< Marko 4 >
1 Lelo katumbwa kuyegana mbwega ya bahari. Ni bandu banyansima baisi ni kunteteleka, kayingya nngalaba mmase nikutama, bando boote bayii pa mbwega kuyumo.
೧ಯೇಸುವು ಪುನಃ ಸಮುದ್ರದ ದಡದಲ್ಲಿ ಉಪದೇಶ ಮಾಡತೊಡಗಿದ್ದನು. ಬಹುಜನರು ಆತನ ಬಳಿಗೆ ಸೇರಿಬಂದಿದ್ದರಿಂದ ಆತನು ಸಮುದ್ರದಲ್ಲಿದ್ದ ದೋಣಿಹತ್ತಿ ಕುಳಿತುಕೊಂಡನು; ಆ ಜನರೆಲ್ಲರು ಸಮುದ್ರದ ದಡದಲ್ಲಿ ಸುತ್ತಲೂ ನೆರೆದುಬಂದಿದ್ದರು.
2 Na kaba yegana mayaulio ganyansima kwa mifano, na kaakoya kwabe kwa amyegano gake.
೨ಆಗ ಆತನು ಅವರಿಗೆ ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು ಉಪದೇಶಮಾಡಿದನು. ಆ ಉಪದೇಶದಲ್ಲಿ ಅವರಿಗೆ ಹೇಳಿದ್ದೇನಂದರೆ:
3 pekayeni, mpanzi ayeyi kupanda.
೩“ಕೇಳಿರಿ! ಬಿತ್ತುವವನು ಬಿತ್ತುವುದಕ್ಕೆ ಹೊರಟನು.
4 Yakapanda mbegu yenge yatumbwike munndela, ni iyuni baisi kabasonywa.
೪ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
5 Mbegu yenge yatumbwike kumiamba, ntopo ukando wanyansima. Mara za yomike, mwalo ntopo ukando wanyansima.
೫ಬೇರೆ ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ನೆಲದ ಮೇಲೆ ಬಿದ್ದವು; ಅಲ್ಲಿ ಮಣ್ಣು ಆಳವಾಗಿಲ್ಲದ್ದರಿಂದ ಅವು ಬೇಗ ಮೊಳೆತವು;
6 Yakupita bai lisoba, zayomike, mwalo zai ntopo mikega.
೬ಆದರೆ ಬಿಸಿಲೇರಿದಾಗ ಬಾಡಿ, ಬೇರಿಲ್ಲದ ಕಾರಣ ಒಣಗಿ ಹೋದವು.
7 Mbegu yenge yatumbwike mumiiba. Miiba yakoi nikuiteteleka, na ibelike kwa kilebe.
೭ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು; ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟದ್ದರಿಂದ ಅವು ಫಲಕೊಡಲಿಲ್ಲ.
8 Mbegu yenge yatumbwike pa ukando unoike na yaabelike matunda palioka zikola nikuyongeyeka, yenge yabelike mara thelathini zaidi, ni yenge sitini zaidi, ni yenge mara mia”.
೮ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದು ಮೊಳೆತು ಬೆಳೆದು ಬಂದು ಫಲಕೊಟ್ಟವು; ಅವುಗಳಲ್ಲಿ ಕೆಲವು ಮೂವತ್ತರಷ್ಟು, ಕೆಲವು ಅರುವತ್ತರಷ್ಟು, ಕೆಲವು ನೂರರಷ್ಟು ಫಲವನ್ನು ಕೊಟ್ಟವು.”
9 Kaakoya, “ywa bini makutu yakuyowa na ayowe”.
೯ಮತ್ತು ಆತನು “ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಅಂದನು.
10 Yesu palyo aiyika yake, balyo karibu yake ni balyo komi ni ibele kaba nlokiya kuhusu mifano.
೧೦ಆತನು ಒಬ್ಬನೇ ಇದ್ದಾಗ, ಆತನಿಗೆ ಹತ್ತಿರವಾಗಿದ್ದವರು ಹನ್ನೆರಡು ಮಂದಿ ಶಿಷ್ಯರ ಸಂಗಡ ಆ ಸಾಮ್ಯಗಳ ವಿಷಯವಾಗಿ ಆತನನ್ನು ಕೇಳಿದರು.
11 Kaakokeya kwabe, kwinu mpatike siri ya ufalume wa Nnongo. lakini baapanza kila kilebe ni mifano.
೧೧ಆತನು ಅವರಿಗೆ, “ದೇವರ ರಾಜ್ಯದ ರಹಸ್ಯ ನಿಮಗೆ ದೊರೆತಿದೆ; ಆದರೆ ಹೊರಗಿನವರಿಗೆ ಎಲ್ಲವನ್ನು ಸಾಮ್ಯಗಳ ರೂಪದಲ್ಲಿ ಹೇಳಿದ್ದೇನೆ.”
12 Ili kabalola, ndiyo ulola, lakini babona kwaa, kwaeyo hapo bayowa ndiyo uyowa, lakini batanga kwaa amasivyo batendebuka ni Nnongo angaliwasamehe.”
೧೨“ಅವರು ಕಣ್ಣಾರೆ ಕಂಡರೂ ಗ್ರಹಿಸಲಿಲ್ಲ, ಕಿವಿಯಾರೆ ಕೇಳಿದರೂ ತಿಳಿದುಕೊಳ್ಳಲಿಲ್ಲ, ಹಾಗೆ ಕಂಡು ತಿಳಿದುಕೊಂಡಿದ್ದರೆ ಅವರು ದೇವರ ಕಡೆಗೆ ತಿರುಗಿಕೊಂಡು ಪಾಪಕ್ಷಮೆಯನ್ನು ಹೊಂದುತ್ತಿದ್ದರು.”
13 Kaakokeya kwabe “je ntangike kwa mfano gono? muwesa buli kutanga mifano yenge?
೧೩ಅನಂತರ ಆತನು ಅವರಿಗೆ ಹೇಳಿದ್ದೇನಂದರೆ, “ಈ ಸಾಮ್ಯದ ಅರ್ಥ ನಿಮಗೆ ಗೊತ್ತಾಗಲಿಲ್ಲವೋ? ಹಾಗಾದರೆ ಎಲ್ಲಾ ಸಾಮ್ಯಗಳನ್ನು ಹೇಗೆ ತಿಳಿದುಕೊಳ್ಳುವಿರಿ?
೧೪ಆ ಬಿತ್ತುವವನು ವಾಕ್ಯವೆಂಬ ಬೀಜವನ್ನು ಬಿತ್ತುತ್ತಾನೆ.
15 Benge ni balyo baatumbwike mmbwega ya ndela palyolyaulyo laapandikwe. Hapo bayowine, mara nsera kaaisa ni kulitola lya ulyo lipandikwe nkati yabe.
೧೫ಕೆಲವರು ವಾಕ್ಯವನ್ನು ಕೇಳಿದ ಕೂಡಲೇ ಸೈತಾನನು ಬಂದು ಅವರಲ್ಲಿ ಬಿತ್ತಿದ್ದ ವಾಕ್ಯವನ್ನು ತೆಗೆದುಬಿಡುತ್ತಾನೆ. ಇವರೇ ದಾರಿಯ ಮಗ್ಗುಲಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.
16 ni benge balyo bapandikwe kunani ya miamba, j ambao, apo baliyowa liyanlyo, ulitola kwa haraka ni kupulai.
೧೬“ಅದೇ ಪ್ರಕಾರ ಬೇರೆ ಕೆಲವರು ವಾಕ್ಯವನ್ನು ಕೇಳಿದ ಕೂಡಲೆ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ;
17 na ntopo mikega nkati yabe lakini huvumilia kwa muda mfupi. Halafu tabu na usumbufu apo viisa kwa sababu ya liyanlyo, mara hujikwaa.
೧೭ಆದರೆ ಅವರಿಗೆ ಬೇರಿಲ್ಲದ ಕಾರಣ ಇವರು ಸ್ವಲ್ಪ ಕಾಲ ಮಾತ್ರವೇ ಇದ್ದು, ಬಳಿಕ ಆ ವಾಕ್ಯದ ನಿಮಿತ್ತವಾಗಿ ಸಂಕಟವಾಗಲಿ ಹಿಂಸೆಯಾಗಲಿ ಬಂದರೆ ಬೇಗ ಎಡವಿಬೀಳುತ್ತಾರೆ; ಇವರೇ ಬಂಡೆಯ ನೆಲದಲ್ಲಿ ಬಿತ್ತಲ್ಪಟ್ಟ ಬೀಜವಾಗಿರುವರು.
18 Ni benge balyo bapandikwe mmiba. wanalisikia nlieyaulyo,
೧೮“ಇನ್ನು ಕೆಲವರು ಮುಳ್ಳುಗಿಡಗಳಲ್ಲಿ ಬಿದ್ದ ಬೀಜವಾಗಿರುವವರು;
19 Lakini masumbufu ya lunia, udanganyifu, mali, na tamaa za mambo genge, hubayingia na kulisonga liyaulyo, na linashindwa kuzaa matunda. (aiōn )
೧೯ಇವರು ವಾಕ್ಯವನ್ನು ಕೇಳಿದಾಗ್ಯೂ ಪ್ರಪಂಚದ ಚಿಂತೆಗಳೂ, ಐಶ್ವರ್ಯದಿಂದುಂಟಾಗುವ ವ್ಯಾಮೋಹವೂ, ಇತರ ವಿಷಯಗಳ ಮೇಲಣ ಆಸೆಗಳೂ ಸೇರಿ ಆ ವಾಕ್ಯವನ್ನು ಅಡಗಿಸಿಬಿಡುವುದರಿಂದ ನಿಷ್ಫಲರಾಗಿರುತ್ತಾರೆ. (aiōn )
20 Kubi ni balyo bapandikwe kulukando lunogine. Bando kuliyowa liyaulyo na kulipokea na kuzaa matunda: baadhi thelathini, ni baadhi sitini, ni baadhi mia yimo”.
೨೦ಮತ್ತೆ ಕೆಲವರು ವಾಕ್ಯವನ್ನು ಕೇಳಿ ಕೈಕೊಂಡು ಮೂವತ್ತರಷ್ಟಾಗಲಿ ಅರವತ್ತರಷ್ಟಾಗಲಿ ನೂರರಷ್ಟಾಗಲಿ ಫಲವನ್ನು ಕೊಡುತ್ತಾರೆ; ಇವರೇ ಒಳ್ಳೆಯ ನೆಲದಲ್ಲಿ ಬಿದ್ದ ಬೀಜವಾಗಿರುವವರು” ಅಂದನು.
21 Yesu kabakookeya “je muletage mnyumba ni kubeka pae ya kitongo, au pae ya lusase? Huileta nnyumba na kuibeka kunani ya kiango.
೨೧ಇದಲ್ಲದೆ ಯೇಸು ಅವರಿಗೆ, “ದೀಪವನ್ನು ತಂದು ಕೊಳಗದೊಳಗಾಗಲಿ, ಮಂಚದ ಕೆಳಗಾಗಲಿ ಇಡುವುದುಂಟೇ? ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಲ್ಲವೇ?
22 Kwa kuwa ntopo kilebe sa kuiya ambacho kitanganika kwaa, na ntopo siri ya kuitanga kila mundu.
೨೨ಮರೆಯಾಗಿರುವಂಥ ಎಲ್ಲವೂ ಬೆಳಕಿಗೆ ಬಾರದೇ ಇರುವುದಿಲ್ಲ; ಬಹಿರಂಗವಾಗದಿರುವ ಯಾವ ರಹಸ್ಯಗಳು ಇರುವುದಿಲ್ಲ.
23 Oyo abini makutu ya uyowa, na ayowe!”
೨೩ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ” ಎಂದು ಹೇಳಿದನು.
24 Kabaakokeya m'be makini kwa eso mukiyowa kwa kuwa kipimo mpimacho, ndicho mtachopimiwa, na itaongezwa kwinu.
೨೪ಮತ್ತು ಆತನು ಅವರಿಗೆ; “ನೀವು ಕಿವಿಗೊಡುವ ವಿಷಯದಲ್ಲಿ ಎಚ್ಚರಿಕೆಯಾಗಿರಿ. ನೀವು ಅಳೆಯುವ ಅಳತೆಯಿಂದಲೇ ನಿಮ್ಮನ್ನೂ ಅಳೆಯುವರು; ನಿಮಗೆ ಇನ್ನೂ ಅಧಿಕವಾಗಿ ಸೇರಿಸಿಕೊಡುವರು.
25 Kwa kuwa ywembe abinaso, atapokeya zaidi, ni yalyo ntopo kilebe, kuoma kwake vyatolwa ni vile abinavyo”.
೨೫ಇದ್ದವನಿಗೆ ಕೊಡಲ್ಪಡುವುದು; ಇಲ್ಲದವನ ಕಡೆಯಿಂದ ಇದ್ದುದನ್ನೂ ತೆಗೆಯಲ್ಪಡುವುದು” ಎಂದು ಹೇಳಿದನು.
26 Kakoya, upalume wa Nnongo bate kuufananisha ni mundu apandike mbegu kuukando.
೨೬ಇದಲ್ಲದೆ ಆತನು ಅವರಿಗೆ ಮತ್ತೆ ಹೇಳಿದೇನಂದರೆ; “ಒಬ್ಬನು ಭೂಮಿಯಲ್ಲಿ ಬೀಜವನ್ನು ಬಿತ್ತಿದ ನಂತರ ಅವನು ರಾತ್ರಿಯಲ್ಲಿ ಮಲಗಿದ್ದಾಗಲೂ, ಹಗಲು ಎಚ್ಚರವಿರುವಾಗಲೂ
27 Aagonzike kilo ni kuyumuka bwamba, mbegu ya mei ni kukola, japo atangike kwaa uko yaomi.
೨೭ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜದ ಸಸಿ ಮೊಳೆತು ಬೆಳೆಯುವುದು. ಇದರಂತೆ ದೇವರ ರಾಜ್ಯವೂ ಕೂಡ.
28 Dunia hupiya mbegu yene, kwanza majini, halafu maua, halafu mbegu zilizokomaa.
೨೮ಭೂಮಿಯು ಮೊದಲು ಮೊಳಕೆಯನ್ನೂ, ಆ ಮೇಲೆ ತೆನೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ.
29 Apo mbegu ipile hupeleka mundu kwa sababu mavuno gaike.
೨೯ಆದರೆ ಫಲಮಾಗಿದಾಗ ಸುಗ್ಗಿಕಾಲ ಬಂದಿತೆಂದು ವ್ಯವಸಾಯಗಾರನು ಅದನ್ನು ಕೊಯ್ಯಲು ಕುಡುಗೋಲನ್ನು ಬಳಸುತ್ತಾನೆ” ಅಂದನು.
30 Na kaakoya tuufananishe upwalume wa Nnongo ni kilebe gani, au tutumia mpwano wa kele kuuelezea?
೩೦ಇನ್ನೂ ಆತನು ಹೇಳಿದ್ದು; “ದೇವರ ರಾಜ್ಯವನ್ನು ಯಾವುದಕ್ಕೆ ಹೋಲಿಸೋಣ? ಯಾವ ಸಾಮ್ಯದಿಂದ ಅದನ್ನು ತೋರಿಸಿಕೊಡೋಣ?
31 Kati mbegu ya haradali, ambapo yapandikwe nzunu muno kuliko mbegu zote mudunia.
೩೧ಅದು ಸಾಸಿವೆ ಕಾಳಿನಂತಿರುತ್ತದೆ. ನೆಲದಲ್ಲಿ ಬಿತ್ತುವಾಗ ಅದು ಭೂಮಿಯಲ್ಲಿರುವ ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದೆ.
32 Hata, wakati ipandikwe, iba ngolo muno kuliko mitela yenge mubustani, na iba ni matambe makolo hata iyuni wakunani kusenga iyota yabe mmwilili.
೩೨ಬಿತ್ತಿದ ಮೇಲೆ ಅದು ಬೆಳೆದು ಎಲ್ಲಾ ಗಿಡಗಳಿಗಿಂತ ದೊಡ್ಡದಾಗಿ ದೊಡ್ಡದೊಡ್ಡ ಕೊಂಬೆಗಳನ್ನು ಬಿಡುವುದರಿಂದ ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಅದರ ನೆರಳಿನಲ್ಲಿ ವಾಸಮಾಡುವುದಕ್ಕಾಗುತ್ತದೆ” ಅಂದನು.
33 Kwa mipwano yanyansima ateyegana ni kukaya liyaulyo kwabe, kwa eyo batangike,
೩೩ಆತನು ಈ ರೀತಿಯ ಅನೇಕ ಸಾಮ್ಯಗಳಿಂದ ಜನರಿಗೆ ಅರ್ಥವಾಗುವ ಹಾಗೆ ದೇವರ ವಾಕ್ಯವನ್ನು ಹೇಳುತ್ತಿದ್ದನು.
34 Na aakokiye kwaa bila mipwano. Lakini apo abiyila yake, kaakokeya kila kilebe benefunzi bake.
೩೪ಸಾಮ್ಯಗಳಿಲ್ಲದೆ ಆತನು ಒಂದನ್ನೂ ಹೇಳಲಿಲ್ಲಾ. ಆದರೆ ಏಕಾಂತವಾಗಿರುವಾಗ ಆತನು ತನ್ನ ಆಪ್ತ ಶಿಷ್ಯರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದನು.
35 Lisiku iyo, kitamunyo kaakaya kwabe, “Tuyende uko upande wa nyaibele”.
೩೫ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು.
36 Eyo kabaleka bandu banyausia, kabantola Yesu, muda huo abinngalaba. Ngalaba yenge yabipamwepe ni ywembe.
೩೬ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು.
37 Na upepo nkale wate uma ni dhoruba ni mase kayayingiya mungalaba ni ngalaba yabi itolile.
೩೭ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು.
38 Mwene Yesu abi mulishetri, agonzike kumuto. Kabannyumuya, kabakoya, “mwalimu ustuka kwaa twee twando waa?”
೩೮ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು.
39 Kayumuka, kaukaya upepo na kaikokeya bahari itolii ipolee”, upepo walei kupuka, na kwa bii poloi.
೩೯ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು.
40 kaoya kwabe, “mwalowa kele mwando yogopa?”je nke bado ntopo ni imani?
೪೦ತರುವಾಯ ಆತನು ಅವರನ್ನು, “ಯಾಕೆ ಭಯಪಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ?” ಎಂದು ಕೇಳಲು
41 Bayingi ni hofu ngolo nkati yabe na kabakoyana bene kwa bene, “Yuno nyai lelo, upepo ni mase gando kun'yogopa?
೪೧ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.