< ၃ ဓမ္မရာဇဝင် 21 >
1 ၁ ယေဇရေလမြို့ရှိအာဟပ်မင်း၏နန်းတော် အနီးတွင် နာဗုတ်ဆိုသူပိုင်သည့်စပျစ် ဥယျာဉ်ရှိသည်ဖြစ်၍၊-
೧ಅನಂತರ ಸಂಭವಿಸಿದ್ದೇನೆಂದರೆ, ಇಜ್ರೇಲಿನಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಹತ್ತಿರ ಇಜ್ರೇಲಿನವನಾದ ನಾಬೋತನೆಂಬ ಮನುಷ್ಯನ ದ್ರಾಕ್ಷಿತೋಟವಿತ್ತು.
2 ၂ အာဟပ်သည်နာဗုတ်အား``သင်၏ဥယျာဉ် ကိုငါအလိုရှိသည်။ ထိုဥယျာဉ်သည်ငါ့နန်း တော်အနီးတွင်ရှိသဖြင့် ထိုမြေကိုယာခင်း ပြုလုပ်လိုသည်။ သင့်အားထိုဥယျာဉ်ထက် ပို၍ကောင်းသည့်စပျစ်ဥယျာဉ်ကိုငါပေး မည်။ သို့မဟုတ်သင်အလိုရှိလျှင်သင့်လျော် သောအဖိုးငွေကိုငါပေးမည်'' ဟုဆို၏။
೨ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು, ಅದು ನನ್ನ ಅರಮನೆಯ ಹತ್ತಿರವಿರುವುದರಿಂದ ಅದನ್ನು ಕಾಯಿಪಲ್ಯದ ತೋಟವನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಬದಲಾಗಿ ನಿನಗೆ ಅದಕ್ಕಿಂತ ಉತ್ತಮವಾದ ತೋಟವನ್ನು ಕೊಡುತ್ತೇನೆ. ಅದು ಬೇಡವಾದರೆ ಕ್ರಯವನ್ನು ಕೊಡುತ್ತೇನೆ” ಎಂದು ಹೇಳಿದನು.
3 ၃ နာဗုတ်က``အကျွန်ုပ်သည်ဤဥယျာဉ်ကို ဘိုးဘေးများထံမှအမွေရရှိထားသဖြင့် အရှင့်အားဆက်သမှုကိုထာဝရဘုရား ဆီးတားတော်မူပါစေသော'' ဟုလျှောက်၏။-
೩ಅದಕ್ಕೆ ನಾಬೋತನು ಅಹಾಬನಿಗೆ, “ನಾನು ಪಿತ್ರಾರ್ಜಿತ ಸ್ವತ್ತನ್ನು ಮಾರದಂತೆ ಯೆಹೋವನು ನನ್ನನ್ನು ತಡೆಯಲಿ” ಎಂದು ಉತ್ತರಕೊಟ್ಟನು.
4 ၄ အာဟပ်သည်နာဗုတ်၏စကားကြောင့်စိတ် မချမ်းမသာဖြစ်၏။ အမျက်ထွက်၍နန်းတော် သို့ပြန်တော်မူ၏။ သူသည်နံရံဘက်သို့လှည့်၍ အိပ်ရာပေါ်တွင်လှဲလျောင်းကာပွဲတော်မတည် ဘဲနေ၏။-
೪“ನನ್ನ ಪಿತ್ರಾರ್ಜಿತ ಸ್ವತ್ತನ್ನು ನಿನಗೆ ಕೊಡುವುದಿಲ್ಲ” ಎಂದು ಇಜ್ರೇಲಿನವನಾದ ನಾಬೋತನು ಹೇಳಿದ್ದರಿಂದ ಅಹಾಬನು ಸಿಟ್ಟಿನಿಂದ ಗಂಟುಮುಖ ಮಾಡಿಕೊಂಡು ಮನೆಗೆ ಹೋಗಿ ಊಟಮಾಡಲೊಲ್ಲದೆ, ಮಂಚದ ಮೇಲೆ ಮಲಗಿ ಗೋಡೆಯ ಕಡೆಗೆ ಮುಖ ತಿರುಗಿಸಿಕೊಂಡನು.
5 ၅ သူ၏မိဖုရားယေဇဗေလသည်သူ့ထံသို့ လာ၍ ``အရှင်သည်အဘယ်ကြောင့်ဤမျှစိတ် မချမ်းမသာဖြစ်လျက်နေတော်မူပါသနည်း။ အဘယ်ကြောင့်ပွဲတော်မတည်ဘဲနေတော်မူ ပါသနည်း'' ဟုမေးလျှောက်လေသည်။
೫ಆಗ ಅವನ ಹೆಂಡತಿಯಾದ ಈಜೆಬೆಲಳು ಅವನ ಬಳಿಗೆ ಬಂದು ಅವನನ್ನು, “ನೀನು ಯಾಕೆ ಊಟಮಾಡುವುದಿಲ್ಲ? ನಿನಗೆ ಯಾವ ಚಿಂತೆ ಇರುತ್ತದೆ?” ಎಂದು ಕೇಳಿದಳು.
6 ၆ မင်းကြီးက``ငါသည်နာဗုတ်အားသူ၏ဥယျာဉ် ကိုရောင်းချရန် အကယ်၍သူအလိုရှိပါလျှင် အခြားဥယျာဉ်နှင့်လဲလှယ်ရန်ပြောဆိုသော် လည်း၊ နာဗုတ်က`ဤဥယျာဉ်ကိုအရှင့်အားမ ဆက်သနိုင်ပါ' ဟုဆိုချေသည်။ ထို့ကြောင့်ငါ သည်စိတ်မချမ်းမသာဖြစ်နေသည်'' ဟုမိန့် တော်မူ၏။
೬ಅವನು, “ನಾನು ಇಜ್ರೇಲಿನವನಾದ ನಾಬೋತನಿಗೆ ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಮಾರಿಬಿಡು, ಹಣ ಬೇಡವಾದರೆ ನಿನಗೆ ಬೇರೊಂದು ದ್ರಾಕ್ಷಿತೋಟವನ್ನು ಕೊಡುತ್ತೇನೆ’ ಎಂಬುದಾಗಿ ಹೇಳಿದೆನು. ಆದರೆ ಅವನು ಕೊಡುವುದಿಲ್ಲ ಎಂದನು” ಎಂದು ಉತ್ತರಕೊಟ್ಟನು.
7 ၇ ယေဇဗေလက``အရှင်သည်ဣသရေလဘုရင် ဖြစ်သည်မဟုတ်ပါလော။ အိပ်ယာမှထတော်မူ ၍ရွှင်လန်းစွာစားတော်ခေါ်တော်မူပါ။ နာဗုတ် ၏ဥယျာဉ်ကိုအရှင်၏လက်တော်သို့ကျွန်မ အပ်ပါမည်'' ဟုလျှောက်၏။
೭ಆಗ ಅವನ ಹೆಂಡತಿಯಾದ ಈಜೆಬೆಲಳು ಅವನಿಗೆ, “ಇಸ್ರಾಯೇಲರ ಅರಸನಾದ ನೀನು ಹೀಗೆ ಮಾಡುವುದು ಸರಿಯೇ? ಎದ್ದು ಊಟ ಮಾಡಿ ಸಂತೋಷದಿಂದಿರು. ನಾನು ನಿನಗೆ ಇಜ್ರೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.
8 ၈ ထိုနောက်ယေဇဗေလသည်စာများကိုရေး ပြီးလျှင် အာဟပ်အမည်ဖြင့်လက်မှတ်ရေးထိုး ကာ ဘုရင့်တံဆိပ်ခပ်နှိပ်၍ယေဇရေလမြို့ ရှိမြို့မိမြို့ဖများနှင့်မှူးမတ်များထံသို့ ပေးပို့လိုက်လေသည်။-
೮ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
9 ၉ ထိုအမိန့်တော်စာကား``သင်တို့သည်အစာရှောင် ရန်နေ့ရက်တစ်ရက်ကိုကြေညာကာ ပြည်သူတို့ အားစုဝေးစေ၍နာဗုတ်အားဂုဏ်ထူးဆောင် နေရာထိုင်ခင်းကိုပေးကြလော့။-
೯ಅದರಲ್ಲಿ, “ಎಲ್ಲರೂ ಉಪವಾಸಮಾಡಬೇಕೆಂದು ಪ್ರಕಟಿಸಿ, ನಾಬೋತನನ್ನು ನೆರೆದ ಸಭೆಯ ಮುಂದೆ ನಿಲ್ಲಿಸಿ,
10 ၁၀ ထိုနောက်သူ့ကိုမျက်နှာပြောင်တိုက်၍`ဤသူသည် ဘုရားသခင်နှင့်ဘုရင်မင်းမြတ်အားပုတ်ခတ် ပြောဆိုသူဖြစ်ပါသည်' ဟုမသမာသူလူနှစ် ယောက်ကိုပြစ်တင်စွပ်စွဲခိုင်းကြလော့။ ထို့နောက် သူ့အားမြို့ပြင်သို့ထုတ်၍ခဲနှင့်ပေါက်သတ်ကြ လော့'' ဟူသတည်း။
೧೦ಅವನು ದೇವರನ್ನೂ ಮತ್ತು ಅರಸನನ್ನೂ ಶಪಿಸಿದನು ಎಂಬುದಾಗಿ ಇಬ್ಬರ ಸಾಕ್ಷಿ ಹೇಳಿಸಿ, ಅವನನ್ನು ಹೊರಗೆ ಒಯ್ದು ಕಲ್ಲೆಸೆದು ಕೊಲ್ಲಿರಿ” ಎಂದು ಬರೆದಿದ್ದಳು.
11 ၁၁ မှူးမတ်များနှင့်ယေဇရေလမြို့ရှိ မြို့မိမြို့ဖ များသည်လည်းယေဇဗေလအမိန့်ပေးသည့် အတိုင်းပြုကြ၏။-
೧೧ಆಗ ಊರಿನ ಹಿರಿಯರು ಪ್ರಧಾನ ಪುರುಷರೂ ಈಜೆಬೆಲಳು ಕಳುಹಿಸಿದ ಪತ್ರದಲ್ಲಿ ಬರೆದಿದ್ದಂತೆಯೇ ಮಾಡಿದರು.
12 ၁၂ သူတို့သည်အစာရှောင်ရာနေ့တစ်နေ့ကိုကြေညာ ပြီးလျှင် ပြည်သူတို့အားစုဝေးစေလျက်နာဗုတ် အားဂုဏ်ထူးဆောင်နေရာထိုင်ခင်းကိုပေးကြ၏။-
೧೨ಅವರು ಉಪವಾಸವನ್ನು ಪ್ರಕಟಿಸಿ, ನೆರೆದ ಸಭೆಯ ಮುಂದೆ ನಾಬೋತನನ್ನು ನಿಲ್ಲಿಸಿದರು.
13 ၁၃ မသမာသူလူနှစ်ယောက်ကလည်းဘုရားသခင် နှင့် မင်းကြီးအားပုတ်ခတ်ပြောဆိုမှုနှင့်နာဗုတ် အားလူပုံအလယ်တွင်ပြစ်တင်စွပ်စွဲကြလေ သည်။ ထို့ကြောင့်လူတို့သည်သူ့ကိုမြို့ပြင်သို့ ထုတ်ပြီးလျှင်ခဲနှင့်ပေါက်သတ်ကြ၏။-
೧೩ತರುವಾಯ ಇಬ್ಬರು ದುಷ್ಟರು ಬಂದು ಅವನ ಮುಂದೆ ಕುಳಿತು ಇವನು ದೇವರನ್ನೂ ಅರಸನನ್ನೂ ಶಪಿಸಿದ್ದಾನೆ ಎಂಬುದಾಗಿ ಜನರ ಎದುರಿನಲ್ಲಿ ಅವನಿಗೆ ವಿರುದ್ಧವಾಗಿ ಸಾಕ್ಷಿ ಹೇಳಿದರು. ಜನರು ಅವನನ್ನು ಊರಿನ ಹೊರಗೆ ಒಯ್ದು ಕಲ್ಲೆಸೆದು ಕೊಂದರು.
14 ၁၄ နာဗုတ်အားသေဒဏ်ခတ်ပြီးကြောင်းကိုလည်း ယေဇဗေလထံသတင်းပေးပို့ကြလေသည်။
೧೪ನಾಬೋತನು ಕಲ್ಲೆಸೆಯಲ್ಪಟ್ಟು ಸತ್ತ ವರ್ತಮಾನವನ್ನು ಹಿರಿಯರು ಈಜೆಬೆಲಳಿಗೆ ತಿಳಿಸಿದರು.
15 ၁၅ ထိုသတင်းကိုရလျှင်ရခြင်းယေဇဗေလသည် အာဟပ်အား``နာဗုတ်သေပြီဖြစ်၍ယခုအရှင် သွား၍သူမရောင်းလိုသောစပျစ်ဥယျာဉ်ကို သိမ်းယူတော်မူပါလော့'' ဟုလျှောက်၏။-
೧೫ಆಕೆಯು ಇದನ್ನು ಕೇಳಿ ಅಹಾಬನಿಗೆ, “ನೀನು ಹೋಗಿ ನಾಬೋತನು ಮಾರುವುದಿಲ್ಲವೆಂದು ಹೇಳಿದ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೋ, ಅವನು ಜೀವದಿಂದಿಲ್ಲ ಸತ್ತನು” ಎಂದು ಹೇಳಿದಳು.
16 ၁၆ အာဟပ်သည်လည်းထိုဥယျာဉ်ကိုသိမ်းယူ ရန်ချက်ချင်းထ၍သွားတော်မူ၏။
೧೬ಇಜ್ರೇಲಿನವನಾದ ನಾಬೋತನ ಮರಣವಾರ್ತೆಯನ್ನು ಅಹಾಬನು ಕೇಳಿ ದ್ರಾಕ್ಷಿ ತೋಟವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೋಸ್ಕರ ಇಳಿದು ಹೋದನು.
17 ၁၇ ထိုအခါထာဝရဘုရားသည်တိရှဘိမြို့သား ပရောဖက်ဧလိယအား၊-
೧೭ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನ ವಾಕ್ಯವುಂಟಾಯಿತು.
18 ၁၈ ``သင်သည်ရှမာရိမြို့ရှိအာဟပ်မင်းထံသို့သွား လော့။ သူသည်နာဗုတ်၏ဥယျာဉ်ကိုသိမ်းယူရန် ထိုဥယျာဉ်ထဲ၌ရှိနေသည်ကိုတွေ့လိမ့်မည်။-
೧೮ಆತನು ಅವನಿಗೆ, “ನೀನು ಹೋಗಿ ಸಮಾರ್ಯದಲ್ಲಿ ವಾಸಿಸುವ ಇಸ್ರಾಯೇಲ್ ರಾಜನನ್ನು ಕಾಣು. ಅವನು ಈಗ ನಾಬೋತನ ದ್ರಾಕ್ಷಿ ತೋಟವನ್ನು ಸ್ವಾಧೀನ ಮಾಡಿಕೊಳ್ಳುವುದಕ್ಕೋಸ್ಕರ ಅಲ್ಲಿಗೆ ಹೋಗಿದ್ದಾನೆ.
19 ၁၉ ငါထာဝရဘုရားက`သင်သည်လူကိုသတ်ပြီး နောက် ထိုသူ၏ဥစ္စာကိုသိမ်းယူပါမည်လော' ဟု မိန့်တော်မူကြောင်းသူ့အားပြောကြားလော့။ `ခွေး တို့သည်နာဗုတ်၏သွေးကိုလျက်ကြသည့်အရပ် ၌ပင်လျှင် သင်၏သွေးကိုလျက်ကြလိမ့်မည်' ဟု ငါမိန့်တော်မူကြောင်းကိုလည်းသူ့အားပြော ကြားလော့'' ဟုမိန့်မှာတော်မူ၏။
೧೯ಅವನಿಗೆ ನೀನು ಕೊಲೆ ಮಾಡಿ ಸ್ವತ್ತನ್ನು ಸಂಪಾದಿಸಿಕೊಂಡಿಯಲ್ಲವೋ? ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುವವು ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನಿಗೆ ಹೇಳು” ಎಂಬುದೇ.
20 ၂၀ အာဟပ်သည်ဧလိယကိုမြင်သောအခါ``ငါ ၏ရန်သူ၊ သင်သည်ငါ့ကိုတွေ့ပြီလော'' ဟု မေး၏။ ဧလိယကလည်း``တွေ့ပြီ။ သင်သည်ထာဝရ ဘုရား၏မျက်နှာတော်တွင်ဒုစရိုက်ကို သာပြုလို၏။-
೨೦ಅಹಾಬನು ಎಲೀಯನನ್ನು ಕಂಡು ಅವನನ್ನು, “ನನ್ನ ವೈರಿಯೇ, ನೀನು ನನ್ನನ್ನು ಕಂಡುಹಿಡಿದೆಯಾ” ಎಂದು ಕೇಳಲು ಅವನು, “ಹೌದು ಕಂಡುಹಿಡಿದ್ದೆನು. ನೀನು ನಿನ್ನನ್ನು ಪಾಪಕ್ಕೆ ಮಾರಿಕೊಂಡು ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದಿಯಲ್ಲಾ.
21 ၂၁ ထို့ကြောင့်ထာဝရဘုရားက`ငါသည်သင့် အားဘေးဒဏ်သင့်စေမည်။ သင့်ကိုသုတ်သင် ပယ်ရှင်း၍သင်၏အိမ်ထောင်စုသားယောကျာ်း ဟူသမျှကိုလည်းဖယ်ရှားပစ်မည်။-
೨೧ಯೆಹೋವನು ನಿನ್ನನ್ನು ಕುರಿತು, ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ ನಿನ್ನನ್ನು ಕಸವನ್ನೋ ಎಂಬಂತೆ ತೆಗೆದುಹಾಕುವೆನು. ನಿನ್ನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ದಾಸರಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ಕಡಿದುಬಿಡುವೆನು.
22 ၂၂ သင်သည်ဣသရေလပြည်သူတို့အားအပြစ် ကူးရန်ရှေ့ဆောင်လမ်းပြသည်ဖြစ်၍ သင်၏ အိမ်ထောင်စုသည်နေဗက်၏သားယေရောဗောင် မင်း၏အိမ်ထောင်စုကဲ့သို့လည်းကောင်း၊ အဟိယ ၏သားဗာရှာမင်း၏အိမ်ထောင်စုကဲ့သို့လည်း ကောင်းဖြစ်လိမ့်မည်။'-
೨೨ನೀನು ಇಸ್ರಾಯೇಲ್ಯರನ್ನು ಪಾಪಕ್ಕೆ ಪ್ರೇರೇಪಿಸಿ ನನಗೆ ಕೋಪವನ್ನೆಬಿಸಿದ್ದರಿಂದ ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿ ನಿನ್ನ ಮನೆಗೂ ಆಗುವುದು’ ಅನ್ನುತ್ತಾನೆ
23 ၂၃ ယေဇဗေလနှင့်ပတ်သက်၍ထာဝရဘုရား က`ယေဇရေလမြို့တွင်ထိုအမျိုးသမီး၏ အလောင်းသည်ခွေးစာဖြစ်လိမ့်မည်။ သူ၏ ဆွေမျိုးမှန်သမျှတို့သည်လည်းမြို့တွင်း ၌သေလျှင်ခွေးစာ၊-
೨೩ಇದಲ್ಲದೆ ಆತನು ಈಜೆಬೆಲಳನ್ನು ಕುರಿತು, ‘ನಾಯಿಗಳು ಇಜ್ರೇಲ್ ಪಟ್ಟಣದ ಗೋಡೆಯ ಬಳಿಯಲ್ಲಿ ಆಕೆಯ ಶವವನ್ನು ತಿನ್ನುವವು.
24 ၂၄ မြို့ပြင်၌သေလျှင်လင်းတစာဖြစ်ကြလိမ့် မည်' ဟုမိန့်တော်မူ၏'' ဟုဆင့်ဆို၏။
೨೪ಅಹಾಬನ ಮನೆಯವರಲ್ಲಿ ಊರೊಳಗೆ ಸಾಯುವಂಥವರನ್ನು ನಾಯಿಗಳೂ, ಅಡವಿಯಲ್ಲಿ ಸಾಯುವಂಥವರನ್ನು ಪಕ್ಷಿಗಳೂ ತಿಂದು ಬಿಡುವವು’ ಎಂದು ಹೇಳುತ್ತಾನೆ” ಅಂದನು.
25 ၂၅ (ထာဝရဘုရား၏ရှေ့တော်မှောက်တွင် အာဟပ်ကဲ့ သို့ဒုစရိုက်ကိုလွန်ကဲစွာပြုသူတစ်ယောက်မျှ မရှိ။ သူပြုသောအမှုအရာမှန်သမျှမှာမိ ဖုရားယေဇဗေလ၏တိုက်တွန်းချက်အရ ဖြစ်သည်။-
೨೫ಹೆಂಡತಿಯಾದ ಈಜೆಬೆಲಳಿಂದ ಪ್ರೇರೇಪಿತನಾಗಿ ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನು ಮಾಡುವುದಕ್ಕೆ ತನ್ನನ್ನೇ ಮಾರಿಬಿಟ್ಟ ಅಹಾಬನಂಥ ದುಷ್ಟನು ಇನ್ನೊಬ್ಬನಿರಲಿಲ್ಲ.
26 ၂၆ သူသည်အာမောရိပြည်သားတို့ပြုသည့်အတိုင်း ရုပ်တုများကိုဝတ်ပြုကိုးကွယ်ခြင်းအားဖြင့် အလွန်ရှက်ကြောက်ဖွယ်ကောင်းသည့်အပြစ်များ ကိုပြုလေသည်။ အာမောရိပြည်သူတို့ကား ခါနာန်ပြည်သို့ဣသရေလအမျိုးသားတို့ ဝင်ရောက်လာချိန်၌ ထာဝရဘုရားနှင်ထုတ် တော်မူသောသူများဖြစ်သတည်း။)
೨೬ಯೆಹೋವನು ಇಸ್ರಾಯೇಲರ ಎದುರಿನಿಂದ ಓಡಿಸಿಬಿಟ್ಟ ಅಮೋರಿಯರಂತೆ ವಿಗ್ರಹಗಳನ್ನು ಪೂಜಿಸಿದ ಅಹಾಬನ ನಡತೆಯು ಕೇವಲ ಅಸಹ್ಯವಾಗಿತ್ತು.
27 ၂၇ ဧလိယဆင့်ဆိုပြောကြားသောအခါ အာဟပ် သည်မိမိ၏အဝတ်များကိုဆုတ်ဖြဲပြီးလျှင် လျှော်တေကိုဝတ်၏။ သူသည်စားတော်မခေါ် ဘဲလျှော်တေဝတ်၍အိပ်၏။ သွားလာရာ၌ လည်းမှိုင်တွေလျက်နေ၏။
೨೭ಅಹಾಬನು ಎಲೀಯನ ಮಾತುಗಳನ್ನು ಕೇಳಿ ತನ್ನ ಬಟ್ಟೆಗಳನ್ನು ಹರಿದುಕೊಂಡು, ಹಗಲಿರುಳು ಮೈಮೇಲೆ ಗೋಣಿತಟ್ಟನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನಮನಸ್ಸಿನಿಂದ ಪ್ರವರ್ತಿಸಿದನು.
28 ၂၈ ထာဝရဘုရားသည်ပရောဖက်ဧလိယအား၊-
೨೮ಆದುದರಿಂದ ಯೆಹೋವನು ತಿಷ್ಬೀಯನಾದ ಎಲೀಯನಿಗೆ, “ಅಹಾಬನು ನನ್ನ ಮುಂದೆ ತಗ್ಗಿಸಿಕೊಂಡಿದ್ದನ್ನು ಕಂಡಿಯಾ?
29 ၂၉ ``ငါ၏ရှေ့မှောက်တွင်အဘယ်မျှအာဟပ်နှိမ့်ချ လျက်နေသည်ကိုသင်မြင်သလော။ ဤသို့နှိမ့်ချ သည့်အတွက်ငါသည်သူ၏လက်ထက်၌ဘေးဒဏ် သင့်စေမည်မဟုတ်။ သူ၏သားလက်ထက်သူ၏ အိမ်ထောင်စုအပေါ်တွင်သင့်စေမည်'' ဟုမိန့် တော်မူ၏။
೨೯ಅವನು ನನ್ನ ಮುಂದೆ ತಗ್ಗಿಸಿಕೊಂಡಿದ್ದರಿಂದ ನಾನು ಮುಂತಿಳಿಸಿದ ಕೇಡನ್ನು ಅವನ ಜೀವಮಾನದಲ್ಲಿ ಬರಗೊಡದೆ ಅವನ ಮಗನ ಕಾಲದಲ್ಲಿ ಅವನ ಮನೆಯವರ ಮೇಲೆ ಅದನ್ನು ಬರಮಾಡುವೆನು” ಎಂದು ಹೇಳಿದನು.