< २ इतिहास 5 >
1 जब सोलोमनले परमप्रभुका मन्दिरको निम्ति गरेका सबै काम सिद्ध्याए, तब तिनले आफ्ना बुबा दाऊदले यस कामका निम्ति अलग राखेका सामानहरू, अर्थात् सुन, चाँदी, र सबै सर-सामान ल्याए—तिनले ती परमप्रभुको मन्दिरका भण्डारहरूमा राखे ।
೧ಹೀಗೆ ಸೊಲೊಮೋನನು ಯೆಹೋವನ ಆಲಯಕ್ಕಾಗಿ ಬೇಕಾದ ಎಲ್ಲಾ ಸಾಮಾನುಗಳನ್ನು ಸಿದ್ಧಪಡಿಸಿದ ನಂತರ, ತನ್ನ ತಂದೆಯಾದ ದಾವೀದನು ಯೆಹೋವನಿಗೆ ಪ್ರತಿಷ್ಠೆ ಮಾಡಿದ್ದ ಬೆಳ್ಳಿಯನ್ನು, ಬಂಗಾರವನ್ನೂ, ಎಲ್ಲಾ ಸಾಮಾನುಗಳನ್ನೂ ದೇವಾಲಯದ ಭಂಡಾರಕ್ಕೆ ಸೇರಿಸಿದನು.
2 त्यसपछि सोलोमनले इस्राएलका धर्म-गुरुहरू, कुलका सबै नायकहरू र इस्राएलका परिवारका अगुवाहरूलाई परमप्रभुका करारको सन्दूक दाऊदको सहर, अर्थात् सियोनबाट ल्याउन यरूशलेममा भेला गराए ।
೨ಆಗ ಸೊಲೊಮೋನನು ದಾವೀದನಗರವಾದ ಚೀಯೋನಿನಿಂದ ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತರುವುದಕ್ಕಾಗಿ ಇಸ್ರಾಯೇಲರ ಹಿರಿಯರೆಲ್ಲರನ್ನು, ಕುಲಾಧಿಪತಿಗಳೆಲ್ಲರನ್ನು ಹಾಗೂ ಇಸ್ರಾಯೇಲರ ಗಣ್ಯ ವ್ಯಕ್ತಿಗಳೆಲ್ಲರನ್ನು ಯೆರೂಸಲೇಮಿಗೆ ಕರೆಸಿಕೊಂಡನು.
3 इस्राएलका सबै मानिस सातौं महिनामा भएको चाडको समयमा राजाको सामु भेला भए ।
೩ಇಸ್ರಾಯೇಲರೆಲ್ಲರೂ ಏಳನೆಯ ತಿಂಗಳಿನ ಜಾತ್ರೆಗಾಗಿ ಅರಸನ ಬಳಿಗೆ ಒಟ್ಟಾಗಿ ಸೇರಿ ಬಂದರು.
4 इस्राएलका सबै धर्म-गुरु आए, र लेवीहरूले सन्दूक लगे ।
೪ಇಸ್ರಾಯೇಲ್ಯರ ಹಿರಿಯರೆಲ್ಲರೂ ಕೂಡಿ ಬಂದಾಗ, ಲೇವಿಯರು ಯೆಹೋವನ ಮಂಜೂಷವನ್ನು ಹೊತ್ತುಕೊಂಡರು.
5 तिनीहरूले सन्दूक र भेट हुने पाल र त्यसमा भएका सबै सामानहरू उठाएरमाथि लगे । लेवीका कुलका पुजारीहरूले ती बोकेर माथि लगे ।
೫ಯಾಜಕರಾದ ಲೇವಿಯರು ಒಡಂಬಡಿಕೆಯ ಮಂಜೂಷವನ್ನು, ದೇವದರ್ಶನದ ಗುಡಾರ, ಅದರಲ್ಲಿದ್ದ ಎಲ್ಲಾ ಪರಿಶುದ್ಧವಸ್ತುಗಳನ್ನೂ ಹೊತ್ತುಕೊಂಡು ತಂದರು.
6 सोलोमन राजा र इस्राएलका सारा समुदाय अनगिन्ति भेडा र साँढेको बलिदान चढाउँदै सन्दुकको अघि भेला भए ।
೬ಅರಸನಾದ ಸೊಲೊಮೋನನೂ, ಎಲ್ಲಾ ಇಸ್ರಾಯೇಲರೂ ಮಂಜೂಷದ ಮುಂದೆ ಕೂಡಿಬಂದು, ಅಸಂಖ್ಯವಾದ ಕುರಿ, ದನಗಳನ್ನು ಯಜ್ಞವಾಗಿ ಅರ್ಪಿಸಿದರು.
7 पुजारीहरूले परमप्रभुका करारको सन्दूक मन्दिरको भित्री पवित्रस्थान, अर्थात् महा-पवित्रस्थानमा त्यसकै ठाउँमा ल्याएर करूबहरूका पखेटामुनि राखे ।
೭ಯಾಜಕರು ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತೆಗೆದುಕೊಂಡು ಬಂದು ಮಹಾಪರಿಶುದ್ಧ ಸ್ಥಳದ ಗರ್ಭಗುಡಿಯಲ್ಲಿ ಕೆರೂಬಿಗಳ ರೆಕ್ಕೆಗಳ ಕೆಳಗೆ ಅದಕ್ಕೆ ನೇಮಕವಾದ ಸ್ಥಳದಲ್ಲಿರಿಸಿದರು.
8 करूबहरूले आफ्ना पखेटा सन्दूक राखिएको ठाउँमाथि फैलाएका थिए, र तिनले सन्दूक र त्यसलाई बोक्ने डन्डाहरूलाई ढाके ।
೮ಕೆರೂಬಿಗಳ ರೆಕ್ಕೆಗಳು ಮಂಜೂಷವಿದ್ದ ಸ್ಥಳದ ಮೇಲೆ ಚಾಚಿಕೊಂಡಿದ್ದವು. ಆದುದರಿಂದ ಮಂಜೂಷವು ಅದರ ಕೋಲುಗಳೂ ಪೂರ್ಣವಾಗಿ ಅವುಗಳ ನೆರಳಿನಲ್ಲಿದ್ದವು.
9 डन्डाहरूचाहिं यति लामा थिए कि तिनका टुप्पाहरूभित्री पवित्रस्थानबाट देखिन्थ्यो, तर ती बाहिरबाट देखिंदैनथे । ती आजक दिनसम्म त्यहीं छन् ।
೯ಮಂಜೂಷಕ್ಕಿಂತಲೂ ಉದ್ದವಾಗಿದ್ದ ಆ ಕೋಲುಗಳ ತುದಿಗಳು ಗರ್ಭಗುಡಿಯ ಎದುರಿನಲ್ಲಿ ನಿಂತವರಿಗೆ ಕಾಣಿಸುತ್ತಿದ್ದವು. ಆದರೆ ಹೊರಗೆ ನಿಂತವರಿಗೆ ಕಾಣಿಸುತ್ತಿರಲಿಲ್ಲ; ಮಂಜೂಷವು ಇಂದಿನವರೆಗೂ ಅಲ್ಲೇ ಇದೆ.
10 इस्राएलका मानिसहरूले मिश्रदेश छोड्दा परमप्रभुले तिनीहरूसित करार बाँध्नुभएको ठाउँ होरेबमा मोशाले सन्दूकभित्र राखेका दुई वटा शिला-पाटीबाहेक त्यसमा अरू केही थिएन ।
೧೦ಮಂಜೂಷದಲ್ಲಿ ಎರಡು ಕಲ್ಲಿನ ಹಲಗೆಗಳ ಹೊರತಾಗಿ ಬೇರೇನೂ ಇರಲಿಲ್ಲ, ಐಗುಪ್ತ ದೇಶದಿಂದ ಬಂದ ಇಸ್ರಾಯೇಲರೊಡನೆ, ಹೋರೇಬ್ ಬೆಟ್ಟದ ಬಳಿಯಲ್ಲಿ ಯೆಹೋವನು ಒಡಂಬಡಿಕೆ ಮಾಡಿಕೊಂಡ ಮೇಲೆ, ಮೋಶೆಯು ಅವುಗಳನ್ನು ಅದರಲ್ಲಿಟ್ಟಿದ್ದನು.
11 पुजारीहरू पवित्रस्थानबाट बाहिर निस्केर आए । त्यहाँ हाजिर भएका सबै पुजारीले आआफ्नो दलअनुसार क्रमवद्ध नगरीकनै आफैलाई पवित्र गरेका थिए ।
೧೧ಮಹಾ ಪರಿಶುದ್ಧ ಸ್ಥಳದಿಂದ ಯಾಜಕರು ಹೊರಗೆ ಬಂದರು. ಸಮಸ್ತ ಯಾಜಕರು ವರ್ಗವ್ಯತ್ಯಾಸವಿಲ್ಲದೆ ಎಲ್ಲರೂ ತಮ್ಮನ್ನು ಶುದ್ಧಮಾಡಿಕೊಂಡಿದ್ದರು.
12 सबै लेवी गायक, अर्थात् आसाप, हेमान र यदूतून, तिनीहरूका छोराहरू र दाजुभाइसमेत सबै जना, मलमलका कपडा लगाएर झ्याली, वीणा र सारङ्गीहरू लिएर वेदीको पूर्वपट्टि खडा भए । तिनीहरूका साथमा एक सय बिस जना तुरही बजाउने पुजारीहरू थिए ।
೧೨ಹಾಗೂ ಲೇವಿಯ ಗಾಯಕರಾದ ಆಸಾಫ್, ಹೇಮಾನ್, ಯೆದುತೂನರೂ ಇವರ ಮಕ್ಕಳೂ, ಸಹೋದರರೂ ನಾರುಮಡಿಗಳನ್ನು ಧರಿಸಿಕೊಂಡು, ತಾಳಗಳನ್ನೂ, ವೀಣೆಗಳನ್ನೂ, ಕಿನ್ನರಿಗಳನ್ನು ನುಡಿಸುತ್ತಾ ಯಜ್ಞವೇದಿಯ ಪೂರ್ವದಿಕ್ಕಿನಲ್ಲಿ ನಿಂತುಕೊಂಡರು. ಅವರ ಸಂಗಡ ನೂರ ಇಪ್ಪತ್ತು ಮಂದಿ ಯಾಜಕರೂ ತುತ್ತೂರಿಗಳನ್ನು ಊದುತ್ತಾ ಇದ್ದರು.
13 तुरही बजाउनेहरू र गीत गाउनेहरूले परमप्रभुको प्रशंसा र धन्यवादको निम्ति एक सोर गरी आवाज निकाले । तिनीहरूले तुरही, झ्याली र अरू बाजाहरूसित सोर उचाले र तिनीहरूले परमप्रभुको प्रशंसा गरे । तिनीहरूले गाए, “उहाँ भलो हुनुहुन्छ, किनकि उहाँको करारको बफादारीता सदासर्वदा रहन्छ ।” तब त्यो मन्दिर, परमप्रभुको मन्दिर बादलले भरियो ।
೧೩ಮಂಜೂಷವನ್ನು ಒಳಗಿಟ್ಟ ಯಾಜಕರು ದೇವಾಲಯದಿಂದ ಹೊರಗೆ ಬಂದಕೂಡಲೆ ಏಕ ಸ್ವರದಿಂದ ಸ್ವರವೆತ್ತಿ ಯೆಹೋವನನ್ನು ಕೀರ್ತಿಸುವುದಕ್ಕಾಗಿ ತುತ್ತೂರಿ ಊದುವವರೂ ಗಾಯನ ಮಾಡುವವರೂ ಅಲ್ಲಿ ನಿಂತಿದ್ದರು. ತುತ್ತೂರಿ, ತಾಳ ಮೊದಲಾದ ವಾದ್ಯಗಳ ಧ್ವನಿಯೊಡನೆ ಹೀಗೆ ಹಾಡಿದರು, “ಯೆಹೋವನು ಒಳ್ಳೆಯವನು, ಆತನ ಕೃಪೆಯು ಶಾಶ್ವತವಾಗಿರುವುದು” ಎಂದು ಯೆಹೋವನಿಗೆ ಕೃತಜ್ಞತಾಸ್ತುತಿ ಮಾಡುವವರ ಸ್ವರವೂ ಕೇಳಿಸಿದೊಡನೆ, ಮೇಘವು ಯೆಹೋವನ ಆಲಯದಲ್ಲಿ ತುಂಬಿಕೊಂಡಿತು.
14 बादलले गर्दा पुजारीहरूले सेवा गर्न सकेनन्, किनकि परमप्रभुको महिमाले उहाँको मन्दिर भरिएको थियो ।
೧೪ಯೆಹೋವನ ತೇಜಸ್ಸಿನಿಂದ ವ್ಯಾಪಿಸಿಕೊಂಡಿದ್ದ ಮೇಘವು ದೇವಾಲಯದಲ್ಲಿ ತುಂಬಿಕೊಂಡಿದ್ದರಿಂದ ಯಾಜಕರು ಅಲ್ಲಿ ನಿಂತು ಸೇವೆ ಮಾಡಲಾರದೆ ಹೋದರು.