< यहोशू 16 >
1 योसेफको कुलको भू-भागको अंश यरीहोमा यर्दनबाट यरीहोको पानीका मुहानहरूको पूर्वतिर, मरुभूमितिर, बेथेलको पहाडी देश हुँदै यरीहोबाट माथि जान्छ ।
೧ಯೋಸೇಫನ ವಂಶದವರಿಗೆ ದೊರಕಿದ ಸ್ವತ್ತಿನ ಮೇರೆಯು: ಯೆರಿಕೋವಿನ ಬಳಿಯಲ್ಲಿ ಯೊರ್ದನ್ ತೀರದಿಂದ ಯೆರಿಕೋವಿನ ಪೂರ್ವದಲ್ಲಿದ್ದ ನದಿ, ಯೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಬೆಟ್ಟದ ಸೀಮೆಯ ಅರಣ್ಯ ಹಾಗೂ
2 त्यसपछि यो बेथेलबाट लूजतिर, अरकीको क्षेत्रतिर गयो ।
೨ಬೇತೇಲ್ ಇವುಗಳ ಮೇಲೆ ಲೂಜಿಗೂ ಹೋಗುತ್ತದೆ. ಅಲ್ಲಿಂದ ಅರ್ಕಿಯರ ಮೇರೆಯನ್ನು ಅನುಸರಿಸಿ ಅಟಾರೋತಿಗೆ ಹೋಗುತ್ತದೆ
3 त्यसपछि यो तल्लो बेथ-होरोनको क्षेत्रसम्मै यल्पेतीको क्षेत्रसम्म पश्चिमतिर झर्यो र गेजेरतिर गयो; यो समुद्रमा टुङ्गियो ।
೩ಅಲ್ಲಿಂದ ಇಳಿದು ಪಶ್ಚಿಮ ದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತ್ಯವನ್ನು ಮುಟ್ಟಿ ಕೆಳಗಿನ ಬೇತ್ ಹೋರೋನ್ ಮೇಲೆ ಗೆಜೆರಿಗೆ ಹೋಗಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
4 योसेफका कुल मनश्शे र एफ्राइमले तिनीहरूका उत्तराधिकार यसरी प्राप्त गरे ।
೪ಇದು ಯೋಸೇಫನ ಮಕ್ಕಳಾದ ಮನಸ್ಸೆ, ಎಫ್ರಾಯೀಮ್ ಎಂಬ ಕುಲಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು.
5 कुल-कुलअनुसार एफ्राइमको कुलको क्षेत्रः तिनीहरूको भागको पूर्वतिरको सिमाना अतारोत-अद्दारबाट माथिल्लो बेथ-होरोनसम्म निस्क्यो,
೫ಎಫ್ರಾಯೀಮ್ ಗೋತ್ರಗಳ ದೇಶದ ದಕ್ಷಿಣ ದಿಕ್ಕಿನ ಮೇರೆಯು ಅಟಾರೋತದ್ದಾರಿನ ಪೂರ್ವ ದಿಕ್ಕಿನಿಂದ ಬೇತ್ ಹೋರೋನಿನ ಮೇಲೆ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
6 र यो त्यहाँबाट सममुद्रसम्म पुग्यो । मिक्मतातबाट उत्तरतिर यो पूर्वतर्फ तानत-शीलोतिर मोडियो र यसभन्दा उता पूर्वतिर यानोह निस्क्यो ।
೬ಅದರ ಉತ್ತರ ದಿಕ್ಕಿನ ಮೇರೆಯು ಮಿಕ್ಮೆತಾತ್ ಯಿಂದ ಪೂರ್ವಕ್ಕೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗುತ್ತದೆ.
7 त्यसपछि यो यानोहबाट अतारोतिर तल झर्यो, र यरीहो पुगेर यर्दनमा अन्त भयो ।
೭ಅಲ್ಲಿಂದ ಯಾನೋಹ ಊರಿನ ಪೂರ್ವಮಾರ್ಗವಾಗಿ ಅಟಾರೋತ್, ನಾರಾ ಎಂಬ ಊರುಗಳ ಮೇಲೆ ಇಳಿಯುತ್ತಾ ಯೆರಿಕೋ ಪ್ರಾಂತ್ಯಕ್ಕೆ ಬಂದು ಯೊರ್ದನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
8 तप्पूहबाट पश्चिमतिर कना खोलातिर समुद्रमा टुङ्गियो । यो कुल-कुलअनुसार एफ्राइमको कुलको भाग,
೮ಅದರ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ಹಳ್ಳವನ್ನು ಅನುಸರಿಸಿ ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಫ್ರಾಯೀಮ್ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವುಗಳೇ.
9 मनश्शेको कुलको उत्तराधिकारभित्र एफ्राइमको कुललाई चुनिएका सहरहरूसँगै तिनीहरूका गाउँहरूसहित सबै सहर थिए ।
೯ಇದಲ್ಲದೆ ಎಫ್ರಾಯೀಮ್ ಕುಲದವರ ಮತ್ತು ಮನಸ್ಸೆ ಕುಲದವರ ಮಧ್ಯದಲ್ಲಿ ಪ್ರತ್ಯೇಕವಾದ ಕೆಲವು ಪಟ್ಟಣಗಳು ಅವುಗಳಿಗೆ ಸೇರಿದ ಗ್ರಾಮಗಳು ದೊರಕಿದವು.
10 तिनीहरूले गेजेरमा बस्ने कनानीहरूलाई धपाएनन्, त्यसैले आजको दिनसम्म पनि एफ्राइमभित्र कनानीहरू बस्छन्, तर यी मानिसहरूलाई बेगारी काम गर्न लगाइएको थियो ।
೧೦ಅವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ ಅವರು ಇಂದಿನವರೆಗೂ ಎಫ್ರಾಯೀಮ್ಯರ ಮಧ್ಯದಲ್ಲಿ ದಾಸತ್ವದಲ್ಲಿದ್ದುಕೊಂಡು ಅವರಿಗೋಸ್ಕರ ಸೇವೆ ಮಾಡುತ್ತಿದ್ದಾರೆ.