< प्रस्थान 10 >
1 परमप्रभुले मोशालाई भन्नुभयो, “फारोकहाँ जा किनकि मैले त्यसको र त्यसका अधिकारीहरूका ह्रदय कठोर बनाइदिएको छु । तिनीहरूका बिचमा मेरो शक्तिका यी चिन्हहरू देखाउनलाई मैले यसो गरेको हुँ ।
೧ತರುವಾಯ ಯೆಹೋವನು ಮೋಶೆಗೆ, “ಫರೋಹನ ಬಳಿಗೆ ಹಿಂತಿರುಗಿ ಹೋಗು. ನಾನು ಫರೋಹನ ಮತ್ತು ಅವನ ಪರಿವಾರದವರ ಹೃದಯಗಳನ್ನು ಕಠಿಣಗೊಳಿಸಿದ್ದೇನೆ. ಏಕೆಂದರೆ ನಾನು ಈ ಮಹತ್ಕಾರ್ಯಗಳನ್ನು ಅವರ ಮುಂದೆ ನಡೆಸುವುದಕ್ಕೆ ಇದು ಕಾರಣವಾಯಿತು.
2 मैले गरेका कुराहरू, मैले मिश्रलाई कसरी कठोरतापूर्वक व्यवहार गरेँ र तिनीहरूका बिचमा मेरो शक्तिका विभिन्न चिन्हहरू कसरी देखाएँ भनी तैँले तेरा छोराछोरीहरू र नातिनातिनाहरूलाई बताउनेछस् भनेर पनि मैले यसो गरेको हुँ । यसरी म परमप्रभु हुँ भनी तैँले जान्नेछस् ।”
೨ಇಸ್ರಾಯೇಲರು ತಮ್ಮ ಮಕ್ಕಳಿಗೂ, ಮೊಮ್ಮಕ್ಕಳಿಗೂ ನಾನು ಐಗುಪ್ತ್ಯರ ನಡುವೆ ನಡೆಸಿರುವ ಈ ಮಹತ್ಕಾರ್ಯಗಳನ್ನು ವಿವರಿಸಿ ಯೆಹೋವನು ಐಗುಪ್ತ್ಯರನ್ನು ತನಗೆ ಇಷ್ಟಬಂದ ಹಾಗೆ ಶಿಕ್ಷಿಸಿದನು ಎಂಬುದಾಗಿ ತಿಳಿಸಬೇಕು. ಹೀಗೆ ನಾನು ಫರೋಹನ ಹೃದಯವನ್ನು, ಅವನ ಪರಿವಾರದವರ ಹೃದಯಗಳನ್ನೂ ಕಠಿಣಮಾಡಿದ್ದೇನೆ. ಇದಲ್ಲದೆ ಈ ಮಹತ್ಕಾರ್ಯಗಳಿಂದ ನೀವು ನನ್ನನ್ನೇ ಯೆಹೋವನೆಂದು ತಿಳಿದುಕೊಳ್ಳುವಿರಿ” ಎಂದನು.
3 त्यसैले मोशा र हारून फारोकहाँ गए र भने, “हिब्रूहरूका परमप्रभु परमेश्वर यसो भन्नुहुन्छः मेरो सामु आफैलाई विनम्र पार्न कहिलेसम्म अस्वीकार गर्छस्? मेरो आराधना गर्न मेरा मानिसहरूलाई जान दे ।
೩ಮೋಶೆ ಮತ್ತು ಆರೋನರು ಫರೋಹನ ಬಳಿಗೆ ಹೋಗಿ ಅವನಿಗೆ, “ಇಬ್ರಿಯರ ದೇವರಾಗಿರುವ ಯೆಹೋವನು ಆಜ್ಞಾಪಿಸುವುದೇನೆಂದರೆ, ‘ನೀನು ನನ್ನ ಮುಂದೆ ತಗ್ಗಿಸಿಕೊಳ್ಳದೆ ಇರುವುದು ಇನ್ನು ಎಲ್ಲಿಯವರೆಗೆ? ನನ್ನನ್ನು ಆರಾಧಿಸುವಂತೆ ನನ್ನ ಜನರಿಗೆ ಅಪ್ಪಣೆ ಕೊಡು.
4 तैँले मेरा मानिसहरूलाई जान दिन इन्कार गरिस् भने सुन्, भोलि म तेरो देशमा सलहहरू ल्याउनेछु ।
೪ಅಪ್ಪಣೆಕೊಡದೆ ಹೋದರೆ ನಾಳೆ ನಿನ್ನ ರಾಜ್ಯದೊಳಗೆ ಮಿಡತೆಗಳನ್ನು ಬರುವಂತೆ ಮಾಡುವೆನು.
5 कसैले जमिनलाई देख्न नसक्ने गरी तिनीहरूले भुइँलाई ढाक्नेछन् । असिनाबाट बचेर रहेका कुनै पनि चिज तिनीहरूले खाइदिनेछन् । खेतमा उम्रने हरेक रुखलाई पनि तिनीहरूले खाइदिनेछन् ।
೫ಅವು ಭೂಮಿಯನ್ನೆಲ್ಲಾ ಆವರಿಸಿಕೊಳ್ಳುವವು. ನೆಲವೇ ಕಾಣಿಸದೆ ಹೋಗುವುದು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಡುವವು. ಹೊಲದಲ್ಲಿರುವ ನಿಮ್ಮ ಎಲ್ಲಾ ಮರಗಳ ಎಲೆ ಚಿಗುರುಗಳನ್ನೂ ತಿಂದುಬಿಡುವವು.
6 तिनीहरू तेरा, तेरा सबै अधिकारीसाथै सबै मिश्रीका घरहरूमा भरिनेछन् । यस्तो तिमीहरूका बुबा र हजुर बुबाहरूले पृथ्वीको स्थापना भएदेखि आजको दिनसम्म कहिल्यै देखेका छैनन्' ।” त्यसपछि मोशा फारोकहाँबाट निस्केर गए ।
೬ಅವು ನಿನ್ನ ಮನೆಗಳಲ್ಲಿಯೂ, ನಿನ್ನ ಪರಿವಾರದವರ ಮನೆಗಳಲ್ಲಿಯೂ, ಐಗುಪ್ತ್ಯರೆಲ್ಲರ ಮನೆಗಳಲ್ಲಿಯೂ ತುಂಬಿಕೊಂಡಿರುವವು. ನಿಮ್ಮ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಎಂದೂ ಅವರು ನೋಡಿರುವುದಿಲ್ಲ’” ಎಂದು ಹೇಳಿದರು. ಇದನ್ನು ಹೇಳಿ ಮೋಶೆ ತಿರುಗಿಕೊಂಡು ಫರೋಹನ ಬಳಿಯಿಂದ ಹೊರಟುಹೋದನು.
7 फारोका अधिकारीहरूले तिनलाई भने, “कहिलेसम्म यो मानिसले हामीलाई धम्की दिने? तिनीहरूका परमप्रभु परमेश्वरलाई आराधना गर्न इस्राएलीहरूलाई जान दिनुहोस् । मिश्र नष्ट भएको के हजुरले देख्नुभएको छैन र?”
೭ಆಗ ಫರೋಹನ ಪರಿವಾರದವರು ಅವನಿಗೆ, “ಈ ಮನುಷ್ಯನು ಇನ್ನು ಎಷ್ಟು ದಿನ ನಮಗೆ ಉರುಲಾಗಿರಬೇಕು. ಆ ಜನರು ಹೋಗಿ ತಮ್ಮ ದೇವರಾದ ಯೆಹೋವನನ್ನು ಆರಾಧಿಸುವುದಕ್ಕೆ ಅಪ್ಪಣೆಕೊಡು. ಐಗುಪ್ತ ದೇಶವು ಹಾಳಾಯಿತೆಂದು ಇನ್ನು ನಿನ್ನ ಮನಸ್ಸಿಗೆ ಬರಲಿಲ್ಲವೋ?” ಎಂದು ಹೇಳಿದರು.
8 मोशा र हारून फेरि पनि फारोकहाँ ल्याइए । फारोले तिनीहरूलाई भने, “तिमीहरूका परमप्रभु परमेश्वरको आराधना गर्न जाओ । तर जानेहरूचाहिँ को-को हुनेछन्?”
೮ಅದನ್ನು ಕೇಳಿ ಫರೋಹನು, ಮೋಶೆ ಮತ್ತು ಆರೋನರನ್ನು ತಿರುಗಿ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವನನ್ನು ಆರಾಧಿಸಬಹುದು. ಆದರೆ ಯಾರಾರು ಹೋಗಬೇಕನ್ನುತ್ತೀರಿ?” ಎಂದು ಕೇಳಿದನು.
9 मोशाले भने, “हामी हाम्रा छोराछोरीहरू, बुढाबुढीहरू लिएर जानेछौँ । हामीले हाम्रा गाईवस्तु र भेडा-बाख्राहरू लिएर जानेछौँ किनकि हामीले परमप्रभुको निम्ति चाड मनाउनुपर्छ ।”
೯ಮೋಶೆ ಅವನಿಗೆ, “ನಾವು ಯೆಹೋವನಿಗೆ ಜಾತ್ರೆಯನ್ನು ಆಚರಿಸಬೇಕಾಗಿದೆ. ಆದಕಾರಣ ಚಿಕ್ಕವರು ಮೊದಲುಗೊಂಡು, ಮುದುಕರವರೆಗೂ ಎಲ್ಲರೂ ಹೋಗುತ್ತೇವೆ; ಗಂಡು ಹೆಣ್ಣುಮಕ್ಕಳನ್ನೂ, ದನಕುರಿಗಳ ಮಂದೆಯನ್ನು ತೆಗೆದುಕೊಂಡು ಹೋಗುತ್ತೇವೆ” ಎಂದು ಉತ್ತರಕೊಟ್ಟನು.
10 फारोले तिनीहरूलाई भने, “मैले तिमीहरू र तिमीहरूका सन्तानहरूलाई जान दिएँ भने वास्तवमा परमप्रभु तिमीहरूसँगै होऊन् । हेर, तिमीहरूको मनमा कुनै दुष्टता छ ।
೧೦ಅದಕ್ಕೆ ಫರೋಹನು, “ನಾನು ನಿಮ್ಮನ್ನು ಮತ್ತು ನಿಮ್ಮ ಮಕ್ಕಳನ್ನು ಹೋಗುವುದಕ್ಕೆ ಅಪ್ಪಣೆ ಕೊಡುವುದಿಲ್ಲ; ಕಳುಹಿಸಿಕೊಟ್ಟರೆ, ಯೆಹೋವನು ನಿಮ್ಮ ಸಂಗಡವಿರುವನು. ನೋಡಿ, ನೀವು ದುರಾಲೋಚನೆಯಿಂದ ಕೂಡಿದವರು.
11 तिमीहरूमा बिचमा भएका पुरुषहरू मात्र गएर परमप्रभुको आराधना गरून् किनकि तिमीहरूले चाहेको यही नै हो ।” त्यसपछि मोशा र हारूनलाई फारोको उपस्थितिबाट हटाइयो ।
೧೧ನಿಮ್ಮಲ್ಲಿ ಗಂಡಸರು ಮಾತ್ರ ಹೋಗಿ ಯೆಹೋವನನ್ನು ಆರಾಧಿಸಿ ಬರಬಹುದು. ನೀವು ಕೇಳಿಕೊಂಡದ್ದು ಅಷ್ಟೇ ಅಲ್ಲವೇ” ಎಂದು ಹೇಳಿ ಅವರನ್ನು ಫರೋಹನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು.
12 तब परमप्रभुले मोशालाई भन्नुभयो, “सलहहरू मिश्र देशमा आऊन् भनी तेरो हात पसार् । असिनाको आक्रमणबाट बाँकी रहेका मिश्र देशका हरेक थोकमाथि तिनीहरूले आक्रमण गरून् ।”
೧೨ಆಗ ಯೆಹೋವನು ಮೋಶೆಗೆ, “ಐಗುಪ್ತ ದೇಶದ ಮೇಲೆ ನಿನ್ನ ಕೈಯನ್ನು ಚಾಚಿ, ಮಿಡತೆಗಳನ್ನು ಬರಮಾಡು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿರುವ ಪೈರುಗಳನ್ನೆಲ್ಲಾ ಮಿಡತೆಗಳು ತಿಂದುಬಿಡಲಿ” ಎಂದು ಹೇಳಿದನು.
13 मोशाले आफ्नो लट्ठी मिश्र देशमाथि पसारे अनि परमप्रभुले दिनरात समस्त देशमा पूर्वीय बतास चलाइदिनुभयो । बिहान हुँदा पूर्वीय बतासले सलहहरू ल्याएको थियो ।
೧೩ಮೋಶೆ ತನ್ನ ಕೋಲನ್ನು ಐಗುಪ್ತ ದೇಶದ ಮೇಲೆ ಚಾಚಿದಾಗ, ಯೆಹೋವನು ಹಗಲಿರುಳು ಮೂಡಣದಿಕ್ಕಿನಿಂದ ಗಾಳಿಯನ್ನು ಬೀಸುವಂತೆ ಮಾಡಿದನು. ಹೊತ್ತಾರೆ ಗಾಳಿಯ ದೆಸೆಯಿಂದ ಮಿಡತೆಗಳು ಬಂದಿದ್ದವು.
14 सलहहरू मिश्र देशभरि गए र यसका सबै भू-भागमा हुल-हुल भएर बसे । त्यस देशमा सलहहरूको यस्तो हुल कहिल्यै देखा परेको थिएन र यसपछि पनि यस्तो कहिल्यै हुनेछैन ।
೧೪ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದಿಳಿದು ಐಗುಪ್ತ ದೇಶದ ಎಲ್ಲಾ ಕಡೆಯಲ್ಲಿಯೂ ಅಪರಿಮಿತವಾಗಿ ಮುತ್ತಿಕೊಂಡವು. ಅಂಥ ಮಿಡತೆಯ ದಂಡು ಹಿಂದೆಂದೂ ಬಂದಿರಲಿಲ್ಲ, ಮುಂದೆಯೂ ಬರಲು ಸಾಧ್ಯವಿಲ್ಲ.
15 पुरै अन्धकार हुने गरी तिनीहरूले पुरै देशको सतहलाई ढाके । असिनाले नष्ट गरेर छाडेका रुखहरूका सबै फल र खेतका सबै बोट-बिरुवा तिनीहरूले खाइदिए । मिश्र देशभरि कुनै जीवित हरियो बिरुवा बाँकी रहेन न त खेतमा नै कुनै रुख-बिरुवा बाँकी रह्यो ।
೧೫ಅವು ಭೂಮಿಯನ್ನೆಲ್ಲಾ ಮುಚ್ಚಿಕೊಂಡಿದ್ದರಿಂದ ನೆಲವು ಕಾಣದೇ ಹೋಯಿತು. ಆನೆಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದ ಎಲ್ಲಾ ಪೈರುಗಳನ್ನೂ, ಮರಗಳಲ್ಲಿದ್ದ ಎಲ್ಲಾ ಕಾಯಿಗಳನ್ನೂ ಅವು ತಿಂದುಬಿಟ್ಟವು. ಐಗುಪ್ತ ದೇಶದಲ್ಲೆಲ್ಲಾ ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಒಂದೂ ಉಳಿಯಲಿಲ್ಲ.
16 त्यसपछि फारोले झट्टै मोशा र हारूनलाई डाक्न पठाए र भने, “मैले तिमीहरूका परमेश्वर र तिमीहरूको विरुद्धमा पाप गरेको छु ।
೧೬ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ, “ನಾನು ನಿಮ್ಮ ದೇವರಾದ ಯೆಹೋವನಿಗೂ, ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ.
17 अब यस पल्ट मेरो पाप क्षमा गरिदेऊ र मबाट यस मृत्युलाई लगियोस् भनी तिमीहरूका परमप्रभु परमेश्वरसित बिन्ती चढाइदेओ ।”
೧೭ಆದರೂ ಈ ಒಂದೇ ಸಾರಿ ನನ್ನ ಪಾಪಗಳನ್ನು ಕ್ಷಮಿಸಬೇಕು. ನಿಮ್ಮ ದೇವರಾದ ಯೆಹೋವನು ಈ ಮರಣಕರವಾದ ವಿಪತ್ತನ್ನು ನನ್ನ ಬಳಿಯಿಂದ ತೊಲಗಿಸುವಂತೆ ಆತನನ್ನು ಪ್ರಾರ್ಥಿಸಬೇಕು” ಎಂದನು.
18 त्यसैले मोशा फारोकहाँबाट गए र परमप्रभुलाई बिन्ती चढाए ।
೧೮ಮೋಶೆ ಫರೋಹನ ಬಳಿಯಿಂದ ಹೊರಟು ಯೆಹೋವನನ್ನು ಬೇಡಿಕೊಂಡನು.
19 परमप्रभुले निकै शक्तिशाली पश्चिमी बतास चलाइदिनुभयो जसले सलहहरूलाई उडाई लाल समुद्रमा लग्यो । मिश्रका इलाकाभित्र एउटै पनि सलह रहेन ।
೧೯ಯೆಹೋವನು ಪಶ್ಚಿಮದಿಂದ ಬಿರುಗಾಳಿ ಬೀಸುವಂತೆ ಮಾಡಿದನು. ಅದು ಆ ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪುಸಮುದ್ರದೊಳಗೆ ಹಾಕಿಬಿಟ್ಟಿತು. ಐಗುಪ್ತ ದೇಶದ ಮೇರೆಗಳೊಳಗೆ ಒಂದು ಮಿಡತೆಯೂ ನಿಲ್ಲಲಿಲ್ಲ.
20 तर परमप्रभुले फारोको ह्रदय कठोर बनाइदिनुभयो र तिनले इस्राएलीहरूलाई जान दिएनन् ।
೨೦ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲರನ್ನು ಕಳುಹಿಸಿಕೊಡಲು ಒಪ್ಪಲಿಲ್ಲ.
21 त्यसपछि परमप्रभुले मोशालाई भन्नुभयो, “आकाशतिर तेरो हात पसार् अनि मिश्र देशभरि महसुस गर्न सकिने अन्धकार होस् ।”
೨೧ತರುವಾಯ ಯೆಹೋವನು ಮೋಶೆಗೆ, “ಆಕಾಶಕ್ಕೆ ನಿನ್ನ ಕೈಯನ್ನು ಚಾಚು. ಆಗ ಐಗುಪ್ತ ದೇಶದಲ್ಲೆಲ್ಲಾ ಕತ್ತಲು ಉಂಟಾಗುವುದು. ಆ ಕತ್ತಲೆಯಿಂದಾಗಿ ಜನರು ತಡವರಿಸುತ್ತಾ ನಡೆಯುವರು” ಎಂದು ಹೇಳಿದನು.
22 मोशाले आफ्नो हात आकाशतिर पसारे र मिश्र देशभरि तिन दिनसम्म निस्पट्ट अन्धकार छायो ।
೨೨ಮೋಶೆ ಆಕಾಶಕ್ಕೆ ಕೈಯನ್ನು ಚಾಚಿದಾಗ ಐಗುಪ್ತ ದೇಶದಲ್ಲೆಲ್ಲಾ ಮೂರು ದಿನ ಕಾರ್ಗತ್ತಲೆ ಮುಚ್ಚಿಕೊಂಡಿತು.
23 कसैले कसैलाई देख्न सक्दैनथ्यो । तिन दिनसम्म कोही पनि आफ्नो घरबाहिर निस्केन । तर सबै इस्राएली बसेको ठाउँमा भने उज्यालै थियो ।
೨೩ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ. ಯಾರೂ ತಮ್ಮ ಸ್ಥಳದಿಂದ ಏಳಲೂ ಇಲ್ಲ. ಆದರೆ ಇಸ್ರಾಯೇಲರು ವಾಸವಾಗಿದ್ದ ಸ್ಥಳಗಳಲ್ಲಿ ಬೆಳಕು ಇತ್ತು.
24 फारोले मोशालाई बोलाउन पठाए र भने, “गएर परमप्रभुको आराधना गर । तिमीहरूका परिवारहरू पनि तिमीहरूसँगै जान सक्नेछन्, तर तिमीहरूका गाईवस्तु र भेडा-बाख्राहरूलाई भने यहीँ छाड ।”
೨೪ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವನಿಗೆ ಆರಾಧನೆ ಮಾಡಿ ಬರಬಹುದು. ನಿಮ್ಮ ಮನೆಗಳಿಗೆ ಸೇರಿದವರೂ ಹೋಗಬಹುದು. ನಿಮ್ಮ ಕುರಿದನಗಳನ್ನು ಮಾತ್ರ ಇಲ್ಲೇ ಬಿಟ್ಟುಹೋಗಬೇಕು” ಎಂದನು.
25 तर मोशाले भने, “हाम्रा परमप्रभु परमेश्वरलाई बलिदान चढाउन तपाईंले हामीलाई बलिदान र होमबलिको निम्ति पशुहरू पनि दिनुपर्छ ।
೨೫ಅದಕ್ಕೆ ಮೋಶೆಯು, “ನಮ್ಮ ದೇವರಾದ ಯೆಹೋವನಿಗೆ ನಾವು ಯಜ್ಞಹೋಮಗಳನ್ನು ಮಾಡುವಂತೆ ಬೇಕಾದ ಪಶುಗಳನ್ನು ತೆಗೆದುಕೊಂಡು ಹೋಗಲು ಅಪ್ಪಣೆಯಾಗಬೇಕು.
26 हाम्रा गाईवस्तु पनि हामीसितै जानुपर्छ । तिनीहरूका खुर पनि छोडिनुहुँदैन किनकि हाम्रा परमप्रभु परमेश्वरको आराधना गर्न हामीले तिनलाई लैजानैपर्छ । किनकि हामी त्यहाँ नपुगेसम्म हामीले परमप्रभुलाई के-के चढाएर आराधना गर्ने भनी हामीलाई थाहा हुँदैन ।”
೨೬ನಮ್ಮ ಎಲ್ಲಾ ಪಶುಗಳನ್ನೂ ಸಹ ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನಾದರೂ ನಾವು ಬಿಟ್ಟು ಹೋಗುವುದಿಲ್ಲ. ಆ ಪಶುಗಳಿಂದಲೇ ನಮ್ಮ ದೇವರಾದ ಯೆಹೋವನಿಗೆ ಆರಾಧನೆಯನ್ನು ಸಲ್ಲಿಸಬೇಕು. ಯಾವ ಪಶುಗಳನ್ನು ಅರ್ಪಿಸಬೇಕೆಂಬುದು ನಾವು ಅಲ್ಲಿಗೆ ಸೇರುವುದಕ್ಕೆ ಮೊದಲು ನಮಗೆ ತಿಳಿಯದು” ಎಂದನು.
27 तर परमप्रभुले फारोको ह्रदय कठोर पारिदिनुभयो र तिनले तिनीहरूलाई जान दिएनन् ।
೨೭ಆದರೆ ಯೆಹೋವನು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ ಅವನು ಅವರನ್ನು ಕಳುಹಿಸಲಾರದೆ ಹೋದನು.
28 फारोले मोशालाई भने, “मबाट जाऊ! एउटा कुराको बारेमा होसियार होऊ । अबदेखि मेरो सामु देख नपर किनकि मेरो अनुहार देखेको दिनमा तिमी मर्नेछौ ।”
೨೮ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟುಹೋಗು. ಇನ್ನು ಮುಂದೆ ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವೆ” ಎಂದು ಹೇಳಿದನು.
29 मोशाले भने, “तपाईंले भन्नुभएझैँ होस् । म फेरि तपाईंको अनुहार हेर्नेछैनँ ।”
೨೯ಅದಕ್ಕೆ ಮೋಶೆಯು, “ನೀನು ಸರಿಯಾಗಿ ಹೇಳಿದೆ. ಇನ್ನು ಮೇಲೆ ನಾನು ನಿನ್ನ ಮುಖವನ್ನು ಪುನಃ ನೋಡುವುದಿಲ್ಲ” ಎಂದನು.