< ၁ ဓမ္မရာဇဝင် 30 >

1 သုံးရက်လွန်၍ ဒါဝိဒ်နှင့် သူ၏ လူတို့သည် ဇိကလတ်မြို့သို့ရောက်သောအခါ၊ အာမလတ် လူတို့သည် တောင်ပြည်နှင့် ဇိကလတ်မြို့ကို တိုက်သဖြင့်၊ ဇိကလတ်မြို့ကို လုပ်ကြံ၍ မီးရှို့နှင့်ကြပြီ။
ದಾವೀದನೂ, ಅವನ ಜನರೂ ಮೂರನೆಯ ದಿವಸದಲ್ಲಿ ಚಿಕ್ಲಗ್ ಊರಿಗೆ ಬಂದು ಸೇರಿದರು. ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ, ಚಿಕ್ಲಗಿನ ಮೇಲೆಯೂ ಆಕ್ರಮಿಸಿ ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
2 မြို့၌ ရှိသော မိန်းမအကြီးအငယ် တယောက်ကိုမျှမသတ်၊ ရှိသမျှတို့ကို သိမ်းသွားနှင့်ကြပြီ။
ಅದರಲ್ಲಿದ್ದ ಸ್ತ್ರೀಯರನ್ನು ಸೆರೆಹಿಡಿದು ಹಿರಿಯರನ್ನಾದರೂ, ಕಿರಿಯರನ್ನಾದರೂ ಕೊಂದುಹಾಕದೆ, ಅವರನ್ನು ಸೆರೆಯಾಗಿ ತೆಗೆದುಕೊಂಡು, ತಮ್ಮ ಮಾರ್ಗವಾಗಿ ಹೊರಟು ಹೋದರು.
3 သို့ဖြစ်၍ ဒါဝိဒ်နှင့် သူ၏လူတို့သည် မြို့သို့ရောက်သောအခါ၊ မြို့ကို မီးရှို့၍ မယားသားသမီးများကို သိမ်းသွားကြောင်းကို တွေ့သဖြင့်၊
ದಾವೀದನೂ, ಅವನ ಜನರೂ ಆ ಪಟ್ಟಣಕ್ಕೆ ಬಂದಾಗ, ಅದು ಬೆಂಕಿಯಿಂದ ಸುಟ್ಟುಹೋಗಿರುವುದನ್ನೂ ಮತ್ತು ಆ ಜನರ ಹೆಂಡತಿಯರೂ ಅವರ ಪುತ್ರ ಪುತ್ರಿಯರೂ ಸೆರೆಯಾಗಿ ಹೋಗಿರುವುದನ್ನೂ ಕಂಡರು.
4 ငိုသံကို လွှင့်၍ အားကုန်သည် တိုင်အောင် ငိုကြွေးကြ၏။
ಆಗ ದಾವೀದನೂ, ಅವನ ಸಂಗಡ ಇದ್ದ ಜನರೂ ಅಳುವುದಕ್ಕೆ ತಮ್ಮಲ್ಲಿ ಶಕ್ತಿಯಿಲ್ಲದೆ ಹೋಗುವವರೆಗೂ ತಮ್ಮ ಸ್ವರವನ್ನೆತ್ತಿ ಅತ್ತರು.
5 ဒါဝိဒ်မယားနှစ်ယောက် ယေဇရေလမြို့သူ အဟိနောင်နှင့် နာဗလ မယားက ရေမေလမြို့သူ အဘိဂဲလတို့သည်လည်း ပါသွားကြပြီ။
ದಾವೀದನ ಇಬ್ಬರು ಹೆಂಡತಿಯರಾಗಿದ್ದ ಇಜ್ರೆಯೇಲಿನವಳಾದ ಅಹೀನೋವಮಳೂ, ಕರ್ಮೇಲ್ಯನಾದ ನಾಬಾಲನ ವಿಧವೆಯಾಗಿದ್ದ ಅಬೀಗೈಲಳು ಸೆರೆಯಾಗಿ ಹೋಗಿದ್ದರು.
6 ဒါဝိဒ်သည် အလွန်စိတ်ငြိုငြင်ဆင်းရဲ၏။ လူများတို့သည် မိမိတို့ သားသမီးများကြောင့် စိတ်ညှိုးငယ်သဖြင့်၊ ဒါဝိဒ်ကို ကျောက်ခဲနှင့် ပစ်ကြမည်ဟု ဆိုကြ၏။ ဒါဝိဒ်မူကား မိမိထာဝရဘုရားကို ကိုးစားလျက်နေ၍၊
ಜನರೆಲ್ಲರೂ ಪ್ರತಿಯೊಬ್ಬನು ತನ್ನ ಪುತ್ರಪುತ್ರಿಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು, ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ, ಅವನು ಬಹಳ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದನು. ಆದರೂ ದಾವೀದನು ಯೆಹೋವ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
7 သင်တိုင်းတော်ကို ငါ့ထံသို့ဆောင်ခဲ့ပါလော့ဟု အဟိမလက်၏သား အဗျာသာကို ဆိုလျှင်၊ အဗျာသာသည် သင်တိုင်းတော်ကို ဒါဝိဒ်ထံသို့ ဆောင်ခဲ့လေ၏။
ಆಗ ದಾವೀದನು ಅಹೀಮೆಲೆಕನ ಮಗ ಅಬಿಯಾತರನೆಂಬ ಯಾಜಕನಿಗೆ, “ನೀನು ದಯಮಾಡಿ ಏಫೋದನ್ನು ನನ್ನ ಬಳಿಗೆ ತೆಗೆದುಕೊಂಡು ಬಾ,” ಎಂದನು. ಹಾಗೆಯೇ ಅಬ್ಯತಾರನು ಏಫೋದನ್ನು ದಾವೀದನ ಬಳಿಗೆ ತಂದನು.
8 ဒါဝိဒ်ကလည်း၊ အကျွန်ုပ်သည် ထိုအလုံးအရင်းကို လိုက်ရပါမည်လော။ လိုက်လျှင် မှီနိုင်ပါမည်လောဟု ထာဝရဘုရားကို မေးလျှောက်သော်၊ လိုက်လော့။ ဆက်ဆက်မှီ၍ အလုံးစုံတို့ကို ရပြန်မည်ဟု မိန့်တော်မူသည်အတိုင်း၊
ದಾವೀದನು ಯೆಹೋವ ದೇವರಿಗೆ, “ನಾನು ಆ ದಂಡಿನ ಹಿಂದೆ ಬೆನ್ನಟ್ಟಲೋ? ಅವರು ನನಗೆ ವಶವಾಗುವರೋ?” ಎಂದು ಕೇಳಿದನು. ಅದಕ್ಕೆ ಯೆಹೋವ ದೇವರು, “ಬೆನ್ನಟ್ಟು, ಅವರು ನಿನ್ನ ವಶವಾಗುವರು; ನೀನು ನಿನ್ನವರನ್ನು ಬಿಡಿಸಿಕೊಂಡು ಬರುವೆ,” ಎಂದರು.
9 ဒါဝိဒ်နှင့် သူ၌ ပါသော လူခြောက်ရာတို့သည် သွား၍ ဗေသော်ချောင်းသို့ ရောက်သောအခါ၊ အချို့တို့သည် ထိုချောင်းနားမှာ နေရစ်ကြ၏။
ಆಗ ದಾವೀದನೂ, ಅವನ ಸಂಗಡ ಇದ್ದ ಆರುನೂರು ಜನರೂ ಹೋದರು. ಅವರು ಬೆಸೋರ್ ಎಂಬ ಹಳ್ಳದ ಬಳಿಗೆ ಬಂದಾಗ, ಹಿಂದುಳಿದವರು ಅಲ್ಲಿಯೇ ನಿಂತರು.
10 ၁၀ ဒါဝိဒ်နှင့် လူလေးရာတို့သည် လိုက်ကြ၏။
ದಾವೀದನು ತಾನೂ, ನಾನೂರು ಜನರೂ ಹಿಂದಟ್ಟಿ ಹೋದರು. ಬೆಸೋರಿನ ಹಳ್ಳವನ್ನು ದಾಟಲಾರದೆ ದಣಿದಿದ್ದರಿಂದ, ಇನ್ನೂರು ಜನರು ಅಲ್ಲಿ ನಿಂತರು.
11 ၁၁ လွင်ပြင်၌ အဲဂုတ္တု လူတယောက်ကို တွေ့၍ ဒါဝိဒ်ထံသို့ ဆောင်ခဲ့သဖြင့်၊ မုန့်ကိုပေး၍ ထိုသူသည် စား၏။ ရေကိုလည်းသောက်စေကြ၏။
ಅವನ ಜನರು ಒಬ್ಬ ಈಜಿಪ್ಟಿನವನು ಅಡವಿಯಲ್ಲಿ ಬಿದ್ದಿರುವುದನ್ನು ಕಂಡು, ಅವನನ್ನು ದಾವೀದನ ಬಳಿಗೆ ತಂದು, ಅವನಿಗೆ ರೊಟ್ಟಿ ಕೊಟ್ಟರು. ಅವನು ತಿಂದನು.
12 ၁၂ သင်္ဘောသဖန်းသီး ပျဉ်တဖဲ့၊ စပျစ်သီးနှစ်ပြွတ်ကိုလည်း ပေး၍ သူသည် စားသဖြင့် အားပြည့်ပြန်၏။ သုံးရက်ပတ်လုံး မစားမသောက်ဘဲ ငတ်မွတ်ခဲ့ပြီ။
ಅವನಿಗೆ ನೀರನ್ನು ಕುಡಿಸಿ, ಅಂಜೂರ ಹಣ್ಣಿನ ಉಂಡೆಯನ್ನೂ, ಒಣಗಿದ ಎರಡು ದ್ರಾಕ್ಷಿ ಗೊಂಚಲುಗಳನ್ನೂ ಅವನಿಗೆ ಕೊಟ್ಟರು. ಅವನು ಅವುಗಳನ್ನು ತಿಂದಾಗ ಚೇತರಿಸಿಕೊಂಡನು. ಅವನು ರಾತ್ರಿ ಹಗಲು ಮೂರು ದಿವಸದಿಂದ ರೊಟ್ಟಿ ತಿಂದಿರಲಿಲ್ಲ, ನೀರನ್ನೂ ಕುಡಿದಿರಲಿಲ್ಲ.
13 ၁၃ ဒါဝိဒ်ကလည်း၊ သင်သည် အဘယ်သူနှင့် ဆိုင်သနည်း။ အဘယ်အရပ်က လာသနည်းဟု မေးလျှင်၊ ကျွန်တော်သည် အာမလက်လူထံ၌ ကျွန်ခံရသော အဲဂုတ္တုလူကလေးဖြစ်ပါ၏။ သုံးရက်အထက်က အနာရောက်သောကြောင့် သခင်သည် ပစ်ထားပါ၏။
ದಾವೀದನು ಅವನನ್ನು, “ನೀನು ಯಾರ ಕಡೆಯವನು? ನೀನು ಎಲ್ಲಿಯವನು?” ಎಂದು ಕೇಳಿದನು. ಅವನು, “ನಾನು ಈಜಿಪ್ಟಿನವನು, ಒಬ್ಬ ಅಮಾಲೇಕ್ಯನ ಸೇವಕನು. ಮೂರು ದಿನಗಳಿಂದ ನಾನು ರೋಗದಲ್ಲಿ ಬಿದ್ದುದರಿಂದ ನನ್ನ ಯಜಮಾನನು ನನ್ನನ್ನು ಬಿಟ್ಟುಹೋದನು.
14 ၁၄ ခေရသိပြည်တောင်ပိုင်း၊ ယုဒပြည်နှင့် ကာလက်ပြည်တောင်ပိုင်းကို တိုက်၍ ဇိကလတ်မြို့ကို မီးရှို့ပါပြီဟုပြောဆို၏။
ನಾವು ಕೆರೇತ್ಯರ ದಕ್ಷಿಣ ಪ್ರಾಂತದ ಮೇಲೆಯೂ, ಯೆಹೂದದ ಮೇರೆಯ ಮೇಲೆಯೂ, ಕಾಲೇಬನ ದಕ್ಷಿಣ ಪ್ರಾಂತದ ಮೇಲೆಯೂ ದಾಳಿಮಾಡಿ, ಚಿಕ್ಲಗ್ ಊರನ್ನು ಬೆಂಕಿಯಿಂದ ಸುಟ್ಟುಬಿಟ್ಟೆವು,” ಎಂದನು.
15 ၁၅ ဒါဝိဒ်ကလည်း၊ ထိုအလုံးအရင်း ရှိရာသို့ လမ်းပြနိုင်သလောဟု မေးလျှင် သူက၊ ကိုယ်တော်သည် ကျွန်တော့်ကို မသတ်၊ သခင့်လက်သို့ မအပ်မည်အကြောင်း ဘုရားသခင်ကို တိုင်တည်၍ ကျိန်ဆိုပါတော့။သို့ဖြစ်လျှင် ထိုအလုံးအရင်းရှိရာသို့ လမ်းပြပါမည်ဟု ဆိုသည်အတိုင်း၊ ဒါဝိဒ်သည် ကျိန်ဆိုခြင်းကို ပြုလေ၏။
ದಾವೀದನು ಅವನಿಗೆ, “ನೀನು ನನ್ನನ್ನು ಆ ಗುಂಪಿನ ಬಳಿಗೆ ಕರೆದುಕೊಂಡು ಹೋಗುತ್ತೀಯಾ?” ಎಂದು ಕೇಳಿದನು. ಅದಕ್ಕವನು, “ನೀನು ನನ್ನನ್ನು ಕೊಂದುಹಾಕುವುದಿಲ್ಲ ಇಲ್ಲವೆ ನನ್ನನ್ನು ನನ್ನ ಯಜಮಾನನ ಕೈಯಲ್ಲಿ ಒಪ್ಪಿಸಿಕೊಡುವುದಿಲ್ಲ ಎಂದು ನನಗೆ ದೇವರ ಹೆಸರಿನಿಂದ ಪ್ರಮಾಣಮಾಡಿದರೆ, ನಿನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುತ್ತೇನೆ,” ಎಂದನು.
16 ၁၆ လူကလေးသည်လမ်းပြ၍ ဒါဝိဒ်ရောက်သောအခါ၊ ထိုလူများတို့သည် ဖိလိတ္တိပြည်နှင့် ယုဒပြည်ထဲက သိမ်းယူသော ဥစ္စာ ပစ္စည်းများအပေါင်းတို့ကြောင့် စားသောက်လျက်၊ ကခုန်လျက် မြေတပြင်လုံး၌ အနှံ့အပြားရှိကြ၏။
ಇವನು ದಾವೀದನನ್ನು ಕರೆದುಕೊಂಡು ಅಲ್ಲಿಗೆ ಹೋದಾಗ, ಅವರು ಭೂಮಿಯ ಮೇಲೆ ಎಲ್ಲೆಲ್ಲಿಯೂ ಫಿಲಿಷ್ಟಿಯರ ದೇಶದಲ್ಲಿಯೂ, ಯೆಹೂದ ದೇಶದಲ್ಲಿಯೂ ವ್ಯಾಪಿಸಿಕೊಂಡು, ಸಮಸ್ತ ಕೊಳ್ಳೆ ತೆಗೆದುಕೊಂಡು ಬಂದುದರಿಂದ, ತಿಂದು ಕುಡಿದು ನಾಟ್ಯವಾಡಿಕೊಂಡಿದ್ದರು.
17 ၁၇ ဒါဝိဒ်သည်လည်း ညဦးမှစ၍ နက်ဖြန်ညဦးတိုင်အောင် သူတို့ကို လုပ်ကြံသဖြင့်၊ ကုလားအုပ်ကို စီး၍ပြေးသော လုလင်လေးရာမှ တပါးလူတယောက်မှ မလွတ်။
ಆಗ ದಾವೀದನು ಅವರ ಮೇಲೆ ಬೆಳಗಿನಜಾವದಿಂದ ಮಾರನೆಯ ದಿವಸದ ಸಾಯಂಕಾಲದವರೆಗೂ ದಾಳಿಮಾಡುತ್ತಾ ಇದ್ದನು. ಆದರೆ ಅವರಲ್ಲಿ ಒಂಟೆಗಳ ಮೇಲೆ ಏರಿ ಓಡಿ ಹೋದ ನಾನೂರು ಮಂದಿ ಯುವಜನರ ಹೊರತು ಒಬ್ಬನಾದರೂ ತಪ್ಪಿಸಿಕೊಳ್ಳಲಿಲ್ಲ.
18 ၁၈ အာမလက်လူတို့သည် သိမ်းသွင်းသမျှတို့ကို ဒါဝိဒ်သည် ရပြန်၍၊ မိမိမယားနှစ်ယောက်ကိုလည်း ကယ်နှုတ်လေ၏။
ಅಮಾಲೇಕ್ಯರು ತೆಗೆದುಕೊಂಡು ಹೋದದ್ದನ್ನೆಲ್ಲವನ್ನೂ ತನ್ನ ಇಬ್ಬರು ಹೆಂಡತಿಯರನ್ನೂ ದಾವೀದನು ಬಿಡಿಸಿಕೊಂಡನು.
19 ၁၉ လူအကြီးအငယ်၊ သားသမီး၊ ဥစ္စာပစ္စည်း၊ လုယူသိမ်းသွားသမျှတို့တွင် တစုံတခုမျှမကျန်၊ အလုံးစုံတို့ကို ဒါဝိဒ်သည် ရပြန်လေ၏။
ಅವರು ತೆಗೆದುಕೊಂಡು ಹೋದ ಕಿರಿಯರಲ್ಲಾದರೂ, ಹಿರಿಯರಲ್ಲಾದರೂ, ಪುತ್ರರಲ್ಲಾದರೂ, ಪುತ್ರಿಯರಲ್ಲಾದರೂ, ಕೊಳ್ಳೆಯಾದ ಯಾವ ವಸ್ತುಗಳಲ್ಲಾದರೂ ಒಂದೂ ಕಡಿಮೆ ಇಲ್ಲದ ಹಾಗೆ, ದಾವೀದನು ಎಲ್ಲವನ್ನು ತಿರುಗಿ ತೆಗೆದುಕೊಂಡು ಬಂದನು.
20 ၂၀ ဒါဝိဒ်သည်လည်း ထိုသိုးနွားများရှေ့မှာ အရင်နှင်သော သိုးနွားအပေါင်းတို့ကိုလည်း ယူ၍၊ ဤဥစ္စာသည် ဒါဝိဒ်ပိုင်သော လက်ရဥစ္စာ ဖြစ်သည်ဟုဆို၏။
ಇದಲ್ಲದೆ ದಾವೀದನು ಶತ್ರುಗಳ ಸಮಸ್ತ ದನಕುರಿಗಳ ಮಂದೆಗಳನ್ನು ತೆಗೆದುಕೊಂಡನು. ಅವನ ಜನರು, “ಇವು ದಾವೀದನ ಕೊಳ್ಳೆ” ಎಂದು ಹೇಳಿ ಅವುಗಳನ್ನು ತಮ್ಮ ಪಶುಗಳ ಮುಂದಾಗಿ ಹೊಡೆದುಕೊಂಡು ಬಂದರು.
21 ၂၁ မော၍ ဒါဝိဒ်နောက်သို့ မလိုက်နိုင်၊ ဗေသော်ချောင်းနားမှာ နေရစ်သော လူနှစ်ရာရှိရာသို့ ဒါဝိဒ်ရောက်၍၊ သူတို့သည် ဒါဝိဒ်နှင့်သူ့၌ ပါသောလူတို့ကို ခရီးဦးကြိုပြုလိုသောငှါ ထွက်လာသဖြင့်၊ ဒါဝိဒ်သည် အနီးသို့ရောက်သောအခါ သူတို့ကို နှုတ်ဆက်လေ၏။
ಆದರೆ ದಣಿದಿದ್ದರಿಂದ ದಾವೀದನ ಹಿಂದೆ ಬರಲಾರದೆ ಬೆಸೋರಿನ ಹಳ್ಳದ ಬಳಿಯಲ್ಲಿ ಬಿಟ್ಟುಹೋಗಿದ್ದ ಇನ್ನೂರು ಜನರ ಬಳಿಗೆ ದಾವೀದನು ಬಂದಾಗ, ಅವರು ದಾವೀದನನ್ನೂ, ಅವನ ಸಂಗಡ ಇದ್ದ ಜನರನ್ನೂ ಎದುರುಗೊಳ್ಳಲು ಹೋದರು. ದಾವೀದನು ಆ ಜನರ ಬಳಿಗೆ ಸೇರಿ, ಅವರ ಕ್ಷೇಮಸಮಾಚಾರವನ್ನು ಕೇಳಿದನು.
22 ၂၂ ဒါဝိဒ်နှင့် လိုက်သွားသောသူတို့တွင် အဓမ္မလူဆိုးများတို့က၊ ဤသူတို့သည် ငါတို့နှင့်မလိုက်သောကြောင့်၊ ငါတို့ရသော ဥစ္စာတို့တွင် သူတို့သားမယားမှတပါး အခြားသော ဥစ္စာကို သူတို့အားမပေးရ။ ကိုယ်သားမယားကို ယူ၍ ထွက်သွားကြစေဟု ဆိုကြ၏။
ಆಗ ದಾವೀದನ ಸಂಗಡ ಬಂದ ಮನುಷ್ಯರಲ್ಲಿ ದುಷ್ಟರಾದ ಕೆಲವರು, “ನಮ್ಮ ಸಂಗಡ ಬಾರದೆ ಇದ್ದುದರಿಂದ, ನಾವು ತೆಗೆದುಕೊಂಡು ಬಂದ ಕೊಳ್ಳೆಯ ವಸ್ತುಗಳಲ್ಲಿ ಅವರಿಗೆ ಒಂದನ್ನೂ ಕೊಡುವುದಿಲ್ಲ. ಪ್ರತಿಯೊಬ್ಬನು ತನ್ನ ತನ್ನ ಹೆಂಡತಿ, ಮಕ್ಕಳನ್ನು ಮಾತ್ರವೇ ಕರೆದುಕೊಂಡು ಹೋಗಲಿ,” ಎಂದರು.
23 ၂၃ ဒါဝိဒ်ကလည်း၊ ငါ့ညီအစ်ကိုတို့ ငါတို့ကို စောင့်မ၍ ငါတို့ကို တိုက်လာသော အလုံးအရင်းကို ငါတို့လက်သို့ အပ်တော်မူသော ထာဝရဘုရားပေးသနားတော်မူသော ဥစ္စာကို ထိုသို့ မပြုရ။
ಅದಕ್ಕೆ ದಾವೀದನು, “ನನ್ನ ಸಹೋದರರೇ, ನಮ್ಮನ್ನು ಕಾಪಾಡಿ ನಮಗೆ ವಿರೋಧವಾಗಿ ಬಂದ ಈ ಗುಂಪನ್ನು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟ ಯೆಹೋವ ದೇವರು ನಮಗೆ ಕೊಟ್ಟದ್ದಕ್ಕೆ ನೀವು ಹಾಗೆ ಮಾಡಬೇಡಿರಿ. ಈ ಕಾರ್ಯಕ್ಕೋಸ್ಕರ ನಿಮ್ಮ ಮಾತನ್ನು ಯಾರು ಕೇಳುವರು?
24 ၂၄ ဤအမှု၌ သင်တို့စကားကို အဘယ်သူ နားထောင်လိမ့်မည်နည်း။ စစ်တိုက်သွားသော သူရသည်အတိုင်း၊ ဥစ္စာကို စောင့်လျက် နေရစ်သောသူရစေ။ နှစ်ပါးစလုံးတို့သည် အညီအမျှခံစေဟု စီရင်၏။
ಆದರೆ ಯುದ್ಧಕ್ಕೆ ಹೋದವನ ಪಾಲಿನ ಹಾಗೆಯೇ ಸಲಕರಣೆಗಳ ಬಳಿಯಲ್ಲಿ ಕಾದಿರುವವನಿಗೂ ಪಾಲು ಇರಲಿ. ಅವರವರ ಪಾಲು ಇರಲಿ,” ಎಂದನು.
25 ၂၅ ထိုနေ့မှစ၍ ယနေ့တိုင်အောင် ဣသရေလအမျိုး၌ ထိုသို့သော ထုံးစံဖြစ်စေခြင်းငှါ စီရင်ထုံးဖွဲ့သတည်း။
ಹಾಗೆಯೇ ದಾವೀದನು ಆ ದಿವಸ ಮೊದಲ್ಗೊಂಡು ಇಂದಿನವರೆಗೂ ಇರುವ ಹಾಗೆ ಇಸ್ರಾಯೇಲಿಗೆ ಅದನ್ನು ನಿಯಮವಾಗಿಯೂ, ಕಟ್ಟಳೆಯಾಗಿಯೂ ಮಾಡಿದನು.
26 ၂၆ ဒါဝိဒ်သည် ဇိကလတ်မြို့သို့ ရောက်သောအခါ၊ လက်ရဥစ္စာ အချို့ကို မိမိအဆွေခင်ပွန်း၊ ယုဒအမျိုး အသက်ကြီးသူတို့ထံသို့ ပေးလိုက်၍၊ ထာဝရဘုရား၏ ရန်သူလက်မှရခဲ့သော ဥစ္စာထဲက သင်တို့ အဘို့ လက်ဆောင်ကို ကြည့်လော့ဟုမှာလိုက်၏။
ದಾವೀದನು ಚಿಕ್ಲಗನ್ನು ತಲುಪಿದಾಗ ಕೊಳ್ಳೆಯಿಂದ ತಂದದ್ದರಲ್ಲಿ ಒಂದು ಭಾಗವನ್ನು ತನ್ನ ಸ್ನೇಹಿತರಾದ ಯೆಹೂದದ ಹಿರಿಯರಿಗೆ ಕಳುಹಿಸಿದನು. “ಯೆಹೋವ ದೇವರ ವೈರಿಗಳಿಂದ ಕೊಳ್ಳೆ ಹೊಡೆದದ್ದರಿಂದ ಈ ಬಹುಮಾನ ನಿಮಗಾಗಿದೆ,” ಎಂದು ಹೇಳಿದನು.
27 ၂၇ ဗေသလမြို့၊ တောင်ရာမုတ်မြို့၊
ಹೀಗೆ ದಾವೀದನು ಬೇತೇಲಿನವರು, ನೆಗೆಬನ ರಾಮೋತನವರು ಹಾಗೂ ಯತ್ತೀರಿನವರು,
28 ၂၈ အာရော်မြို့၊ ရှိဖမုတ်မြို့၊ ဧရှတမောမြို့၊
ಅರೋಯೇರಿನವರು, ಸಿಪ್ಮೋತಿನವರು, ಎಷ್ಟೆಮೋವದವರು,
29 ၂၉ ရာခလမြို့၊ ယေရမေလလူ နေရာမြို့များ၊ ကေနိလူ နေရာမြို့များ၊
ರಾಕಾಲಿನವರು, ಯೆರಹ್ಮೇಲ್ಯರು, ಕೇನ್ಯರು,
30 ၃၀ ဟောမာမြို့များ၊ ခေါရာရှန်မြို့၊ အာသက်မြို့၊
ಹೊರ್ಮಾದವರು, ಬೋರಾಷಾನಿನವರು, ಅತಾಕಿನವರು,
31 ၃၁ ဟေဗြုန်မြို့မှစ၍ ဒါဝိဒ်နှင့် သူ၏လူတို့သည် တည်းခိုတတ်သော မြို့ရွာအရပ်ရပ်သို့ ပေးလိုက်သတည်း။
ಹೆಬ್ರೋನಿನವರು ಮತ್ತು ದಾವೀದನೂ ಅವನ ಜನರೂ ಸಂಚರಿಸುತ್ತಿದ್ದ ಇತರ ಎಲ್ಲಾ ಸ್ಥಳದವರಿಗೂ ಬಹುಮಾನಗಳನ್ನು ಕಳುಹಿಸಿಕೊಟ್ಟನು.

< ၁ ဓမ္မရာဇဝင် 30 >