< योना 4 >
1 १ परंतु यामुळे योनाला फार वाईट वाटले व त्यास राग आला.
೧ಇದರಿಂದ ಯೋನನಿಗೆ ಬಹು ಬೇಸರವಾಯಿತು; ಅವನು ಬಹಳ ಸಿಟ್ಟುಗೊಂಡನು.
2 २ तो परमेश्वराजवळ विनवणी करू लागला, “हे परमेश्वरा, मी माझ्या देशात होतो तेव्हा माझे सांगणे हेच होते की नाही? म्हणूनच मी तार्शीशास पळून जाण्याची घाई केली, कारण मला माहित होते की तू कृपाळू, कनवाळू, मंदक्रोध, दया संपन्न आहेस. संकट आणल्याबद्दल अनुताप करणारा असा देव आहेस.
೨ಆಗ ಅವನು ಯೆಹೋವನಿಗೆ ಮೊರೆಯಿಟ್ಟನು, “ಯೆಹೋವನೇ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವುದೆಂದು ಹೇಳಿದೆನಷ್ಟೆ; ನೀನು ದಯೆಯೂ, ಕನಿಕರವೂ, ದೀರ್ಘಶಾಂತಿಯೂ, ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ, ತಾರ್ಷೀಷಿಗೆ ಓಡಿಹೋಗಲು ಪ್ರಯತ್ನಿಸಿದ್ದು.
3 ३ माझी विनंती ऐक; हे परमेश्वरा, माझा जीव घे, कारण जिवंत राहण्यापेक्षा मला मरण चांगले वाटते.”
೩ಆದುದರಿಂದ ಯೆಹೋವನೇ, ನನ್ನ ಪ್ರಾಣವನ್ನು ತೆಗೆದುಕೋ; ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ವಿಜ್ಞಾಪಿಸಿಕೊಂಡನು.
4 ४ मग परमेश्वर म्हणाला, “तुला राग येणे चांगले आहे काय?”
೪ಅದಕ್ಕೆ ಯೆಹೋವನು, “ನೀನು ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಿದನು.
5 ५ मग योना बाहेर निघून निनवे शहराच्या पूर्व दिशेला बसला; तेथे तो एक मंडप करून सावलीत, शहराचे काय होईल हे पाहत बसला.
೫ಅನಂತರ ಯೋನನು ಪಟ್ಟಣವನ್ನು ಬಿಟ್ಟು ಅದರ ಮೂಡಣದಲ್ಲಿ ಒಂದು ಗುಡಿಸಲನ್ನು ಮಾಡಿಕೊಂಡು ಪಟ್ಟಣವು ಏನಾಗುವುದೋ ಎಂದು ನೋಡುತ್ತಾ ಅದರ ನೆರಳಿನಲ್ಲಿ ಕುಳಿತುಕೊಂಡಿದ್ದನು.
6 ६ मग परमेश्वर देवाने योनाच्या डोक्यावर सावलीसाठी एक वेली उगविली, म्हणजे त्याने दुःखातून मुक्त व्हावे असे केले. त्या वेलीमुळे योनाला खूप आनंद झाला.
೬ಆಗ ದೇವರಾದ ಯೆಹೋವನು ಒಂದು ಸೋರೆಗಿಡವನ್ನು ಬೆಳೆಯುವಂತೆ ಮಾಡಿ ಅದು ಯೋನನ ತಲೆಗೆ ನೆರಳಾಗಿ ಅವನ ಮನೋವ್ಯಥೆಗೆ ಸಮಾಧಾನ ಬರುವಂತೆ ಮಾಡಿದನು. ಇದರಿಂದ ಯೋನನಿಗೆ ಬಹು ಸಂತೋಷವಾಯಿತು.
7 ७ मग दुसऱ्या दिवशी देवाने एक किडा तयार केला, तो त्या वेलीला लागल्यामुळे ती वेल सुकून गेली.
೭ಮಾರನೆಯ ದಿನ ಮುಂಜಾನೆ ದೇವರು ಒಂದು ಹುಳಕ್ಕೆ ಆ ಸೋರೆಗಿಡವನ್ನು ಕೊರೆಯಲು ಅಪ್ಪಣೆ ಮಾಡಿದನು. ಆ ಗಿಡವು ಒಣಗಿಹೋಯಿತು.
8 ८ मग देवाने, सूर्य उगवल्यावर पूर्वेकडून झळईचा वारा सोडला; आणि ऊन योनाच्या डोक्याला लागले त्याने तो मूर्छित झाला व त्यास मरण येवो अशी तो विनवणी करत म्हणाला, “मला जिवंत राहण्यापेक्षा मरण चांगले वाटते.”
೮ಸೂರ್ಯನು ಉದಯಿಸಿದಾಗ ದೇವರು ಬಿಸಿಯಾದ ಮೂಡಣ ಗಾಳಿಯನ್ನು ಏರ್ಪಡಿಸಿದನು; ಬಿಸಿಲು ಯೋನನ ತಲೆಗೆ ಹೊಡೆಯಲು ಅವನು ಮೂರ್ಛೆಹೋಗುವವನಾಗಿ “ನಾನು ಬದುಕುವುದಕ್ಕಿಂತ ಸಾಯುವುದೇ ಲೇಸು” ಎಂದು ಸಾಯಲು ಬಯಸಿದನು.
9 ९ मग देव योनाला म्हणाला, “त्या वेलीमुळे तुला राग येणे हे चांगले आहे काय?” तो म्हणाला, “रागामुळे माझा जीव गेला तरी चालेल.”
೯ಆಗ ದೇವರು ಯೋನನಿಗೆ, “ನೀನು ಸೋರೆಗಿಡ ಒಣಗಿದ್ದಕ್ಕಾಗಿ ಸಿಟ್ಟುಗೊಳ್ಳುವುದು ಸರಿಯೋ?” ಎಂದು ಕೇಳಲು ಯೋನನು “ಹೌದು, ನಾನು ಸಾಯುವಷ್ಟು ಕಾಲ ಸಿಟ್ಟುಗೊಳ್ಳುವುದು ಸರಿಯೇ” ಎಂದು ಉತ್ತರಕೊಟ್ಟನು.
10 १० परमेश्वर त्यास म्हणाला, “या वेलीसाठी तू काहीच कष्ट केले नाहीस व तू हिला मोठे केले नाही, ती एका रात्रीत मोठी झाली आणि एका रात्रीत नष्ट झाली, त्या वेलीची तुला एवढी काळजी आहे;
೧೦ಅದಕ್ಕೆ ಯೆಹೋವನು “ನೀನು ಆ ಸೋರೆಗಿಡಕ್ಕಾಗಿ ಕಷ್ಟಪಡಲಿಲ್ಲ, ಬೆಳೆಯಿಸಲಿಲ್ಲ; ಅದು ಒಂದು ರಾತ್ರಿಯಲ್ಲಿ ಹುಟ್ಟಿ ಒಂದು ರಾತ್ರಿಯಲ್ಲಿ ನಾಶವಾಯಿತು;
11 ११ ज्यांना उजव्या व डाव्या हाताचा फरक समजत नाही असे एक लाख वीस हजारांपेक्षा जास्त लोक या मोठ्या निनवे शहरात आहेत आणि पुष्कळ गुरेढोरे आहेत. त्यांची मी काळजी करू नये काय?”
೧೧ಇಂಥ ಗಿಡಕ್ಕಾಗಿ ನೀನು ಕನಿಕರಪಡುವಾಗ ಎಡಗೈ ಬಲಗೈ ತಿಳಿಯದ ಒಂದು ಲಕ್ಷದ ಇಪ್ಪತ್ತು ಸಾವಿರ ಜನರು, ಅಪಾರ ಪಶುಪ್ರಾಣಿಗಳೂ ಇರುವ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ?” ಎಂದನು.