< उत्पत्ति 39 >
1 योसेफलाई मिश्रमा लगियो । अङ्गरक्षकहरूका एक मिश्री कप्तान फारोका अधिकारी पोतीफरले उनलाई इश्माएलीहरूबाट किने ।
೧ಯೋಸೇಫನನ್ನು ಕ್ರಯಕ್ಕೆ ತೆಗೆದುಕೊಂಡು ಹೋಗಿದ್ದ ಇಷ್ಮಾಯೇಲರು ಐಗುಪ್ತ ದೇಶಕ್ಕೆ ಹೋದರು. ಅಲ್ಲಿ ಒಬ್ಬ ಐಗುಪ್ತ್ಯನು ಅವನನ್ನು ಅವರಿಂದ ಕ್ರಯಕ್ಕೆ ತೆಗೆದುಕೊಂಡನು. ಇವನು ಫರೋಹನ ಉದ್ಯೋಗಸ್ಥನು, ಐಗುಪ್ತರ ದಂಡಿನ ಮುಖ್ಯಸ್ಥನು ಆಗಿದ್ದ ಪೋಟೀಫರನು ಎಂಬುವನಾಗಿದ್ದನು.
2 परमप्रभु योसेफसँग हुनुहुन्थ्यो र उनी एक समृद्ध मानिस भए । उनी आफ्ना मिश्री मालिकका घरमा बस्थे ।
೨ಯೆಹೋವನು ಯೋಸೇಫನ ಸಂಗಡ ಇದ್ದುದರಿಂದ ಅವನು ಕೃತಾರ್ಥನಾದನು. ಐಗುಪ್ತನಾದ ತನ್ನ ದಣಿಯ ಮನೆಯೊಳಗೆ ಯೋಸೇಫನು ಸೇವಕನಾದನು.
3 परमप्रभु उनीसँग हुनुहुन्छ र उनले गर्ने सबै काममा उनलाई समृद्धि मिल्छ भन्ने कुरा उनको मालिकले देखे ।
೩ಯೆಹೋವನು ಯೋಸೇಫನ ಸಂಡಗವಿದ್ದು ಅವನು ಮಾಡುವ ಕೆಲಸವನ್ನೆಲ್ಲಾ ಸಫಲವಾಗುವಂತೆ ಮಾಡುತ್ತಾನೆಂದು ಅವನ ದಣಿಯು ತಿಳಿದನು.
4 योसेफले तिनको कृपादृष्टि पाए । उनले पोतीफरको सेवा गरे । पोतीफरले योसेफलाई आफ्नो घर र तिनको स्वामित्वमा रहेका सबै कुरामाथि अधिकार दिए, र ती उनको जिम्मामा लगाए ।
೪ಆದುದರಿಂದ ಅವನ ದಣಿಯು ಯೋಸೇಫನ ಮೇಲೆ ದಯೆ ಇಟ್ಟು, ಅವನನ್ನು ಸ್ವಂತ ಸೇವಕನನ್ನಾಗಿ ನೇಮಿಸಿಕೊಂಡನು. ಇದಲ್ಲದೆ ಆ ದಣಿಯು ಅವನಿಗೆ ತನ್ನ ಮನೆಯಲ್ಲಿ ಪಾರುಪತ್ಯವನ್ನು ಕೊಟ್ಟು ತನ್ನ ಆಸ್ತಿಯನ್ನೆಲ್ಲಾ ಅವನ ವಶಕ್ಕೆ ಒಪ್ಪಿಸಿದನು.
5 तिनको घर र तिनको स्वामित्वमा रहेका सबै कुरामाथि योसेफलाई अधिकार दिएपछि योसेफको कारण परमप्रभुले त्यस मिश्रीको घरलाई आशिषित् गर्नुभयो । पोतीफरको घर र खेतमा भएका सबै कुरामाथि परमप्रभुको आशिष् रह्यो ।
೫ಅವನು ಯೋಸೇಫನನ್ನು ತನ್ನ ಮನೆಯ ಮೇಲೆಯೂ, ಆಸ್ತಿಯ ಮೇಲೆಯೂ ಮೇಲ್ವಿಚಾರಕನನ್ನಾಗಿ ಇಟ್ಟಿದ್ದರಿಂದ ಯೆಹೋವನು ಯೋಸೇಫನ ನಿಮಿತ್ತವಾಗಿ ಆ ಐಗುಪ್ತನ ಮನೆಯನ್ನು ಅಭಿವೃದ್ಧಿಗೆ ತಂದನು. ಮನೆಯಲ್ಲಾಗಲಿ, ಹೊಲದಲ್ಲಾಗಲಿ ಅವನಿಗಿದ್ದ ಎಲ್ಲಾದರ ಮೇಲೆ ಯೆಹೋವನ ಆಶೀರ್ವಾದವುಂಟಾಯಿತು.
6 पोतीफरले आफ्ना सबै कुरा योसेफको जिम्मामा दिए । तिनले आफूले खाने भोजनबाहेक अरू कुनै कुराको विषयमा पनि चिन्ता लिनु पर्दैनथ्यो । योसेफ सुन्दर र आकर्षक थिए ।
೬ಅವನು ತನ್ನ ಆಸ್ತಿಯನ್ನೆಲ್ಲಾ ಯೋಸೇಫನ ವಶಕ್ಕೆ ಒಪ್ಪಿಸಿದನು. ಇವನು ತನ್ನ ಬಳಿಯಲ್ಲೇ ಇದ್ದುದರಿಂದ ತಾನು ತಿನ್ನುವ ಆಹಾರ ಒಂದನ್ನೇ ಹೊರತು ಬೇರೆ ಯಾವ ವಿಷಯದಲ್ಲೂ ಚಿಂತಿಸುತ್ತಿರಲಿಲ್ಲ. ಯೋಸೇಫನು ರೂಪವಂತನೂ, ಸುಂದರನೂ ಆಗಿದ್ದನು.
7 योसेफका मालिककी पत्नीले उनीप्रति चाहना राखिन् । तिनले भनिन्, “मसँग सुत ।”
೭ಹೀಗಿರುವಲ್ಲಿ ಯೋಸೇಫನ ದಣಿಯ ಹೆಂಡತಿಯು ಅವನನ್ನು ಮೋಹಿಸಿ “ನನ್ನ ಸಂಗಡ ಸಂಗಮಿಸಲು ಬಾ” ಎಂದಳು.
8 उनले इन्कार गरेर आफ्ना मालिककी पत्नीलाई यसो भने, “हेर्नुहोस्, मेरा मालिकले यस घरमा म के गर्छु भन्ने कुराप्रति कुनै चिन्ता गर्नुहुन्न, र उहाँका सबै कुरा उहाँले मेरै जिम्मामा दिनुभएको छ ।
೮ಆದರೆ ಅವನು ಒಪ್ಪದೆ, “ನನ್ನ ದಣಿಯು ತನ್ನ ಆಸ್ತಿಯನ್ನೆಲ್ಲಾ ನನ್ನ ವಶಕ್ಕೆ ಒಪ್ಪಿಸಿರುವುದಲ್ಲದೆ ನಾನು ಇಲ್ಲಿ ಇರುವುದರಿಂದ ಮನೆಯೊಳಗೆ ನಡೆಯುವ ಯಾವ ಕೆಲಸವನ್ನೂ ಚಿಂತಿಸದೇ ಇದ್ದಾನೆ.
9 मभन्दा ठुलो यस घरमा कोही छैन । उहाँले तपाईंबाहेक सबै कुरा मलाई दिनुभएको छ, किनभने तपाईं उहाँकी पत्नी हुनुहुन्छ । यसैकारण मैले कसरी यस्तो दुष्ट काम गरी परमेश्वरको विरुद्ध पाप गर्न सक्छु?”
೯ಈ ಮನೆಯಲ್ಲಿ ನನಗಿಂತ ಯಾರೂ ದೊಡ್ಡವರಲ್ಲ. ನೀನು ಅವನ ಧರ್ಮಪತ್ನಿಯಾದುದರಿಂದ ನಿನ್ನನ್ನು ಮಾತ್ರ ನನಗೆ ಅಧೀನ ಮಾಡಲಿಲ್ಲ. ಹೀಗಿರುವಲ್ಲಿ ನಾನು ಇಂಥಾ ಮಹಾ ದುಷ್ಟ ಕಾರ್ಯವನ್ನು ಮಾಡಿ ದೇವರಿಗೆ ವಿರೋಧವಾಗಿ ಹೇಗೆ ಪಾಪ ಮಾಡಲಿ?” ಎಂದು ತನ್ನ ದಣಿಯ ಹೆಂಡತಿಗೆ ಉತ್ತರ ಹೇಳಿದನು.
10 तिनले योसेफसँग दिनहुँ कुरा गरिन्, तर उनी तिनीसँग सुत्न वा तिनको नजिक जान इन्कार गरे ।
೧೦ಅವಳು ಯೋಸೇಫನ ಸಂಗಡ ಪ್ರತಿದಿನವೂ ಈ ಮಾತನ್ನು ಆಡಿದ್ದಾಗ್ಯೂ ಅವನು ಅದಕ್ಕೆ ಕಿವಿಗೊಡದೆ ಆಕೆಯನ್ನು ಮೋಹಿಸುವುದಕ್ಕಾಗಲಿ, ಆಕೆಯ ಬಳಿಯಲ್ಲಿರುವುದಕ್ಕಾಗಲೀ ಒಪ್ಪಿಕೊಳ್ಳಲೇ ಇಲ್ಲ.
11 एक दिन उनी आफ्ना काम गर्न घरभित्र प्रवेश गरे । घरभित्र कोही पनि मानिस थिएन ।
೧೧ಹೀಗಿರಲು ಒಂದು ದಿನ ಅವನು ತನ್ನ ಕೆಲಸದ ಮೇಲೆ ಮನೆಗೆ ಬಂದಾಗ ಮನೆಯೊಳಗೆ ಯಾವ ಸೇವಕರೂ ಇರಲಿಲ್ಲ.
12 तिनले उनको लुगा समातिन् र भनिन्, “मसँग सुत ।” उनले आफ्ना लुगा तिनकै हातमा छोडेर बाहिर भागे ।
೧೨ಆಕೆ ಅವನ ಬಟ್ಟೆಯನ್ನು ಹಿಡಿದುಕೊಂಡು, “ನನ್ನೊಂದಿಗೆ ಸಂಗಮಿಸಲು ಬಾ” ಎಂದು ಕರೆಯಲು, ಅವನು ತನ್ನ ಬಟ್ಟೆಯನ್ನು ಆಕೆಯ ಕೈಯಲ್ಲೇ ಬಿಟ್ಟು ತಪ್ಪಿಸಿಕೊಂಡು ಹೊರಗೆ ಓಡಿಹೋದನು.
13 जब योसेफ आफ्ना लुगा छोडेर बाहिर भागेका तिनले देखिन्,
೧೩ಅವನು ತನ್ನ ಬಟ್ಟೆಯನ್ನು ಅವಳ ಕೈಯಲ್ಲಿ ಬಿಟ್ಟು ತಪ್ಪಿಸಿಕೊಂಡು ಹೋದದ್ದನ್ನು ಆಕೆಯು ನೋಡಿ,
14 तिनले आफ्ना घरका मानिसहरूलाई बोलाएर भनिन्, “हेर, पोतीफरले हाम्रो बेइज्जत गर्न एउटा हिब्रूलाई ल्याउनुभएको छ । त्यो मकहाँ सुत्न भनेर आयो, अनि म चिच्याएँ ।
೧೪ಮನೆಯ ಸೇವಕರನ್ನು ಕರೆದು ಅವರಿಗೆ, “ನೋಡಿರಿ, ನನ್ನ ಯಜಮಾನನು ಒಬ್ಬ ಇಬ್ರಿಯನನ್ನು ನಮ್ಮೊಳಗೆ ಸೇರಿಸಿ ನಮ್ಮನ್ನು ಅವಮಾನಕ್ಕೆ ಗುರಿಮಾಡಿದ್ದಾನೆ. ಅವನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಹತ್ತಿರ ಬಂದನು. ನಾನು ಗಟ್ಟಿಯಾಗಿ ಕೂಗಿಕೊಂಡೆನು.
15 जब त्यसले म चिच्याएकी सुन्यो, त्यसले आफ्ना लुगा मकहाँ छोडेर बाहिर भाग्यो ।”
೧೫ನಾನು ಕೂಗುವುದನ್ನು ಕೇಳಿ ಅವನು ತನ್ನ ಬಟ್ಟೆಯನ್ನು ನನ್ನ ಬಳಿಯಲ್ಲೇ ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದಳು.
16 तिनको मालिक घर नआउन्जेलसम्म तिनले त्यो लुगा आफ्नै साथमा राखिन् ।
೧೬ತನ್ನ ಯಜಮಾನನು ಮನೆಗೆ ಬರುವ ತನಕ ಆಕೆಯು ಆ ಬಟ್ಟೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿದ್ದಳು.
17 तिनले उनलाई यसरी वर्णन गरिन्, “तपाईंले हाम्रो निम्ति ल्याउनुभएको त्यो हिब्रू नोकर मेरो बेइज्जत गर्न मकहाँ आयो ।
೧೭ಯಜಮಾನನು ಬಂದಾಗ ಆಕೆಯು ಅದೇ ಮಾತನ್ನು ಹೇಳಿ ಅವನಿಗೆ, “ನೀನು ನಮ್ಮಲ್ಲಿ ಸೇರಿಸಿಕೊಂಡ ಆ ಇಬ್ರಿಯ ಸೇವಕನು ನನ್ನನ್ನು ಮಾನಭಂಗಪಡಿಸುವುದಕ್ಕೆ ನನ್ನ ಬಳಿಗೆ ಬಂದನು.
18 जब म चिच्याएँ, त्यसले आफ्ना लुगा मकहाँ छोडेर बाहिर भाग्यो ।”
೧೮ನಾನು ಜೋರಾಗಿ ಕೂಗಿಕೊಂಡಾಗ ಅವನು ತನ್ನ ಬಟ್ಟೆಯನ್ನು ಬಿಟ್ಟು ತಪ್ಪಿಸಿಕೊಂಡು ಓಡಿಹೋದನು” ಎಂದು ಹೇಳಿದಳು.
19 आफ्नो नोकरले आफ्नी पत्नीलाई गरेको व्यवहार आफ्नी पत्नीबाट सुनेपछि तिनी रिसले चुर भए ।
೧೯ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬುದಾಗಿ ತನ್ನ ಹೆಂಡತಿ ಹೇಳಿದ ಮಾತುಗಳನ್ನು ಯೋಸೇಫನ ದಣಿಯು ಕೇಳಿದಾಗ ಬಹಳ ಸಿಟ್ಟುಗೊಂಡನು.
20 योसेफका मालिकले उनलाई झ्यालखानामा राखे जहाँ राजाका कैदीहरू राखिन्थे । उनी त्यही झ्यालखानामा थिए ।
೨೦ಆಗ ಯೋಸೇಫನ ದಣಿಯು ಅವನನ್ನು ಹಿಡಿದು ಅರಸನ ಕೈದಿಗಳನ್ನಿಡುವ ಸೆರೆಮನೆಯಲ್ಲಿ ಹಾಕಿಸಿದನು. ಅಲ್ಲಿ ಯೋಸೇಫನು ಸೆರೆಯಲ್ಲಿ ಇರಬೇಕಾಯಿತು.
21 तर परमप्रभु योसेफसँग हुनुहुन्थ्यो र आफ्ना करारप्रति उहाँ भरोसायोग्य रहनुभयो । झ्यालखानाका हाकिमको नजरमा उहाँले उनलाई कृपादृष्टि दिनुभयो ।
೨೧ಆದರೆ ಯೆಹೋವನು ಯೋಸೇಫನ ಸಂಗಡ ಇದ್ದು ಅವನ ಮೇಲೆ ಕರುಣೆಯನ್ನಿಟ್ಟು ಸೆರೆಮನೆಯ ಯಜಮಾನನಿಂದ ದಯೆ ದೊರಕುವಂತೆ ಮಾಡಿದನು.
22 झ्यालखानाका हाकिमले झ्यालखानाका सबै कैदीहरू योसेफको जिम्मामा दिए । तिनीहरूले गर्ने काममाथि योसेफकै निगरानी हुन्थ्यो ।
೨೨ಸೆರೆಮನೆಯ ಯಜಮಾನನು ಸೆರೆಯಲ್ಲಿದ್ದವರೆಲ್ಲರನ್ನೂ ಯೋಸೇಫನ ವಶಕ್ಕೆ ಒಪ್ಪಿಸಿ ಅವನನ್ನು ಮೇಲ್ವಿಚಾರಕನನ್ನಾಗಿ ಮಾಡಿದನು. ಅವರು ಮಾಡಬೇಕಾದ ಎಲ್ಲ ಕೆಲಸವನ್ನು ಯೋಸೇಫನೇ ಮಾಡಿಸುತ್ತಿದ್ದನು.
23 उनको जिम्मामा भएका कुनै कुरामा त्यस झ्यालखानाका हाकिम चिन्तित हुँदैन थिए, किनभने परमप्रभु उनीसँग हुनुहुन्थ्यो । उनले जे गर्थे, परमप्रभुले समृद्धि प्रदान गर्नुहुन्थ्यो ।
೨೩ಯೆಹೋವನು ಅವನ ಸಂಗಡ ಇದ್ದು ಅವನು ನಡಿಸಿದ್ದೆಲ್ಲವನ್ನು ಸಫಲಗೊಳಿಸಿದ್ದರಿಂದ ಅವನ ವಶಕ್ಕೆ ಒಪ್ಪಿಸಿದ್ದ ಯಾವ ವಿಷಯದ ಕುರಿತಾಗಿಯೂ ಸೆರೆಮನೆಯ ಯಜಮಾನನು ಯೋಚಿಸದೆ ನಿಶ್ಚಿಂತನಾಗಿದ್ದನು.