< यहेज्केल 13 >
1 १ पुन्हा परमेश्वर देवाचा शब्द माझ्याकडे आला आणि तो म्हणाला,
೧ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
2 २ मानवाच्या मुला इस्राएलाच्या भाकीत करणाऱ्या विरूद्ध भाकीत कर आणि जे आपल्या बुध्दीने भाकीत करतात त्यांना सांग, परमेश्वर देवाचा शब्द ऐका.
೨“ನರಪುತ್ರನೇ, ಪ್ರವಾದನೆ ಮಾಡಿ, ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತಾ ಹೀಗೆ ಹೇಳು, ‘ಯೆಹೋವನ ವಾಕ್ಯವನ್ನು ಕೇಳಿರಿ.
3 ३ प्रभू परमेश्वर असे म्हणतो; मूर्ख संदेष्ट्यांबद्दल दिलगीरी आहे. जे आपल्या स्वतःच्या आत्म्याचे अनुसरण करतात, पण आपले दर्शन बघत नाही.
೩ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯನ್ನು ಏನೆಂದು ಹೇಳಲಿ!
4 ४ हे इस्राएला, तुझे भाकीत करणारे उजाड नापीक भूमीत कोल्ह्यासारखे आहेत.
೪ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳ ಹಾಗೆ ಇದ್ದಾರೆ.
5 ५ तुम्ही इस्राएलाच्या घराण्यात वेशी पाडण्यास गेला नाहीत तर वेशी बांधून काढल्या नाही, परमेश्वर देवाच्या दिवशी युध्दात तुम्ही प्रतिकार केला नाही.
೫ಯೆಹೋವನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿ ಗೋಡೆಯ ಒಡಕುಗಳನ್ನೇರಲಿಲ್ಲ, ಇಸ್ರಾಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಭದ್ರ ಮಾಡಲೂ ಇಲ್ಲ. ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ,
6 ६ लोकांस खोटा दृष्टांत आणि खोटे भाकीत कळले आहे, जो कोणी म्हणतो परमेश्वर देव अमुक तमुक जाहीर करीत आहे. परमेश्वर देवाने त्यांना पाठवले नसतांनाही त्यांनी लोकांस आशा दिली आहे, आणि त्यांनी दिलेला संदेश खरा ठरेल.
೬ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ.
7 ७ तुम्ही खोटा दृष्टांत पाहिला नाही का? आणि खोटे भाकीत केले नाही का? “तुम्ही म्हणता की अमुक तमुक परमेश्वर देव जाहीर करीत आहे” जेव्हा मी तसले काही बोललो नाही.
೭ನಾನು ಮಾತನಾಡದೆ ಹೋದರೂ, ‘ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು.
8 ८ यास्तव परमेश्वर देव असे सांगत आहेः कारण तुम्ही खोटा दृष्टांत पाहिला आणि खोटी वार्ता केली यास्तव परमेश्वर देवाचा हा खोटा जाहीरनामा तुझ्या विरुध्द आहेः
೮“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವು ವ್ಯರ್ಥವಾದದ್ದನ್ನು ನುಡಿದು, ಸುಳ್ಳಾದ ದರ್ಶನವನ್ನು ಕಂಡಿದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ’ ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ.
9 ९ माझा हात जे खोटे भाकीत करणाऱ्यां विरुध्द आहे, आणि खोटे दर्शन बघणाऱ्यां विरुध्द आहे, ते लोक माझ्या लोकांच्या सभेत येणार नाहीत, त्यांच्या नावाची नोंदणी इस्राएलाच्या घराण्यात होणार नाही, ते इस्राएलाच्या भूमीत निश्चित जाणार नाहीत. मग तुम्हास कळेल की मी परमेश्वर देव आहे.
೯‘ಮಿಥ್ಯ ದರ್ಶನಹೊಂದಿ, ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರೀಸಭೆಯಲ್ಲಿ ಸೇರಬಾರದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗಬಾರದು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.
10 १० यास्तव माझ्या लोकांस भलतीकडेच जाण्यासाठी मार्गदर्शन केले आणि त्यांना शांती दिली जेथे शांती नव्हती, त्यांनी वेशी उभ्या केल्या आहे. आणि त्यांना पांढरा रंग दिला आहेत.
೧೦“ಅಶಾಂತಿಯಿದ್ದರೂ ಅವರು ‘ಶಾಂತಿಯಿದೆ’ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರೆ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೂ, ಇಗೋ, ಅದಕ್ಕೆ ಸುಣ್ಣಬಳಿಯುತ್ತಾರೆ;
11 ११ आणि म्हणतात की जो कोणी पांढरा रंग देईल त्यांना म्हणा वेशी पडतील; त्यांच्यावर मुसळ धार पाऊस पडून गारा पडून ते कोसळून जाईल व वादळाने उध्वस्त होईल.
೧೧ಆದಕಾರಣ, ನೀನು ಸುಣ್ಣಬಳಿಯುವವರಿಗೆ ಹೀಗೆ ನುಡಿ, ‘ವಿಪರೀತ ಮಳೆಯಾಗಿ ಗೋಡೆಯು ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವವು; ಬಿರುಗಾಳಿಯು ಗೋಡೆಯನ್ನು ಒಡೆದುಹಾಕುವುದು.’
12 १२ पाहा वेशी पडतील, इतर तुम्हास हे सांगणार नाही, “तुम्ही लावलेला पांढरा रंग कोठे आहे?”
೧೨ಇಗೋ, ಗೋಡೆಯು ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?”
13 १३ यास्तव परमेश्वर देव हे सांगत आहे, माझ्या संतापामुळे मी वादळ घेऊन येईन, आणि माझ्या क्रोधामुळे पुर येईल; गारा पडल्यामुळे समुळ नाश होईल.
೧೩ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶ ಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು, ನನ್ನ ರೋಷದಿಂದ ಆನೆಕಲ್ಲುಗಳು ಸುರಿಯುವವು;
14 १४ तुम्ही पांढऱ्या रंगाने आच्छादलेली वेशी मी पाडून टाकेन त्यांना समुळ उध्वस्त त्यांच्या मध्य भागी मी करेन, मग तुम्हास कळेल मी परमेश्वर देव आहे.
೧೪ನೀವು ಸುಣ್ಣಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲ ಸಮಮಾಡಿ ಅದರ ಅಸ್ತಿವಾರವನ್ನು ಬಯಲುಪಡಿಸುವೆನು; ಅದು ಬಿದ್ದುಹೋಗುವುದು ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.
15 १५ मी आपल्या रागाची परीसीमा पांढऱ्या रंगाच्या वेशीवर करेन, मी तुम्हास सांगेन; वेशी तेथे उभ्या नसणार व लोक त्यांना पांढरा रंगही लावणार नाही.
೧೫ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು,
16 १६ इस्राएलाचे भाकित करणारे ज्यांनी यरूशलेमची भविष्यवाणी केली ज्यांनी तिच्या शांतीचा दृष्टांत पाहिला, पण तेथे शांती नाही. हे परमेश्वर देव जाहीर करीत आहे.
೧೬‘ಇಸ್ರಾಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯಿದೆ ಎಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇಮಿನ ವಿಷಯವಾಗಿ ಪ್ರವಾದಿಸಿದ್ದೀರಲ್ಲವೆ? ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು’” ಇದು ಕರ್ತನಾದ ಯೆಹೋವನ ನುಡಿ.
17 १७ म्हणून मानवाच्या मुला आपले तोड लोकांच्या मुलींपासून फिरव जे आपल्या मनाचे भाकीत करतात, त्यांच्या विरुध्द भाकीत कर.
೧೭“‘ನರಪುತ್ರನೇ, ಸ್ವಕಲ್ಪಿತವಾದುದನ್ನು ಕಣಿ ಎಂದು ಹೇಳುವ ನಿನ್ನ ಸ್ವಕುಲ ಸ್ತ್ರೀಯರ ಕಡೆಗೆ ಮುಖ ಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು.’
18 १८ सांग, परमेश्वर देव हे म्हणतो; लोकांच्या जीवाची पारध करण्यासाठी प्रत्येक ठिकाणी पाश मांडून ठेवले आहेत, निरनिराळ्या मनुष्यांच्या उंचीच्या जाळ्या बनवतील तेव्हा तुम्ही हळहळ व्यक्त करून माझ्या लोकांच्या जीवाची शिकार करता, पण स्वतःला वाचवता.
೧೮ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಗಳನ್ನು ಕಟ್ಟಿ, ಉದ್ದವಾದವರಿಗೂ, ಗಿಡ್ಡವಾದವರಿಗೂ ತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಸ್ತ್ರೀಯರ ಗತಿಯನ್ನು ಏನೆಂದು ಹೇಳಲಿ! ಸ್ತ್ರೀಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ ಸ್ವಂತ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ?
19 १९ खोट्या गोष्टी ऐकून, जे मरु नये त्यांना ठार करून जे जगू नये त्यांना जगवून त्यांच्या अन्नांसाठी माझ्या लोकांचा अवमान केला आहे.
೧೯ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’
20 २० यास्तव परमेश्वर देव म्हणतो, पाहा ज्या पक्षाच्या पारधासाठी पाश मांडला आहे त्यास तोडून मी मार्ग करीन,
೨೦“ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತು ಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಿಗಳನ್ನು ನಾನು ಬಿಡಿಸಿ, ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು.
21 २१ ज्या आत्म्यांची तुम्ही पक्षासारखे पारध केली त्यांना स्वतंत्र केले. तेव्हा तुम्हास समजेल मी परमेश्वर देव आहे.
೨೧ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.
22 २२ किंबहूना ज्या देवभीरुला मी खेदीत केले नाही. त्याचे हृदय असत्य बोलून दुःख देता व वाईट मार्गापासून परावृत होऊ नये, आणि आपल्या जीवाचा बचाव करु नये असे त्यांच्या बाहूंना बळ देता.
೨೨ನಾನು ಎದೆಗುಂದಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ, ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ.
23 २३ म्हणून विनाकारण दर्शन बघणे व ज्योतिषी हे संपुष्टात येईल; मी आपले लोक तुमच्या हातून सोडवेन, तेव्हा तुम्हास समजेल मी परमेश्वर देव आहे.
೨೩ಆದಕಾರಣ ನೀವು ಮಿಥ್ಯ ದರ್ಶನವನ್ನು ಹೊಂದಿ, ಕಣಿಹೇಳುವ ಕೆಲಸವು ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು, ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.”