< व्यवस्था 22 >
1 आफ्नो इस्राएली छिमेकीको गोरु वा भेडा तर्केर गएको देख्दा त्यसलाई नदेखेको जस्तो नगर्नू । तिमीले त्यसलाई फर्काएर त्यसकहाँ ल्याइदिनू ।
೧ಸ್ವದೇಶದವನ ಎತ್ತಾಗಲಿ ಅಥವಾ ಕುರಿಯಾಗಲಿ ದಾರಿ ತಪ್ಪಿ ಹೋಗಿರುವುದನ್ನು ನೀವು ನೋಡಿಯೂ ನೋಡದಂತೆ ಅದನ್ನು ಬಿಟ್ಟು ಹೋಗಬಾರದು; ಅದನ್ನು ಅಟ್ಟಿಸಿಕೊಂಡು ಹೋಗಿ ಅವನಿಗೆ ಕೊಡಲೇಬೇಕು.
2 तिम्रो इस्राएली छिमेकी तिम्रो नजिक छैन भने वा तिमीले त्यसलाई चिन्दैनौ भने तिमीले त्यो पशु आफ्नो घरमा ल्याउनू र छिमेकीले नखोजेसम्म त्यो तिम्रो घरमा हुने छ । तब यो तिमीले त्यसलाई दिनू ।
೨ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು.
3 त्यसको गधाको मामलामा पनि यसै गर्नू; त्यसको लुगाको सवालमा पनि यसै गर्नू । तिम्रो इस्राएली छिमेकीको हराएको कुनै पनि कुरो पाइएको खण्डमा यसै गर्नू । तिमीले आफ्नै लागि नलुकाउनू ।
೩ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವಾಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ನೋಡದಂತೆ ಇರಲೇ ಬಾರದು.
4 तिम्रो इस्राएली छिमेकीको गधा वा गोरु बाटोमा लोटेको देख्यौ भने नदेखेको जस्तो नगर्नू । त्यसलाई उठाउन मदत गर्नू ।
೪ಸ್ವದೇಶದವನ ಕತ್ತೆಯಾಗಲಿ ಅಥವಾ ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ ಅವನಿಗೆ ಸಹಾಯಮಾಡಿ ಎಬ್ಬಿಸಬೇಕು.
5 पुरुषले लगाउने वस्त्र स्त्रीले लगाउनुहुँदैन न त स्त्रीले लगाउने वस्त्र पुरुषले लगाउनुहुन्छ । किनकि यी कुरा गर्ने जोसुकै परमप्रभु तिमीहरूका परमेश्वरका लागि घृणित हुने छ ।
೫ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು.
6 कुनै बाटो वा रुख वा भुइँमा बचेरो वा फुलमा माउ बसिरहेको देख्यौ भने माउलाई बचेरोसँगै नलैजानू ।
೬ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು.
7 माउलाई जान दिएर बचेरोलाई लैजान सक्छौ । यो आज्ञालाई पालन गर ताकि तिमीहरूको भलो हुन सकोस्, र तिमीहरूको आयु लामो होस् ।
೭ನೀವು ಹೀಗೆ ನಡೆದುಕೊಂಡರೆ ನಿಮಗೆ ಶ್ರೇಯಸ್ಸು ಉಂಟಾಗುವುದು, ಮತ್ತು ಬಹುಕಾಲ ಬಾಳುವಿರಿ.
8 तिमीहरूले नयाँ घर बनाउँदा छतको चारैतिर बार लगाउनू ताकि त्यहाँबाट कोही लड्यो भने त्यसको दोष तिमीहरूको घरलाई नलागोस् ।
೮ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯ ದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.
9 तिमीहरूले दाखबारीमा दुई किसिमका बिउ नलागाउनू । नत्रता तिमीहरूले त्यसो गर्यौ भने तिमीहरूले लगाएको बिउ मात्र नभई दाखबारीसमेत अपवित्र हुने छ ।
೯ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬೀಜವನ್ನು ಬಿತ್ತಬಾರದು; ಹಾಗೆ ಮಾಡಿದರೆ ಯಾಜಕರು ಆ ಬೆಳೆಯನ್ನು, ದ್ರಾಕ್ಷಿಯ ಬೆಳೆಯನ್ನು ಅಂತೂ ಆ ತೋಟದ ಎಲ್ಲಾ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕು.
10 गोरु र गधा सँगसँगै नारेर नजोत्नू ।
೧೦ಎತ್ತನ್ನೂ ಮತ್ತು ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಿ ಉಳಬಾರದು.
11 ऊन र सुती मिसाएर बनाइएको लुगा नलगाउनू ।
೧೧ನಾರು ಹಾಗು ಉಣ್ಣೆಯೂ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.
12 तिमीहरूले लगाउने लुगाको चारै कुनामा झुम्का लगाउनू ।
೧೨ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು.
13 मानौँ, कसैले विवाह गरेर पत्नीसित सुतिसकेपछि त्यसलाई घृणा गर्छ र
೧೩ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ,
14 र बदनाम गराउने नियतले पत्नीलाई यसो भन्छ, 'मैले यो स्त्रीलाई ल्याएँ, तर म त्योसित सुत्न जाँदा त्यो कन्या केटी भएको पाइनँ ।'
೧೪“ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ,
15 तब त्यस केटीका बुबाआमाले सहरको मूल ढोकामा धर्म-गुरुहरूकहाँ त्यसको कुमारीत्वको प्रमाण ल्याउनुपर्छ ।
೧೫ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
16 केटीका बुबाले धर्म-गुरुहरूलाई यसो भन्नुपर्छ, 'मैले यो मानिसलाई मेरी छोरी त्यसकी पत्नी हुनलाई दिएँ र त्यसले यसलाई घृणा गर्छ ।
೧೬ಆ ಸ್ತ್ರೀಯ ತಂದೆ ಅವರಿಗೆ, “ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ
17 हेर, त्यसले यसलाई घृणा गरी लाजमर्दो अभियोग लगाएको छ, “मैले तिम्री छोरीमा कुमारीत्वको प्रमाण पाइनँ ।” तर मेरी छोरीको कुमारीत्वको प्रमाण यहाँ छ ।' तब तिनीहरूले सहरका धर्म-गुरुहरूको सामु त्यो लुगा फिँजाओस् ।
೧೭ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.
18 त्यस सहरका धर्म-गुरुहरूले त्यस पुरुषलाई समातेर दण्ड दिऊन् ।
೧೮ಆ ಊರಿನ ಹಿರಿಯರು ಅವನನ್ನು ಹಿಡಿಸಿ ಅವನನ್ನು ಹೊಡಿಸಬೇಕು.
19 अनि तिनीहरूले त्यसलाई चाँदीको एक सय सिक्काको जरिवाना तिराई त्यो केटी र केटीका पितालाई दिऊन् किनकि त्यस मानिसले इस्राएलको कुमारीत्वको बारेमा कलङ्क लगाएको छ । त्यो केटी त्यसकै पत्नी हुनुपर्छ । त्यसले जीवनभर त्यस केटीलाई त्याग्न पाउँदैन ।
೧೯ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
20 तर केटीमा कुमारीत्वको प्रमाण नपाइएको कुरो साँचो रहेछ भने
೨೦ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ,
21 तिनीहरूले केटीलाई त्यसका बुबाको घरको ढोकामा ल्याऊन्, र सहरका मानिसहरूले त्यसलाई ढुङ्गाले हानेर मारून् किनकि त्यसले इस्राएलमा आफ्नो पिताको घरमा वेश्यावृत्तिको कार्य गरी लाजमर्दो काम गरेकी छे । यसरी तिमीहरूले तिमीहरूका बिचबाट दुष्टता हटाउनू ।
೨೧ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು.
22 कुनै पुरुषले अर्काकी पत्नीसित सहवास गरिरहेको फेला पर्यो भने सहवास गर्ने पुरुष र स्त्री दुवै जना मारिऊन् । यसरी तिमीहरूले तिमीहरूका बिचबाट दुष्टता हटाउनू ।
೨೨ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು.
23 कुनै कन्या केटीको कुनै पुरुषसित मगनी भएको छ र अर्को पुरुषले सहरमा त्योसित सहवास गर्यो भने
೨೩ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ,
24 दुवै जनालाई सहरको मूल ढोकामा ल्याई ढुङ्गाले हानेर मार्नू । सहरभित्र भएर पनि केटी नचिच्च्याएकीले त्यसलाई ढुङ्गाले हानेर मार्नू । आफ्नो छिमेकीकी पत्नीको सतीत्व नष्ट गरेकोले पुरुषलाई ढुङ्गाले हानेर मार्नू । यसरी तिमीहरूले तिमीहरूका बिचबाट दुष्टता हटाउनू ।
೨೪ನೀವು ಅವರಿಬ್ಬರನ್ನೂ ಊರುಬಾಗಿಲಿನ ಹೊರಕ್ಕೆ ಕರೆತಂದು ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ, ಊರಲ್ಲಿದ್ದು ರಕ್ಷಣೆಗಾಗಿ ಕೂಗಿಕೊಳ್ಳದೆ ಹೋದುದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
25 तर कुनै पुरुषले मगनी भएकी केटीलाई खेतमा फेला पारी त्योसित जबरजस्ती सहवास गरेको रहेछ भने पुरुष मात्र मारियोस् ।
೨೫ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು.
26 तर केटीलाई चाहिँ केही नगर्नू । केटीले मृत्युदण्ड पाउने कुनै काम गरेकी छैन । यो कुनै मानिसले आफ्नो छिमेकीलाई आक्रमण गरी मारेको जस्तै सवाल हो ।
೨೬ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಈ ಸಂಗತಿಯೂ ಹಾಗೆಯೇ ಎಂದು ತಿಳಿಯಬೇಕು.
27 किनकि पुरुषले स्त्रीलाई खेतमा फेला पारेको थियो र मगनी भएकी केटी चिच्च्याइकी थिई, तर त्यसलाई बचाउन त्यहाँ कोही थिएन ।
೨೭ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.
28 कुनै पुरुषले मगनी नभएकी केटीलाई फेला पारी त्यससित जबरजस्ती सहवास गर्यो र त्यो कुरो प्रकाशमा आयो भने
೨೮ಯಾರಿಗೂ ನಿಶ್ಚಯವಾಗದೆ ಇರುವ ಸ್ತ್ರೀಯನ್ನು ಒಬ್ಬನು ಹಿಡಿದು ಸಂಗಮಿಸಿದ್ದು ತಿಳಿದು ಬಂದರೆ,
29 त्यस पुरुषले केटीका बुबालाई चाँदीका पचास सिक्का देओस्, र त्यो केटी त्यसकी पत्नी होस् किनकि त्यसले केटीलाई अपमान गरेको छ । त्यसको जीवनभर त्यसले केटीलाई त्याग्न पाउँदैन ।
೨೯ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ, ಅವಳ ತಂದೆಗೆ ಐವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.
30 कुनै मानिसले आफ्नो बुबाकी पत्नीलाई आफ्नी पत्नी नतुल्याओस् । त्यसले आफ्ना बुबाको वैवाहिक अधिकारलाई हरण गर्नुहुँदैन ।
೩೦ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇ ಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.