< Amahubo 4 >
1 Ngiphendula ekukhaleni kwami, Nkulunkulu wokulunga kwami. Ekucindezelweni wangenzela indawo ebanzi. Woba lomusa kimi, uzwe umkhuleko wami.
೧ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಕೀರ್ತನೆ. ನ್ಯಾಯವನ್ನು ಸ್ಥಾಪಿಸುವ ನನ್ನ ದೇವರೇ, ನಿನಗೆ ಮೊರೆಯಿಡುತ್ತೇನೆ; ಸದುತ್ತರವನ್ನು ದಯಪಾಲಿಸು. ನನ್ನನ್ನು ಅಪತ್ತಿನಿಂದ ಬಿಡಿಸಿ, ಸುರಕ್ಷಿತ ಸ್ಥಳದಲ್ಲಿ ಸೇರಿಸಿದಾತನೇ, ನನ್ನನ್ನು ಕರುಣಿಸಿ ನನ್ನ ಪ್ರಾರ್ಥನೆಯನ್ನು ಆಲಿಸು.
2 Madodana abantu, koze kube nini liphendula udumo lwami lube lihlazo, lithanda okuyize, lidinga amanga? (Sela)
೨ಜನರೇ, ನೀವು ಎಷ್ಟರವರೆಗೆ ನನ್ನ ಗೌರವವನ್ನು ಕೆಡಿಸುವಿರಿ, ಎಷ್ಟರವರೆಗೆ ನನ್ನನ್ನು ಅವಮಾನಪಡಿಸುವಿರಿ? ಎಷ್ಟರವರೆಗೆ ವ್ಯರ್ಥವಾದದ್ದನ್ನು ಪ್ರೀತಿಸಿ ಸುಳ್ಳನ್ನು ಹಿಂಬಾಲಿಸುವಿರಿ? (ಸೆಲಾ)
3 Kodwa yazini ukuthi iNkosi izehlukanisele owesaba uNkulunkulu; iNkosi iyangizwa lapho ngikhala kuyo.
೩ಯೆಹೋವನು ತನ್ನ ಭಕ್ತನನ್ನು ತನಗೋಸ್ಕರ ಪ್ರತ್ಯೇಕಿಸಿಕೊಂಡಿದ್ದಾನೆ ಎಂದು ತಿಳಿದುಕೊಳ್ಳಿರಿ. ನಾನು ಆತನಿಗೆ ಮೊರೆಯಿಡುವಾಗೆಲ್ಲಾ ಆತನು ಕೇಳುತ್ತಾನೆ.
4 Thuthumelani, lingoni; khulumani lenhliziyo yenu embhedeni wenu, lithule. (Sela)
೪ಭಯಪಡಿರಿ, ಪಾಪಮಾಡಬೇಡಿರಿ; ಹಾಸಿಗೆಯ ಮೇಲೆ ಇರುವಾಗ ಹೃದಯದಲ್ಲೇ ಆಲೋಚಿಸಿಕೊಳ್ಳಿರಿ ಮತ್ತು ಮೌನವಾಗಿರಿ. (ಸೆಲಾ)
5 Nikelani imihlatshelo yokulunga, lithembe eNkosini.
೫ನ್ಯಾಯವಾದ ಯಜ್ಞಗಳನ್ನು ಸಮರ್ಪಿಸಿರಿ; ಯೆಹೋವನಲ್ಲಿಯೇ ಭರವಸವಿಡಿರಿ.
6 Banengi abathi: Ngubani ozasitshengisa okuhle? Nkosi, phakamisela ukukhanya kobuso bakho phezu kwethu.
೬“ನಮಗೆ ಒಳ್ಳೆಯದನ್ನು ಮಾಡುವವರು ಯಾರಿದ್ದಾರೆ?” ಎಂದು ಅನೇಕರು ಹೇಳಿಕೊಳ್ಳುತ್ತಾರೆ. ಯೆಹೋವನೇ, ನೀನು ಪ್ರಸನ್ನಮುಖದಿಂದ ನಮ್ಮನ್ನು ನೋಡಬೇಕು.
7 Ubeke intokozo enhliziyweni yami okwedlula isikhathi lapho amabele abo lewayini labo elitsha kwandile.
೭ಧಾನ್ಯದ್ರಾಕ್ಷಿಗಳು ಸಮೃದ್ಧಿಯಾಗಿ ಬೆಳೆದ ಸುಗ್ಗಿ ಕಾಲದಲ್ಲಿ ಜನರಿಗಾಗುವ ಸಂತೋಷಕ್ಕಿಂತಲೂ ನೀನು ನನ್ನ ಹೃದಯದಲ್ಲಿ ಹೆಚ್ಚಾದ ಆನಂದವನ್ನು ಉಂಟುಮಾಡಿದ್ದೀ.
8 Ngizacambalala ngokuthula, khonokho ngilale ubuthongo, ngoba wena Nkosi wedwa uyangihlalisa ngokulondolozeka.
೮ನಾನು ನಿರ್ಭಯವಾಗಿರುವುದರಿಂದ ಮಲಗಿಕೊಂಡು ಕೂಡಲೆ ನಿದ್ದೆಮಾಡುವೆನು. ಏಕೆಂದರೆ ಯೆಹೋವನೇ, ನನಗೆ ಯಾವ ಅಪಾಯವೂ ಬಾರದಂತೆ ನೀನು ನನ್ನನ್ನು ಸುರಕ್ಷಿತವಾಗಿ ಕಾಪಾಡುತ್ತೀ.