< होशेय 2 >

1 “आपल्या भावांना म्हणा, अम्मी, आपल्या बहिणींना म्हणा, रुहाम ‘तुमच्यावर दया करण्यात आली आहे.’”
ನಿಮ್ಮ ಸಹೋದರರನ್ನು “ಅಮ್ಮಿ” ಎಂದು, ನಿಮ್ಮ ಸಹೋದರಿಯರನ್ನು “ರುಹಾಮ” ಎಂದು ಕರೆಯಿರಿ.
2 तुमच्या आईविरुध्द वाद घाला, वादच घाला, कारण ती माझी पत्नी नाही, आणि मी तीचा पती नाही. ती आपल्या वेश्यावृत्तीचे काम स्वत: पासून सोडून देवो आणि व्याभिचाराचे कामे तिच्या उरांपासून दूर होवो.
“ನಿಮ್ಮ ತಾಯಿಯ ಸಂಗಡ ವಾದಮಾಡಿ; ಅವಳು ನನ್ನ ಹೆಂಡತಿಯಲ್ಲ, ನಾನು ಅವಳ ಗಂಡನಲ್ಲ. ಅವಳು ವ್ಯಭಿಚಾರವನ್ನು ತನ್ನ ಮುಖಸೌಂದರ್ಯದಿಂದ, ವ್ಯಭಿಚಾರದ ಬೆಡಗನ್ನು ತನ್ನ ಸ್ತನಮಧ್ಯದಿಂದ ತೊಲಗಿಸಲಿ.
3 जर नाही, तर मी तिला नग्न करून जन्माच्या वेळी होती तशी नग्न करीन, मी तिला ओसाड, रुक्ष भूमी सारखे करीन आणि मी तिला तहानेने मारीन.
ಇಲ್ಲದಿದ್ದರೆ ನಾನು ಅವಳ ಬಟ್ಟೆಯನ್ನು ಕಿತ್ತು, ಅವಳನ್ನು ಹುಟ್ಟಿದಾಗ ಇದ್ದಂತೆ ಬೆತ್ತಲೆಯಾಗಿ ನಿಲ್ಲಿಸುವೆನು ಅವಳನ್ನು ಬೆಂಗಾಡಾಗಿಸಿ, ಮರುಭೂಮಿಯ ಸ್ಥಿತಿಗೆ ತಂದು, ನೀರಡಿಕೆಯಿಂದ ಸಾಯಿಸುವೆನು.
4 तिची मुले वेश्यावृत्तीमुळे असल्याने मी कसलीच दया त्यांच्यावर करणार नाही.
ಅವಳ ಮಕ್ಕಳನ್ನೂ ಕರುಣಿಸುವುದಿಲ್ಲ, ಅವರು ವ್ಯಭಿಚಾರದಿಂದ ಹುಟ್ಟಿದ ಮಕ್ಕಳಲ್ಲವೇ.
5 त्यांची आई वेश्या राहिलेली आहे, व तिचे गरोदर राहणे लज्जास्पद प्रकार आहे, ती म्हणाली, मी माझ्या प्रियकरांकडे जाईन, कारण ते मला माझी भाकर आणि पाणी, माझी लोकर आणि ताग, माझे तेल आणि मद्य देतात.
ಅವರ ತಾಯಿ ವ್ಯಭಿಚಾರ ಮಾಡಿದ್ದಾಳೆ, ಹೆತ್ತವಳು ನಾಚಿಕೆಗೇಡಿಯಾಗಿ ನಡೆದಿದ್ದಾಳೆ. ‘ತನಗೆ ಬೇಕಾದ ಅನ್ನ ಪಾನಗಳನ್ನೂ, ಉಣ್ಣೆ ನಾರುಗಳನ್ನೂ, ತೈಲವನ್ನೂ ಪಾನಕಗಳನ್ನೂ ತನಗೆ ಕೊಡುವ ಹಾಗೂ ತನ್ನೊಂದಿಗೆ ವ್ಯಭಿಚಾರದಲ್ಲಿ ತೊಡಗಿಸಿಕೊಂಡವರ ಹಿಂದೆ ಹೋಗುವೆನು ಅಂದುಕೊಂಡಿದ್ದಾಳೆ.’”
6 म्हणून मी तिच्या मार्गात काटेरी कुंपण घालीन, मी तिच्या विरुध्द भिंत बांधीन म्हणजे तिला वाट सापडणार नाही.
ಹೀಗಿರಲು, ಆಹಾ, ನಾನು ಅವಳ ದಾರಿಗೆ ಮುಳ್ಳುಬೇಲಿ ಹಾಕುವೆನು, ತನಗೆ ಬೇಕಾದ ಹಾದಿಗಳನ್ನು ಹಿಡಿಯದಂತೆ ಅವಳಿಗೆ ಅಡ್ಡಗೋಡೆ ಕಟ್ಟುವೆನು.
7 ती तिच्या प्रियकरांच्या मागे धावेल पण ती त्यांना गाठू शकणार नाही, ती त्यांचा शोध करेल पण ते तिला सापडणार नाही. मग ती म्हणेल, मी माझ्या पहिल्या नवऱ्याकडे परत जाईल, कारण माझी दशा आतापेक्षा तेव्हा चांगली होती.
ಅವಳು ತನ್ನೊಂದಿಗೆ ವ್ಯಭಿಚಾರ ಮಾಡಿದವರನ್ನು ಅನುಸರಿಸಿ ಹೋದರೂ ಅವರು ಸಿಕ್ಕುವುದಿಲ್ಲ. ಆಗ ಅವಳು, “‘ನಾನು ಮದುವೆಯಾದ ಗಂಡನ ಬಳಿಗೆ ಹಿಂದಿರುಗಿ ಹೋಗುವೆನು, ಈಗಿನ ನನ್ನ ಸ್ಥಿತಿಗಿಂತ ಆಗಿನ ಸ್ಥಿತಿಯು ಎಷ್ಟೋ ಲೇಸು’ ಅಂದುಕೊಳ್ಳುವಳು.
8 कारण तिला हे ठाऊक नाही की, तो मी होतो ज्याने तिला धान्य, द्राक्षरस, तेल पुरवली व सोने आणि चांदी सढळपणे दिली, नंतर जी तिने बआल मुर्तीस दिली.
ಅವಳಿಗೆ ಧಾನ್ಯ, ದ್ರಾಕ್ಷಾರಸ, ತೈಲಗಳು ನನ್ನಿಂದ ದೊರೆತವುಗಳೆಂದೂ, ಬಾಳನ ಪೂಜೆಗೆ ಉಪಯೋಗಿಸಿದ ಬೆಳ್ಳಿಬಂಗಾರಗಳು ನನ್ನ ಧಾರಾಳವಾದ ವರವೆಂದೂ ಅವಳಿಗೆ ತಿಳಿಯದು.
9 म्हणून मी हंगामाच्या वेळी तिचे धान्य आणि ऋतुच्या वेळी तिचा द्राक्षरस परत घेईन. तिची लाज झाकण्यासाठी दिलेली माझी लोकर व ताग सुध्दा परत घेईन.
ಆದಕಾರಣ ನಾನು ನನ್ನ ಧಾನ್ಯ, ದ್ರಾಕ್ಷಾರಸಗಳನ್ನು ಆಯಾ ಕಾಲದಲ್ಲಿ ಹಿಂದಕ್ಕೆ ತೆಗೆದುಕೊಳ್ಳುವೆನು, ಅವಳ ಮಾನವನ್ನು ಮರೆಮಾಡುವುದಕ್ಕೆ ನಾನು ಕೊಟ್ಟ ಉಣ್ಣೆ, ನಾರುಗಳನ್ನು ಹಿಂತೆಗೆದುಕೊಳ್ಳುವೆನು.
10 १० नंतर मी तिच्या प्रियकरांसमोर तिला नग्न करीन व त्यापैकी कोणीही तिला माझ्या हातून सोडवू शकणार नाही.
೧೦ಈಗ ಅವಳೊಂದಿಗೆ ವ್ಯಭಿಚಾರ ಮಾಡಿದವರ ಕಣ್ಣೆದುರಿಗೆ ಅವಳ ನಾಚಿಕೆಗೇಡಿತನವನ್ನು ಬೈಲಿಗೆ ತರುವೆನು; ಅವಳನ್ನು ನನ್ನ ಕೈಯಿಂದ ಯಾರೂ ಬಿಡಿಸರು.
11 ११ मी तीचा आनंद नष्ट करीन तसेच तिचे उत्सव, सण, चंद्रदर्शन, शब्बाथ आणि नेमलेले सर्व सण मी बंद करीन.
೧೧ನಾನು ಅವಳ ಉಲ್ಲಾಸ, ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಸಬ್ಬತ್ತು, ಮಹೋತ್ಸವ, ಇವುಗಳನ್ನೆಲ್ಲಾ ನಿಲ್ಲಿಸಿಬಿಡುವೆನು.
12 १२ मी तिच्या द्राक्षवेली आणि अंजिराची झाडे नष्ट करीन, ज्या विषयी ती म्हणाली होती, माझ्या प्रियकरांनी दिलेली ही माझी वेतने आहेत. मी त्याचे रान करीन आणि वन्य पशू येऊन ते फस्त करतील.
೧೨ಅವಳು ಯಾವ ಅಂಜೂರ ಮತ್ತು ದ್ರಾಕ್ಷಿಗಳನ್ನು ‘ಇವು ನನ್ನೊಂದಿಗೆ ವ್ಯಭಿಚಾರ ಮಾಡಿದವರಿಂದಾದ ಪ್ರತಿಫಲ’ ಅಂದುಕೊಂಡಳೋ, ಅವುಗಳನ್ನು ನಾನು ಹಾಳುಮಾಡಿ ಕಾಡುಗಿಡಗಳ ಗತಿಗೆ ತರುವೆನು; ಅವು ಭೂಜಂತುಗಳಿಗೆ ಆಹಾರವಾಗುವವು.
13 १३ तिने बआलास धूप दिला, आणि नथ व दागिने घालून स्वत: नटली. मला विसरून आपल्या प्रियकरांमागे गेली म्हणून मी तिला शिक्षा करीन असे परमेश्वर म्हणतो.
೧೩ಅವಳು ನನ್ನನ್ನು ಮರೆತು ಮೂಗುತಿ ಮೊದಲಾದ ಒಡವೆಗಳಿಂದ ತನ್ನನ್ನು ಶೃಂಗರಿಸಿಕೊಂಡು, ವ್ಯಭಿಚಾರಿಗಳ ಹಿಂದೆ ಹೋಗಿ ಬಾಳ್ ದೇವತೆಗಳ ಉತ್ಸವ ದಿನಗಳಲ್ಲಿ ಧೂಪಹಾಕಿದ್ದಕ್ಕೆ ನಾನು ಅವಳನ್ನು ದಂಡಿಸುವೆನು, ಇದು ಯೆಹೋವನ ನುಡಿ.”
14 १४ यास्तव, मी तिला परत मिळविन मी तिला जंगलात घेऊन जाईन, आणि प्रेमाने तिच्याशी बोलेन.
೧೪“ಆಹಾ, ನಾನು ಅವಳನ್ನು ಒಲಿಸಿ, ಅಡವಿಗೆ ಕರೆದುಕೊಂಡು ಹೋಗಿ, ಅವಳೊಂದಿಗೆ ಹೃದಯಂಗಮವಾಗಿ ಮಾತನಾಡುವೆನು.
15 १५ मी तिला तिचे द्राक्षमळे परत करेन, आशेचे दार म्हणून अखोरचे खोरे देईन. तेव्हा ती मला उत्तर देईल, जसे तिने आपल्या तरुणपणी दिले होते, जेव्हा ती मिसर देशातून आली होती.
೧೫ಅವಳ ದ್ರಾಕ್ಷಿಯ ತೋಟಗಳನ್ನು ಅಲ್ಲಿರುವಾಗಲೇ ಅವಳಿಗೆ ಹಿಂದಕ್ಕೆ ಕೊಡುವೆನು. ಆಕೋರಿನ ತಗ್ಗನ್ನೇ ಅವಳ ಸುಖ ನಿರೀಕ್ಷೆಗೆ ದ್ವಾರವನ್ನಾಗಿ ಮಾಡುವೆನು. ಯೌವನದಲ್ಲಿ, ಐಗುಪ್ತದೇಶದೊಳಗಿಂದ ಹೊರಟುಬಂದ ದಿನದಲ್ಲಿ ಇದ್ದಂತೆ ಅಲ್ಲಿ ಆಕೆಯು ಮುಳುಗುವಳು.”
16 १६ हे परमेश्वर घोषित करतो की, त्या दिवसात असे होईल की तू मला माझा पती म्हणशील, आणि पुन्हा मला बाली म्हणणार नाहीस.
೧೬ಯೆಹೋವನು ಇಂತೆನ್ನುತ್ತಾನೆ, “ಆ ಕಾಲದಲ್ಲಿ ನೀನು ನನ್ನನ್ನು ಇನ್ನು ‘ಬಾಳೀ’ ಅನ್ನದೆ ‘ಈಶೀ’ ಅನ್ನುವಿ.
17 १७ कारण मी तिच्या मुखातून बआलाची नावे काढून टाकेन, व तिला त्यांची नावे त्यानंतर आठवली जाणार नाही.
೧೭ನಾನು ಬಾಳ್ ದೇವತೆಗಳ ಹೆಸರುಗಳನ್ನು ನಿನ್ನ ಬಾಯೊಳಗಿಂದ ತೊಲಗಿಸುವೆನು; ಅವುಗಳನ್ನು ಇನ್ನು ಹೆಸರಿಸದಿರುವಿ.
18 १८ त्या दिवशी मी इस्राएलासाठी वनपशु, आकाशातील पाखरे, भूमीवर रांगणारे ह्यांसोबत करार करीन. मी देशातून धनुष्य तलवार आणि लढाई नाहीशी करीन, व ते तेथे सुरक्षित वस्ती करतील.
೧೮ಆ ಕಾಲದಲ್ಲಿ ನಾನು ನನ್ನ ಜನರಿಗಾಗಿ ಭೂಜಂತುಗಳಿಗೂ, ಆಕಾಶದ ಪಕ್ಷಿಗಳಿಗೂ, ನೆಲದ ಕ್ರಿಮಿಕೀಟಗಳಿಗೂ ನಿಬಂಧನೆಮಾಡಿ ವಿಧಿಸಿ ಬಿಲ್ಲು, ಕತ್ತಿ ಮತ್ತು ಕಾಳಗಗಳನ್ನು ದೇಶದಲ್ಲಿ ನಿಲ್ಲದಂತೆ ಧ್ವಂಸಪಡಿಸಿ, ನನ್ನ ಜನರು ನಿರ್ಭಯವಾಗಿ ವಾಸಿಸುವಂತೆ ಮಾಡುವೆನು.
19 १९ मी तुझा कायमचा वाग्दत्त पती होईन. मी धर्म, न्याय, करार, विश्वासूपण आणि दया ह्यात तुझा वाग्दत्त पती होईन.
೧೯ನಾನು ನಿನ್ನನ್ನು ಶಾಶ್ವತವಾಗಿ ವರಿಸುವೆನು; ಹೌದು, ನೀತಿ, ನ್ಯಾಯ, ಪ್ರೀತಿ ಮತ್ತು ದಯೆಗಳಿಂದ ನಿನ್ನನ್ನು ವರಿಸುವೆನು.
20 २० मी तुला विश्वासूपणे वाग्दत्त करीन, व तू हे जाणशील की, मी परमेश्वर आहे.
೨೦ನಾನು ನಿನ್ನನ್ನು ನಂಬಿಕೆಯಿಂದ ವರಿಸಲು ನೀನು ಯೆಹೋವನಾದ ನನ್ನನ್ನು ತಿಳಿದುಕೊಳ್ಳುವೆ.”
21 २१ आणि त्या दिवशी, मी उत्तर देईन, असे परमेश्वर घोषीत करतो, मी आकाशाला उत्तर देईल आणि आकाश भूमीला उत्तर देईन.
೨೧ಆ ದಿನದಲ್ಲಿ ಯೆಹೋವನು, “ಆ ಕಾಲದಲ್ಲಿ ನಾನು ಒಲುಮೆ ತೋರಿಸುವೆನು. ಬೇಡುವ ಆಕಾಶಕ್ಕೆ ನಾನು ಒಲಿಯಲು, ಬೇಡುವ ಭೂಮಿಗೆ ಅದು ಒಲಿಯುವುದು.
22 २२ आणि भूमी धान्य, नवा द्राक्षरस आणि तेल देईल आणि ते इज्रेलास उत्तर देतील.
೨೨ಬೇಡುವ ಧಾನ್ಯ, ದ್ರಾಕ್ಷಾರಸ, ತೈಲಗಳಿಗೆ ಭೂಮಿಯು ಒಲಿಯುವುದು, ಬೇಡುವ ಇಜ್ರೇಲಿಗೆ ಅವು ಒಲಿಯುವವು.
23 २३ मी स्वत: साठी तिचे रोपण भूमीत करीन, आणि लो रुहामावर दया करीन. जे माझे लोक नव्हते त्यास मी माझे लोक म्हणेन आणि ते मला तू माझा देव आहेस असे म्हणतील.
೨೩ನಾನು ದೇಶದಲ್ಲಿ ಇಜ್ರೇಲನ್ನು ನನಗಾಗಿ ಬಿತ್ತಿಕೊಳ್ಳುವೆನು, ಲೋ ರುಹಾಮಳಿಗೆ ವಾತ್ಸಲ್ಯವನ್ನು ತೋರಿಸುವೆನು; ಲೋ ಅಮ್ಮಿಗೆ ‘ನೀನು ನನ್ನ ಪ್ರಜೆಯೇ’ ಎಂದು ಹೇಳುವೆನು. ಅವರು ನನ್ನನ್ನು ‘ನನ್ನ ದೇವರೇ’ ಎಂದು ಭಜಿಸುವರು” ಎಂದು ನುಡಿಯುತ್ತಾನೆ.

< होशेय 2 >