬೆಂಕಿಯಿಂದ ಸುಡಿಸಬೇಕು.
28 ती भागहरू जलाउने मानिसले आफ्ना लुगाहरू धोओस् र आफ्नो शरीर पानीले नुहाओस्, र त्यसपछि त्यो छाउनीभित्र आउन मिल्छ ।
೨೮ಅವುಗಳನ್ನು ಸುಟ್ಟವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಿಯೇ ಪಾಳೆಯದೊಳಗೆ ಬರಬೇಕು.
29 यो तिमीहरूका निम्ति सधैँ एउटा विधि बनोस्, कि सातौँ महिनाको दसौँ दिनमा, तिमीहरूका बिचमा जन्मेको वा तिमीहरूका बिचमा बास गर्ने परदेशी सबैले आफैलाई नम्र बनाओस् र कुनै काम नगरोस् ।
೨೯“ಸ್ವದೇಶಸ್ಥರಾದ ನೀವೂ ಮತ್ತು ನಿಮ್ಮಲ್ಲಿ ವಾಸವಾಗಿರುವ ಅನ್ಯದೇಶದವರು, ಎಲ್ಲರೂ ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ಸಕಲ ವಿಧವಾದ ಕೆಲಸಗಳನ್ನು ಬಿಟ್ಟು ಉಪವಾಸಮಾಡಿ ನಿಮ್ಮ ಆತ್ಮಗಳನ್ನು ಕುಂದಿಸಿಕೊಳ್ಳಬೇಕು. ಇದು ನಿಮಗೆ ಶಾಶ್ವತವಾದ ನಿಯಮ.
30 किनभने तिमीहरूका सबै पापबाट तिमीहरूलाई शुद्ध गर्नका निम्ति यस दिनमा तिमीहरूका खातिर प्रायश्‍चित्त गरिने छ, यसैकारण तिमीहरू परमप्रभुको अगि शुद्ध हुने छौ ।
೩೦ಏಕೆಂದರೆ ನೀವು ಪರಿಶುದ್ಧರಾಗುವುದಕ್ಕಾಗಿ ಈ ದಿನದಲ್ಲಿ ನಿಮಗೋಸ್ಕರ ದೋಷಪರಿಹಾರವಾಗುವುದು, ಯೆಹೋವನ ದೃಷ್ಟಿಯಲ್ಲಿ ನಿಮ್ಮ ಎಲ್ಲಾ ದೋಷಗಳು ನಿವಾರಣೆಯಾಗುವವು.
31 यो तिमीहरूका निम्ति विश्रामको विधिपूर्ण शबाथ हो, र तिमीहरूले आफैलाई नम्र बनाउनुपर्छ र कुनै काम गर्नुहुँदैन । यो तिमीहरूका बिचमा सधैँ एउटा विधि हुने छ ।
೩೧ಈ ದಿನ ನೀವು ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿರಬೇಕು; ಇದರಲ್ಲಿ ನೀವು ಉಪವಾಸ ಮಾಡಬೇಕು; ಇದೇ ನಿಮಗೆ ಶಾಶ್ವತನಿಯಮ.
32 आफ्नो पिताको स्थानमा प्रधान पुजारी हुनको निम्ति अभिषेक भएको र नियुक्‍त भएको प्रधान पुजारीले यसरी प्रायश्‍चित्त गरोस् र पवित्र लुगाहरू, अर्थात् सूतीका लुगाहरू लगाओस् ।
೩೨“ಆರೋನನ ವಂಶದವರಲ್ಲಿ ಯಾವನಿಗೆ ಪಿತೃಸ್ಥಾನದಲ್ಲಿ ಮಹಾಯಾಜಕನ ಸೇವಾವೃತ್ತಿಯನ್ನು ನಡೆಸುವುದಕ್ಕೆ ಪಟ್ಟಾಭಿಷೇಕವಾಗುವುದೋ ಅವನೇ ಈ ದೋಷಪರಿಹಾರ ಕಾರ್ಯವನ್ನು ಆಚರಿಸಬೇಕು. ಅವನೇ ಆ ಪರಿಶುದ್ಧವಾದ ನಾರುಮಡಿಗಳನ್ನು ಧರಿಸಿಕೊಳ್ಳಬೇಕು.
33 त्यसले महा-पवित्र स्थान, भेट हुने पाल, वेदी, पुजारीहरू र समुदायका सबै मानिसहरूका निम्ति प्रायश्‍चित्त गरोस् ।
೩೩ಅವನು ದೇವಸ್ಥಾನ, ದೇವದರ್ಶನದ ಗುಡಾರ, ಯಜ್ಞವೇದಿ, ಯಾಜಕರು, ಜನಸಮೂಹದವರು ಈ ಎಲ್ಲರಿಗೋಸ್ಕರ ದೋಷಪರಿಹಾರವನ್ನು ಮಾಡಬೇಕು.
34 इस्राएलका मानिसहरूका सबै पापका कारण यो सधैँका लागि तिमीहरूले तिनीहरूका निम्ति वर्षमा एक पटक प्रायश्‍चित्त गर्ने विधि होस् ।” परमप्रभुले मोशालाई आज्ञा गर्नुभएअनुसार नै यो भयो ।
೩೪ಇಸ್ರಾಯೇಲರ ಎಲ್ಲಾ ದೋಷಗಳನ್ನು ನಿವಾರಣೆಮಾಡುವುದಕ್ಕಾಗಿ ಅವರಿಗೋಸ್ಕರ ವರ್ಷಕ್ಕೆ ಒಂದಾವರ್ತಿ ದೋಷಪರಿಹಾರವನ್ನು ಮಾಡಬೇಕೆಂಬುದೇ ನಿಮಗೆ ಶಾಶ್ವತನಿಯಮ” ಎಂದು ಹೇಳಿದನು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

< लेवीहरू 16 >