< १ इतिहास 2 >
1 इस्राएलका छोराहरू यिनै थिएः रूबेन, शिमियोन, लेवी, यहूदा, इस्साखार, जबूलून,
ಇಸ್ರಾಯೇಲನ ಪುತ್ರರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್,
2 दान, योसेफ, बेन्यामीन, नप्ताली, गाद र आशेर ।
ದಾನ್, ಯೋಸೇಫ್, ಬೆನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
3 यहूदाका छोराहरू एर्, ओनान र शेलह जसलाई एक जना कनानी स्त्री शूआले तिनीबाट जन्माइन् । यहूदाका जेठा छोरा एर् परमप्रभुको दृष्टिमा दुष्ट भएका हुनाले परमप्रभुले तिनलाई मार्नुभयो ।
ಯೆಹೂದನ ಪುತ್ರರು: ಏರ್, ಓನಾನ್, ಶೇಲಹ. ಈ ಮೂವರು ಅವನಿಗೆ ಶೂನನ ಮಗಳಾದ ಕಾನಾನ್ ದೇಶದವಳಿಂದ ಹುಟ್ಟಿದರು. ಯೆಹೂದನ ಚೊಚ್ಚಲಮಗನಾದ ಏರನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟವನಾದ್ದರಿಂದ, ದೇವರು ಅವನನ್ನು ಮರಣಕ್ಕೆ ಒಪ್ಪಿಸಿದರು.
4 तिनकी बुहारी तामारले तिनको निम्ति फारेस र जेरहलाई जन्माइन् । यहूदा जम्मा पाँच जना छोराहरू थिए ।
ಯೆಹೂದನ ಸೊಸೆ ತಾಮಾರಳು ಅವನಿಗೆ ಪೆರೆಚನನ್ನೂ, ಜೆರಹನನ್ನೂ ಹೆತ್ತಳು. ಯೆಹೂದನ ಪುತ್ರರೆಲ್ಲರೂ ಐದು ಮಂದಿ.
5 फारेसका छोराहरू हेस्रोन र हामूल थिए ।
ಪೆರೆಚನ ಪುತ್ರರು: ಹೆಚ್ರೋನ್, ಹಾಮೂಲ್.
6 जेरहका छोराहरू जिम्री, एतान, हेमान, कलकोल र दर्दा, जम्मा पाँच जना थिए ।
ಜೆರಹನ ಪುತ್ರರು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್ ಮತ್ತು ದಾರಾ, ಒಟ್ಟು ಐದು ಮಂದಿ.
7 कर्मीका छोरा आचारले परमेश्वरको निम्ति अर्पण गरिएको कुरा चोरेर इस्राएलमाथि कष्ट ल्याए ।
ಕರ್ಮೀಯ ಪುತ್ರರು: ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡು ಇಸ್ರಾಯೇಲರನ್ನು ಆಪತ್ತಿಗೆ ಗುರಿಪಡಿಸಿದ ಆಕಾನನು.
8 एतानका छोरा अजर्याह थिए ।
ಏತಾನನ ಮಗನು ಅಜರ್ಯನು.
9 हेस्रोनका छोराहरू यरहमेल, राम र कालेब थिए ।
ಹೆಚ್ರೋನನಿಗೆ ಹುಟ್ಟಿದ ಪುತ್ರರು: ಯೆರಹ್ಮೇಲ್, ರಾಮ್, ಕೆಲೂಬಾಯ್.
10 राम अम्मीनादाबका पिता बने, र अम्मीनादाब नहशोनका पिता बने, जो यहूदाका एक अगुवा थिए ।
ರಾಮನು ಅಮ್ಮೀನಾದಾಬನ ತಂದೆಯಾಗಿದ್ದನು. ಅಮ್ಮೀನಾದಾಬನು ಯೆಹೂದನ ಮಕ್ಕಳಿಗೆ ನಾಯಕನಾದ ನಹಶೋನನ ತಂದೆ.
11 नहशोन सल्मोनका पिता बने, र सल्मोन बोअजका पिता बने ।
ನಹಶೋನನು ಸಲ್ಮನನ ತಂದೆಯಾಗಿದ್ದನು, ಸಲ್ಮನ ಬೋವಜನ ತಂದೆ,
12 बोअज ओबेदका पिता बने, र ओबेद यिशैका पिता बने ।
ಬೋವಜನು ಓಬೇದನ ತಂದೆ, ಓಬೇದನು ಇಷಯನ ತಂದೆ.
13 यिशैचाहिं जेठा एलीआब, माहिला अबीनादाब, साहिंला शिमेअ,
ಇಷಯನು ತನ್ನ ಚೊಚ್ಚಲ ಮಗ ಎಲೀಯಾಬನನ್ನೂ, ಎರಡನೆಯವನಾದ ಅಬೀನಾದಾಬನನ್ನೂ, ಮೂರನೆಯವನಾದ ಶಿಮ್ಮನನ್ನೂ,
14 काहिंला नतनेल, ठाहिंलो राद्दै,
ನಾಲ್ಕನೆಯವನಾದ ನೆತನೆಯೇಲನನ್ನೂ, ಐದನೆಯವನಾದ ರದ್ದೈನನ್ನೂ,
15 अन्तरे ओसेम र कान्छा दाऊदका पिता बने ।
ಆರನೆಯವನಾದ ಓಚೆಮನನ್ನೂ, ಏಳನೆಯವನಾದ ದಾವೀದನಿಗೆ ತಂದೆಯಾಗಿದ್ದನು.
16 तिनीहरूका दिदी-बहिनी सरूयाह र अबीगेल थिए । सरूयाहका तीन जना छोरा अबीशै, योआब र असाहेल थिए ।
ಅವರ ಇಬ್ಬರು ಸಹೋದರಿಯರು ಚೆರೂಯಳು, ಅಬೀಗೈಲಳು. ಚೆರೂಯಳ ಮೂವರು ಮಕ್ಕಳು ಅಬೀಷೈ, ಯೋವಾಬ್, ಅಸಾಯೇಲ್.
17 अबीगेलले अमासालाई जन्माइन्, जसका पिता इश्माएली येतेर थिए ।
ಅಬೀಗೈಲಳು ಅಮಾಸನ ತಾಯಿ, ಅಮಾಸನ ತಂದೆಯು ಇಷ್ಮಾಯೇಲನ ವಂಶದ ಯೆತೆರನು.
18 हेस्रोनका छोरा कालेबका आफ्नी पत्नी अजूबाबाट र यरीअतबाट छोराछोरीका पिता भए । तिनका छोराहरू येशेर, शोबाब र अर्दोन थिए ।
ಹೆಚ್ರೋನನ ಮಗನಾದ ಕಾಲೇಬನು ಅಜೂಬಳಿಂದಲೂ ಯೆರ್ಯೋತಳಿಂದಲೂ ಮಕ್ಕಳನ್ನು ಪಡೆದನು. ಇವಳ ಪುತ್ರರು: ಯೇಷೆರನು, ಶೋಬಾಬನು, ಅರ್ದೋನನು.
19 अजूबा मृत्यु भएपछि कालेबले एप्रातलाई विवाह गरे, जसले तिनका निम्ति हूरलाई जन्माइन् ।
ಅಜೂಬಳ ಮರಣದ ನಂತರ, ಕಾಲೇಬನು ಎಫ್ರಾತಳನ್ನು ಮದುವೆಯಾದನು. ಅವಳು ಅವನಿಗೆ ಹೂರನನ್ನು ಹೆತ್ತಳು.
20 हूर ऊरीका पिता बने, र ऊरी बजलेलका पिता बने ।
ಹೂರನು ಊರಿಯನ ತಂದೆ; ಊರಿಯನು ಬೆಚಲಯೇಲನ ತಂದೆ.
21 पछि हेस्रोनले (जब तिनी साठी वर्षका थिए) गिलादका पिता माकीरकी छोरीसित विवाह गरे । तिनले उनका निम्ति सगूबलाई जन्माइन् ।
ತರುವಾಯ ಹೆಚ್ರೋನನು ಅರವತ್ತು ವರ್ಷದವನಾಗಿರುವಾಗ ಗಿಲ್ಯಾದನ ತಂದೆಯಾದ ಮಾಕೀರನ ಮಗಳನ್ನು ಮದುವೆಯಾದನು. ಅವಳು ಅವನಿಗೆ ಸೆಗೂಬ ಎಂಬ ಮಗನನ್ನು ಹೆತ್ತಳು.
22 सगूब याईरका पिता बने, जसले गिलादका तेईस वटा सहरलाई अधीन गरे ।
ಸೆಗೂಬನು ಯಾಯೀರನ ತಂದೆ, ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತು ಮೂರು ಪಟ್ಟಣಗಳು ಇದ್ದವು.
23 गशूर र अरामले हब्बात-याईर र केनातका साथै वरिपरिका साठी वटा सहर लिए । यी सबै बासिन्दा गिलादका पिता माकीरका सन्तान थिए ।
ಇವನಿಗೆ ಗಿಲ್ಯಾದಿನ ದೇಶದಲ್ಲಿ ಅರುವತ್ತು ಪಟ್ಟಣಗಳು ಇದ್ದವು. ಇದಲ್ಲದೆ ಅವನು ಗೆಷೂರ್ಯರನ್ನೂ, ಅರಾಮ್ಯರನ್ನೂ, ಯಾಯೀರನ ಪಟ್ಟಣಗಳನ್ನೂ, ಕೆನಾತ್ ಮತ್ತು ಅದರ ಪಟ್ಟಣಗಳನ್ನೂ, ಒಟ್ಟು ಅರವತ್ತು ಪಟ್ಟಣಗಳನ್ನು ಗೆದ್ದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ವಂಶದವರಿಗೆ ಇದ್ದವು.
24 हेस्रोनको मृत्युपछि आफ्ना पिता हेस्रोनकी पत्नी अबियासँग कालेबले सहवास गरे । उनले तिनको निम्ति तकोका पिता अशहूरलाई जन्माइन् ।
ಹೆಚ್ರೋನನು ಕಾಲೇಬ್ ಎಫ್ರಾತದಲ್ಲಿ ಸತ್ತ ತರುವಾಯ ಹೆಚ್ರೋನನ ಹೆಂಡತಿಯಾದ ಅಬೀಯಳು ಅವನಿಗೆ ಅಷ್ಹೂರನನ್ನು ಹೆತ್ತಳು. ಇವನು ತೆಕೋವನ ತಂದೆಯು.
25 हेस्रोनका जेठा छोरा यरहमेलका छोराहरू, जेठा राम, बूना, ओरेन, ओसेम र अहियाह थिए ।
ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನ ಪುತ್ರರು: ಚೊಚ್ಚಲ ಮಗ ರಾಮ ಮತ್ತು ಬೂನ, ಓರೆನ, ಓಚೆಮ, ಅಹೀಯ.
26 यरहमेलकी अतारा नाम गरेकी अर्की पत्नी थिइन् । तिनी ओनामकी आमा थिइन् ।
ಈ ಯೆರಹ್ಮೇಲನಿಗೆ ಮತ್ತೊಬ್ಬ ಹೆಂಡತಿ ಇದ್ದಳು. ಅವಳ ಹೆಸರು ಅಟಾರಳು; ಅವಳು ಓನಾಮನ ತಾಯಿ.
27 यरहमेलका जेठा छोरा रामका छोराहरू मास, यामीन र एकेर थिए ।
ಯೆರಹ್ಮೇಲನ ಚೊಚ್ಚಲಮಗನಾದ ರಾಮನ ಪುತ್ರರು: ಮಾಚ್, ಯಾಮೀನ್, ಏಕೆರ್.
28 ओनामका छोराहरू शम्मै र यादा थिए । शम्मैका छोराहरू नादाब र अबीशूर थिए ।
ಓನಾಮನ ಪುತ್ರರು: ಶಮ್ಮಾಯ, ಯಾದ; ಶಮ್ಮಾಯನ ಪುತ್ರರು: ನಾದಾಬನು, ಅಬಿಷೂರನು.
29 अबीशूरकी पत्नीको नाउँ अबीहेल थियो र उनले तिनको निम्ति अहबान र मोलीदलाई जन्माइन् ।
ಅಬಿಷೂರನ ಹೆಂಡತಿಯ ಹೆಸರು ಅಬೀಹೈಲ; ಅವಳು ಅವನಿಗೆ ಅಹ್ಬಾನನನ್ನೂ, ಮೋಲೀದನನ್ನೂ ಹೆತ್ತಳು.
30 नादाबका छोराहरू सेलेद र अप्पेम थिए, तर सेलेद सन्तानबिना नै मरे ।
ನಾದಾಬನ ಪುತ್ರರು ಸೆಲೆದ್, ಅಪ್ಪಯಿಮ್; ಸೆಲೆದನು ಮಕ್ಕಳಿಲ್ಲದೆ ಸತ್ತನು.
31 अप्पेमका छोरा यिशी थिए । यिशीका छोरा शेशान थिए । शेशानका छोरा अहलैका थिए ।
ಅಪ್ಪಯಿಮ್ ಇವನ ಪುತ್ರರು: ಇಷ್ಷೀಯು; ಇಷ್ಷೀಯನ ಮಗನು ಶೇಷಾನನು; ಶೇಷಾನನ ಮಗನು; ಅಹ್ಲಾಯಿಯನು;
32 शम्मैका भाइ यादाका छोराहरू येतेर र जोनाथन थिए । येतेर सन्तानबिना नै मरे ।
ಶಮ್ಮಾಯನ ಸಹೋದರನಾದ ಯಾದನ ಪುತ್ರರು: ಯೆತೆರನ ಮತ್ತು ಯೋನಾತಾನ್. ಯೆತೆರನು ಮಕ್ಕಳಿಲ್ಲದೆ ಸತ್ತನು;
33 जोनाथनका छोराहरू पेलेथ र जाजा थिए। यरहमेलका सन्तानहरू यि नै थिए ।
ಯೋನಾತಾನನ ಪುತ್ರರು: ಪೆಲೆತನು, ಜಾಜನು. ಇವರೇ ಯೆರಹ್ಮೇಲನ ವಂಶಜರು.
34 अब शेशानका चाहिं छोरीहरू मात्र थिए, छोराहरू थिएनन् । शेशानको यरहा नाउँको एउटा मिश्री दास थियो ।
ಶೇಷಾನನಿಗೆ ಪುತ್ರರಿರಲಿಲ್ಲ. ಪುತ್ರಿಯರಿದ್ದರು. ಶೇಷಾನನಿಗೆ ಯರ್ಹನೆಂಬ ಹೆಸರುಳ್ಳ ಈಜಿಪ್ಟಿನವನಾದ ಸೇವಕನಿದ್ದನು.
35 शेशानले आफ्नी छोरीको विवाह यही दास यरहासित गरिदिए । तिनले त्यसको निम्ति अत्तैलाई जन्माइन् ।
ಶೇಷಾನನು ತನ್ನ ಪುತ್ರಿಯನ್ನು ತನ್ನ ಸೇವಕ ಯರ್ಹನಿಗೆ ಮದುವೆಮಾಡಿಕೊಟ್ಟನು. ಅವಳು ಅವನಿಗೆ ಅತ್ತೈಯನ್ನು ಹೆತ್ತಳು.
36 अत्तै नातानका पिता र नातान जाबादका पिता बने ।
ಅತ್ತೈ ನಾತಾನನ ತಂದೆ; ನಾತಾನನು ಜಾಬಾದನ ತಂದೆ.
37 जाबाद एपलालका पिता र एपलाल ओबेदका पिता बने ।
ಜಾಬಾದನು ಎಫ್ಲಾಲನನ್ನು ಪಡೆದನು; ಎಫ್ಲಾನನು ಓಬೇದನನ್ನು ಪಡೆದನು.
38 ओबेद येहूका पिता र येहू अजर्याहका पिता बने ।
ಓಬೇದನು ಯೇಹುವನ್ನು ಪಡೆದನು; ಯೇಹುವು ಅಜರ್ಯನನ್ನು ಪಡೆದನು.
39 अजर्याह हेलेसका पिता बने र हेलेस एलासाका पिता बने ।
ಅಜರ್ಯನು ಹೆಲೆಚನನ್ನು ಪಡೆದನು; ಹೆಲೆಚನು ಎಲ್ಲಾಸನನ್ನು ಪಡೆದನು.
40 एलासा सिस्मैका पिता बने र सिस्मै शल्लूमका पिता बने ।
ಎಲ್ಲಾಸನು ಸಿಸ್ಮೈಯನ್ನು ಪಡೆದನು; ಸಿಸ್ಮೈಯು ಶಲ್ಲೂಮನನ್ನು ಪಡೆದನು.
41 शल्लूम यकम्याहका पिता बने र यकम्याह एलीशामाका पिता बने ।
ಶಲ್ಲೂಮನು ಯೆಕಮ್ಯಾಹನ ತಂದೆ; ಯೆಕಮ್ಯಾಹನು ಎಲೀಷಾಮನ ತಂದೆ.
42 यरहमेलका भाइ कालेबका छोराहरू जेठा मेशा, जो जीपका पिता थिए । उनका माहिला छोरा मारेशा, जो हेब्रोनका पिता थिए ।
ಯೆರಹ್ಮೇಲನ ಸಹೋದರನಾದ ಕಾಲೇಬನ ಪುತ್ರರು: ಅವನ ಚೊಚ್ಚಲ ಮಗನು ಮೇಷನು; ಇವನು ಜೀಫ್ಯನಿಗೆ ತಂದೆಯಾಗಿದ್ದನು. ಹೆಬ್ರೋನನ ತಂದೆಯಾದ ಮಾರೇಷನಿಗೆ ಮಕ್ಕಳು ಜನಿಸಿದರು.
43 हेब्रोनका छोराहरू कोरह, तप्पूह, रेकेम र शेमा थिए ।
ಹೆಬ್ರೋನನ ಪುತ್ರರು: ಕೋರಹನು, ತಪ್ಪೂಹನು, ರೆಕೆಮನು, ಶೆಮನು.
44 शेमा रहमका पिता बने, र जो योर्कामका पिता थिए । रेकेम शम्मैका पिता बने ।
ಶೆಮನು ರಹಮ್ಯನ ತಂದೆ ರಹಮ್ಯನು ಯೊರ್ಕೆಯಾಮನ ತಂದೆ. ರೆಕೆಮನು ಶಮ್ಮಾಯನನ್ನು ಪಡೆದನು.
45 शम्मैका छोरा माओन थिए, र माओन बेथ-सरका पिता थिए ।
ಶಮ್ಮಾಯಿಯ ಮಗನು ಮಾವೋನ್ಯನು; ಈ ಮಾವೋನ್ಯನು ಬೇತ್ ಚೂರನಿಗೆ ತಂದೆಯಾಗಿದ್ದನು.
46 कालेबकी उपपत्नी एपाले हारान, मोस र गाजेजलाई जन्माइन् । हारान गाजेजका पिता बने ।
ಕಾಲೇಬನ ಉಪಪತ್ನಿಯಾದ ಏಫಾಳು ಹಾರಾನ್, ಮೋಚ, ಗಾಜೇಜ ಎಂಬುವರನ್ನು ಹೆತ್ತಳು. ಹಾರಾನನು ಗಾಜೇಜನ ತಂದೆ.
47 यहदैका छोराहरू रेगेम, योताम, गेशान, पलेत, एपा र शाप थिए ।
ಯಾದೈಯ ಪುತ್ರರು: ರೆಗೆಮ್, ಯೋತಾಮ್, ಗೇಷಾನ್, ಪೆಲಟ್, ಏಫ್, ಶಾಫ್.
48 कालेबकी उपपत्नी माकाले शेबेर र तिर्हानालाई जन्माइन् ।
ಕಾಲೇಬನ ಇನ್ನೊಬ್ಬ ಉಪಪತ್ನಿಯಾದ ಮಾಕಳು ಶೇಬರ್, ತಿರ್ಹನ ಎಂಬುವರನ್ನು ಹೆತ್ತಳು.
49 तिनले मद्मन्नाका पिता शापलाई अनि मक्बेना र गिबियाका पिता शेबालाई पनि जन्माइन् । कालेबकी छोरी अक्सा थिइन् । कालेबका सन्तान यी नै थिए ।
ಇವಳಲ್ಲಿ ಮದ್ಮನ್ನದವರ ಮೂಲಪುರುಷನಾದ ಶಾಫ್, ಮಕ್‌ಬೇನ ಮತ್ತು ಗಿಬೆಯ ಊರುಗಳವರ ಮೂಲಪುರುಷನಾದ ಶೆವ ಇವರು ಹುಟ್ಟಿದರು. ಕಾಲೇಬನ ಮಗಳು ಅಕ್ಸಾ.
50 एप्राताका जेठा छोरा हूरका छोराहरू किर्यत-यारीमका पिता शोबाल,
ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ್. ಹೂರನ ಮಗ ಶೋಬಾಲ್ ಕಿರ್ಯತ್ ಯಾರೀಮ್ ಪಟ್ಟಣವನ್ನೂ,
51 बेथलेहेमका पिता सल्मा र बेथ-गादेरका पिता हारेप थिए ।
ಅವನ ಇನ್ನೊಬ್ಬ ಮಗ ಸಲ್ಮ ಬೇತ್ಲೆಹೇಮನ್ನೂ, ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.
52 किर्यत-यारीमका पिता शोबालका सन्तानहरू हारोए, मानहतीहरूका आधा,
ಕಿರ್ಯತ್ ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹಾರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,
53 र किर्यत-यारीमका वंशहरू यित्रीहरू, पूथीहरू, शुमातीहरू र मिश्रातीहरू थिए । सोराती र एश्तोलीहरू यिनीहरूका सन्तान भए ।
ಹಾಗೂ ಕಿರ್ಯತ್ ಯಾರೀಮನವರ ಗೋತ್ರಗಳು: ಯೆತೆರಿಯರು, ಪೂತ್ಯರು, ಶುಮಾತ್ಯರು, ಮಿಷ್ರಾಗ್ಯರು, ಇವರಿಂದ ಚೊರ್‍ರಾತ್ಯರೂ, ಎಷ್ಟಾವೋಲ್ಯರೂ ಹುಟ್ಟಿದರು.
54 सल्माका वंशहरू बेथलेहेम, नतोपातीहरू, अत्रोतबेथ-योआब, आधा मानहतीहरू र सोरीहरू,
ಸಲ್ಮನ ವಂಶಜರು: ಬೇತ್ಲೆಹೇಮ್, ನೆಟೋಫಾ, ಅಟರೋತ್ ಬೇತ್ಯೋವಾಬ್ ಊರುಗಳವರೂ, ಚೊರ್ಗದಲ್ಲಿ ವಾಸಿಸುವ ಮಾನಹತಿಯರಲ್ಲಿ ಅರ್ಧ ಜನರೂ ಉತ್ಪತ್ತಿಯಾದರು.
55 अनि याबेसमा बस्ने शास्त्रीका वंशहरू तिरातीहरू, शिम्मतीहरू र सुकातीहरू थिए । यिनीहरू रेकाबको घरानाका पिता हम्मतबाट आएका केनीहरू हुन्
ಯಾಬೇಚಿನಲ್ಲಿ ವಾಸಿಸುವ ಬರಹಗಾರರ ಕುಟುಂಬದವರಾದ ತಿರ್ರಾತ್ಯರು, ಶಿಮೆಯಾತ್ಯರು, ಸೂಕಾತ್ಯರು ಇವರು ರೇಕಾಬನ ಮನೆಯವರ ಮೂಲ ಪುರುಷನಾಗಿರುವ ಹಮ್ಮತನಿಂದ ಉತ್ಪನ್ನರಾದ ಕೇನ್ಯರು.