< ယောရှု 16 >
1 ၁ ယောသပ်အမျိုးသားတို့သည် စာရေးတံပြု၍ အမွေခံရသောမြေ အပိုင်းအခြားသည် ယော်ဒန်မြစ်နား၊ ယေရိခေါမြို့အရှေ့၊ ယေရိခေါအိုင်မှထွက်၍ တောလမ်း သို့ လိုက်လျက်၊ ဗေသလတောင်တရှောက်လုံး သွားသဖြင့်၊
ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಉಂಟಾದ ಸೊತ್ತಿನ ವಿವರ: ಯೆರಿಕೋವಿನ ಬಳಿಯಲ್ಲಿರುವ ಯೊರ್ದನ್ ನದಿಯಿಂದ ಪೂರ್ವದಲ್ಲಿರುವ ಯೆರಿಕೋವಿನ ಜಲದವರೆಗೂ ಮತ್ತು ಬೇತೇಲಿನ ಬೆಟ್ಟಗಳವರೆಗೂ ಇರುವ ಮರುಭೂಮಿಯ ಮಾರ್ಗವಾಗಿ ಹೋಗಿತ್ತು.
2 ၂ ဗေသလလုဇမြို့သို့၎င်း၊ အာခိအတရုတ် မြို့သို့ ၎င်း၊
ಬೇತೇಲಿನಿಂದ ಅಂದರೆ ಲೂಜ್ ಅಲ್ಲಿಂದ ಅರ್ಕಿಯ ಮೇರೆಗಳಾದ ಅಟಾರೋತನ್ನು ದಾಟಿ,
3 ၃ အနောက်မျက်နှာ၌ ယာဖလေတိမြို့သို့၎င်း၊ အောက်ဗက်ဟောရုန်မြို့သို့၎င်း၊ ဂေဇာမြို့သို့၎င်း ရောက် ၍ ပင်လယ်၌ဆုံးလေ၏။
ಪಶ್ಚಿಮಕ್ಕೆ ಯಫ್ಲೇಟ್ಯರ ಮೇರೆಗೂ ಕೆಳಗಡೆಯಾದ ಬೇತ್ ಹೋರೋನ್ ಮೇರೆಯವರೆಗೂ ಅಲ್ಲಿಂದ ಗೆಜೆರಿನವರೆಗೂ ಹೋಗಿ ಮೆಡಿಟೆರಿಯನ್ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
4 ၄ ထိုသို့ ယောသပ်၏သား မနာရှေနှင့် ဧဖရိမ်တို့ သည် အမွေခံရကြ၏။
ಹೀಗೆ ಇದನ್ನು ಯೋಸೇಫನ ಮಕ್ಕಳಾದ ಮನಸ್ಸೆ ಎಫ್ರಾಯೀಮರು ತಮಗೆ ಸೊತ್ತಾಗಿ ತೆಗೆದುಕೊಂಡರು.
5 ၅ ဧဖရိမ်အမျိုးသားတို့သည် အဆွေအမျိုးအလိုက် နေသော မြေအပိုင်းအခြားသည်၊ အရှေ့ဘက်၌ အတရုတ် အဒ္ဒါမြို့မှ အထက်ဗက်ဟောရုန်မြို့သို့ လိုက်၍၊
ಅವರ ಕುಟುಂಬಗಳ ಪ್ರಕಾರ ಎಫ್ರಾಯೀಮ್ ಗೋತ್ರದ ಪ್ರದೇಶ ಹೀಗಿತ್ತು: ಪೂರ್ವದಿಕ್ಕಿನ ಅಟಾರೋತ್ ಅದ್ದಾರಿನಿಂದ ಪ್ರಾರಂಭಿಸಿ, ಮೇಲಿನ ಬೇತ್ ಹೋರೋನಿನವರೆಗೂ ಇತ್ತು.
6 ၆ မြောက်မျက်နှာ၌ ပင်လယ်နား၊ မိတ်မေသမြို့သို့ ထွက်၏။ တဖန် အရှေ့သို့ မျက်နှာပြု၍ တာနတ်ရှိလော မြို့အရှေ့မှာ ရှောက်လျက်၊
ಅಲ್ಲಿಂದ ಮೆಡಿಟೆರಿಯನ್ ಸಮುದ್ರದ ಪಶ್ಚಿಮ ಮೇರೆಗೆ ಮಿಕ್ಮೆತಾತಿನಿಂದ ಉತ್ತರಕ್ಕೆ ಹೊರಟು ಪೂರ್ವಕ್ಕೆ ತಾನತ್ ಶೀಲೋವಿಗೆ ತಿರುಗಿ ಯಾನೋಹಕ್ಕೆ ಪೂರ್ವದ ಕಡೆಗೆ ಹಾದು ಹೋಗಿತ್ತು.
7 ၇ ယနောဟမြို့သို့၎င်း၊ ယနောဟမြို့မှ အတရုတ် မြို့၊ နာရတ်မြို့၊ ယေရိခေါမြို့သို့၎င်း ရောက်၍ ယော်ဒန် မြစ်၌ ဆုံးလေ၏။
ಯಾನೋಹದಿಂದ ಅಟಾರೋತ್‌ಗೂ ನಾರಾ ಎಂಬ ಊರುಗಳ ಮೇಲೆ ಇಳಿದು ಯೆರಿಕೋವಿನ ಬಳಿಯಲ್ಲಿ ಬಂದು ಯೊರ್ದನ್ ನದಿಗೆ ಮುಗಿಯುವುದು.
8 ၈ တာပွါမြို့မှ အနောက်သို့သွား၍ ကာနမြစ်သို့ လိုက်လျက် ပင်လယ်၌ ဆုံးလေ၏။
ತಪ್ಪೂಹದಿಂದ ಪಶ್ಚಿಮದ ಮೇರೆಯೂ ಕಾನಾ ನದಿಗೆ ಹೋಗಿ ಮೆಡಿಟೆರೆನಿಯನ್ ಸಮುದ್ರದವರೆಗೆ ಮುಗಿಯುವುದು. ಇದು ಎಫ್ರಾಯೀಮನ ಮಕ್ಕಳ ಗೋತ್ರ ಅವರ ಕುಟುಂಬಗಳ ಪ್ರಕಾರವೇ ದೊರೆತ ಸೊತ್ತು.
9 ၉ ဤရွေ့ကား၊ မနာရှေအမျိုးသားတို့အဘို့ အမွေ ခံရသောမြေ၌ ဧဖရိမ်အမျိုးသားတို့အဘို့ ခွဲထားသော မြို့များနှင့်တကွ ဧဖရိမ်အမျိုးသား အဆွေအမျိုးအလိုက် အမွေခံရသော မြို့ရွာများဖြစ်သတည်း။
ಇದಲ್ಲದೆ ಎಫ್ರಾಯೀಮ್ ಹಾಗೂ ಮನಸ್ಸೆ ಗೋತ್ರದವರ ಮಧ್ಯೆ ಕೊಡಲಾದ ಎಲ್ಲಾ ಪಟ್ಟಣಗಳೂ ಅವುಗಳ ಗ್ರಾಮಗಳೂ ಪ್ರತ್ಯೇಕವಾಗಿ ಕೊಡಲಾಗಿತ್ತು.
10 ၁၀ ဂေဇာမြို့၌နေသော ခါနနိလူတို့ကို မနှင်ထုတ် ဘဲ သူတို့သည် ယနေ့တိုင်အောင် ဧဖရိမ်အမျိုးသားတို့နှင့် အတူနေ၍ အခွန်ပေးရကြ၏။
ಅವರು ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ, ಎಫ್ರಾಯೀಮ್ಯರ ಮಧ್ಯದಲ್ಲಿ ಕಾನಾನ್ಯರು ಈವರೆಗೂ ಅವರಲ್ಲಿ ದಾಸತ್ವದಲ್ಲಿದ್ದುಕೊಂಡು ಕೆಲಸಮಾಡುವವರಾಗಿದ್ದಾರೆ.