< ယေဇကျေလ 36 >

1 တဖန်အချင်းလူသား၊ ဣသရေလတောင်တို့ အား ပရောဖက်ပြု၍ ဆင့်ဆိုရမည်မှာ၊ အိုဣသရေလ တောင်တို့၊ ထာဝရဘုရား၏အမိန့်တော်ကို နားထောင် ကြလော့။
“ನರಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು. ಹೇಳು, ‘ಇಸ್ರಾಯೇಲ್ ಪರ್ವತಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
2 အရှင်ထာဝရဘုရား မိန့်တော်မူသည်ကား၊ ရန်သူက၊ အေ့ဟေ၊ ထာဝရတောင်တို့သည် ငါတို့လက်သို့ ရောက်ကြပြီဟု သင်တို့တဘက်၌ ဆိုမိသောကြောင့်၊
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು.’
3 ပရောဖက်ပြု၍ အရှင်ထာဝရဘုရား၏ အမိန့် တော်ကိုဆင့်ဆိုရမည်မှာ၊ သင်တို့သည်ကျန်ကြွင်းသော တပါးအမျိုးသားတို့ သိမ်းယူရာဖြစ်သည်တိုင်အောင်၊ သင်တို့ကိုသုတ်သင်ပယ်ရှင်း၍ ပတ်လည်ကိုက်စားသော ကြောင့်၎င်း၊ သင်တို့သည် လူများပြော ဆိုရာ၊ ကဲ့ရဲ့ရာ ဖြစ်သောကြောင့်၎င်း၊
ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.
4 အိုဣသရေလတောင်တို့၊ အရှင်ထာဝရ ဘုရား၏ အမိန့်တော်ကို နားထောင်ကြလော့။ အရှင်ထာဝရဘုရားသည် တောင်ကြီး၊ တောင် ငယ်၊ မြစ်ရေစီးရာ၊ ချိုင့်ရာ၊ သုတ်သင်သောလွင်ပြင်မှစ၍၊ ပတ်လည်၌နေသော တပါးအမျိုးသား အကျန်အကြွင်း တို့သည် လုယူကဲ့ရဲ့၍၊ မြို့သားစွန့်သွားသော မြို့တို့အား မိန့်တော်မူသည်ကား၊
ಆದ್ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ, ಪರ್ವತಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ
5 အကယ်စင်စစ် ငါ့ပြည်ကိုလုယူစရာဘို့ ပစ်ထား ခြင်းငှါ အလွန်ဝမ်းမြောက်သောစိတ်၊ အငြိုးထားသော စိတ်ရှိ၍၊ ကိုယ်တိုင်လုယူစရာဘို့ စီရင်သော ဧဒုံအမျိုး သားအပေါင်းတို့နှင့် ကျန်ကြွင်းသော တပါးအမျိုးသား တို့တဘက်၌ ငါသည် ဒေါသမီးထွက်၍ ပြောထားပြီ။
ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’
6 သို့ဖြစ်၍၊ ဣသရေလပြည်ကို ရည်မှတ်၍ ပရောဖက်ပြုလျက်၊ တောင်ကြီး၊ တောင်ငယ်၊ မြစ်ရေ စီးရာ၊ ချိုင့်ရာတို့အား အရှင်ထာဝရဘုရား၏ အမိန့်တော် ကို ဆင့်ဆိုရမည်မှာ၊ သင်တို့သည်တပါးအမျိုးသားတို့ကဲ့ရဲ့ ခြင်းကိုခံရသောကြောင့်၊ ငါသည် ဒေါသအမျက်ထွက်၍ ပြောပြီ။
ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.
7 အရှင်ထာဝရဘုရား မိန့်တော်မူသည်ကား၊ အကယ်စင်စစ် သင်တို့ပတ်လည်၌နေသော တပါးအမျိုး သားတို့သည် ကိုယ်အရှက်ကွဲခြင်းကို ခံရကြလိမ့်မည်ဟု ငါကျိန်ဆိုပြီ။
ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನನ್ನ ಕೈಯೆತ್ತಿ ಪ್ರಮಾಣ ಮಾಡಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿರುವ ಆ ಜನಾಂಗಗಳು ತಮ್ಮ ನಿಂದೆಯನ್ನು ಹೊರುವರು.
8 အိုဣသရေလတောင်တို့၊ သင်တို့မူကား၊ အပင် ပေါက်၍ ငါ၏လူဣသရေလအမျိုးသားတို့အဘို့ အသီးကိုသီး ရကြလိမ့်မည်။ သူတို့ ပြန်လာချိန်နီးပြီ။
“‘ಆದರೆ ಓ ಇಸ್ರಾಯೇಲ್ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹರಡಿಸಿ ನನ್ನ ಜನರಾದ ಇಸ್ರಾಯೇಲರಿಗೆ ಫಲಕೊಡುವಿರಿ. ಏಕೆಂದರೆ ಅವರ ಬರುವಿಕೆಯು ಸಮೀಪವಾಗಿದೆ.
9 ငါသည်သင်တို့ဘက်၌နေ၍ သင်တို့ရှိရာသို့ ပြန်လာသဖြင့်၊ သင်တို့အပေါ်မှာ လယ်လုပ်၍ မျိုးစေ့ ကြဲကြလိမ့်မည်။
ನಾನು ನಿಮ್ಮವನಾಗಿದ್ದೇನೆ ನಾನು ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ಉಳುಮೆ ಮಾಡಿ ಬಿತ್ತಲಾಗುತ್ತದೆ.
10 ၁၀ သင်တို့အပေါ်မှာ လူများတည်းဟူသော ဣသရေလအမျိုးသား အပေါင်းတို့ကို ငါပြန့်ပွါးစေသဖြင့်၊ သူတို့သည် မြို့များ၌နေ၍ ပျက်စီးသော အရပ်များကို ပြုပြင်ကြလိမ့်မည်။
ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದವರನ್ನೂ ಎಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿಸುತ್ತೇನೆ. ಪಟ್ಟಣಗಳು ಜನಭರಿತವಾಗುವುವು. ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವುವು.
11 ၁၁ သင်တို့အပေါ်မှာ လူနှင့်တိရစ္ဆာန်တို့ကို ငါ များပြားစေသဖြင့်၊ သူတို့သည်ပွားများ၍ သားမြေးအစဉ် အဆက်ရှိကြလိမ့်မည်။ နေရင်းအရပ်တို့၌ ငါနေရာချ၍၊ အရင်ပြုသကဲ့သို့ ငါကျေးဇူးပြုမည်။ ငါသည် ထာဝရ ဘုရားဖြစ်ကြောင်းကို သင်တို့သိရကြလိမ့်မည်။
ನಾನು ನಿಮ್ಮ ಮೇಲೆ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು. ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವುವು. ನಾನು ನಿಮ್ಮನ್ನು ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
12 ၁၂ သင်တို့အပေါ်မှာ လူများတည်းဟူသော ငါ၏ လူဣသရေလအမျိုးသားတို့သည် သွားလာမည် အကြောင်း ငါပြုမည်။ သူတို့သည် သင်တို့ကို သိမ်းယူ၍ အမွေခံရသဖြင့်၊ နောက်တဖန် သင်တို့ကြောင့် သားမဆုံး ရှုံးရကြ။
ನನ್ನ ಜನರಾದ ಇಸ್ರಾಯೇಲ್ಯರನ್ನು ನಿಮ್ಮಲ್ಲಿ ವಾಸಿಸುವಂತೆ ಮಾಡುವೆನು. ಅವರು ನಿನ್ನನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ನೀವು ಅವರ ಸೊತ್ತಾಗಿರುವಿರಿ; ನೀವು ಎಂದಿಗೂ ಅವರ ಮಕ್ಕಳಿಂದ ವಂಚಿತರಾಗುವುದಿಲ್ಲ.
13 ၁၃ အရှင်ထာဝရဘုရား မိန့်တော်မူသည်ကား၊ အချင်းပြည်၊ သင်သည် လူတို့ကို ကိုက်စားတတ်၏။ ကိုယ် အမျိုးသားတို့ကို လုယူဖျက်ဆီးတတ်၏ဟု သူတပါး ဆိုသောကြောင့်၊
“‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವೆ,” ಎಂದು ಅವರು ನಿನಗೆ ಹೇಳುವರು.
14 ၁၄ နောက်တဖန်သင်သည် လူတို့ကို မကိုက်စားရ။ ကိုယ်အမျိုးသားတို့၌ လုယူဖျက်ဆီးခြင်းကို မပြုရဟု အရှင် ထာဝရဘုရားမိန့်တော်မူ၏။
ಆದ್ದರಿಂದ ಇನ್ನು ಮೇಲೆ ನೀನು ಮನುಷ್ಯರನ್ನು ನುಂಗುವುದಿಲ್ಲ. ಇನ್ನು ಮೇಲೆ ನಿನ್ನ ಜನಾಂಗದವರನ್ನೂ ಮಕ್ಕಳಿಲ್ಲದವರನ್ನಾಗಿ ಮಾಡುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
15 ၁၅ နောက်တဖန် အတိုင်းတိုင်းအပြည်ပြည် ကဲ့ရဲ့ အပြစ်တင်သော စကားကိုမကြားရ။ နောက်တဖန် ကိုယ် အမျိုးသားတို့၌ လုယူဖျပ်ဆီးခြင်းကို မပြုရဟု အရှင် ထာဝရဘုရားမိန့်တော်မူ၏။
ಅಲ್ಲದೆ ಇನ್ನು ಮೇಲೆ ನೀನು ಇತರ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗಗಳಿಂದ ಅವಮಾನ ಅನುಭವಿಸುವುದಿಲ್ಲ. ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’”
16 ၁၆ တဖန်ထာဝရဘုရား၏ နှုတ်ကပတ်တော်သည် ငါ့ဆီသို့ ရောက်လာ၍၊
ಯೆಹೋವ ದೇವರ ವಾಕ್ಯವು ನನಗೆ ಬಂದಿತು,
17 ၁၇ အချင်းလူသား၊ ဣသရေလအမျိုးသားတို့သည် ကိုယ်ပြည်၌နေသောအခါ၊ အလိုအလျောက် ကျင့်ကြံပြုမူ သောအားဖြင့် ထိုပြည်ကို ညစ်ညူးစေကြ၏။ သူတို့ အကျင့်ဓလေ့သည် ငါ့ရှေမှာဥတုရောက်သော မိန်းမ၏ အညစ်အကြေးကဲ့သို့ ဖြစ်၏။
“ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
18 ၁၈ ထိုပြည်၌ လူအသက်ကိုသတ်သောအပြစ်၊ ရုပ်တုတို့နှင့် ညစ်ညူးစေသော အပြစ်ကြောင့်၊ ငါသည် ဒေါသအမျက်ကို သွန်းလောင်းပြီ။
ಆದ್ದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷವನ್ನು ಅವರ ಮೇಲೆ ಸುರಿಸಿದೆನು.
19 ၁၉ အတိုင်းတိုင်းအပြည်ပြည်သို့ ငါကွဲပြားပြန့်လွင့် စေပြီ။ သူတို့ကျင့် ကြံပြုမူသည်အတိုင်း ငါစီရင်ပြီ။
ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶಗಳಲ್ಲಿ ಚದರಿಹೋದರು. ಅವರ ದುರ್ಮಾರ್ಗ ದುರಾಚಾರಗಳಿಗೆ ಅನುಸಾರವಾಗಿ ಅವರನ್ನು ನ್ಯಾಯತೀರಿಸಿದೆನು.
20 ၂၀ သို့ရာတွင် တကျွန်းတနိုင်ငံသို့ရောက်သောအခါ ဤသူတို့သည် ထာဝရဘုရား၏ လူဖြစ်ကြ၏။ ကိုယ်ပြည် မှ ထွက်သွားရကြ၏ဟု သူတပါးပြောဆိုသဖြင့်၊ ငါ၏နာမ မြတ်ကို ရှုတ်ချသောကြောင့်၊
ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಇವರೇ, ‘ಯೆಹೋವ ದೇವರ ಜನರು ಮತ್ತು ಇವರು ಆತನ ದೇಶದಿಂದ ಹೊರಟು ಹೋದರು,’ ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡಿದರು.
21 ၂၁ ဣသရေလအမျိုးသားရောက်ရာ တကျွန်း တနိုင်ငံအရပ်ရပ်တို့၌ ရှုတ်ချသော ငါ၏နာမမြတ်ကို ငါနှမြော၏။
ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ಕುರಿತು ಮನಮರುಗಿದೆನು.
22 ၂၂ သို့ဖြစ်၍၊ အရှင်ထာဝရဘုရား၏ အမိန့်တော်ကို ဣသရေလအမျိုးသားတို့အား ဆင့်ဆိုရမည်မှာ၊ အိုဣသရေလအမျိုး၊ သင်တို့ကိုထောက်၍ ဤအမှုကို ငါပြုသည် မဟုတ်။ သင်တို့ရောက်သမျှသောအရပ်တို့၌ လူအမျိုးမျိုးတို့ ရှေ့မှာ ရှုတ်ချသော ငါ၏နာမမြတ်ကိုသာ ထောက်၍ ပြု၏။
“ಆದ್ದರಿಂದ ನೀನು ಇಸ್ರಾಯೇಲರ ಮನೆತನದವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡುತ್ತಿಲ್ಲ. ಆದರೆ ನೀವು ಇತರ ಜನಾಂಗಗಳ ನಡುವೆ ಅಪವಿತ್ರಪಡಿಸಿದ ನನ್ನ ಪರಿಶುದ್ಧ ನಾಮಕ್ಕಾಗಿ ಮಾಡುತ್ತೇನೆ.
23 ၂၃ တပါးအမျိုးသားတို့ အလယ်၌သင်တို့ ရှုတ်ချ သော ငါ၏မဟာနာမတော်ကို ငါချီးမြှောက်မည်။ သူတို့ မျက်မှောက်၌ သင်တို့အားဖြင့် ငါသည် ချီးမြောက်ရာသို့ ရောက်သောအခါ၊ ငါသည်ထာဝရဘုရား ဖြစ်ကြောင်းကို သူတို့သိရကြလိမ့်မည်ဟု အရှင်ထာဝရဘုရား မိန့်တော်မူ ၏။
ನೀನು ನನ್ನ ಮಹತ್ವದ ನಾಮವನ್ನು ಅಪವಿತ್ರತೆಗೆ ಗುರಿಮಾಡಿದ ಇತರ ಜನಾಂಗಗಳಲ್ಲಿ ನನ್ನ ಪವಿತ್ರ ನಾಮವನ್ನು ತೋರಿಸುವೆನು. ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮೂಲಕವಾಗಿ ನನ್ನನ್ನು ಪವಿತ್ರನೆಂದು ತೋರಿಸುವಾಗ ಅವರು ನಾನು ಯೆಹೋವ ದೇವರೆಂಬುದನ್ನು ತಿಳಿದುಕೊಳ್ಳುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
24 ၂၄ အကြောင်းမူကား၊ သင်တို့ကို အတိုင်းတိုင်း အပြည်ပြည်တို့က ငါခေါ်ခဲ့၍ စုဝေးစေပြီးလျှင်၊ သင်တို့ နေရင်းပြည်သို့ပို့ဆောင်မည်။
“‘ನಾನು ನಿಮ್ಮನ್ನು ಇತರ ಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
25 ၂၅ သင်တို့အပေါ်မှာ သန့်ရှင်းသော ရေကို ဖျန်း သဖြင့်၊ သင်တို့ကို ခပ်သိမ်းသော အညစ်အကြေးမှစ၍ ခပ်သိမ်းသော ရုပ်တုတို့နှင့် ကင်းစင်စေမည်။
ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
26 ၂၆ စိတ်နှလုံးသစ်ကို ငါပေးမည်။ သဘောသစ်ကို သွင်းထားမည်း။ သင်တို့ကိုယ်ခန္ဓာထဲက ကျောက်နှလုံးကို နှုတ်၍ အသားနှလုံးကို ပေးမည်။
ನಿಮಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮವನ್ನು ನಿಮ್ಮೊಳಗೆ ಇಡುವೆನು. ನಿಮ್ಮೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
27 ၂၇ ငါ့ဝိညာဉ်ကိုလည်း သင်တို့အထဲသို့ သွင်းပေး သဖြင့်၊ သင်တို့သည် ငါ၏တရားလမ်းသို့လိုက်၍၊ ငါစီရင် တော်မူချက်တို့ကို စောင့်ရှောက်ကြလိမ့်မည်။
ನನ್ನ ಆತ್ಮವನ್ನು ನಿಮ್ಮೊಳಗೆ ಇಡುವೆನು. ನೀವು ನನ್ನ ನಿಯಮಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಜಾಗರೂಕತೆಯಿಂದ ಅನುಸರಿಸಿ ನಡೆಯುವಿರಿ.
28 ၂၈ ဘိုးဘေးတို့အား ငါပေးသောပြည်၌ သင်တို့ သည် နေရ၍ ငါ၏လူဖြစ်ကြလိမ့်မည်။ ငါသည်လည်း သင်တို့၏ဘုရားသခင်ဖြစ်မည်။
ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿಸುವಿರಿ; ನೀವು ನನ್ನ ಜನರಾಗಿರುವಿರಿ. ನಾನು ನಿಮ್ಮ ದೇವರಾಗಿರುವೆನು.
29 ၂၉ သင်တို့ကို အညစ်အကြေးရှိသမျှတို့နှင့် ငါ ကင်းလွတ်စေမည်။ အစာခေါင်းပါးခြင်းဘေးကို ပယ်ရှား ခြင်းငှါ၊ ဆန်စပါးကို မှာလိုက်၍ များပြားစေမည်။
ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು. ಬೆಳೆ ಬೆಳೆಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವುದಿಲ್ಲ.
30 ၃၀ သင်တို့သည် မွတ်သိပ်၍ တပါးအမျိုးသားတို့ ကဲ့ရဲ့ခြင်းနှင့် လွတ်စေမည်အကြောင်း၊ သစ်ပင်အသီးနှင့် မြေအသီးအနှံကို ငါများပြားစေမည်။
ಜನಾಂಗಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನೂ ಹೆಚ್ಚಿಸುವೆನು.
31 ၃၁ ထိုအခါ သင်တို့သည် ကိုယ်ကျင့်ဘူးသော အကျင့်ဆိုးနှင့် မကောင်းသော အမှုတို့ကို အောက်မေ့၍၊ ကိုယ်ဒုစရိုက်အပြစ်၊ စက်ဆုပ်ရွံရှာဘွယ်သော အမှုတို့ကြောင့် ကိုယ်ကိုကိုယ်ရွံရှာ ကြလိမ့်မည်။
ಆಮೇಲೆ ನೀವು ನಿಮ್ಮ ನಿಮ್ಮ ದುರ್ಮಾರ್ಗಗಳನ್ನೂ ದುರಾಚಾರಗಳನ್ನೂ ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
32 ၃၂ သင်တို့ကိုထောက်၍ ဤအမှုကို ငါပြုသည် မဟုတ်ဟု သိမှတ်ကြလော့။ အိုဣသရေလအမျိုး၊ ကိုယ်ပြု မိသောအမှုကြောင့် ရှက်ကြောက်လျက်၊ မိန်မောတွေဝေ လျက်နေကြလော့ဟု အရှင်ထာဝရဘုရား မိန့်တော်မူ၏။
ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳಿಗೆ ನಾಚಿಕೆಪಟ್ಟು ಲಜ್ಜೆಹೊಂದಿರಿ.
33 ၃၃ အရှင်ထာဝရဘုရားမိန့်တော်မူသည်ကား၊ သင်တို့ဒုစရိုက် အပြစ်ရှိသမျှတို့ကို ငါရှင်းလင်းသောအခါ၊ မြို့များ၌လူနေစေ၍ ပျက်စီးသော အရပ်တို့သည် ပြုပြင် ခြင်းရှိကြလိမ့်မည်။
“‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು. ಹಾಳಾಗಿರುವ ಸ್ಥಳಗಳಲ್ಲಿಯೂ ಕಟ್ಟಡಗಳು ಪುನಃ ಏಳುವುವು.
34 ၃၄ ရှောက်သွားသော သူအပေါင်းတို့၏ မျက် မှောက်၌ စွန့်ပစ်ဘူးသော မြေတွင် တဖန် လယ်လုပ်ကြ လိမ့်မည်။
ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಹಾಳುಬಿದ್ದ ಹಾಗೆ ಕಾಣದೆ ಉಳುಮೆಗೊಂಡಿರುವುದು.
35 ၃၅ ထိုအခါ သူတပါးတို့က၊ အရင်စွန့်ပစ်သော ဤမြေသည် ဧဒင်ဥယျာဉ်ကဲ့သို့ ဖြစ်လေပြီ။ သုတ်သင် ပယ်ရှင်းပျက်စီးသော မြို့တို့သည်လည်း ခိုင်ခံ့၍ မြို့သား တို့နှင့် ပြည့်စုံကြပြီဟု ပြောကြလိမ့်မည်။
“ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ,” ಎಂದು ಹೇಳುವರು.
36 ၃၆ ထိုအခါ ပျက်စီးသော အရပ်တို့ကို ငါထာဝရ ဘုရားပြုပြင်ကြောင်းကို၎င်း၊ စွန့်ပစ်သောမြေတွင် လယ် လုပ်ကြောင်းကို၎င်း၊ သင်တို့ပတ်လည်၌နေရစ်သော တပါးအမျိုးသားတို့သည် သိရကြလိမ့်မည်။ ငါထာဝရ ဘုရားသည် မိန့်မြွက်သည်အတိုင်း ပြုမည်။
ಯೆಹೋವ ದೇವರಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ ಮತ್ತು ನಾನೇ ಇದನ್ನು ಮಾಡುತ್ತೇನೆ.’
37 ၃၇ အရှင်ထာဝရဘုရား မိန့်တော်မူသည်ကား၊ ဣသရေလအမျိုးအဘို့ ဤအမှုကို ငါပြုရမည်အကြောင်း၊ သူတို့သည် ငါ့ကိုတောင်းပန်ရကြမည်။ သိုးများပြားသကဲ့သို့ ထိုအမျိုးသားအချင်းတို့ကို များပြားစေမည်။
“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.
38 ၃၈ ပျက်စီးသောမြို့တို့သည် သန့်ရှင်းသော သိုးစု တည်းဟူသော၊ ဓမ္မပွဲခံချိန်တွင် ယေရုရှလင်သိုးစုကဲ့သို့ သော လူစုတို့နှင့် ပြည့်စုံ၍၊ ငါသည် ထာဝရဘုရား ဖြစ်ကြောင်းကို သိရကြလိမ့်မည်ဟု မိန့်တော်မူ၏။
ಮೀಸಲಾದ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು. ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವುವು. ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”

< ယေဇကျေလ 36 >