< स्तोत्रसंहिता 53 >
1 १ दाविदाचे स्तोत्र मूर्ख आपल्या मनात म्हणतो, तेथे देव नाही. ते भ्रष्टाचारी आहेत आणि त्यांनी तिरस्करणीय अन्यायाचे कृत्य केले आहे; त्यातल्या कोणीही चांगले कृत्य केले नाही.
೧ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಪದ್ಯ. ದುರ್ಮತಿಗಳು, “ದೇವರಿಲ್ಲ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ; ಅವರು ಕೆಟ್ಟವರು; ಅಸಹ್ಯವಾದ ಅಕ್ರಮಗಳನ್ನು ನಡೆಸುತ್ತಾರೆ; ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.
2 २ देव स्वर्गातून मानवजातीच्या मुलांकडे पाहतो की, जर तेथे कोणी समजदार आहे, आणि जो देवाचा शोध घेतो.
೨ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ ಎಂದು ದೇವರು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,
3 ३ त्यातील प्रत्येकजण माघारी गेला आहे; सर्व भ्रष्ट झाले आहेत; त्यातल्या एकानेही चांगले कृत्य केले नाही, एकानेही नाही.
೩ಒಳ್ಳೆಯದನ್ನು ನಡೆಸುವವರು ಒಬ್ಬರೂ ಇಲ್ಲ; ಅವರೆಲ್ಲರೂ ದ್ರೋಹಿಗಳಾಗಿ ಕೆಟ್ಟುಹೋದವರೇ.
4 ४ ज्यांनी अन्याय केला, त्यांना काहीही माहित नव्हते काय? ज्यांनी माझ्या लोकांस भाकरीप्रमाणे खाल्ले, पण ते देवाला हाक मारत नाही.
೪ದುಷ್ಟತ್ವವನ್ನು ನಡೆಸುವವರು ಯಾರೆಂದು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಕೊಳ್ಳೆಹೊಡೆದು ಜೀವಿಸುತ್ತಾರೆ; ದೇವರನ್ನು ಪ್ರಾರ್ಥಿಸುವುದಿಲ್ಲ.
5 ५ तेथे भिण्याचे काही कारण नव्हते, तरी ते मोठ्या भयात होते; कारण तुझ्याविरूद्ध तळ देणाऱ्यांची देवाने हाडे विखुरली आहेत; असे लोक लज्जित झाले आहेत कारण देवाने त्यांना नाकारले आहे.
೫ಭಯಪಡುವುದಕ್ಕೆ ಕಾರಣವಿಲ್ಲದಿದ್ದರೂ, ಅವರು ಪಕ್ಕನೆ ಭಯಭ್ರಾಂತರಾದರು; ದುಷ್ಟರನ್ನು ದೇವರು ಸಂಹರಿಸಿ ಅವರ ಎಲುಬುಗಳನ್ನು ಚದರಿಸಿಬಿಟ್ಟನಲ್ಲಾ. ದೇವರು ಅವರನ್ನು ಕೈಬಿಟ್ಟದ್ದರಿಂದ ಅವರು ಅವಮಾನಕ್ಕೊಳಗಾಗುವರು.
6 ६ अहो, सियोनातून इस्राएलाचे तारण येवो! जेव्हा देव आपल्या लोकांस बंदिवासातून परत आणील, तेव्हा याकोब आनंद करेल आणि इस्राएल हर्षित होईल!
೬ಚೀಯೋನಿನಿಂದ ಇಸ್ರಾಯೇಲ್ಯರಿಗೆ ರಕ್ಷಣೆಯು ಬೇಗನೆ ಬರಲಿ. ದೇವರು ತನ್ನ ಭಾಗ್ಯವನ್ನು ಜನರಿಗೆ ಹಿಂದಿರುಗಿಸುವಾಗ, ಆತನ ಪ್ರಜೆಗಳಾಗಿರುವ ಯಾಕೋಬ ವಂಶದವರು ಉಲ್ಲಾಸಗೊಳ್ಳುವರು; ಇಸ್ರಾಯೇಲರು ಹರ್ಷಿಸುವರು.