< इजकिएल 9 >
1 तब उहाँले ठुलो सोरमा कराएर यसो भन्नुभएको मैले सुनें, “रक्षकहरू हरेकले आफ्ना हातमा नष्ट गर्ने हतियार लिएर सहरमा आऊन् ।”
೧ಆಮೇಲೆ ಆತನು, “ಪಟ್ಟಣವನ್ನು ದಂಡಿಸತಕ್ಕವರೇ, ನೀವೆಲ್ಲರೂ ನಿಮ್ಮ ಹತ್ಯಾ ಆಯುಧಗಳನ್ನು ಹಿಡಿದವರಾಗಿ ಸಮೀಪಿಸಿರಿ” ಎಂದು ಗಟ್ಟಿಯಾಗಿ ಕೂಗಿ ಹೇಳಿದ ಮಾತು ನನ್ನ ಕಿವಿಗೆ ಬಿತ್ತು.
2 तब हेर, छ जना मानिसहरू हरेकले आ-आफ्नो हातमा हत्या गर्ने हतियार लिएर उत्तरतिर फर्केको माथिल्लो ढोकाबाट आए । तिनीहरूका माझमा सूती कपडा लगाएका र कलम भिरेका एक जना मानिस थिए । यसरी तिनीहरू भित्र गए र काँसाको वेदीको छेउमा खडा भए ।
೨ಕೂಡಲೆ ಗದೆಗಳನ್ನು ಹಿಡಿದುಕೊಂಡ ಆರು ಮಂದಿ ಪುರುಷರು ಉತ್ತರ ಮುಖವಾಗಿರುವ ಮೇಲಣ ಹೆಬ್ಬಾಗಿಲಿನ ಮಾರ್ಗವಾಗಿ ಬಂದರು; ನಾರಿನ ಬಟ್ಟೆಯನ್ನು ಹೊದ್ದುಕೊಂಡು ಲೇಖಕನ ಮಸಿಕುಡಿಕೆಯನ್ನು ನಡುವಿಗೆ ಕಟ್ಟಿಕೊಂಡಿರುವ ಮತ್ತೊಬ್ಬ ಪುರುಷನು ಅವರ ಮಧ್ಯದಲ್ಲಿದ್ದನು. ಇವರೆಲ್ಲರೂ ಒಳಕ್ಕೆ ಸೇರಿ ತಾಮ್ರದ ಯಜ್ಞವೇದಿಯ ಪಕ್ಕದಲ್ಲಿ ನಿಂತುಕೊಂಡರು.
3 तब इस्राएलका परमेश्वरको महिमाचाहिं करूबहरूदेखि मास्तिर हटेर मन्दिरको सँघारमा पुगिसकेको थियो । तब परमप्रभुले त्यो सूती कपडा लगाएको र कलम भिरेको मानिसलाई आफ्नो छेउमा बोलाउनुभयो ।
೩ಇಷ್ಟರಲ್ಲಿ ಇಸ್ರಾಯೇಲಿನ ದೇವರ ತೇಜಸ್ಸು ತನ್ನ ವಾಹನವಾದ ಕೆರೂಬಿಯನ್ನು ಬಿಟ್ಟು ಮೇಲಕ್ಕೇರಿ ಆಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತ್ತು; ಆಗ ನಾರಿನ ಬಟ್ಟೆಯನ್ನು ಹೊದ್ದುಕೊಂಡು, ಲೇಖಕನ ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನನ್ನು ಕಂಡನು.
4 परमप्रभुले तिनलाई भन्नुभयो, “सहरको बिचबाट— यरूशलेमको बिचबाट भएर जा र सहरमा गरिएका सबै घिनलाग्दा कामहरू देखेर शोक र विलाप गर्ने सबै मानिसहरूका निदारहरूमा एउटा चिन्ह लगा ।”
೪ಯೆಹೋವನು ಕೂಗಿ ಅವನಿಗೆ, “ನೀನು ಯೆರೂಸಲೇಮ್ ಪಟ್ಟಣದಲ್ಲೆಲ್ಲಾ ತಿರುಗಿ ಅದರೊಳಗೆ ನಡೆಯುವ ಸಮಸ್ತ ಅಸಹ್ಯ ಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರುವ ಜನರ ಹಣೆಯ ಮೇಲೆ ಗುರುತುಮಾಡು” ಎಂದು ಅಪ್ಪಣೆಕೊಟ್ಟನು.
5 मैले सुनिरहँदा उहाँले अरूलाई भन्नुभयो, “उसको पछिपछि सहरभरि जाओ र मार । तिमीहरूका आँखामा दया आउन नदेओ, र नछोड,
೫ಮತ್ತೂ ಆತನು ಉಳಿದವರಿಗೆ, “ನೀವು ಪಟ್ಟಣದಲ್ಲೆಲ್ಲಾ ಇವನ ಹಿಂದೆ ತಿರುಗುತ್ತಾ ಹತಿಸಿರಿ; ಯಾರನ್ನೂ ಕಟಾಕ್ಷಿಸದಿರಿ, ಉಳಿಸದಿರಿ; ವೃದ್ಧ, ಯುವಕ, ಯುವತಿ, ಸ್ತ್ರೀ, ಬಾಲಕ ಎನ್ನದೆ ಸಕಲರನ್ನೂ ಸಂಹಾರ ಮಾಡಿಬಿಡಿರಿ; ಆದರೆ ಆ ಗುರುತುಳ್ಳವರಲ್ಲಿ ಯಾರನ್ನೂ ಮುಟ್ಟಬೇಡಿರಿ; ನನ್ನ ಆಲಯದಲ್ಲಿಯೇ ಪ್ರಾರಂಭಮಾಡಿರಿ” ಎಂಬುದಾಗಿ ಆತನು ನನಗೆ ಕೇಳಿಸುವಂತೆ ಅಪ್ಪಣೆಮಾಡಿದನು.
6 वृद्ध मानिस, जवान मानिस, कन्या, साना बालकहरू र स्त्रीहरू । ती सबैलाई मार! तर निधारमा त्यो चिन्ह भएको कसैलाई पनि नछोओ । मेरो पवित्रस्थानदेखि नै सुरु गर ।” यसैले मन्दिरको सामु भएका धर्म-गुरुहरूदेखि नै तिनीहरूले सुरु गरे ।
೬ಆಗ ಅವರು ದೇವಾಲಯದ ಮುಂದೆ ಇದ್ದ ಹಿರಿಯರನ್ನು ಮೊದಲುಗೊಂಡು ಹತಿಸತೊಡಗಿದರು.
7 उहाँले तिनीहरूलाई भन्नुभयो, “मन्दिर बिटुलो पार, र त्यसका चोकहरूलाई लाशहरूले भर । जाओ!” यसैले तिनीहरू गए र सहरलाई आक्रमण गरे ।
೭ಆತನು ಅವರಿಗೆ, “ಹೊರಡಿರಿ, ಪ್ರಾಕಾರಗಳನ್ನು ಶವಗಳಿಂದ ತುಂಬಿಸಿ, ದೇವಾಲಯವನ್ನು ಹೊಲೆಗೆಡಿಸಿರಿ” ಎಂದು ಅಪ್ಪಣೆ ಕೊಡಲು ಅವರು ಹೊರಟು ಪಟ್ಟಣದಲ್ಲಿದ್ದವರನ್ನು ಹತಿಸಿದರು.
8 जब तिनीहरूले त्यसलाई आक्रमण गर्दैथिए, र मचाहिं एक्लै छोडिएँ, तब घोप्टो परें र रुँदै भनें, “हे परमप्रभु परमेश्वर, यरूशलेममाथि आफ्नो क्रोध खन्याउनुहुँदा इस्राएलका बचेकाहरू जम्मैलाई तपाईंले सर्वनाश गर्नुहुनेछ?”
೮ಅವರು ಹತಿಸುತ್ತಿರುವಾಗ ಅಲ್ಲಿ ಒಂಟಿಗನಾಗಿ ಉಳಿದ ನಾನು ಅಡ್ಡಬಿದ್ದು, “ಅಯ್ಯೋ, ಕರ್ತನಾದ ಯೆಹೋವನೇ, ನೀನು ಯೆರೂಸಲೇಮಿನ ಮೇಲೆ ನಿನ್ನ ಕೋಪಾಗ್ನಿಯನ್ನು ಹೊಯ್ದು, ಇಸ್ರಾಯೇಲರಲ್ಲಿ ಉಳಿದವರನ್ನೆಲ್ಲಾ ನಾಶಮಾಡುವಿಯಾ?” ಎಂದು ಮೊರೆಯಿಟ್ಟೆನು.
9 उहाँले मलाई भन्नुभयो, “इस्राएल र यहूदाका घरानाको पाप असाध्य ठुलो छ । देश रक्तपातले भरिएको छ, र सहरचाहिं विकृतिले भरिपूर्ण छ, किनकि तिनीहरू भन्छन्, 'परमप्रभुले देशलाई त्याग्नुभएको छ, र ‘परमप्रभुले देख्नुहुन्न' ।
೯ಆತನು ನನಗೆ, “ಇಸ್ರಾಯೇಲ್ ಮತ್ತು ಯೆಹೂದ ವಂಶದವರ ಅಧರ್ಮವು ಅತ್ಯಂತವಾಗಿದೆ; ದೇಶವು ರಕ್ತಪೂರ್ಣವಾಗಿದೆ, ಪಟ್ಟಣವು ಅನ್ಯಾಯಭರಿತವಾಗಿದೆ; ಆ ವಂಶದವರು, ‘ನಮ್ಮ ದೇಶವನ್ನು ಯೆಹೋವನು ಬಿಟ್ಟುಬಿಟ್ಟಿದ್ದಾನೆ, ಯೆಹೋವನು ನೋಡುವುದಿಲ್ಲ’ ಎಂಬುದಾಗಿ ಮಾತನಾಡಿಕೊಳ್ಳುತ್ತಿದ್ದಾರೆ.
10 यसैले मेरा आँखामा दया हुनेछैनँ, र म तिनीहरूलाई छोड्नेछैनँ । बरु म ती सबै तिनीहरूकै शिरमा खन्याइदिनेछु ।”
೧೦ನಾನಂತು, ಅವರನ್ನು ಕಟಾಕ್ಷಿಸುವುದಿಲ್ಲ, ಉಳಿಸುವುದಿಲ್ಲ, ಅವರ ದುರ್ನಡತೆಯನ್ನು ಅವರ ತಲೆಗೆ ಕಟ್ಟುವೆನು” ಎಂದು ಹೇಳಿದನು.
11 हेर, त्यो सूती कपडा लगाएको र कम्मरमा कलम भिरेको मानिस आऐ । तिनले यसो भने, “तपाईंले मलाई आज्ञा गर्नुभएबमोजिम मैले गरेको छु ।”
೧೧ಕೂಡಲೆ ನಾರಿನ ಬಟ್ಟೆಯನ್ನು ಹೊದ್ದುಕೊಂಡು ಮಸಿಕೊಂಬನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು, “ನಿನ್ನ ಅಪ್ಪಣೆಯಂತೆಯೇ ಮಾಡಿದ್ದೇನೆ” ಎಂದು ಅರಿಕೆಮಾಡಿದನು.