< यर्मिया 24 >
1 परमप्रभुले मलाई केही कुरो देखाउनुभयो । हेर, परमप्रभुको मन्दिरको सामु अञ्जीरका दुईवटा डाला राखिएका थिए । (बेबिलोनका राजा नबूकदनेसरले यहूदाका राजा यहोयाकीमका छोरा यहोयाकीन, यहूदाका अधिकारीहरू, कारीगरहरू, र धातुका काम गर्नेहरूलाई यरूशलेमबाट कैद गरेर लगेको र तिनीहरूलाई बेबिलोनमा ल्याएको समयपछि यो दर्शन देखियो ।)
೧ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ ಯೆಹೂದದ ಅರಸನೂ ಆದ ಯೆಕೊನ್ಯನನ್ನೂ, ಯೆಹೂದದ ಪ್ರಧಾನರನ್ನೂ, ಶಿಲ್ಪಿಗಳನ್ನೂ ಮತ್ತು ಕಮ್ಮಾರರನ್ನೂ ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದ ಮೇಲೆ ಯೆಹೋವನ ಆಲಯದ ಮುಂದೆ ಇಟ್ಟಿರುವ ಅಂಜೂರದ ಹಣ್ಣು ತುಂಬಿದ ಎರಡು ಪುಟ್ಟಿಗಳನ್ನು ಯೆಹೋವನು ನನಗೆ ತೋರಿಸಿದನು.
2 एउटा डालोमा भएका अञ्जीरहरू पहिले पाकेका अञ्जीरहरूजस्तै असाध्यै राम्रा थिए, तर अर्को डालोमा भएका अञ्जीरहरू असाध्यै खराब थिए, जसलाई खानै सकिंदैनथ्यो ।
೨ಒಂದು ಪುಟ್ಟಿಯಲ್ಲಿ ಫಲ ಕಾಲಕ್ಕೆ ಮುಂಚೆ ಮಾಗಿದ ಹಣ್ಣುಗಳ ಹಾಗೆ ಕಾಣುತ್ತಿದ್ದ ಅತ್ಯುತ್ತಮವಾದ ಅಂಜೂರದ ಫಲಗಳು ತುಂಬಿದ್ದವು. ಇನ್ನೊಂದು ಪುಟ್ಟಿಯಲ್ಲಿ ಯಾರೂ ತಿನ್ನದ ಹಾಗೆ ಬಹಳ ಕೆಟ್ಟು ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳು ತುಂಬಿದ್ದವು.
3 परमप्रभुले मलाई भन्नुभयो, “ए यर्मिया, तँ के देख्छस्?” मैले भनें, “अञ्जीरहरू । अञ्जीरहरू जुन राम्रा छन् र अञ्जीरहरू जुन खानै नसकिने असाध्यै खराब छन् ।”
೩ಆಗ ಯೆಹೋವನು ನನ್ನನ್ನು, “ಯೆರೆಮೀಯನೇ, ಏನು ನೋಡುತ್ತೀ?” ಎಂದು ಕೇಳಲು ನಾನು, “ಅಂಜೂರದ ಫಲಗಳನ್ನು ನೋಡುತ್ತೇನೆ; ಉತ್ತಮ ಫಲಗಳು ಅತ್ಯುತ್ತಮವಾಗಿವೆ, ಕೆಟ್ಟ ಫಲಗಳು ಬಹಳ ಕೆಟ್ಟಿವೆ, ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾಗಿವೆ” ಎಂದು ಉತ್ತರ ಕೊಟ್ಟೆನು.
4 तब परमप्रभुको वचन यसो भनेर मकहाँ आयो,
೪ಆಗ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು.
5 “परमप्रभु इस्राएलका परमेश्वर यसो भन्नुहुन्छ, 'मैले यस ठाउँबाट कल्दीको देशमा निष्कासित गरेका यहूदाका निर्वासितहरूलाई तिनीहरूको लाभको निम्ति यी राम्रा अञ्जीरहरूजस्तै गरी म हेर्नेछु ।
೫“ಇಸ್ರಾಯೇಲ ದೇವರಾದ ಯೆಹೋವನು ಇಂತೆನ್ನುತ್ತಾನೆ, ನಾನು ಈ ಸ್ಥಳದೊಳಗಿಂದ ಕಸ್ದೀಯರ ದೇಶಕ್ಕೆ ಕಳುಹಿಸಿಬಿಟ್ಟ ಸೆರೆಯವರಾದ ಯೆಹೂದ್ಯರನ್ನು ಈ ಉತ್ತಮವಾದ ಅಂಜೂರದ ಫಲಗಳಂತೆ ಲಕ್ಷಿಸಿ, ಅವರಿಗೆ ಮೇಲನ್ನುಂಟುಮಾಡುವೆನು.
6 तिनीहरूको भलाइको निम्ति म आफ्नो दृष्टि तिनीहरूमा लगाउनेछु, र तिनीहरूलाई यस देशमा पुनर्स्थापित गराउनेछु । म तिनीहरूलाई बनाउनेछु, र तिनीहरूलाई भत्काउनेछैनँ । म तिनीहरूलाई रोप्नेछु, र तिनीहरूलाई उखेल्नेछैनँ ।
೬ಅವರನ್ನು ಕಟಾಕ್ಷಿಸಿ ಈ ದೇಶಕ್ಕೆ ತಿರುಗಿ ಬರಮಾಡುವೆನು. ಅವರನ್ನು ಕಟ್ಟುವೆನು, ಕೆಡವುವದಿಲ್ಲ; ನೆಡುವೆನು, ಕೀಳುವುದಿಲ್ಲ.
7 त्यसपछि मलाई चिन्ने हृदय म तिनीहरूलाई दिनेछु, किनकि म परमप्रभु हुँ । तिनीहरू मेरो मानिसहरू हुनेछन्, र म तिनीहरूका परमेश्वर हुनेछु । यसरी तिनीहरू आफ्ना सारा हृदयसले मतिर फर्कनेछन् ।'
೭ಅವರು ನನ್ನನ್ನು ಯೆಹೋವನೆಂದು ಗ್ರಹಿಸತಕ್ಕ ಹೃದಯವನ್ನು ಅವರಿಗೆ ಅನುಗ್ರಹಿಸುವೆನು. ಅವರು ನನ್ನ ಜನರಾಗಿರುವರು, ನಾನು ಅವರ ದೇವರಾಗಿರುವೆನು; ಅವರು ನನ್ನ ಕಡೆಗೆ ಮನಃಪೂರ್ವಕವಾಗಿ ಹಿಂದಿರುಗಿ ಬರುವರು” ಎಂಬುದೇ.
8 तर परमप्रभु भन्नुहुन्छ, यहूदाका राजा सिदकियाह, त्यसका अधिकारीहरू र यस देशमा भएका यरूशलेममा रहेका र मिश्रदेशमा गएका बाँकी मानिसहरूसित म खानै नसकिने यी खराब अञ्जीरहरूझैं व्यवहार गर्नेछु ।
೮ಇದಲ್ಲದೆ ಯೆಹೋವನು, “ಯೆಹೂದದ ಅರಸನಾದ ಚಿದ್ಕೀಯ, ಅವನ ಪ್ರಧಾನರು, ಈ ದೇಶದಲ್ಲಿ ನಿಂತಿರುವ ಯೆರೂಸಲೇಮಿನವರ ಶೇಷ, ಐಗುಪ್ತ ದೇಶಕ್ಕೆ ವಲಸೆಯಾದವರು, ಕೆಟ್ಟು ಯಾರೂ ತಿನ್ನದ ಹಾಗೆ ಕೇವಲ ಅಸಹ್ಯವಾದ ಅಂಜೂರದ ಹಣ್ಣುಗಳ ಗತಿಗೆ ಇವರನ್ನು ತರುವೆನು.
9 पृथ्वीमा भएका सबै राज्यको दृष्टिमा मैले तिनीहरूलाई धपाएको हरेक ठाउँमा, म तिनीहरूलाई तर्साउने कुरा, विपत्ति, अपमान, घृणा, गिल्ला, हाँसो र सरापको पात्रमा परिणत गरिदिनेछु ।
೯ಅವರ ಕೇಡಿಗಾಗಿ ನಾನು ಅವರನ್ನು ಲೋಕದ ಸಮಸ್ತ ರಾಜ್ಯಗಳಿಗೆ ಭಯಗ್ರಸ್ತರಾಗುವಂತೆ ಮಾಡುವೆನು; ನಾನು ಅವರನ್ನು ಅಟ್ಟಿಬಿಡುವ ಸ್ಥಳಗಳಲ್ಲೆಲ್ಲಾ ಅವರು ನಿಂದೆ, ಕಟ್ಟುಗಾದೆ, ಪರಿಹಾಸ್ಯ, ಶಾಪ, ಇವುಗಳಿಗೆ ಗುರಿಯಾಗುವರು.
10 तिनीहरू र तिनीहरूका पुर्खाहरूलाई दिएको देशबाट तिनीहरू नष्ट नहुञ्जेल, म तिनीहरूको विरुद्धमा तरवार, अनिकाल र विपत्ति पठाउनेछु' ।”
೧೦ನಾನು ಅವರಿಗೂ ಅವರ ಪೂರ್ವಿಕರಿಗೂ ಅನುಗ್ರಹಿಸಿದ ದೇಶದೊಳಗಿಂದ ಅವರು ನಿರ್ಮೂಲರಾಗುವ ತನಕ ಖಡ್ಗ, ಕ್ಷಾಮ ಮತ್ತು ವ್ಯಾಧಿಗಳನ್ನು ಅವರ ಮೇಲೆ ಕಳುಹಿಸುವೆನು” ಎಂದು ಹೇಳುತ್ತಾನೆ.