< ယေဇကျေလ 42 >

1 ထိုနောက်မှ မြောက်လမ်းဖြင့် ပြင်တန်တိုင်းထဲသို့ ခေါ်သွား၍၊ အိမ်တော်မြောက်ဘက်၊ လွတ်လပ်သော အရပ်ရှေ့မှာရှိသော အခန်းများကို ပြလေ၏။
ಆಮೇಲೆ ಅವನು ನನ್ನನ್ನು ಉತ್ತರದ ಮಾರ್ಗವಾಗಿ ಹೊರಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ, ಪ್ರತ್ಯೇಕವಾದ ಸ್ಥಳಕ್ಕೆ ಎದುರಾಗಿಯೂ ಉತ್ತರದ ಕಡೆಯಲ್ಲಿ ಕಟ್ಟಡದ ಮುಂದೆ ಇದ್ದ ಕೊಠಡಿಗೆ ಕರೆತಂದನು.
2 ထိုအခန်းတို့သည် မြောက်တံခါးအထိ၊ အလျား အတောင်တရာ၊ အနံအတောင်ငါးဆယ်ရှိကြ၏။
ಉತ್ತರ ಭಾಗದಲ್ಲಿ ಬಾಗಿಲು ಇದ್ದ ಕಟ್ಟಡವು ಸುಮಾರು ಐವತ್ತೆರಡು ಮೀಟರ್ ಉದ್ದ ಮತ್ತು ಇಪ್ಪತ್ತಾರು ಮೀಟರ್ ಅಗಲವಿತ್ತು.
3 အတောင်နှစ်ဆယ်ရှိသော အတွင်းတန်တိုင်းရှေ့၊ ပြင်တန်တိုင်း ကျောက်ခင်းရှေ့တွင် တဘက်တချက်၌ နံရံ အခန်းသုံးဆင့်ရှိ၏။
ಒಳಗಿನ ಅಂಗಳಕ್ಕೆ ಇದ್ದ ಇಪ್ಪತ್ತು ಮೊಳಕ್ಕೆ ಎದುರಾಗಿಯೂ ಹೊರಗಿನ ಅಂಗಳಕ್ಕೆ ಇದ್ದ ಕಲ್ಲು ಹಾಸಿದ ನೆಲಕ್ಕೆ ಎದುರಾಗಿಯೂ ಮೂರು ಅಂತಸ್ತುಗಳಲ್ಲಿಯೂ ಪಡಸಾಲೆಗಳ ಮೇಲೆ ಪಡಸಾಲೆಗಳಿದ್ದವು.
4 ထိုအခန်းများရှေ့မှာ တတောင်ကျယ်သော လမ်းနှင့်တကွ အတွင်းဘက်သို့ဝင်၍၊ အနံဆယ်တောင် ရှိသောစင်္ကြံရှိ၏။ အခန်းတံခါးတို့သည် မြောက်ဘက်သို့ မျက်နှာပြုကြ၏။
ಕೊಠಡಿಗಳ ಮುಂದೆ ಸುಮಾರು ಐದು ಮೀಟರ್ ಅಗಲ ಮತ್ತು ಸುಮಾರು ಐವತ್ತೆರಡು ಮೀಟರ್ ಉದ್ದದ ಒಳ ಮಾರ್ಗವಿತ್ತು. ಅದರ ಬಾಗಿಲುಗಳು ಉತ್ತರಕ್ಕೆ ಎದುರಾಗಿದ್ದವು.
5 အထက်ခန်းတို့သည် ကျဉ်းကြ၏။ သူတို့၏ ကြမ်းပြင်သည် အောက်ခန်းကြမ်းပြင်၊ အလယ်ခန်း ကြမ်းပြင်နှင့်မညီ၊ အထဲသို့ဝင်လျက် ရှိကြ၏။
ಈಗ ಮೇಲಿನ ಕೊಠಡಿಗಳೇ ಚಿಕ್ಕದಾಗಿದ್ದವು. ಏಕೆಂದರೆ ಕಟ್ಟಡದ ಕೆಳಗಿನ ಭಾಗಕ್ಕಿಂತಲೂ ಮತ್ತು ಮಧ್ಯ ಭಾಗಕ್ಕಿಂತಲೂ ಪಡಸಾಲೆಗಳು ಎತ್ತರದಲ್ಲಿದ್ದವು.
6 အကြောင်းမူကား၊ အခန်းသုံးဆင့်ရှိသော်လည်း၊ ထိုအခန်းတို့သည် အခြားတန်တိုင်းကဲ့သို့တိုင်မရှိ၊ သို့ဖြစ်၍၊ အောက်ခန်းနှင့် အလယ်ခန်းထက်သာ၍ ကျဉ်းကြ၏။
ಇವು ಮೂರು ಅಂತಸ್ತುಗಳಾಗಿದ್ದವು. ಆದರೆ ಅಂಗಳದ ಕಂಬಗಳ ಹಾಗೆ ಇವುಗಳಿಗೆ ಕಂಬಗಳಿರಲಿಲ್ಲ. ಆದ್ದರಿಂದ ನೆಲಕ್ಕೆ ಎತ್ತರದಲ್ಲಿನ ಮೇಲಣ ಕೋಣೆಗಳು ಕೆಳಗಿನ ಮತ್ತು ನಡುವಣ ಕೋಣೆಗಳಿಗಿಂತ ಚಿಕ್ಕದಾಗಿದ್ದವು.
7 ထိုအခန်းများတဘက်တချက်၊ ပြင်တန်တိုင်း ဘက်မှာ အခန်းများရှေ့၌ကာသော နံရံသည် အလျား အတောင် ငါးဆယ်ရှိ၏။
ಕೊಠಡಿಗಳಿಗೆ ಎದುರಾಗಿ ಹೊರಗಿದ್ದ ಗೋಡೆಯು ಕೊಠಡಿಗಳ ಮುಂದೆ ಹೊರಗಿನ ಅಂಗಳದ ಕಡೆಗೆ ಇದ್ದದ್ದು ಐವತ್ತು ಮೊಳ ಉದ್ದವಾಗಿತ್ತು.
8 ပြင်တန်တိုင်းနှင့် ဆိုင်သောအခန်းတို့သည် အလျားအတောင်ငါးဆယ် ရှိကြ၏။ ဗိမာန်တော်ရှေ့မှာ အလျားသည် အတောင်တရာရှိ၏။
ಏಕೆಂದರೆ ಹೊರಗಿನ ಅಂಗಳದಲ್ಲಿದ್ದ ಕೊಠಡಿಗಳ ಉದ್ದವು ಐವತ್ತು ಮೊಳ ಉದ್ದವಾಗಿಯೂ ಮತ್ತು ದೇವಾಲಯದ ಮುಂದೆ ನೂರು ಮೊಳಗಳಿದ್ದವು.
9 ပြင်တန်တိုင်းမှလာ၍၊ ထိုအခန်းများ ခြေရင်း အရှေ့ဘက်၌ ဝင်ရာလမ်းရှိ၏။
ಈ ಕೊಠಡಿಗಳ ಕೆಳಗೆ ಹೊರಗಿನ ಅಂಗಳದಿಂದ ಅವುಗಳೊಳಗೆ ಪ್ರವೇಶಿಸುವ ಹಾಗೆ ಪೂರ್ವದಿಕ್ಕಿಗೆ ಪ್ರವೇಶವಿತ್ತು.
10 ၁၀ အိမ်တော်တောင်ဘက်၊ လွတ်လပ်သော အရပ် ကို ကာသော တန်တိုင်းနံရံ၌လည်း အခန်းများရှိကြ၏။
ಕೊಠಡಿಗಳು ಪೂರ್ವದ ಕಡೆಗೆ ಅಂಗಳದ ಗೋಡೆಯ ಪ್ರತ್ಯೇಕ ಸ್ಥಳಕ್ಕೂ ಕಟ್ಟಡಕ್ಕೂ ಎದುರಾಗಿದ್ದವು.
11 ၁၁ ထိုအခန်းစုရှေ့မှာ ရှိသောစင်္ကြံမှစ၍ အခန်း အလျားအနံ၊ ထွက်ရာဝင်ရာ တံခါးရှိသမျှတို့သည် မြောက်အခန်းစုနှင့် ပုံသဏ္ဌာန်တူကြ၏။
ಅವುಗಳ ಮುಂದಿನ ದಾರಿಯು ಉತ್ತರದ ಕಡೆಯಲ್ಲಿದ್ದ ಕೊಠಡಿಗಳ ಆಕಾರದ ಹಾಗೆಯೇ ಇತ್ತು. ಅವುಗಳ ಉದ್ದವೂ ಅಗಲವೂ ಒಂದೇ ಆಗಿತ್ತು. ಉತ್ತರ ದಿಕ್ಕಿನ ಬಾಗಿಲುಗಳು
12 ၁၂ တောင်ခန်းတံခါးတို့သည်လည်း မြောက်ခန်း တံခါးတို့နှင့် တူသည် ဖြစ်၍၊ တန်တိုင်းတဘက်တချက်၊ အရှေ့သို့မျက်နှာပြုသော စင်္ကြံဦး၌ ဝင်ရာတတံခါးဝရှိ၏။
ದಕ್ಷಿಣ ಕಡೆಗಿದ್ದ ಕೊಠಡಿಗಳ ಬಾಗಿಲುಗಳ ಪ್ರಕಾರ ಅವುಗಳನ್ನು ಒಬ್ಬನು ಪ್ರವೇಶಿಸುವಂತೆ ಪೂರ್ವದ ಕಡೆಯ ಗೋಡೆಗೆ ಸರಿಯಾದ ಮಾರ್ಗದ ಕೊನೆಯಲ್ಲಿ ಒಂದು ಬಾಗಿಲಿತ್ತು.
13 ၁၃ တိုင်းသောသူကလည်း၊ လွတ်လပ်သော အရပ် ရှေ့မှာ မြောက်ခန်းနှင့် တောင်ခန်းတို့သည် သန့်ရှင်း သောအခန်း၊ ထာဝရဘုရားထံတော်သို့ ချဉ်းကပ်သော ယဇ်ပုရောဟိတ်တို့သည် အလွန်သန့်ရှင်းသောအရာများ ကို စားရသောအခန်းဖြစ်ကြ၏။ ထိုအရပ်သည် သန့်ရှင်း သောကြောင့်အလွန် သန့်ရှင်းသောအရာ၊ ဘောဇဉ်ပူဇော် သက္ကာ၊ အပြစ်ဖြေရာယဇ်၊ ဒုစရိုက်ဖြေရာယဇ်တို့ကို ထားရာအရပ်ဖြစ်၏။
ಆಗ ಅವನು ನನಗೆ, “ಪ್ರತ್ಯೇಕ ಸ್ಥಳದ ಮುಂದೆ ಇರುವ ಉತ್ತರ ಮತ್ತು ದಕ್ಷಿಣದ ಕೊಠಡಿಗಳು ಪರಿಶುದ್ಧವಾದವು. ಅಲ್ಲಿ ಯೆಹೋವ ದೇವರಿಗಾಗಿ ಬರುವ ಯಾಜಕರು ಅತಿ ಪರಿಶುದ್ಧ ಪದಾರ್ಥಗಳನ್ನು ಭುಜಿಸುತ್ತಾರೆ. ಮತ್ತು ಕಾಣಿಕೆಯನ್ನೂ ದೋಷಪರಿಹಾರ ಬಲಿಯನ್ನೂ ಪ್ರಾಯಶ್ಚಿತ್ತ ಬಲಿಯನ್ನೂ ಅಲ್ಲಿಡುತ್ತಾರೆ. ಆ ಸ್ಥಳವು ಪರಿಶುದ್ಧ.
14 ၁၄ ယဇ်ပုရောဟိတ်တို့သည် ဝင်သောအခါ အမှု တော်ဆောင် အဝတ်ကိုဝတ်လျက်၊ သန့်ရှင်းသောအရပ်မှ ပြင်တန်တိုင်သို့မထွက်ရ။ ထိုအဝတ်သန့်ရှင်းသောကြောင့် ချွတ်ထား၍အခြားသော အဝတ်ကို ဝတ်ပြီးမှ၊ လူများရှိရာ သို့ ထွက်သွားရကြမည်ဟု ငါ့အားပြောဆို၏။
ಯಾಜಕರು ಅವುಗಳಲ್ಲಿ ಪ್ರವೇಶಿಸುವಾಗ ಅವರು ಪರಿಶುದ್ಧ ಸ್ಥಳವನ್ನು ಬಿಟ್ಟು ಹೊರಗಿನ ಅಂಗಳಕ್ಕೆ ಹೋಗಬಾರದು. ಅವರು ತಾವು ಸೇವೆಗಾಗಿ ಧರಿಸಿದ ವಸ್ತ್ರಗಳನ್ನು ಅಲ್ಲೇ ತೆಗೆದಿಡಬೇಕು. ಏಕೆಂದರೆ ಅವು ಪರಿಶುದ್ಧವಾಗಿವೆ. ಅವರು ಜನರಿಗೆ ಸಂಬಂಧಪಟ್ಟ ಬೇರೆ ವಸ್ತ್ರಗಳನ್ನು ಧರಿಸಿಕೊಂಡು ಸಮೀಪಿಸಬೇಕು,” ಎಂದನು.
15 ၁၅ အတွင်းဗိမာန်တော်ကို တိုင်းပြီးသည်နောက်၊ အရှေ့တံခါးပြင်သို့ ခေါ်သွား၍၊
ಹೀಗೆ ಅವನು ಒಳಗಿನ ಆಲಯದ ಅಳತೆಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಿಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.
16 ၁၆ တိုင်းစရာကျူလုံးနှင့်အရှေ့မျက်နှာကို တိုင်းလျှင် ကျူလုံးအပြန် ငါးရာရှိ၏။
ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುಮಾರು 265 ಮೀಟರ್ ಆಗಿತ್ತು.
17 ၁၇ မြောက်မျက်နှာကိုတိုင်းလျှင်လည်း ကျူလုံး အပြန်ငါးရာရှိ၏။
ಉತ್ತರದ ಕಡೆಯಲ್ಲಿಯೂ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಸುಮಾರು 265 ಮೀಟರ್ ಎಂದು ಅಳೆದನು.
18 ၁၈ တောင်မျက်နှာကိုတိုင်းလျှင်လည်း ကျူလုံး အပြန်ငါးရာရှိ၏။
ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗವನ್ನು ಸುಮಾರು 265 ಮೀಟರ್ ಎಂದು ಅಳೆದನು.
19 ၁၉ အနောက်မျက်နှာကိုတိုင်းလျှင်လည်း ကျူလုံး အပြန်ငါးရာရှိ၏။
ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಸುಮಾರು 265 ಮೀಟರ್ ಎಂದು ಅಳೆದನು.
20 ၂၀ လေးမျက်နှာကိုတိုင်း၍ ပတ်လည်း၌ရှိသော တန်တိုင်သည် သန့်ရှင်းသောအရပ်၊ မသန့်ရှင်းသော အရပ်တို့ကို ပိုင်းခြင်းလျက်၊ အလျားအပြန်ငါးရာ၊ အနံ လည်း အပြန်ငါးရာရှိ၏။
ಅವನು ನಾಲ್ಕು ಕಡೆಗಳಿಂದ ಅಳೆದನು. ಪರಿಶುದ್ಧವಾದ ಮತ್ತು ಅಪರಿಶುದ್ಧವಾದ ಸ್ಥಳವನ್ನೂ ಪ್ರತ್ಯೇಕಪಡಿಸುವ ಹಾಗೆ ಅದಕ್ಕೆ ಸುತ್ತಲು ಸುಮಾರು 265 ಮೀಟರ್ ಉದ್ದ ಮತ್ತು ಸುಮಾರು 265 ಮೀಟರ್ ಗೋಡೆ ಇತ್ತು.

< ယေဇကျေလ 42 >