< प्रक. 11 >
1 १ मग मला मोजमाप करण्यासाठी काठीसारखा बोरू देण्यात आला आणि मला सांगण्यात आले, “ऊठ आणि देवाचे भवन, वेदी आणि त्यामध्ये जे उपासना करतात त्यांचे मोजमाप घे.
೧ತರುವಾಯ ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು.
2 २ पण भवना बाहेरचे अंगण सोड, त्याचे मोजमाप घेऊ नकोस; कारण ते परराष्ट्रीयांना दिलेले आहे. बेचाळीस महिने ते पवित्र नगर पायाखाली तुडवतील.
೨ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು.
3 ३ आणि मी माझ्या दोन साक्षीदारांना अधिकार देईन. ते तरटाची वस्त्रे घालून, एक हजार दोनशे साठ दिवस देवाचा संदेश देतील.”
೩ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.”
4 ४ हे साक्षीदार म्हणजे पृथ्वीच्या प्रभूसमोर उभे असणारी जैतुनाची दोन झाडे व दोन समया ही ते आहेत.
೪ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ.
5 ५ जर एखादी व्यक्ती त्या साक्षीदारांना अपाय करू इच्छीत असल्यास त्यांच्या तोंडातून अग्नी निघून त्यांच्या शत्रूंना खाऊन टाकतो. जो कोणी त्यांना इजा करण्याची इच्छा धरील त्यास ह्याप्रकारे अवश्य मारावे.
೫ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು.
6 ६ या साक्षीदारांना ते संदेश सांगण्याच्या दिवसांमध्ये पाऊस पडू नये म्हणून त्यांना आकाश बंद करण्याचा अधिकार दिला आहे. त्यांना पाण्याचे रक्त करण्याचा अधिकार दिला आहे आणि त्यांची इच्छा असेल तितकेदा पृथ्वीला प्रत्येक प्रकारच्या पीडांनी पिडण्याचा अधिकार दिलेला आहे.
೬ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು.
7 ७ त्यांची साक्ष पुरी झाल्यावर अगाधकूपातून जो पशू वर येईल तो त्यांच्याबरोबर लढाई करील, त्यांच्यावर विजय मिळवील आणि त्यांना ठार मारील. (Abyssos )
೭ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. (Abyssos )
8 ८ तेथे मोठ्या नगराच्या म्हणजे आत्मिक अर्थाने सदोम आणि मिसर म्हणले आहे व जेथे त्यांच्या प्रभूलाही वधस्तंभावर खिळले होते त्याच्या रस्त्यावर त्यांची प्रेते पडून राहतील.
೮ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ ಸೊದೋಮ್ ಎಂದು, ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು.
9 ९ आणि प्रत्येक समाजातले, वंशांतले, भाषेचे व राष्ट्रांतले लोक साडेतीन दिवस त्यांची प्रेते पाहतील आणि ते त्यांची प्रेते थडग्यांत ठेवू देणार नाहीत.
೯ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ.
10 १० त्यांच्यावरून पृथ्वीवर राहणारे आनंद व उत्सव करतील व एकमेकांना भेटी पाठवतील कारण त्या दोन संदेष्ट्यांनी पृथ्वीवर राहणाऱ्यांस अतोनात पीडले होते.
೧೦ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು.
11 ११ आणि साडेतीन दिवसानंतर देवाकडील जीवनाच्या आत्म्याने त्यांच्यामध्ये प्रवेश केला आणि ते त्यांच्या पायांवर उभे राहिले; आणि त्यांना पाहणाऱ्यांना मोठे भय वाटले.
೧೧ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು.
12 १२ आणि त्यांनी स्वर्गातून एक मोठा आवाज ऐकला, तो त्यांना म्हणाला, “इकडे वर या” मग ते एका ढगातून स्वर्गात वर जात असताना त्यांच्या वैऱ्यांनी त्यांना पाहिले.
೧೨ಅನಂತರ ಅವರಿಗೆ, “ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು.
13 १३ आणि त्याच घटकेस मोठा भूकंप झाला; तेव्हा नगराचा दहावा भाग पडला आणि भूकंपात सात हजार लोक ठार झाले. तेव्हा वाचलेले भयभीत झाले व त्यांनी स्वर्गाच्या देवाला गौरव दिले.
೧೩ಅದೇ ಗಳಿಗೆಯಲ್ಲಿ ಮಹಾ ಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರನ್ನು ಘನಪಡಿಸಿದರು.
14 १४ दुसरी आपत्ती येऊन गेली; बघा, तिसरी आपत्ती लवकरच येत आहे.
೧೪ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ.
15 १५ मग सातव्या देवदूताने कर्णा वाजवला तेव्हा स्वर्गात मोठ्याने आवाज झाला, त्यांचे शब्द असे होतेः जगाचे राज्य हे आमच्या प्रभूचे आणि त्याच्या ख्रिस्ताचे झाले आहे; तो युगानुयुग राज्य करील. (aiōn )
೧೫ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನ ಕ್ರಿಸ್ತನಿಗೂ ಬಂದಿದೆ, ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು. (aiōn )
16 १६ तेव्हा देवासमोर आपल्या आसनांवर बसलेले चोवीस वडील उपडे पडून देवाला नमन करून म्हणाले
೧೬ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ ಅಡ್ಡಬಿದ್ದು,
17 १७ हे प्रभू देवा, हे सर्वसमर्था, जो तू आहेस आणि होतास, त्या तुझे आम्ही उपकार मानतो, कारण तुझे महान सामर्थ्य तू आपल्याकडे घेतले आहेस आणि राज्य चालविण्यास सुरूवात केलीस.
೧೭“ಕರ್ತನೇ, ಸರ್ವಶಕ್ತನಾದ ದೇವರೇ, ಇರುವಾತನೇ ಇದ್ದಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ.
18 १८ राष्ट्रे रागावली आहेत परंतु तुझा क्रोधाग्नी आला आहे आणि मरण पावलेल्यांचा न्याय करण्याची वेळ आली आहे आणि तू आपल्या दासांना, तुझ्या संदेष्ट्यांना, पवित्रजनांना आणि जे तुझ्या नावाचे भय धरतात अशा लहानथोरांना वेतन देण्याची वेळ आली आहे. आणि ज्यांनी पृथ्वीचा नाश केला त्यांचा नाश करण्याची वेळ आली आहे.
೧೮ಜನಾಂಗಗಳು ಕೋಪಿಸಿಕೊಂಡವು. ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ. ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ, ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ” ಎಂದು ಆತನನ್ನು ಆರಾಧಿಸಿದರು.
19 १९ तेव्हा देवाचे स्वर्गातील भवन उघडले व त्याच्या भवनात त्याच्या कराराचा कोश दिसला; आणि विजांचे लखलखाट, गर्जना आणि गडगडाट होऊन भूकंप झाला व गारांचे मोठे वादळ झाले.
೧೯ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.