< २ यूहन्ना 1 >
1 एल्डरबाट चुनिएकी महिला र तिनका छोराछोरीहरूलाई, जसलाई म सत्यतामा प्रेम गर्दछु- र मैले मात्र होइन तिनीहरू सबैले पनि प्रेम गर्छन् जसले सत्यता जानेका छन्-
೧ಸಭೆಯ ಹಿರಿಯನಾದ ನಾನು, ದೇವರು ಆಯ್ಕೆ ಮಾಡಿರುವ ಅಮ್ಮನವರಿಗೂ, ಆಕೆಯ ಮಕ್ಕಳಿಗೂ ಬರೆಯುವುದೇನೆಂದರೆ;
2 हामीभित्र जुन सत्यता छ र हामीसँग सदासर्वदा रहनेछ त्यही सत्यताले गर्दा प्रेम गर्छौं । (aiōn )
೨ನಮ್ಮಲ್ಲಿ ನೆಲೆಗೊಂಡಿರುವಂಥ ಮತ್ತು ಸದಾಕಾಲ ನಮ್ಮೊಂದಿಗಿರುವಂಥ ಸತ್ಯದ ನಿಮಿತ್ತ, ನಾನು ನಿಮ್ಮನ್ನು ಸತ್ಯವಾಗಿ ಪ್ರೀತಿಸುತ್ತೇನೆ. ನಾನು ಮಾತ್ರವಲ್ಲದೆ, ಸತ್ಯವನ್ನು ಪ್ರೀತಿಸುವವರೆಲ್ಲರೂ ನಿಮ್ಮನ್ನು ಪ್ರೀತಿಸುತ್ತಾರೆ. (aiōn )
3 परमेश्वर पिता र येशू ख्रीष्ट अर्थात् पिताको पुत्रबाट हामीमा अनुग्रह, दया र शान्ति सत्यता र प्रेममा रहोस् ।
೩ತಂದೆಯಾದ ದೇವರಿಂದಲೂ, ದೇವರ ಮಗನಾಗಿರುವ ಯೇಸು ಕ್ರಿಸ್ತನಿಂದಲೂ, ಕೃಪೆಯೂ, ಕರುಣೆಯೂ, ಶಾಂತಿಯೂ, ಸತ್ಯವೂ, ಪ್ರೀತಿಯೂ ಸದಾಕಾಲ ನಮ್ಮೊಂದಿಗಿರಲಿ.
4 जसरी हामीले यो आज्ञा पिताबाट प्राप्त गर्यौँ त्यसरी नै तिम्रा केही छोराछोरीहरू सत्यतामा हिडेको मैँले भेट्टाएर म अति आनन्दित छु ।
೪ತಂದೆಯಿಂದ ನಾವು ಹೊಂದಿದ ಆಜ್ಞಾನುಸಾರ, ನಿಮ್ಮ ಮಕ್ಕಳಲ್ಲಿ ಕೆಲವರು, ಸತ್ಯವಂತರಾಗಿ ನಡೆಯುವುದನ್ನು ಕಂಡು ನಾನು ಬಹಳ ಸಂತೋಷಪಟ್ಟೆನು.
5 अब हे महिला, म तिमीलाई बिन्ती गर्दछु- मैले तिमीलाई नयाँ आज्ञा लेखिरहेको जस्तो होइन, तर हामीसँग सुरुदेखि भएको नै हो- कि हामीले एक अर्कालाई प्रेम गर्नुपर्छ ।
೫ಅಮ್ಮನವರೇ, ನಾನು ಹೊಸ ಆಜ್ಞೆಯನ್ನು ನಿಮಗೆ ಬರೆಯದೆ, ಮೊದಲಿನಿಂದಲೂ ನಮಗೆ ಇದ್ದ ಆಜ್ಞೆಯನ್ನು ನಿಮಗೆ ಬರೆಯುವವನಾಗಿ; ನಾವು ಒಬ್ಬರನ್ನೊಬ್ಬರು ಪ್ರೀತಿಸುವವರಾಗಿರೋಣ ಎಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.
6 र प्रेम यो हो, कि हामी उहाँको आज्ञाहरूअनुसार हिड्नुपर्छ । तिमीले सुरुदेखि नै सुनेजस्तै आज्ञा यही हो कि तिमी यसमा हिड्नुपर्छ ।
೬ದೇವರ ಆಜ್ಞೆಗಳನ್ನು ಅನುಸರಿಸಿ, ವಿಧೇಯರಾಗಿ ನಡೆಯುವುದೇ ಪ್ರೀತಿಯಾಗಿದೆ. ಪ್ರೀತಿಯಲ್ಲಿ ನಡೆಯಬೇಕೆಂಬುದೇ, ನೀವು ಮೊದಲಿನಿಂದಲೂ ಕೇಳಿದ ಆಜ್ಞೆಯಾಗಿದೆ.
7 किनकि धेरै छलीहरू संसारमा गएका छन्, जसले येशू शरीरमा आउनुभएको हो भनी स्वीकार गर्दैनन् । यो नै छली र ख्रीष्ट विरोधी हो ।
೭ಏಕೆಂದರೆ, ಯೇಸುಕ್ರಿಸ್ತನು ಮನುಷ್ಯನಾಗಿ ಬಂದನು ಎಂಬುದನ್ನು ಒಪ್ಪದೆ ಇರುವ ಅನೇಕ ಮೋಸಗಾರರು ಲೋಕದೊಳಗೆ ಹೊರಟು ಬಂದಿದ್ದಾರೆ. ಇಂಥವರೇ, ಯೇಸುವನ್ನು ಒಪ್ಪದ ಮೋಸಗಾರರೂ, ಕ್ರಿಸ್ತವಿರೋಧಿಗಳು ಆಗಿದ್ದಾರೆ.
8 आफैँलाई हेर, कि तिमीले ती कुराहरू नगुमाऊ जसको लागि हामी सबैले परिश्रम गरेका छौँ, तर तिमीले पूरा इनाम पाउन सक ।
೮ನೀವು ಪ್ರಯಾಸಪಟ್ಟು ಮಾಡಿದವುಗಳನ್ನು, ಕಳೆದುಕೊಳ್ಳದೆ ಪೂರ್ಣ ಪ್ರತಿಫಲವನ್ನು ಹೊಂದುವಂತೆ ಜಾಗರೂಕರಾಗಿರಿ.
9 जो अगाडि बढिरहन्छ र ख्रीष्टको शिक्षामा रहँदैन त्यससँग परमेश्वर हुनुहुन्न । जो शिक्षामा रहन्छ योसँग पिता र पुत्र दुवै हुनुहुन्छ ।
೯ಕ್ರಿಸ್ತನ ಉಪದೇಶದಲ್ಲಿ ನೆಲೆಗೊಳ್ಳದೆ ಅದನ್ನು ಮೀರಿ ಹೋಗುವವನಲ್ಲಿ ದೇವರಿಲ್ಲ. ಆ ಉಪದೇಶದಲ್ಲಿ ನೆಲೆಗೊಂಡಿರುವವನಿಗೆ ತಂದೆಯ ಮತ್ತು ಮಗನ ಅನ್ಯೋನ್ಯತೆ ಇರುತ್ತದೆ.
10 यदि कोही तिमीकहाँ आउँछ र यो शिक्षा ल्याउँदैन भने त्यसलाई तिम्रो घरमा स्वागत नगर र त्यसलाई अभिवादन पनि नगर ।
೧೦ಈ ಉಪದೇಶವನ್ನು ಮೀರಿದ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ. ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ.
11 किनकि जसले त्यसलाई अभिवादन गर्छ त्यो त्यसको दुष्ट कामहरूमा सहभागी हुन्छ ।
೧೧ಏಕೆಂದರೆ, ಅವನಿಗೆ ಶುಭವಾಗಲಿ ಎಂದು ಹರಸುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.
12 मैले तिमीलाई धेरै कुराहरू लेख्नु छ, तर मैले ती कुराहरू कागज र मसीले लेख्ने इच्छा गरिन । तर पनि म तिमीकहाँ आउने आशा गर्छु, ताकि हाम्रो आनन्द पूर्ण होस् ।
೧೨ನಿಮಗೆ ಬರೆಯುವುದಕ್ಕೆ ನನಗೆ ಅನೇಕ ವಿಷಯಗಳಿದ್ದರೂ, ಅವುಗಳನ್ನು ಮಸಿಯಿಂದ ಕಾಗದದ ಮೇಲೆ ಬರೆದು ತಿಳಿಸುವುದಕ್ಕೆ ನನಗೆ ಇಷ್ಟವಿಲ್ಲ. ಆದರೆ, ನಾನು ನಿಮ್ಮ ಬಳಿಗೆ ಬಂದು, ನಿಮ್ಮ ಸಂಗಡ ಮುಖಾಮುಖಿಯಾಗಿ ಮಾತನಾಡುವೆನೆಂದು ನಿರೀಕ್ಷಿಸುತ್ತೇನೆ. ಆಗ, ನಿಮ್ಮ ಸಂತೋಷವು ಪರಿಪೂರ್ಣವಾಗುವುದು.
13 तिम्री चुनिएकी बहिनीका छोराछोरीहरूले तिमीलाई अभिवादन गर्छन् ।
೧೩ದೇವರು ಆರಿಸಿಕೊಂಡವರಾದ, ನಿಮ್ಮ ಸಹೋದರಿಯ ಮಕ್ಕಳು ನಿಮಗೆ ವಂದನೆ ಹೇಳುತ್ತಾರೆ.