< १ राजाहरू 14 >
1 त्यस बेला यारोबामको छोरो अबिया अत्यन्तै बिरामी पर्यो ।
೧ಆ ಕಾಲದಲ್ಲಿ ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು.
2 यारोबामले आफ्नी पत्नीलाई भने, “उठ र तिमी मेरी पत्नी हौ भनी नचिन्नलाई आफ्नो भेष बदली गर । अनि शीलोमा जाऊ किनकि अहियाह अगमवक्ता त्यहीँ छन् । यी मानिसहरूमाथि म नै राजा हुनेथिएँ भनी मेरो बारेमा बताउने तिनी नै थिए ।
೨ಆಗ ಯಾರೊಬ್ಬಾಮನು ತನ್ನ ಹೆಂಡತಿಗೆ, “ನೀನು ಎದ್ದು ನನ್ನ ಹೆಂಡತಿಯೆಂದು ಯಾರಿಗೂ ಗೊತ್ತಾಗದಂತೆ ವೇಷಹಾಕಿಕೊಂಡು ಶೀಲೋವಿಗೆ ಹೋಗು. ನಾನು ಈ ಜನರಿಗೆ ಅರಸನಾಗಬೇಕೆಂದು ನನಗೆ ಮುಂತಿಳಿಸಿದ ಪ್ರವಾದಿಯಾದ ಅಹೀಯನು ಅಲ್ಲಿರುತ್ತಾನೆ.
3 आफ्नो साथमा दसवटा रोटी, केही फुरौला र एक भाँडो मह लिएर अहियाहकहाँ जाऊ । बालकलाई के हुने छ भनी तिनले तिमीलाई बताउने छन् ।”
೩ನೀನು ಹತ್ತು ರೊಟ್ಟಿಗಳನ್ನೂ, ಒಂದಷ್ಟು ಸಿಹಿಪದಾರ್ಥವನ್ನೂ ಮತ್ತು ಒಂದು ಕುಪ್ಪೆ ಜೇನುತುಪ್ಪವನ್ನೂ ತೆಗೆದುಕೊಂಡು ಅವನ ಬಳಿಗೆ ಹೋಗು. ಹುಡುಗನಿಗೆ ಏನಾಗುವುದೆಂದು ಅವನು ತಿಳಿಸುವನು” ಎಂದು ಹೇಳಿದನು.
4 यारोबामकी पत्नीले त्यसै गरिन् । उनी बाटो लागिन् र शीलोमा गइन्, र अहियाहको घरमा आइन् । अहियाहले देख्न सक्दैनथे । तिनको वृद्धावस्थाको कारणले तिनले आफ्ना आँखाको ज्योति गुमाएका थिए ।
೪ಆಕೆಯು ಅವನು ಹೇಳಿದಂತೆಯೇ ಮಾಡಿ ಶೀಲೋವಿನಲ್ಲಿದ್ದ ಅಹೀಯನ ಮನೆಗೆ ಹೋದಳು. ಮುಪ್ಪಿನ ದೆಸೆಯಿಂದ ಅಹೀಯನ ಕಣ್ಣುಗಳು ಮೊಬ್ಬಾಗಿ ಹೋಗಿದ್ದರಿಂದ ಅವನಿಗೆ ಏನು ಕಾಣಿಸುತ್ತಿರಲಿಲ್ಲ.
5 परमप्रभुले अहियाहलाई भन्नुभयो, “हेर्, यारोबामकी पत्नी आफ्नो छोरोको बारेमा तँबाट सल्लाह लिन आउँदै छे किनकि त्यसको छोरो बिरामी परेको छ । तैँले यस्तो-यस्तो जवाफ दिनू किनकि त्यो अर्कै स्त्री भएझैँ त्यसले नाटक गर्छे ।”
೫ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಹೆಂಡತಿಯು ಅಸ್ವಸ್ಥನಾದ ತನ್ನ ಮಗನ ವಿಷಯದಲ್ಲಿ ದೈವೋಕ್ತಿಯನ್ನು ಕೇಳುವುದಕ್ಕೆ ತನ್ನನ್ನು ಅನ್ಯಳ ಹಾಗೆ ವೇಷಮರೆಸಿಕೊಂಡು ಬರುತ್ತಾಳೆಂದೂ, ಆಕೆಗೆ ಇಂಥಿಂಥ ಉತ್ತರ ಕೊಡಬೇಕು” ಎಂದು ತಿಳಿಸಿದ್ದನು.
6 उनी ढोकामा आइपुग्दा अहियाहले उनको खुट्टाको आवाज सुने, र भने, “हे यारोबामकी पत्नी, भित्र आऊ । किन तिमी अर्कै स्त्री भएझैँ नाटक गर्छ्यौ? म खराब समाचारसहित तिमीकहाँ पठाइएको छु ।
೬ಆಕೆಯು ಅಹೀಯನ ಮನೆಯನ್ನು ಪ್ರವೇಶಿಸುತ್ತಿರುವಾಗಲೇ ಅಹೀಯನು ಆಕೆಯ ಕಾಲು ಸಪ್ಪಳವನ್ನು ಕೇಳಿ, “ಯಾರೊಬ್ಬಾಮನ ಹೆಂಡತಿಯೇ ಬಾ. ಯಾಕೆ ನಿನ್ನನ್ನು ಅನ್ಯಳೆಂದು ತೋರ್ಪಡಿಸಿಕೊಳ್ಳುತ್ತೀ? ನಿನಗೆ ಕಠಿಣವಾದ ಉತ್ತರ ಕೊಡಬೇಕೆಂದು ನನಗೆ ಅಪ್ಪಣೆಯಾಗಿದೆ.
7 गएर यारोबामलाई भन कि इस्राएलका परमेश्वर परमप्रभु भन्नुहुन्छ, 'मैले तँलाई मेरो जाति इस्राएलमाथि अगुवा हुनलाई मानिसहरूका बिचबाट उठाएँ ।
೭ನೀನು ಹೋಗಿ ಯಾರೊಬ್ಬಾಮನಿಗೆ ಇಸ್ರಾಯೇಲ್ ದೇವರಾದ ಯೆಹೋವನ ಅಪ್ಪಣೆಯನ್ನು ತಿಳಿಸು. ಆತನು ಅವನಿಗೆ, ‘ನಾನು ನಿನ್ನನ್ನು ಜನರ ಮಧ್ಯದಿಂದ ಉನ್ನತಸ್ಥಾನಕ್ಕೆ ತಂದೆನು. ನಿನ್ನನ್ನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನನ್ನಾಗಿ ಮಾಡಿದೆನು.
8 मेरो दृष्टिमा जे ठिक छ त्यही गर्न अनि मेरा आज्ञाहरू पालन गर्न र सारा ह्रदयले मेरो पछि लाग्ने मेरा दास दाऊदजस्तै तँ नभए तापनि मैले दाऊदको घरानाबाट राज्य टुक्र्याई त्यो तँलाई दिएँ ।
೮ರಾಜ್ಯವನ್ನು ದಾವೀದನ ಕುಟುಂಬದವರಿಂದ ಕಿತ್ತುಕೊಂಡು ನಿನಗೆ ಕೊಟ್ಟೆನು. ಆದರೂ ನೀನು ನನ್ನ ಆಜ್ಞೆಗಳನ್ನು ಕೈಕೊಂಡು ಪೂರ್ಣ ಮನಸ್ಸಿನಿಂದ ನನ್ನನ್ನು ಹಿಂಬಾಲಿಸಿ ನನ್ನನ್ನು ಮೆಚ್ಚಿಸಿದಂಥ ನನ್ನ ಸೇವಕನಾದ ದಾವೀದನಂತೆ ನಡೆಯಲಿಲ್ಲ.
9 तर तैँले तँभन्दा अगिका सबैले भन्दा दुष्ट काम गरेको छस् । तैँले अरू देवताका मूर्तिहरू र ढालेर बनाएका धातुका प्रतिमूर्तिहरू बनाएर मलाई रिस उठाएको छस्, र मलाई तेरो पीठपछि राखेको छस् ।
೯ನೀನು ನಿನ್ನ ಎಲ್ಲಾ ಪೂರ್ವಾಧಿಕಾರಿಗಳಿಗಿಂತಲೂ ದುಷ್ಟನಾದಿ. ನನ್ನನ್ನು ಉಲ್ಲಂಘಿಸಿ, ಅನ್ಯದೇವತೆಗಳನ್ನೂ ಎರಕದ ವಿಗ್ರಹಗಳನ್ನೂ ಪೂಜಿಸಿ ನನಗೆ ಕೋಪವನ್ನೆಬ್ಬಿಸಿದಿ.
10 त्यसकारण हेर्, म तेरो परिवारमा विपत्ति ल्याउने छु । चाहे कमारा होस् या फुक्का, म इस्राएलको हरेक पुरुष बालकलाई खतम पारिदिने छु, र तेरो घरानालाई गोबर जलाएझैँ पूर्ण रूपमा हटाइदिने छु ।
೧೦ಆದುದರಿಂದ ಯಾರೊಬ್ಬಾಮನೇ ಕೇಳು, ನಾನು ನಿನ್ನ ಮನೆಯವರ ಮೇಲೆ ಕೇಡನ್ನು ಬರಮಾಡುವೆನು. ನಿನ್ನ ಕುಟುಂಬದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಸಂಹರಿಸಿಬಿಡುವೆನು. ಒಬ್ಬನು ಕಸವನ್ನು ಗುಡಿಸಿ ತೆಗೆದುಹಾಕುವಂತೆ ನಾನು ನಿನ್ನ ಮನೆಯವರನ್ನು ತೆಗೆದುಹಾಕುವೆನು.
11 तेरो घरानाको हरेक व्यक्ति जो यस सहरमा मर्छ, त्यसलाई कुकुरहरूले खाने छन्, अनि खेतमा मर्ने जोसुकैलाई आकाशका चराचुरुङ्गीहरूले खाने छन् किनकि म परमप्रभुले यसो भनेको छु ।'
೧೧ಅವರು ನಿರ್ನಾಮವಾಗುವರು. ಅವರಲ್ಲಿ ಪಟ್ಟಣದೊಳಗೆ ಸಾಯುವಂಥವರನ್ನು ನಾಯಿಗಳೂ ಮತ್ತು ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದುಬಿಡುವವು ಎಂದು ಹೇಳುತ್ತಾನೆ’. ಇದು ಯೆಹೋವನಾದ ನನ್ನ ಮಾತು. ನೀನು ಎದ್ದು ನಿನ್ನ ಮನೆಗೆ ಹೋಗು.
12 त्यसैले हे यारोबामकी पत्नी, उठेर आफ्नो घर फर्केर जाऊ । तिमी सहरमा प्रवेश गर्दा तिम्रो बालक अबिया मर्ने छ ।
೧೨ನೀನು ಪಟ್ಟಣದೊಳಗೆ ಕಾಲಿಡುವಷ್ಟರಲ್ಲಿ ಹುಡುಗನು ಸಾಯುವನು.
13 सारा इस्राएलले त्यसको निम्ति शोक गर्ने छन् र त्यसलाई गाड्ने छन् । यारोबामको परिवारबाट चिहानमा जाने त्यही मात्र हुने छ किनकि यारोबामको घरबाट त्यसले मात्र इस्राएलका परमेश्वर परमप्रभुको दृष्टिमा निगाह पायो ।
೧೩ಇಸ್ರಾಯೇಲರೆಲ್ಲರೂ ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡುವರು. ಯಾರೊಬ್ಬಾಮನ ಮನೆಯವರೊಳಗೆ ಅವನು ಮಾತ್ರ ಇಸ್ರಾಯೇಲ್ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿರುವುದರಿಂದ ಅವನೊಬ್ಬನೇ ಸಮಾಧಿಹೊಂದುವನು.
14 साथै, त्यस दिन परमप्रभुले इस्राएलबाट एक जना राजा उठाउनुहुने छ जसले यारोबामको परिवारलाई खतम पारिदिने छ । आज नै त्यही दिन हो ।
೧೪ಯೆಹೋವನು ಇಸ್ರಾಯೇಲರನ್ನು ಆಳಲು ಬೇರೊಬ್ಬ ಅರಸನನ್ನು ನೇಮಿಸುವನು. ಅವನು ಕೂಡಲೇ ಯಾರೊಬ್ಬಾಮನ ಮನೆಯವರನ್ನು ಸಂಹರಿಸಿಬಿಡುವನು. ಇನ್ನು ಏನೇನು ಸಂಭವಿಸುವದೋ?
15 किनकि पानीमा निगालो हल्लिएझैँ परमप्रभुले इस्राएललाई हल्लाउनुहुने छ, र उहाँले तिनीहरूका पिता-पुर्खाहरूलाई दिनुभएको यस असल देशबाट जरैदेखि उखेलिदिनुहुने छ । उहाँले तिनीहरूलाई यूफ्रेटिस नदीभन्दा पारि तितर-बितर पारिदिनुहुने छ किनकि तिनीहरूले अशेराका खम्बाहरू बनाई परमप्रभुलाई रिस उठाएका छन् ।
೧೫ಯೆಹೋವನು ಇಸ್ರಾಯೇಲರನ್ನು ಹೊಡೆಯುವನು. ಆಗ ಅವರು ನೀರಿನಲ್ಲಿರುವ ಆಪುಹುಲ್ಲೋ ಎಂಬಂತೆ ಹೊಯ್ದಾಡುವರು. ಅವರು ಅಶೇರ ವಿಗ್ರಹಸ್ತಂಭಗಳನ್ನು ಮಾಡಿಕೊಂಡು ಆತನಿಗೆ ಕೋಪವನ್ನೆಬ್ಬಿಸಿದ್ದರಿಂದ ಆತನು ಅವರನ್ನು ಅವರ ಪೂರ್ವಿಕರಿಗೆ ಕೊಟ್ಟ ದೇಶದಿಂದ ಕಿತ್ತುಹಾಕಿ ಯೂಫ್ರೆಟಿಸ್ ನದಿಯ ಆಚೆಯಲ್ಲಿರುವ ದೇಶದೊಳಗೆ ಚದುರಿಸಿಬಿಡುವನು.
16 यारोबामले पाप गरेका कारण र तिनले इस्राएललाई पाप गर्न लगाएकाले उहाँले इस्राएललाई त्यागिदिनुहुने छ ।”
೧೬ಯೆಹೋವನು ಯಾರೊಬ್ಬಾಮನ ಪಾಪಗಳ ನಿಮಿತ್ತವಾಗಿಯೂ ಅವನ ಪ್ರೇರಣೆಯಿಂದ ಇಸ್ರಾಯೇಲರು ಮಾಡಿದ ಅಪರಾಧಗಳ ನಿಮಿತ್ತವಾಗಿಯೂ ಅವರನ್ನು ಶತ್ರುಗಳಿಗೆ ಒಪ್ಪಿಸುವನು” ಎಂದು ಆಕೆಗೆ ಹೇಳಿದನು.
17 त्यसैले यारोबामकी पत्नी उठिन् र बाटो लागिन् अनि तिर्सामा आइन् । उनले आफ्नो घरको सँघार टेक्दा बालक मर्यो ।
೧೭ಯಾರೊಬ್ಬಾಮನ ಹೆಂಡತಿಯು ತಿರ್ಚಾ ಊರಿಗೆ ಹೊರಟುಹೋಗಿ ತನ್ನ ಮನೆಯ ಹೊಸ್ತಿಲಲ್ಲಿ ಕಾಲಿಟ್ಟ ಕೂಡಲೇ ಹುಡುಗನು ಸತ್ತನು.
18 सारा इस्राएलले त्यसलाई गाडे, र त्यसको निम्ति शोक गरे जस्तो परमप्रभुले आफ्ना दास अहियाह अगमवक्ताद्वारा भन्नुभएको थियो ।
೧೮ಯೆಹೋವನು ಪ್ರವಾದಿಯಾದ ಅಹೀಯನ ಮುಖಾಂತರವಾಗಿ ತಿಳಿಸಿದ ಪ್ರಕಾರ ಎಲ್ಲಾ ಇಸ್ರಾಯೇಲರು ಅವನಿಗೋಸ್ಕರ ಗೋಳಾಡಿ ಅವನ ಶವವನ್ನು ಸಮಾಧಿಮಾಡಿದರು.
19 यारोबामका अन्य कामहरूको बारेमा अर्थात् कसरी तिनले युद्ध गरे र शासन गरे भन्ने विषयमा इस्राएलका राजाहरूको इतिहासको पुस्तकमा लेखिएका छन् ।
೧೯ಯಾರೊಬ್ಬಾಮನ ಇತರ ಕೃತ್ಯಗಳೂ ಅವನ ಯುದ್ಧ ಮತ್ತು ರಾಜ್ಯಭಾರಗಳ ವಿವರವೂ ಇಸ್ರಾಯೇಲ್ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದು ದಾಖಲಿಸಲಾಗಿದೆ.
20 यारोबामले बाइस वर्ष शासन गरे, र त्यसपछि तिनी आफ्ना पित्रहरूसित सुत्न गए, अनि तिनको ठाउँमा तिनका छोरा नादाब राजा भए ।
೨೦ಅವನು ಇಪ್ಪತ್ತೆರಡು ವರ್ಷ ಆಳಿ ಪೂರ್ವಿಕರ ಬಳಿಗೆ ಸೇರಿದನು. ಅವನಿಗೆ ಬದಲಾಗಿ ಅವನ ಮಗನಾದ ನಾದಾಬನು ಅರಸನಾದನು.
21 सोलोमनका छोरा रहबामले यहूदामा शासन गर्दै थिए । रहबाम राजा हुँदा तिनी एकचालिस वर्षका थिए । तिनले परमप्रभुले आफ्नो नाउँ राख्न इस्राएलका सबै कुलबाट चुन्नुभएको सहर यरूशलेममा सत्र वर्ष शासन गरे । तिनकी आमाको नाउँ नामा थियो जो एक अम्मोनी स्त्री थिइन् ।
೨೧ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ಅರಸನಾದನು. ಅವನು ಪಟ್ಟಕ್ಕೆ ಬಂದಾಗ ನಲ್ವತ್ತೊಂದು ವರ್ಷದವನಾಗಿದ್ದು, ಯೆಹೋವನು ತನ್ನ ಹೆಸರಿಗೋಸ್ಕರ ಇಸ್ರಾಯೇಲರ ಎಲ್ಲಾ ಕುಲಗಳಿಂದ ಆರಿಸಿಕೊಂಡ ಯೆರೂಸಲೇಮ್ ಪಟ್ಟಣದಲ್ಲಿ ಹದಿನೇಳು ವರ್ಷಗಳ ಕಾಲ ಆಳ್ವಿಕೆ ಮಾಡಿದನು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ.
22 यहूदाले परमप्रभुको दृष्टिमा जे खराब छ त्यही गरे । तिनीहरूका पिता-पुर्खाहरूले गरेका पापभन्दा बढी पाप गरेर तिनीहरूले उहाँलाई डाही तुल्याए ।
೨೨ಯೆಹೂದ್ಯರು ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದರು. ಅವರು ತಮ್ಮ ಪೂರ್ವಿಕರಿಗಿಂತಲೂ ದುಷ್ಟರಾಗಿ ಆತನನ್ನು ರೇಗಿಸಿದರು.
23 किनकि तिनीहरूले पनि आफ्ना लागि प्रत्येक उच्च स्थान र हरियो रुखमुनि डाँडाका ठाउँहरू, ढुङ्गाका मूर्तिहरू र अशेराका खम्बाहरू बनाए ।
೨೩ತಮ್ಮ ಪೂರ್ವಿಕರಂತೆಯೇ ಅವರೂ ತಮಗೋಸ್ಕರ ಪೂಜಾ ಸ್ಥಳಗಳನ್ನು ನಿರ್ಮಿಸಿಕೊಂಡರು. ಪ್ರತಿಯೊಂದು ದಿಣ್ಣೆಗಳ ಮೇಲೆ ಹಾಗೂ ಚೆನ್ನಾಗಿ ಬೆಳೆದಿರುವ ಪ್ರತಿಯೊಂದು ಮರದ ಕೆಳಗೆ ಕಲ್ಲಿನ ಕಂಬಗಳನ್ನೂ ಮತ್ತು ಅಶೇರ ವಿಗ್ರಹಸ್ತಂಭಗಳನ್ನೂ ನಿಲ್ಲಿಸಿದರು.
24 त्यस देशमा झुटा धर्मसम्बन्धी वेश्याहरू पनि थिए । परमप्रभुले इस्राएलीहरूकै सामुबाट धपाउनुभएका जातिहरूले अभ्यास गरेका घिनलाग्दा कार्यहरू नै तिनीहरूले गरे ।
೨೪ಇದಲ್ಲದೆ ಅವರ ದೇಶದಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿರುವ ದೇವದಾಸ, ದೇವದಾಸಿಯರು ಇದ್ದರು. ಯೆಹೋವನು ಅವರ ಎದುರಿನಿಂದ ಹೊರಡಿಸಿಬಿಟ್ಟ ಅನ್ಯಜನಾಂಗಗಳಲ್ಲಿದ್ದ ದುರಾಚಾರಗಳನ್ನೆಲ್ಲಾ ಅವರೂ ಆಚರಿಸುವವರಾದರು.
25 राजा रहबामको शासनकालको पाँचौँ वर्षमा मिश्रका राजा शीशकले यरूशलेमको विरुद्धमा आक्रमण गरे ।
೨೫ರೆಹಬ್ಬಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ ಐಗುಪ್ತದ ಅರಸನಾದ ಶೀಶಕನು ಯೆರೂಸಲೇಮಿಗೆ ವಿರುದ್ಧವಾಗಿ ದಂಡೆತ್ತಿ ಬಂದನು.
26 तिनले परमप्रभुको मन्दिर र राजको महलका खजानाहरू लिएर गए । तिनले हरेक कुरो लिएर गए । तिनले सोलोमनले बनाएका सुनका ढालहरू पनि लिएर गए ।
೨೬ಅವನು ಯೆಹೋವನ ಆಲಯದ ಮತ್ತು ಅರಮನೆಯ ಎಲ್ಲಾ ದ್ರವ್ಯವನ್ನೂ ಹಾಗೂ ಸೊಲೊಮೋನನು ಮಾಡಿಸಿದ ಬಂಗಾರದ ಗುರಾಣಿಗಳನ್ನೂ ತೆಗೆದುಕೊಂಡು ಹೋದನು.
27 राजा रहबामले तिनको सट्टामा काँसाका ढालहरू बनाए, र राजाको महलको ढोकाहरूको रक्षा गर्ने रक्षकहरूका हातमा जिम्मा दिए ।
೨೭ಅರಸನಾದ ರೆಹಬ್ಬಾಮನು ಅವುಗಳಿಗೆ ಬದಲಾಗಿ ತಾಮ್ರದ ಗುರಾಣಿಗಳನ್ನು ಮಾಡಿಸಿ, ಅವುಗಳನ್ನು ಅರಮನೆಯ ದ್ವಾರಪಾಲಕರಾಗಿದ್ದ ಮೈಗಾವಲಿನವರ ದಳವಾಯಿಗಳಿಗೆ ಒಪ್ಪಿಸಿದನು.
28 राजा परमप्रभुको मन्दिरमा प्रवेश गर्दा ती रक्षकहरूले ती ढालहरू बोक्थे । त्यसपछि तिनीहरूले ती रक्षक कोठामा ल्याएर राख्ने गर्थे ।
೨೮ಅರಸನು ಯೆಹೋವನ ಆಲಯಕ್ಕೆ ಹೋಗುವಾಗಲೆಲ್ಲಾ ಅವರು ಅವುಗಳನ್ನು ಹಿಡಿದುಕೊಳ್ಳುವರು. ಅಲ್ಲಿಂದ ಅರಸನು ಹಿಂತಿರುಗಿ ಹೋದ ಮೇಲೆ ಅವುಗಳನ್ನು ತಮ್ಮ ಕೋಣೆಯಲ್ಲಿಡುವರು.
29 रहबामले गरेका अरू सबै कामहरूको बारेमा के यहूदाका राजाहरूको इतिहासको पुस्तकमा लेखिएका छैनन् र?
೨೯ರೆಹಬ್ಬಾಮನ ಉಳಿದ ಚರಿತ್ರೆಯು ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತದೆ.
30 रहबाम र यारोबामको बिचमा युद्ध चलिरह्यो ।
೩೦ರೆಹಬ್ಬಾಮನಿಗೂ ಯಾರೊಬ್ಬಾಮನಿಗೂ ಯಾವಾಗಲೂ ಯುದ್ಧನಡೆಯುತ್ತಿತ್ತು.
31 यसरी रहबाम आफ्ना पित्रहरूसित सुत्न गए, र तिनीहरूसँगै दाऊदको सहरमा गाडिए । तिनकी आमाको नाउँ नामा थियो जो अम्मोनी स्त्री थिइन् । तिनको ठाउँमा तिनका छोरा अबिया राजा भए ।
೩೧ರೆಹಬ್ಬಾಮನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ದಾವೀದನಗರದೊಳಗೆ ಅವನ ಹಿರಿಯರ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು. ಅಮ್ಮೋನಿಯಳಾದ ನಯಮಾ ಎಂಬಾಕೆಯು ಅವನ ತಾಯಿ. ಅನಂತರ ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಅರಸನಾದನು.