< ယောဘ 6 >
1 ၁ တဖန်ယောဘမြွက်ဆိုသည်ကား၊
೧ಆ ಮೇಲೆ ಯೋಬನು ಮತ್ತೆ ಇಂತೆಂದನು,
2 ၂ ငါဝမ်းနည်းခြင်းအကြောင်းကို သေချာစွာ ချိန်တွယ်ပါစေ။ ငါခံရသောဒုက္ခများကိုလည်း ချိန်ခွင်၌ စုထားပါစေ။
೨“ಆಹಾ, ತ್ರಾಸಿನಲ್ಲಿ ನನ್ನ ವಿಪತ್ತನ್ನು ಇಟ್ಟು; ಅದರಿಂದ ನನ್ನ ಕರಕರೆಯ ಭಾರವನ್ನು ತೂಕ ಮಾಡುವುದಾದರೆ ಎಷ್ಟೋ ಒಳ್ಳೆಯದು.
3 ၃ သို့ဖြစ်လျှင် သမုဒ္ဒရာသဲထက်သာ၍ လေးလိမ့်မည်။ ထိုကြောင့် ငါ့စကားလွန်မိပြီ။
೩ಆಗ ನನ್ನ ವಿಪತ್ತು ಸಮುದ್ರದ ಮರಳಿಗಿಂತಲೂ ಹೆಚ್ಚು ಭಾರವುಳ್ಳದ್ದೆಂದು ಗೊತ್ತಾಗುವುದು ಎಂದು ದುಡುಕಿನಿಂದ ಮಾತನಾಡಿದ್ದೇನೆ.
4 ၄ အနန္တတန်ခိုးရှင်ပစ်တော်မူသော မြှားတို့သည် ငါ၌စွဲ၍၊ အဆိပ်အတောက်ဖြင့် ငါ့ဝိညာဉ်ကိုမွန်းစေ၏။ ဘုရားသခင်ပြတော်မူသော ကြောက်မက်ဘွယ်အရာတို့သည် ငါ့ရှေ့မှာ စီလျက်ရှိကြ၏။
೪ಸರ್ವಶಕ್ತನಾದ ದೇವರ ಬಾಣಗಳು ನನ್ನಲ್ಲಿ ನಾಟಿರುತ್ತವೆ, ನನ್ನ ಆತ್ಮವು ಅವುಗಳ ವಿಷವನ್ನು ಹೀರಿಕೊಳ್ಳುತ್ತದೆ; ದೇವರು ಕಳುಹಿಸಿದ ಅಪಾಯಗಳು ನನಗೆ ವಿರುದ್ಧವಾಗಿ ವ್ಯೂಹಕಟ್ಟಿವೆ.
5 ၅ တောမြည်းသည် မြက်ပင်ပေါသောအခါ မြည်တတ်သလော။ နွားသည်စားစရာရှိသောအခါ အော် တတ်သလော။
೫ಕಾಡುಕತ್ತೆಗೆ ಹುಲ್ಲಿರಲು ಅರಚೀತೇ? ಎತ್ತಿಗೆ ಮೇವಿರಲು ಕೂಗೀತೇ?
6 ၆ မမြိန်သောအရာကို ဆားမပါဘဲ စားနိုင် သလော။ ကြက်ဥအကာသည် ဆိမ့်သောအရသာ ရှိသလော။
೬ಸಪ್ಪೆಯನ್ನು ಉಪ್ಪಿಲ್ಲದೆ ತಿನ್ನಬಹುದೇ? ಮೊಟ್ಟೆಯಲ್ಲಿರುವ ಲೋಳೆಯು ರುಚಿಯೇ?
7 ၇ လက်နှင့်မျှမတို့နိုင်၊ ငါမနှစ်သက်နိုင်သောအရာကို ရွံလျက်နှင့် ငါစားရ၏။
೭ಇಂಥಾ ಆಹಾರವು ನನಗೆ ಅಸಹ್ಯವಾಗಿದೆ; ಮುಟ್ಟಲಾರೆನು.
8 ၈ ငါတောင်းသောအရာကို ရပါစေ။ ငါတောင့်တသောအရာကို ဘုရားသခင်ပေးသနားတော်မူပါစေ။
೮ಅಯ್ಯೋ, ನನ್ನ ವಿಜ್ಞಾಪನೆಯು ನೆರವೇರುವುದಿಲ್ಲವೇ, ನಾನು ಬಯಸುವುದನ್ನು ದೇವರು ಕೊಡುವುದಿಲ್ಲವೇ?
9 ၉ တောင့်တသောအရာဟူမူကား၊ ဘုရားသခင်သည် ငါ့ကိုဖျက်ဆီးတော်မူပါစေ။ လက်တော်ကိုဆန့်၍ ငါ့ကိုဆုံးစေတော်မူပါစေ။
೯ನಾನು ನಾಶವಾಗುವುದು ದೇವರಿಗೆ ಮೆಚ್ಚಿಕೆಯಾಗುವುದಾದರೆ, ತನ್ನ ಕೈ ಚಾಚಿ ನನ್ನನ್ನು ಸಂಹರಿಸಿದರೆ ಒಳ್ಳೆಯದು.
10 ၁၀ ထိုသို့ဖြစ်လျှင်ငါသည် သက်သာရ၏။ ငြိုငြင်သော်လည်း သည်းခံမည်။ ငါ့ကိုနှမြောတော်မမူပါစေနှင့်။ သန့်ရှင်တော်မူသောသူ၏စကားကို ငါမငြင်းမဆန်ပြီ။
೧೦ಆಗ ನಾನು ಆದರಣೆ ಹೊಂದಿ ಮಿತಿಯಿಲ್ಲದ ಯಾತನೆಯಲ್ಲಿಯೂ ಉಲ್ಲಾಸಿಸುವೆನು. ಪರಿಶುದ್ಧ ದೇವರ ಆಜ್ಞೆಗಳನ್ನು ನಾನು ತೊರೆದುಬಿಟ್ಟವನಲ್ಲ.
11 ၁၁ ငါမြော်လင့်စရာအခွင့်ရှိရမည်အကြောင်း၊ ငါ့ခွန်အားကားအဘယ်သို့နည်း။ ငါသည်ကိုယ်အသက်ကို စောင့်ရမည်အကြောင်း၊ နောက်ဆုံးခံရသော အကျိုးကား အဘယ်သို့နည်း။
೧೧ನನ್ನ ಬಲವು ಎಷ್ಟರದು, ನಾನು ಹೇಗೆ ಕಾದುಕೊಳ್ಳಲಿ? ನನ್ನ ಅಂತ್ಯಸ್ಥಿತಿಯೇನು, ನಾನು ತಾಳ್ಮೆಯಿಂದಿರುವುದೇಕೆ?
12 ၁၂ ငါ့ခွန်အားသည် ကျောက်ခွန်အားဖြစ်သလော။ ငါ့အသားသည် ကြေးဝါဖြစ်သလော။
೧೨ನನ್ನ ಬಲವು ಕಲ್ಲಿನ ಬಲವೋ? ಅಥವಾ ನನ್ನ ಶರೀರವು ತಾಮ್ರದ್ದೋ?
13 ၁၃ ငါသည်ကိုယ်ကိုမမစနိုင်။ ငါ့ဥာဏ်လည်းကုန်ပြီ။
೧೩ನನ್ನಲ್ಲಿ ಏನೂ ಸಹಾಯವಿಲ್ಲವಲ್ಲಾ, ನನ್ನ ಸಾಮರ್ಥ್ಯವು ತೊಲಗಿಹೋಗಿದೆ.
14 ၁၄ ဆင်းရဲခြင်းသို့ရောက်သောသူ၏ အဆွေခင်ပွန်းသည် သနားအပ်၏။ မသနားလျှင် အနန္တတန်ခိုးရှင်ကို ကြောက်ရွံ့သောသဘောနှင့် ကင်းလွတ်၏။
೧೪ಒಬ್ಬನು ಮನಗುಂದಿ ಸರ್ವಶಕ್ತನಾದ ದೇವರ ಮೇಲಣ ಭಯಭಕ್ತಿಯನ್ನು ಬಿಡುವವನಾಗಿದ್ದರೂ; ಅವನ ಮಿತ್ರನು ಅವನಿಗೆ ದಯೆ ತೋರಿಸಬೇಕು.
15 ၁၅ ငါ့ညီအစ်ကိုတို့သည် ချောင်းရေကဲ့သို့ လှည့်စား၍၊ ချိုင့်၌စီးသောရေကဲ့သို့ရွေ့သွား ကွယ်ပျောက် တတ်ကြ၏။
೧೫ನನ್ನ ಸಹೋದರರಾದರೋ ತೊರೆಯ ಹಾಗೂ, ಪ್ರವಾಹವು ಹಾದುಹೋಗಿ ಬತ್ತಿದ ಹಳ್ಳದ ಹಾಗೂ ದ್ರೋಹಿಗಳಾಗಿದ್ದಾರೆ.
16 ၁၆ ထိုချောင်းရေသည် ရေခဲကြောင့်၎င်း၊ မထင်ရှားသော မိုဃ်းပွင့်ကြောင့်၎င်း၊
೧೬ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.
17 ၁၇ အလွန်စီးတတ်သော်လည်း၊ နွေးသောအခါ ကွယ်ပျောက်တတ်၏။ နေပူသောအခါ မိမိနေရာ၌ ခန်း ခြောက်တတ်၏။
೧೭ಬೇಸಿಗೆ ಬರುತ್ತಲೇ ಮಾಯವಾಗುವವು, ಸೆಕೆಯುಂಟಾದಾಗ ಅವು ಬತ್ತಿ ಕಾಣಿಸದೆ ಹೋಗುವವು.
18 ၁၈ ထိုရေစီးသောချောင်းတို့သည် လွဲသွား၍ တရွေ့တရွေ့ ကွယ်ပျောက်တတ်ကြ၏။
೧೮ಇಂಥಾ ತೊರೆಗಳ ಮಾರ್ಗವಾಗಿ ಪ್ರಯಾಣಮಾಡುವ ವರ್ತಕರ ಗುಂಪುಗಳು ಓರೆಯಾಗಿ, ಮರುಭೂಮಿಗೆ ತಿರುಗಿ ನಾಶವಾಗುತ್ತವೆ.
19 ၁၉ တေမန်အမျိုးသားအစုအဝေးတို့သည် ရှာကြ၏။ ရှေဘပြည်မှ ခရီးသွားသောသူအစုအဝေးတို့သည် မြော်လင့်လျက် လာကြ၏။
೧೯ತೇಮದ ಗುಂಪಿನವರು ಕಣ್ಣೆತ್ತಿ ನೋಡಿದರು, ಶೆಬದ ಸಮೂಹದವರು ಆ ತೊರೆಗಳನ್ನು ಹಾರೈಸಿದರು.
20 ၂၀ မြော်လင့်၍စိတ်ပျက်ကြ၏။ ထိုအရပ်သို့ ရောက်သောအခါ ရှက်ကြောက်လျက် နေကြ၏။
೨೦ಅಲ್ಲಿಗೆ ಸೇರಿ ಆಶಾಭಂಗಪಟ್ಟರು, ನಂಬಿದಷ್ಟೂ ನಿರೀಕ್ಷೆಗೆಟ್ಟರು.
21 ၂၁ ထိုအတူ သင်တို့သည်အချည်းနှီးသက်သက် ဖြစ်ကြ၏။ ငါနှိမ့်ချခြင်းကိုမြင်လျှင် ဆုတ်၍နေကြ၏။
೨೧ಈಗ ನೀವು ಹಾಗೆಯೇ ಇದ್ದೀರಿ. (ನನ್ನ) ವಿಪತ್ತನ್ನು ಕಂಡ ಕೂಡಲೆ ಹೆದರಿದಿರಿ.
22 ၂၂ ငါ့ထံသို့လက်ဆောင်ကို ယူခဲ့ကြပါ။ သင်တို့ ပစ္စည်းဥစ္စာထဲကထုတ်၍ ငါ့ကိုပေးကြပါ။
೨೨ನನ್ನ ಬಿನ್ನಹವೇನು? ‘ನನಗೆ ದಾನಮಾಡಿರಿ’ ಎಂದು ಬಿನ್ನವಿಸಿದೆನೋ? ನಿಮ್ಮ ಆಸ್ತಿಯಿಂದ, ‘ನನಗಾಗಿ ಲಂಚಕೊಡಿರಿ’ ಎಂದೆನೋ?
23 ၂၃ ရန်သူလက်မှငါ့ကိုကယ်ယူကြပါ။ သူရဲလက်မှ ရွေးနှုတ်ကြပါဟု ငါပြောသလော။
೨೩ವಿರೋಧಿಯ ಕೈಯಿಂದ, ‘ನನ್ನನ್ನು ರಕ್ಷಿಸಿರಿ’ ಎಂದು ಕೇಳಿಕೊಂಡೆನೋ? ಬಲಾತ್ಕರಿಸುವವರಿಂದ, ‘ನನ್ನನ್ನು ವಿಮೋಚಿಸಿರಿ’ ಎಂದು ಬೇಡಿಕೊಂಡೆನೋ?
24 ၂၄ ငါ့ကိုဆုံးမကြပါ။ တိတ်ဆိတ်လျက်နေပါမည်။ ငါမှားသောအရာကို ငါ့အားဘော်ပြကြပါ။
೨೪ನನಗೆ ಉಪದೇಶಮಾಡಿ ನನ್ನ ತಪ್ಪನ್ನು ನನಗೆ ತಿಳಿಯಪಡಿಸಿರಿ, ನಾನು ಮೌನದಿಂದಿರುವೆನು.
25 ၂၅ မှန်သောစကားသည် တန်ခိုးကြီး၏။ သင်တို့ ကဲ့ရဲ့သောစကားသည် အဘယ်မှာနေရာကျသနည်း။
೨೫ನೀತಿಯ ನುಡಿಗಳು ಎಷ್ಟೋ ಖಂಡಿತವಾಗಿವೆ, ಆದರೆ ನಿಮ್ಮ ಖಂಡನೆಯು ನಿರಾರ್ಥಕ?
26 ၂၆ ငါစကားပြောရုံကာမျှကို အပြစ်တင်မည်ကြံစည်ကြသလော။ မြော်လင့်စရာမရှိသောသူ ပြောသော စကားသည် လေသက်သက်ဖြစ်၏။
೨೬ಬರೀ ಮಾತುಗಳಿಂದ ಖಂಡಿಸಬೇಕೆನ್ನುವಿರೋ? ದೆಸೆಗೆಟ್ಟವನ ಮಾತುಗಳು ಗಾಳಿಗೆ ಹೋಗತಕ್ಕವುಗಳಲ್ಲವೇ?
27 ၂၇ အကယ်၍သင်တို့သည် မိဘမရှိသောသူငယ်ကို နှိပ်စက်ကြ၏။ အဆွေခင်ပွန်းဘို့ တွင်းကိုတူးကြ၏။
೨೭ನೀವು ಚೀಟಿಹಾಕಿ ಅನಾಥನನ್ನು ಕೊಂಡುಕೊಳ್ಳುವವರು; ನಿಮ್ಮ ಸ್ನೇಹಿತನನ್ನು ಮಾರಿಬಿಡುತ್ತೀರಿ.
28 ၂၈ ငါ့ကိုစိတ်မရှိဘဲကြည့်ရှုကြပါလော့။ သင်တို့ရှေ့ မှာ ငါလှည့်စားသလော။
೨೮ಆದುದರಿಂದ ಈಗ ದಯಮಾಡಿ ನನ್ನನ್ನು ನೋಡಿರಿ, ನಿಮ್ಮ ಮುಖದೆದುರಿಗೆ ನಾನು ಸುಳ್ಳಾಡುವೆನೋ?
29 ၂၉ ပြန်၍ဆင်ခြင်ကြပါ။ မတရားသဖြင့်မပြုကြပါ နှင့်။ ပြန်၍ဆင်ခြင်ကြပါ။ ဤအမှု၌ ငါသည် ဖြောင့်မတ် ပါ၏။
೨೯ದಯವಿಟ್ಟು ನನ್ನ ವಿಚಾರಣೆಗೆ ಅನ್ಯಾಯವಾಗದಿರಲಿ; ಮತ್ತೆ ವಿಮರ್ಶೆ ಮಾಡಿರಿ. ನನ್ನ ವ್ಯಾಜ್ಯವು ನ್ಯಾಯವಾದದ್ದು.
30 ၃၀ ငါ့လျှာ၌ ကောက်သောသဘောရှိသလော။ ငါသည် မြည်းစမ်း၍ အပြစ်ပါသောအရာကို ပိုင်းခြား မသိနိုင်သလော။
೩೦ರುಚಿಗೆ ನನ್ನ ನಾಲಿಗೆಯು ತಪ್ಪುಮಾಡುತ್ತದೋ? ಸತ್ಯಾಸತ್ಯಗಳ, ನ್ಯಾಯಾನ್ಯಾಯಗಳನ್ನು ವಿವೇಚಿಸುವ ಸಾಮರ್ಥ್ಯ ನನಗಿಲ್ಲವೇ?