< UNehemiya 3 >
1 Kwasekusukuma eEliyashibi umpristi omkhulu labafowabo abapristi, bakha isango lezimvu, balingcwelisa, bamisa izivalo zalo; ngitsho, kuze kube semphotshongweni weMeya bawungcwelisa, kuze kube semphotshongweni weHananeli.
೧ಹೀಗೆ ಮಹಾಯಾಜಕನಾದ ಎಲ್ಯಾಷೀಬನೂ ಅವನ ಕುಟುಂಬದ ಯಾಜಕರೂ ಕುರಿಬಾಗಿಲನ್ನು ಕಟ್ಟಿ ಅದನ್ನು ಪ್ರತಿಷ್ಠಿಸಿ ಅದಕ್ಕೆ ಬಾಗಿಲುಗಳನ್ನು ಇಟ್ಟರು. ಅಲ್ಲಿಂದ ಹಮ್ಮೆಯಾ ಗೋಪುರದವರೆಗೆ ಗೋಡೆಕಟ್ಟಿ ಅದನ್ನು ಪ್ರತಿಷ್ಠಿಸಿದರು. ಅಲ್ಲಿಂದ ಹನನೇಲ್ ಗೋಪುರದವರೆಗೂ ಕಟ್ಟಿದರು.
2 Leceleni kwakhe kwakha amadoda eJeriko; leceleni kwakhe kwakha uZakuri indodana kaImri.
೨ಅಲ್ಲಿಂದ ಆಚೆಗೆ ಕಟ್ಟುತ್ತಿದ್ದವರು ಯೆರಿಕೋವಿನವರು; ನಂತರ ಇಮ್ರಿಯನ ಮಗನಾದ ಜಕ್ಕೂರನು.
3 Lesango lenhlanzi alakha amadodana kaHasenaya; amisa imigubazi yalo, amisa izivalo zalo, amabhawudo alo, leminxibo yalo.
೩ಮೀನುಬಾಗಿಲನ್ನು ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು ತಿರುಗುಣಿ ಅಗುಳಿಗಳನ್ನು ಇರಿಸಿದರು.
4 Leceleni kwawo kwalungisa uMeremothi indodana kaUriya indodana kaHakozi; leceleni kwabo kwalungisa uMeshulamu indodana kaBerekiya indodana kaMeshezabeli; leceleni kwabo kwalungisa uZadoki indodana kaBahana;
೪ಅಲ್ಲಿಂದ ಮುಂದಕ್ಕೆ ಗೋಡೆಯನ್ನು ದುರಸ್ತಿ ಮಾಡಿಸಿದವನು ಊರೀಯನ ಮಗನೂ ಹಕ್ಕೋಚನ ಮೊಮ್ಮಗನೂ ಆಗಿರುವ ಮೆರೇಮೋತ್. ಆ ಮೇಲೆ ಬೆರೆಕ್ಯನ ಮಗನೂ ಮೆಷೇಜಬೇಲನ ಮೊಮ್ಮಗನೂ ಆಗಿರುವ ಮೆಷುಲ್ಲಾಮ್; ನಂತರ ಬಾನನ ಮಗನಾದ ಚಾದೋಕ್; ಮುಂದಕ್ಕೆ ತೆಕೋವದವರು.
5 leceleni kwabo kwalungisa amaThekhowa; kodwa izikhulu zabo kazilethanga intamo yazo emsebenzini weNkosi yazo.
೫ತೆಕೋವದವರಲ್ಲಿ ಶ್ರೀಮಂತರಾದರೋ ತಮ್ಮ ಒಡೆಯರ ಸೇವೆಗಾಗಿ ಹೆಗಲನ್ನು ಕೊಡಲಿಲ್ಲ.
6 Lesango elidala balilungisa oJoyada indodana kaPhaseya loMeshulamu indodana kaBesodeya; bamisa imigubazi yalo, bamisa izivalo zalo, lamabhawudo alo, leminxibo yalo.
೬ಹಳೆಯದಾಗಿದ್ದ ಬಾಗಿಲುಗಳ ಜೀರ್ಣೋದ್ಧಾರ ಮಾಡಿದವರು ಪಾಸೇಹನ ಮಗನಾದ ಯೋಯಾದನೂ, ಬೆಸೋದ್ಯನ ಮಗನಾದ ಮೆಷುಲ್ಲಾಮನೂ. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಇರಿಸಿದರು.
7 Eceleni kwabo-ke kwalungisa uMelatiya umGibeyoni loJadoni umMeronothi, amadoda eGibeyoni laweMizipa, kuze kube sesihlalweni sobukhosi sombusi wanganeno komfula.
೭ಅಲ್ಲಿಂದ ನದಿಯಾಚೆಯ ದೇಶಾಧಿಪತಿಯ ನ್ಯಾಯಸ್ಥಾನದವರೆಗೆ ಗಿಬ್ಯೋನಿನವನಾದ ಮೆಲೆಟ್ಯ, ಮೇರೋನೋತಿನವನಾದ ಯಾದೋನ್. ಇವರೂ, ಗಿಬ್ಯೋನ್ ಮತ್ತು ಮಿಚ್ಪ ಊರುಗಳವರೂ ಜೀರ್ಣೋದ್ಧಾರ ಮಾಡಿದ್ದರು.
8 Eceleni kwakhe kwalungisa uUziyeli indodana kaHarihaya, wabakhandi begolide; leceleni kwakhe kwalungisa uHananiya, indodana yabenzi bamakha; batshiya iJerusalema kwaze kwaba semdulini obanzi.
೮ಇದಾದ ನಂತರ ಹರ್ಹಯನ ಮಗನಾದ ಅಕ್ಕಸಾಲಿಗನಾದ ಉಜ್ಜೀಯೇಲ್; ಆ ಮೇಲೆ ಗಾಣಿಗನಾದ ಹನನ್ಯ; ಇವರು ಅಗಲವಾದ ಗೋಡೆಯವರೆಗೂ ಯೆರೂಸಲೇಮನ್ನು ಕಟ್ಟಿ ಭದ್ರಪಡಿಸಿದರು.
9 Eceleni kwabo-ke kwalungisa uRefaya indodana kaHuri, umbusi wengxenye yesigaba seJerusalema.
೯ನಂತರ ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹೂರನ ಮಗನೂ ಆದ ರೆಫಾಯನು ಅದರ ಕುಂದುಕೊರತೆಗಳನ್ನು ಸರಿಪಡಿಸಿದನು.
10 Eceleni kwabo-ke kwalungisa uJedaya indodana kaHarumafi lamaqondana lendlu yakhe; leceleni kwakhe kwalungisa uHathushi indodana kaHashabineya.
೧೦ಇವರ ನಂತರ ಹರೂಮಫನ ಮಗನಾದ ಯೆದಾಯನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ನಂತರ ಹಷಬ್ನೆಯನ ಮಗನಾದ ಹಟ್ಟೂಷ್.
11 Isilinganiso sesibili basilungisa oMalikiya indodana kaHarimi loHashubi indodana kaPahathi-Mowabi, kanye lomphotshongo wezithando zomlilo.
೧೧ಗೋಡೆಯ ಇನ್ನೊಂದು ಭಾಗವನ್ನೂ ಒಲೆಬುರುಜನ್ನೂ ಜೀರ್ಣೋದ್ಧಾರ ಮಾಡಿದವರು ಹಾರೀಮನ ಮಗನಾದ ಮಲ್ಕೀಯನೂ, ಪಹತ್ ಮೋವಾಬ್ಯನ ಮಗನಾದ ಹಷ್ಷೂಬನು.
12 Leceleni kwakhe kwalungisa uShaluma indodana kaHaloheshi, umbusi wengxenye yesigaba seJerusalema, yena lamadodakazi akhe.
೧೨ಅದರ ಆಚೆಗೆ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಯೆರೂಸಲೇಮಿನ ಅರ್ಧ ಪಟ್ಟಣಗಳ ಒಡೆಯನೂ, ಹಲ್ಲೊಹೇಷನ ಮಗನೂ ಆದ ಶಲ್ಲೂಮ ಮತ್ತು ಅವನ ಪುತ್ರಿಯರು.
13 Isango lesigodi walilungisa uHanuni labahlali beHanowa; balakha, bamisa izivalo zalo, amabhawudo alo, leminxibo yalo, lezingalo eziyinkulungwane emdulini kwaze kwaba sesangweni lomquba.
೧೩ತಗ್ಗಿನ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವರು ಹಾನೂನನೂ, ಜಾನೋಹ ಊರಿನವರು. ಇವರು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ಅಲ್ಲಿಂದ ತಿಪ್ಪೆ ಬಾಗಿಲಿನವರೆಗೂ ಸಾವಿರ ಮೊಳದ ಗೋಡೆಯನ್ನು ಕಟ್ಟಿದರು.
14 Lesango lomquba walilungisa uMalikiya indodana kaRekabi, umbusi wesabelo seBhethi-Hakerema; walakha, wamisa izivalo zalo, amabhawudo alo, leminxibo yalo.
೧೪ತಿಪ್ಪೆಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಬೇತ್ ಹಕ್ಕೆರೆಮಿನ ಅರ್ಧ ಪಟ್ಟಣಗಳ ಒಡೆಯನೂ, ರೇಕಾಬನ ಮಗನೂ ಆದ ಮಲ್ಕೀಯ. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿದನು.
15 Lesango lomthombo walilungisa uShaluna indodana kaKolihoze, umbusi wesigaba seMizipa; yena walakha, walifulela, wamisa izivalo zalo, amabhawudo alo, leminxibo yalo, lomduli wechibi leShela ngasesivandeni senkosi, njalo kwaze kwaba sezikhwelweni ezehla zisuka emzini kaDavida.
೧೫ಬುಗ್ಗೆ ಬಾಗಿಲನ್ನು ಜೀರ್ಣೋದ್ಧಾರ ಮಾಡಿದವನು ಮಿಚ್ಪದ ಒಡೆಯನೂ, ಕೊಲ್ಹೋಜೆಯ ಮಗನೂ ಆದ ಶಲ್ಲೂನ್. ಇವನು ಅದರ ಗೋಡೆಯನ್ನು ಕಟ್ಟಿ ಅದಕ್ಕೆ ಮಾಳಿಗೆಯನ್ನು ಹಾಕಿ ಬಾಗಿಲು, ತಿರುಗುಣಿ, ಅಗುಳಿಗಳನ್ನು ಹಾಕಿಸಿ ದಾವೀದ ನಗರದಿಂದ ಇಳಿದು ಬರುವ ಸೋಪಾನಗಳ ಈಚೆ ಅರಸನ ತೋಟದ ಬಳಿಯಲ್ಲಿರುವ ಸಿಲೋವ ಕೊಳದ ಗೋಡೆಯನ್ನು ಕಟ್ಟಿದನು.
16 Ngemva kwakhe kwalungisa uNehemiya indodana kaAzibuki, umbusi wengxenye yesigaba seBeti-Zuri, kwaze kwaba maqondana lamangcwaba kaDavida, njalo kwaze kwaba sechibini elalenziwe, njalo kwaze kwaba sendlini yamaqhawe.
೧೬ಇವನ ನಂತರ ದಾವೀದನ ಸಮಾಧಿಯ ಎದುರಿನಲ್ಲಿರುವ ಕೊಳ, ಸಿಪಾಯಿಗಳ ಠಾಣ ಇವುಗಳವರೆಗೂ ಜೀರ್ಣೋದ್ಧಾರ ಮಾಡಿದವರು ಬೇತ್ಚೂರಿನ ಒಡೆಯನೂ, ಅಜ್ಬೂಕನ ಮಗನೂ ಆದ ನೆಹೆಮೀಯನು.
17 Ngemva kwakhe kwalungisa amaLevi, uRehuma indodana kaBani; leceleni kwakhe kwalungisa uHashabhiya, umbusi wengxenye yesigaba seKeyila, esigabeni sakhe.
೧೭ಇವನ ನಂತರ ಜೀರ್ಣೋದ್ಧಾರ ಮಾಡಿದವರು ಲೇವಿಯರು. ಅವರಲ್ಲಿ ಮೊದಲು ಬಾನಿಯ ಮಗನಾದ ರೆಹೂಮ್ ಸಮೀಪದಲ್ಲೇ ತನ್ನ ಪಟ್ಟಣದವರೊಡನೆ ಕಟ್ಟುತ್ತಿದ್ದ ಕೆಯೀಲದ ಅರ್ಧ ಪಟ್ಟಣಗಳ ಒಡೆಯನಾದ ಹಷಬ್ಯ ಇವರು.
18 Ngemva kwakhe kwalungisa abafowabo, uBavayi indodana kaHenadadi, umbusi wengxenye yesigaba seKeyila.
೧೮ಇವರ ನಂತರ ಇವರ ಬಂಧುಗಳಲ್ಲಿ ಕೆಯೀಲದ ಅರ್ಧ ಪಟ್ಟಣಗಳ ಒಡೆಯನೂ, ಹೇನಾದಾದನ ಮಗನೂ ಆದ ಬವ್ವೈ.
19 Njalo kwalungisa eceleni kwakhe uEzeri indodana kaJeshuwa, umbusi weMizipa, esinye isilinganiso maqondana lomqanso wendlu yezikhali, engonsini.
೧೯ಇವನ ಸಮೀಪದಲ್ಲಿ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಗೋಡೆಯ ಮೂಲೆಯಲ್ಲಿರುವ ಆಯುಧಶಾಲೆಗೆ ಹೋಗುವ ಮೆಟ್ಟಿಲುಗಳ ಎದುರಿಗಿರುವ ಭಾಗವನ್ನು ಮಿಚ್ಪದ ಅಧಿಕಾರಿಯೂ ಯೇಷೂವನ ಮಗ ಏಜೆರನು ಜೀರ್ಣೋದ್ಧಾರ ಮಾಡಿದನು.
20 Ngemva kwakhe kwalungisa ngesivuvu uBharukhi indodana kaZabayi esinye isilinganiso kusukela engonsini kusiya emnyango wendlu kaEliyashibi umpristi omkhulu.
೨೦ಇವನು ಆಚೆ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಮೂಲೆಯಿಂದ ಮಹಾಯಾಜಕನಾದ ಎಲ್ಯಾಷೀಬನ ಮನೆಯ ಬಾಗಿಲಿನವರೆಗೆ ಜಕ್ಕೈಯ ಮಗನಾದ ಬಾರೂಕನು ಆಸಕ್ತಿಯಿಂದ ಅದನ್ನು ಭದ್ರಪಡಿಸಿದನು.
21 Ngemva kwakhe uMeremothi indodana kaUriya indodana kaHakozi walungisa esinye isilinganiso kusukela emnyango wendlu kaEliyashibi kuze kube sekucineni kwendlu kaEliyashibi.
೨೧ಇವನು ಆಚೆ ಗೋಡೆಯ ಇನ್ನೊಂದು ಭಾಗವನ್ನು ಅಂದರೆ ಎಲ್ಯಾಷೀಬನ ಮನೆಯ ಬಾಗಿಲಿನಿಂದ ಅದೇ ಮನೆಯ ಕೊನೆಯವರೆಗೆ, ಹಕ್ಕೋಚನ ಮೊಮ್ಮಗನೂ ಊರೀಯನ ಮಗನೂ ಆದ ಮೆರೇಮೋತನು ಜೀರ್ಣೋದ್ಧಾರ ಮಾಡಿದನು.
22 Langemva kwakhe kwalungisa abapristi, amadoda endawo ezigombolozeleyo.
೨೨ಮುಂದಿನ ಭಾಗವನ್ನು ಜೀರ್ಣೋದ್ಧಾರ ಮಾಡಿದವರು ಯೊರ್ದನ್ ಹೊಳೆಯ ತಗ್ಗಿನಲ್ಲಿ ವಾಸಿಸುತ್ತಿದ್ದ ಯಾಜಕರು.
23 Ngemva kwakhe kwalungisa oBhenjamini loHashubi maqondana lendlu yabo; ngemva kwakhe kwalungisa uAzariya indodana kaMahaseya indodana kaAnaniya duze lendlu yakhe.
೨೩ಇವರ ನಂತರ ಬೆನ್ಯಾಮೀನ್ ಮತ್ತು ಹಷ್ಷೂಬರು; ಇವರು ತಮ್ಮ ತಮ್ಮ ಮನೆಗಳಿಗೆ ಎದುರಾಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದರು. ಇವರ ನಂತರ ಅನನ್ಯನ ಮೊಮ್ಮಗನೂ ಮಾಸೇಯನ ಮಗನೂ ಆದ ಅಜರ್ಯ. ಇವನು ತನ್ನ ಮನೆಯ ಹತ್ತಿರದಲ್ಲಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು.
24 Ngemva kwakhe uBinuwi indodana kaHenadadi walungisa esinye isilinganiso kusukela endlini kaAzariya kusiya engonsini njalo kuze kube sejikweni.
೨೪ಇವನ ನಂತರ ಅಜರ್ಯನ ಮನೆಯಿಂದ ಮೂಲೆಯವರೆಗೆ ಇರುವ ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಹೇನಾದಾದನ ಮಗನಾದ ಬಿನ್ನೂಯ್.
25 UPalali indodana kaUzayi, maqondana lengonsi lomphotshongo othutsha endlini yenkosi ephezulu esegumeni labalindi. Ngemva kwakhe uPhedaya indodana kaParoshi.
೨೫ಸೆರೆಮನೆಯ ಅಂಗಳದ ಹತ್ತಿರವಿದ್ದ ಅರಸನ ಅರಮನೆಯ ಮೇಲಿನ ಗೋಡೆಯನ್ನು ಮೀರಿನಿಂತಿರುವ ಮೂಲೆ ಗೋಪುರದ ಎದುರಿನ ಭಾಗವನ್ನು ಊಜೈಯನ ಮಗನಾದ ಪಾಲಾಲನೂ. ಇವನ ನಂತರ ಪರೋಷನ ಮಗನಾದ ಪೆದಾಯನೂ ಜೀರ್ಣೋದ್ಧಾರ ಮಾಡಿದರು.
26 AmaNethini ayehlezi eOfeli kwaze kwaba maqondana lesango lamanzi ngasempumalanga lomphotshongo othutshayo.
೨೬ಈಗ ಮೂಲೆ ಗೋಪುರ ಮತ್ತು ನೀರು ಬಾಗಿಲಿನ ಪೂರ್ವದಿಕ್ಕಿಗಿರುವ ಓಫೇಲ್ ಗುಡ್ಡವು ದೇವಾಲಯದ ಸೇವಕರ ವಾಸಸ್ಥಾನವಾಗಿತ್ತು.
27 Ngemva kwakhe abeThekhowa balungisa esinye isilinganiso maqondana lomphotshongo omkhulu othutshayo, njalo kwaze kwaba semdulini weOfeli.
೨೭ಆ ದೊಡ್ಡ ಮೂಲೆ ಗೋಪುರದ ಎದುರಿನಿಂದ ಓಫೇಲ್ ಗೋಡೆಯವರೆಗಿರುವ ಗೋಡೆಯ ಇನ್ನೊಂದು ಭಾಗವನ್ನು ತೆಕೋವದವರು ಜೀರ್ಣೋದ್ಧಾರ ಮಾಡಿದರು.
28 Kusukela phezu kwesango lamabhiza kwalungisa abapristi, ngulowo maqondana lendlu yakhe.
೨೮ಯಾಜಕರು ಕುದುರೆ ಬಾಗಿಲಿನ ಆಚೆ ದಿನ್ನೆಯ ಮೇಲಿರುವ ಗೋಡೆಯಲ್ಲಿ ತಮ್ಮ ತಮ್ಮ ಮನೆಗಳ ಎದುರಿನ ಭಾಗಗಳನ್ನು ಜೀರ್ಣೋದ್ಧಾರ ಮಾಡಿದರು.
29 Ngemva kwakhe kwalungisa uZadoki indodana kaImeri maqondana lendlu yakhe. Njalo ngemva kwakhe kwalungisa uShemaya indodana kaShekaniya, umgcini wesango lempumalanga.
೨೯ಇವರ ನಂತರ ಇಮ್ಮೇರನ ಮಗನಾದ ಚಾದೋಕನು ತನ್ನ ಮನೆಯ ಎದುರಿಗಿರುವ ಗೋಡೆಯನ್ನು ಜೀರ್ಣೋದ್ಧಾರ ಮಾಡಿದನು. ಇವನ ನಂತರ ಪೂರ್ವದಿಕ್ಕಿನ ದ್ವಾರಪಾಲಕನಾದ ಶೆಕನ್ಯನ ಮಗ ಶೆಮಾಯನು.
30 Ngemva kwakhe kwalungisa oHananiya indodana kaShelemiya loHanuni indodana yesithupha kaZalafi esinye isilinganiso. Ngemva kwakhe kwalungisa uMeshulamu indodana kaBerekiya maqondana lekamelo lakhe.
೩೦ಇವನ ನಂತರ ಶೆಲೆಮ್ಯನ ಮಗನಾದ ಹನನ್ಯ; ಗೋಡೆಯ ಇನ್ನೊಂದು ಭಾಗವನ್ನು ಜೀರ್ಣೋದ್ಧಾರ ಮಾಡಿದವನು ಚಾಲಾಫನ ಆರನೆಯ ಮಗನಾದ ಹಾನೂನ್. ಇವನ ನಂತರ ಅಂದರೆ ತನ್ನ ಸ್ವಂತ ಕೊಠಡಿಯ ಮುಂದೆ ಬೆರೆಕ್ಯನ ಮಗನಾದ ಮೆಷುಲ್ಲಾಮ್ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡನು.
31 Ngemva kwakhe kwalungisa uMalikiya indodana yomkhandi wegolide kwaze kwaba sendlini yamaNethini leyabathengi maqondana lesango leMifikhadi, njalo kusiya endlini yengonsi engaphezulu.
೩೧ಇನ್ನೂ ಮುಂದಕ್ಕೆ ಅಕ್ಕಸಾಲಿಗರ ಮಲ್ಕೀಯ. ಇವನು ಸೈನ್ಯದವರು ಸೇರಿಬರುವ ಬಾಗಿಲಿನೆದುರಿನಲ್ಲಿರುವ ದೇವಾಲಯದ ಸೇವಕರ ಮತ್ತು ವರ್ತಕರ ಕೇರಿಯ ವರೆಗೂ ಮತ್ತು ಮೂಲೆಯುಪ್ಪರಿಗೆಯವರೆಗೂ ಜೀರ್ಣೋದ್ಧಾರ ಮಾಡಿದನು.
32 Njalo phakathi laphakathi kwendlu yengonsi engaphezulu kuze kube sesangweni lezimvu kwalungisa abakhandi begolide labathengi.
೩೨ಈ ಮೂಲೆಯುಪ್ಪರಿಗೆಗೂ ಕುರಿಬಾಗಿಲಿಗೂ ಮಧ್ಯದಲ್ಲಿದ್ದ ಗೋಡೆಯನ್ನು ಜೀರ್ಣೋದ್ಧಾರ ಮಾಡಿದವರು ಅಕ್ಕಸಾಲಿಗರು ಮತ್ತು ವರ್ತಕರು.