< १ शमूएल 18 >
1 जब तिनले शाऊलसँग कुरा गरिसकेका थिए, तब जोनाथनको प्राण दाऊदको प्राणसँग बाँधियो र जोनाथनले तिनलाई आफ्नै प्राणलाई झैं प्रेम गरे ।
೧ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು.
2 त्यस दिन शाऊलले दाऊदलाई आफ्नो सेवामा लिए । उनले तिनलाई आफ्नो बुबाको घरमा फर्कन दिएनन् ।
೨ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು.
3 तब जोनाथन र दाऊदले मित्रताको करार बाँधे, किनभने जोनाथनले तिनलाई आफ्नै प्राणलाई झैं प्रेम गरे ।
೩ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು.
4 जोनाथनले आफूले लगाइरहेका पोशाक फुकाले र आफ्नो हतियार, तरवार, धनु र पेटी सहित त्यो तिनले दाऊदलाई दिए ।
೪ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು.
5 शाऊलले जहाँ पठाए पनि दाऊद जान्थे, र तिनी सफल भए । शाऊलले तिनलाई युद्ध गर्ने मानिसहरूको उच्च पदमा स्थापित गरे । सबै मानिसहरू र शाऊलका सेवकहरूकै दृष्टिमा पनि यो कुरा असलै लाग्यो ।
೫ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು.
6 जब तिनीहरू पलिश्तीहरूलाई पराजित गरेर आए, तब इस्राएलका सहरहरूबाट स्त्रीहरू खैंजडी र अन्य साङ्गितिक साधनहरूसँगै आनन्द साथ गाउँदै र चाँच्दै निस्के शाऊल राजालाई भेट्न आए ।
೬ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು.
7 ती स्त्रीहरूले संगीतका साधनहरू बजाउँदै एकसाथ गीतहरू गाए । तिनीहरूले यसरी गाएः “शाऊलले हजारौंलाई मारेका छन् र दाऊदले दसौं हजारलाई मारेका छन् ।”
೭ಅವರು ಹಾಡುತ್ತಾ, ಕೊಂಡಾಡುತ್ತಾ, “ಸೌಲನು ಸಾವಿರ ಶತ್ರುಗಳನ್ನು ಕೊಂದನು. ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು.
8 शाऊल रिसले चुर भए र यो गितले तिनलाई अप्रसन्न बनायो । तिनलेल भने, “तिनीहरूले दाऊदलाई दसौं हजारको श्रेय दिए, तर तिनीहरूले मलाई भने हजारौं मात्रको श्रेय दिए । राजाको दर्जाबाहेक अब अरू बढी उसले के पाउनु छ र?”
೮ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು
9 शाऊलले त्यस दिनदेखि दाऊदलाई शंकाको दृष्टिे हेरे ।
೯ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು.
10 भोलि पल्ट शाऊलमा परमेश्वरबाटको हानिकारक आत्मा आयो र तिनले घरभित्र नै अगमवाणी बोले । त्यसैले दाऊदले हरेक दिन गरेझैं आफ्नो सङ्गीतको साधन बजाए । शाऊलको हातमा भाला थियो ।
೧೦ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು.
11 शाऊलले भाला हाने, किनकि तिनले सोचे, “म दाऊदलाई भित्तामा छेडिदिन्छु ।” तर त्यो दिन दाऊद दुईपल्ट यसरी नै शाऊलको उपस्थितिबाट उम्के ।
೧೧ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು.
12 परमप्रभु दाऊदसँग हुनुहुन्थ्यो, तर शाऊलसँग फेरि हुनुभएन, यसैले शाऊल तिनीसँग डराए ।
೧೨ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು,
13 त्यसैले शाऊलले तिनलाई आफ्नो उपस्थितिबाट हटाए र तिनलाई हजारको कमाण्डरमा नियुक्त गरे । यसरी दाऊद बाहिर निस्के र मानिसहरूको सामु आए ।
೧೩ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು.
14 दाऊद आफ्ना मार्गमा सफलता पाए, किनभने परमप्रभु तिनीसँग हुनुहुन्थ्यो ।
೧೪ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು.
15 जब शाऊलले तिनको फलिफाप भएको देखे, तब उनलाई तिनको डर भयो ।
೧೫ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು.
16 तर सारा इस्राएल र यहूदाले दाऊदलाई प्रेम गरे, किनभने उनीहरूका सामु तिनी भित्र-बाहिर गर्थे ।
೧೬ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು.
17 तब शाऊलले दाऊदलाई भने, “मेरी जेठी छोरी मेराब यहाँ छिन् । तिनलाई म तिम्रो पत्नी हुनलाई दिनेछु । मेरो निम्ति मात्र साहसी हुनु र परमप्रभुको युद्ध लड्नुपर्छ ।” किनकि शाऊलले सोचे, “तिनीमाथि मेरो हात नपरोस्, तर तिनीमाथि पलिश्तीहरूको हात परोस् ।”
೧೭ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು.
18 दाऊदले शाऊललाई भने, “म राजाको ज्वाइँ बन्न, म को हुँ र मेरा नातेदारहरू वा इस्राएलमा मेरो बुबाको कुल को हो र?”
೧೮ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು.
19 तर शाऊलकी छोरी मेराबलाई दाऊदलाई पत्नीको रूपमा दिने बेलामा, तिनलाई महोलाको अद्रिएलको पत्नीको रूपमा दिइयो ।
೧೯ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು.
20 तर शाऊलकी छोरी मीकलले दाऊदलाई प्रेम गर्थिन् । तिनीहरूलले दाऊदलाई भने र यो कुराले तिनी खुसी भए ।
೨೦ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು.
21 तब शाऊलले सोचे, “दाऊदसँग म त्यसकै विवाह गरिदिनेछु, ताकि त्यसको निम्ति यो एउटा पासो होस् र पलिश्तीहरूका हात उसको विरुद्धमा परोस् ।” यसरी शाऊलले दाऊदलाई दोस्रोपल्ट यसो भने, “तिमी मेरो ज्वाइँ हुनेछौ ।”
೨೧ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು.
22 शाऊललले आफ्ना सेवकहरूलाई आज्ञा दिए, “दाऊदसँग गोप्यमा कुरा गर र यसो भन, 'हेर, राजा तिमीसँग खुसी हुनुहुन्छ, र उनका सबै सेवकहरूले तपाईंलाई मन पराउँछन् । त्यसो हो भने, अब राजाको ज्वाइँ हुनुहोस्' ।”
೨೨ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು.
23 त्यसैले शाऊलका सेवकहरूले यी कुराहरू दाऊदलाई भने । तब दाऊदले भने, “के राजाको ज्वाइँ हुनु तपाईंहरूका निम्ति सानो कुरा हो, किनकि म त गरीब र तुच्छ मानिस हुँ?”
೨೩ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು.
24 शाऊलका सेवहरूले दाऊदले भनेका यी कुराहरू उनलाई बताए ।
೨೪ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು.
25 त्यसपछि शाऊलले भने, “दाऊदलाई यसो भन, 'राजाले आफ्ना शत्रुहरूमाथि बद्ला लिनलाई दुलहीको मूल्य पलिश्तीहरूको सयवटा खलडीबाहेक कुनै कुरा चाहनुहुन्न' ।” दाऊद पलिश्तीहरूको हातबाट मरून् भन्ने शाऊलको विचार थियो ।
೨೫ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು.
26 जब तिनका सेवकहरूले दाऊदलाई यी कुराहरू बताए, तब दाऊद राजाको ज्वाइँ हुन राजी भए ।
೨೬ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ,
27 ती दिन सिद्धिनअगि नै, दाऊद आफ्ना मानिसहरूसँग गए र दुई सय जना पलिश्तीहरूलाई मारे । दाऊदले तिनीहरूका खलडी ल्याए र तिनीहरूले राजालाई त्यो पूर्ण संख्यामा दिए, ताकि तिनी राजाका ज्वाइँ हुन सकून् । त्यसैले शाऊलले तिनकी छोरी मीकललाई उनको पत्नी हुनलाई दिए ।
೨೭ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು.
28 परमप्रभु दाऊदसँग हुनुभएको र शाऊलकी छोरी मीकलले तिनलाई प्रेम गरेको जब शाऊलले देखे र थाहा पाए,
೨೮ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು,
29 तब दाऊदसँग शाऊल झन् धेरै डराए । शाऊल निरन्तर रूपमा दाऊदका शत्रु भए ।
೨೯ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು.
30 त्यसपछि पलिश्तीहरूका शासकहरू युद्ध गर्न आए र तिनीहरू जति पटक युद्ध गर्न आए पनि दाऊदचाहिं तिनीहरूमाथि शाऊलका अन्य सेवकहरूभन्दा धेरै सफल भए, जसले गर्दा तिनको नाउँको उच्च कदर गरिएको थियो ।
೩೦ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.