< Nomery 33 >

1 Zao o fangem-pañaveloa’ o ana’ Israeleo te niavotse an-tane Mitsraime añe am-pivovoran-dahindefoñe ambane’ ty fehe’ i Mosè naho i Aharoneo.
ಮೋಶೆ ಆರೋನರ ನಾಯಕತ್ವದಲ್ಲಿ ಈಜಿಪ್ಟ್ ದೇಶದೊಳಗಿಂದ ತಮ್ಮ ಸೈನ್ಯಗಳ ಪ್ರಕಾರ ಹೊರಟ ಇಸ್ರಾಯೇಲರ ಪ್ರಯಾಣದ ಹಂತಗಳ ವಿವರ ಇಲ್ಲಿವೆ.
2 Sinoki’ i Mosè o fiorotan-dia’ iareo ki-fange-fange’e ami’ ty lili’ Iehovào; le zao o fange’eo ty amo toe-piengà’eo.
ಮೋಶೆಯು ಯೆಹೋವ ದೇವರ ಆಜ್ಞೆಯ ಪ್ರಕಾರ ಅವರ ಪ್ರಯಾಣದಲ್ಲಿ ತಂಗಿದ್ದ ಸ್ಥಳಗಳ ವಿವರಗಳನ್ನು ಬರೆದನು.
3 Nenga’ iareo ty Ramesèse ami’ ty volam-baloha’e, ami’ty andro faha folo-lime’ ambi’ i volam-baloha’ey; ami’ty andro nanonjohy i Fihelañ’ Ambone’ o ana’ Israeleoy ty niavota’ iareo an-kavokavoke am-pahaisaha’ o nte-Mitsraime iabio,
ಅವರ ಪ್ರಯಾಣಗಳ ವಿವರಗಳು ಯಾವುವೆಂದರೆ: ಅವರು ಮೊದಲನೆಯ ತಿಂಗಳಿನ ಹದಿನೈದನೆಯ ದಿವಸದಲ್ಲಿ ಪಸ್ಕಹಬ್ಬದ ಮರುದಿನ ಇಸ್ರಾಯೇಲರು ಸಮಸ್ತ ಈಜಿಪ್ಟನವರ ಎದುರಿನಲ್ಲೇ ಅಟ್ಟಹಾಸದಿಂದ ರಮ್ಸೇಸಿನಿಂದ ಹೊರಟು ಹೋದರು.
4 naho nandeveñe o tañoloñoloña’e iabio o nte-Mitsraimeo, o nipaohe’ Iehovà añivo’ iereoo, vaho nametsaha’ Iehovà zaka o ndrahare’ iareoo.
ಹೇಗೆಂದರೆ ಆ ಕಾಲದಲ್ಲಿ ಯೆಹೋವ ದೇವರು ಈಜಿಪ್ಟಿನವರ ಸಮಸ್ತ ಚೊಚ್ಚಲಿನವರನ್ನು ಹೊಡೆದು ಆ ಮಕ್ಕಳ ಶವಗಳನ್ನು ಹೂಣಿಟ್ಟರು, ಯೆಹೋವ ದೇವರು ಅವರ ದೇವರುಗಳಿಗೂ ಶಿಕ್ಷೆ ಮಾಡಿದರು.
5 Aa le nienga i Ramesese o ana’ Israeleo naho nitobe e Sokòte;
ಇಸ್ರಾಯೇಲರು ರಮ್ಸೇಸಿನಿಂದ ಹೊರಟು ಸುಕ್ಕೋತಿನಲ್ಲಿ ಇಳಿದರು.
6 nienga i Sokòte vaho nitobe Etàme añ’olo’ i fatrambeiy.
ಸುಕ್ಕೋತಿನಿಂದ ಹೊರಟು ಮರುಭೂಮಿಯ ಮೇರೆಯಲ್ಲಿರುವ ಏತಾಮಿನಲ್ಲಿ ಇಳಿದುಕೊಂಡರು.
7 Nionjoñe boak’ Etàme le niolake mb’e Pihakiròte atiñana’ i Baale-Tsefòne mb’eo vaho nitobe marine i Migdòle.
ಏತಾಮಿನಿಂದ ಹೊರಟು ಬಾಲ್ಜೆಫೋನಿಗೆ ಎದುರಾಗಿರುವ ಪೀಹಹೀರೋತಿಗೆ ತಿರುಗಿಕೊಂಡು, ಮಿಗ್ದೋಲಿಗೆ ಎದುರಾಗಿ ಇಳಿದುಕೊಂಡರು.
8 Ie nenga i Pihakirote, le nisoroke i riakey naho nañavelo telo andro am-patrambey Etame vaho nitobe e Marà.
ಪೀಹಹೀರೋತಿನಿಂದ ಹೊರಟು ಸಮುದ್ರದೊಳಗಿಂದ ಮರುಭೂಮಿಗೆ ದಾಟಿದರು. ಆಗ ಅವರು ಮೂರು ದಿವಸದ ಪ್ರಯಾಣಮಾಡಿ ಏತಾಮೆಂಬ ಮರುಭೂಮಿಯಲ್ಲಿ ನಡೆದು ಮಾರಾದಲ್ಲಿ ಇಳಿದರು.
9 Nenga’ iareo ty Marà le nipotìtse e Elime ao; aman-drano manganahana folo roe-ambi’ ty Elime naho satrañe fitompolo vaho nitobeañe.
ಮಾರಾದಿಂದ ಹೊರಟು ಏಲೀಮಿಗೆ ಬಂದರು. ಎಲೀಮಿನಲ್ಲಿ ಹನ್ನೆರಡು ನೀರಿನ ಒರತೆಗಳೂ, ಎಪ್ಪತ್ತು ಖರ್ಜೂರ ಮರಗಳೂ ಇದ್ದುದರಿಂದ ಅಲ್ಲಿ ಇಳಿದುಕೊಂಡರು.
10 Ie nienga i Elime le nitobe añ’ olo’ i Ria-Binday,
ಏಲೀಮಿನಿಂದ ಹೊರಟು ಕೆಂಪುಸಮುದ್ರದ ಬಳಿಯಲ್ಲಿ ಇಳಿದುಕೊಂಡರು.
11 nienga i Ria-Binday le nitobe ampatrambei’ i Sine,
ಕೆಂಪು ಸಮುದ್ರದಿಂದ ಹೊರಟು ಸೀನೆಂಬ ಮರುಭೂಮಿಯಲ್ಲಿ ಇಳಿದುಕೊಂಡು,
12 niavotse i fatrambei’ i Siney le nitobe e Dofkà,
ಸೀನೆಂಬ ಮರುಭೂಮಿಯಿಂದ ಹೊರಟು ದೊಫ್ಕದಲ್ಲಿ ಇಳಿದುಕೊಂಡರು.
13 nienga i Dofkà le nitobe e Alòse,
ದೊಫ್ಕದಿಂದ ಹೊರಟು ಆಲೂಷದಲ್ಲಿ ಇಳಿದುಕೊಂಡರು.
14 nienga i Alòse vaho nitobe e Refidìme, f’ie tsy aman-drano ho kamae’ ondatio.
ಆಲೂಷದಿಂದ ಹೊರಟು ರೆಫೀದೀಮಿನಲ್ಲಿ ಇಳಿದುಕೊಂಡರು. ಆದರೆ ಅಲ್ಲಿ ಜನರಿಗೆ ಕುಡಿಯುವುದಕ್ಕೆ ನೀರು ಇರಲಿಲ್ಲ.
15 Ie nienga i Refidime le nitobe am-patrambei’ i Sinay,
ರೆಫೀದೀಮಿನಿಂದ ಹೊರಟು ಸೀನಾಯಿ ಮರುಭೂಮಿಯಲ್ಲಿ ಇಳಿದುಕೊಂಡರು.
16 ni­enga i Fatrambey Sinay vaho nitobe e Kibròtatahavà.
ಸೀನಾಯಿ ಮರುಭೂಮಿಯಿಂದ ಹೊರಟು ಕಿಬ್ರೋತ್ ಹತಾವದಲ್ಲಿ ಇಳಿದುಕೊಂಡರು.
17 Ie nienga i Kib­ròtatahavà le nitobe e Katseròte,
ಕಿಬ್ರೋತ್ ಹತಾವದಿಂದ ಹೊರಟು ಹಚೇರೋತಿನಲ್ಲಿ ಇಳಿದುಕೊಂಡರು.
18 nienga i Katseròte le nitobe e Ritmà,
ಹಚೇರೋತಿನಿಂದ ಹೊರಟು ರಿತ್ಮದಲ್ಲಿ ಇಳಿದುಕೊಂಡರು.
19 nienga i Ritmà le nitobe e Rimòne Pèretse,
ರಿತ್ಮದಿಂದ ಹೊರಟು ರಿಮ್ಮೋನ್ ಪೆರೆಚಿನಲ್ಲಿ ಇಳಿದುಕೊಂಡರು.
20 nienga i Rimòne Pèretse le nitobe e Libnà,
ರಿಮ್ಮೋನ್ ಪೆರೆಚಿನಿಂದ ಹೊರಟು ಲಿಬ್ನದಲ್ಲಿ ಇಳಿದುಕೊಂಡರು.
21 nienga i Libnà le nitobe e Risà,
ಲಿಬ್ನದಿಂದ ಹೊರಟು ರಿಸ್ಸದಲ್ಲಿ ಇಳಿದುಕೊಂಡರು.
22 nienga i Risà le nitobe e Kehelàta,
ರಿಸ್ಸದಿಂದ ಹೊರಟು ಕೆಹೇಲಾತಾನಲ್ಲಿ ಇಳಿದುಕೊಂಡರು.
23 nienga i Kehelàta le nitobe e Vohi-Sèfere,
ಕೆಹೇಲಾತಾನಿಂದ ಹೊರಟು ಶೆಫೆರ್ ಪರ್ವತದಲ್ಲಿ ಇಳಿದುಕೊಂಡರು.
24 nienga i Vohi-Sè­fere le nitobe e Karadà,
ಶೆಫೆರ್ ಪರ್ವತದಿಂದ ಹೊರಟು ಹರಾದಾದಲ್ಲಿ ಇಳಿದುಕೊಂಡರು.
25 nienga i Karadà le nitobe e Makelòte,
ಹರಾದಾದಿಂದ ಹೊರಟು ಮಖೇಲೋತಿನಲ್ಲಿ ಇಳಿದುಕೊಂಡರು.
26 nienga i Makelòte le nitobe e Tàkate,
ಮಖೇಲೋತಿನಿಂದ ಹೊರಟು ತಹತಿನಲ್ಲಿ ಇಳಿದುಕೊಂಡರು.
27 nienga i Tàkate le nitobe e Tèrake.
ತಹತಿನಿಂದ ಹೊರಟು ತೆರಹದಲ್ಲಿ ಇಳಿದುಕೊಂಡರು.
28 nienga i Tèrake le nitobe e Mitkà,
ತೆರಹದಿಂದ ಹೊರಟು ಮಿತ್ಕಾದಲ್ಲಿ ಇಳಿದುಕೊಂಡರು.
29 nienga i Mitkà le nitobe e Khasmonà,
ಮಿತ್ಕಾದಿಂದ ಹೊರಟು ಹಷ್ಮೋನಾದಲ್ಲಿ ಇಳಿದುಕೊಂಡರು.
30 nienga i Khasmonà le nitobe e Moserà,
ಹಷ್ಮೋನಾದಿಂದ ಹೊರಟು ಮೋಸೇರೋತಿನಲ್ಲಿ ಇಳಿದುಕೊಂಡರು.
31 nienga i Moserà le nitobe e Benè’ià’akàne,
ಮೋಸೇರೋತಿನಿಂದ ಹೊರಟು ಬೆನೇಯಾಕಾನಿನಲ್ಲಿ ಇಳಿದುಕೊಂಡರು.
32 nienga i Benè’ià’akàne le nitobe e Kore Hagid’gàde,
ಬೆನೇಯಾಕಾನಿನಿಂದ ಹೊರಟು ಹೋರ್ಹಗಿದ್ಗಾದಿನಲ್ಲಿ ಇಳಿದುಕೊಂಡರು.
33 nienga i Kore Ha­gidgàde le nitobe e Iotbàta,
ಹೋರ್ಹಗಿದ್ಗಾದಿನಿಂದ ಹೊರಟು ಯೊಟ್ಬಾತದಲ್ಲಿ ಇಳಿದುಕೊಂಡರು.
34 nienga i Iotbàta le nitobe e Ebranà
ಯೊಟ್ಬಾತದಿಂದ ಹೊರಟು ಅಬ್ರೋನಾದಲ್ಲಿ ಇಳಿದುಕೊಂಡರು.
35 nienga i Ebranà le nitobe e Etsiòne Gèbere,
ಅಬ್ರೋನಾದಿಂದ ಹೊರಟು ಎಚ್ಯೋನ್ ಗೆಬೆರಿನಲ್ಲಿ ಇಳಿದುಕೊಂಡರು.
36 nienga i Etsiòne Gèbere vaho nitobe am-patrambei’ i Tsine, atao ty hoe Kadàse.
ಎಚ್ಯೋನ್ ಗೆಬೆರಿನಿಂದ ಹೊರಟು ಕಾದೇಶೆಂಬ ಚಿನ್ ಮರುಭೂಮಿಯಲ್ಲಿ ಇಳಿದುಕೊಂಡರು.
37 Ie nienga i Kadàse le nitobe e Vohi-Hore añ’olon-tane’ i Edome.
ಕಾದೇಶಿನಿಂದ ಹೊರಟು ಎದೋಮ್ ದೇಶದ ಅಂತ್ಯದಲ್ಲಿರುವ ಹೋರ್ ಗುಡ್ಡದಲ್ಲಿ ಇಳಿದುಕೊಂಡರು.
38 Niañambone’ i Vohi-Hore mb’eo t’i Aharone mpisoroñe ami’ty lili’ Iehovà vaho nihomake eo ami’ty taoñe fah’efa-polo’ niavota’ o ana’ Israeleo an-tane Mitsraime ami’ty andro valoha’ i volam-pahalimey.
ಆಗ ಯಾಜಕನಾದ ಆರೋನನು ಯೆಹೋವ ದೇವರ ಆಜ್ಞೆಯ ಪ್ರಕಾರ ಹೋರ್ ಗುಡ್ಡದ ಮೇಲೆ ಏರಿ, ಅಲ್ಲಿ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟ ನಾಲ್ವತ್ತನೆಯ ವರ್ಷದ ಐದನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ನಿಧನ ಹೊಂದಿದನು.
39 Ni-zato-tsi-roapolo taoñe telo’ amby t’i Aharone te nivilasy ambone’ i Vohi-Hore eo.
ಆರೋನನು ಹೋರ್ ಗುಡ್ಡದಲ್ಲಿ ಮರಣಹೊಂದಿದಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.
40 Jinanji’ ty mpanjaka’ i Arade nte-Kanàne mpimoneñe atimo an-tane Kanàne ao te nomb’ ama’e mb’eo o ana’ Israeleo.
ಆಗ ಕಾನಾನ್ ದೇಶದ ನೆಗೆವನಲ್ಲಿ ವಾಸವಾಗಿದ್ದ ಕಾನಾನ್ಯನಾದ ಅರಾದ್ ಪಟ್ಟಣದ ಅರಸನು ಇಸ್ರಾಯೇಲರು ಬರುವುದನ್ನು ಕೇಳಿದನು.
41 Aa le niavotse nitobe e Tsalmonà añe iereo.
ಹೋರ್ ಗುಡ್ಡದಿಂದ ಅವರು ಹೊರಟು ಚಲ್ಮೋನದಲ್ಲಿ ಇಳಿದುಕೊಂಡರು.
42 Ie nienga i Tsalmonà le nitobe e Ponòne.
ಚಲ್ಮೋನದಿಂದ ಹೊರಟು ಪೂನೋನಿನಲ್ಲಿ ಇಳಿದುಕೊಂಡರು.
43 Ie nienga i Ponòne le nitobe e Obòte.
ಪೂನೋನಿನಿಂದ ಹೊರಟು ಓಬೋತಿನಲ್ಲಿ ಇಳಿದುಕೊಂಡರು.
44 Ie nienga i Obòte le nitobe e Ièha Aba­rìme añ’efe-tane’ i Moabe.
ಓಬೋತಿನಿಂದ ಹೊರಟು ಮೋವಾಬಿನ ಮೇರೆಯಲ್ಲಿರುವ ಇಯ್ಯೇ ಅಬಾರೀಮಿನಲ್ಲಿ ಇಳಿದುಕೊಂಡರು.
45 Nenga’ iareo t’Iìme vaho nitobe e Dibone-Gade.
ಇಯೀಮಿನಿಂದ ಹೊರಟು ದೀಬೋನ್ ಗಾದಿನಲ್ಲಿ ಇಳಿದುಕೊಂಡರು.
46 Ie nienga i Dibone-Gade le nitobe e Almone-Diblataième.
ದೀಬೋನ್ ಗಾದಿನಿಂದ ಹೊರಟು ಅಲ್ಮೋನ್ ದಿಬ್ಲಾತಯಿಮಿನಲ್ಲಿ ಇಳಿದುಕೊಂಡರು.
47 Ie nienga i Almone-Diblataième le nitobe amo vohi’ i Abarìmeo aolo’ i Nebò.
ಅಲ್ಮೋನ್ ದಿಬ್ಲಾತಯಿಮಿನಿಂದ ಹೊರಟು ನೆಬೋವಿನ ಪೂರ್ವದಲ್ಲಿರುವ ಅಬಾರೀಮ್ ಬೆಟ್ಟಗಳಲ್ಲಿ ಇಳಿದುಕೊಂಡರು.
48 Ie nienga i am-bohi’ Abarìmeo le nitobe a montombei’ i Moabe añ’olo’ Iardeney tandrife Ierikò.
ಅಬಾರೀಮ್ ಬೆಟ್ಟಗಳಿಂದ ಹೊರಟು ಯೆರಿಕೋವಿಗೆ ಎದುರಾಗಿ ಯೊರ್ದನ್ ನದಿಯ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಇಳಿದುಕೊಂಡರು.
49 Nitobe marine Iardeney iereo, mifototse e Bete’ ha’ Iesimòte pak’añ’Ala-Roi’ i Abele a montombei’ i Moabe añe.
ಅವರು ಯೊರ್ದನ್ ನದಿಯ ಬಳಿಯಲ್ಲಿರುವ ಬೇತ್ ಯೆಷೀಮೋತಿನಿಂದ ಮೋವಾಬಿನ ಬಯಲುಗಳಲ್ಲಿರುವ ಆಬೇಲ್ ಶಿಟ್ಟೀಮಿನ ಪರ್ಯಂತರದವರೆಗೂ ಇಳಿದುಕೊಂಡರು.
50 Aa le nitsara amy Mosè t’Iehovà a montombei’ i Moabe añ’ olo’ Iardeney tandrife’ Ierikò eo, nanao ty hoe:
ಯೆಹೋವ ದೇವರು ಯೆರಿಕೋವಿಗೆದುರಾಗಿ ಯೊರ್ದನಿನ ತೀರದಲ್ಲಿರುವ ಮೋವಾಬಿನ ಬಯಲುಗಳಲ್ಲಿ ಮೋಶೆಯ ಸಂಗಡ ಮಾತನಾಡಿ,
51 Taroño amo ana’ Israeleo ty hoe: Ie mitsake Iardeney mb’an-tane Kanàne mb’eo,
“ಇಸ್ರಾಯೇಲರ ಸಂಗಡ ಮಾತನಾಡಿ ಅವರಿಗೆ ಹೇಳಬೇಕಾದದ್ದೇನೆಂದರೆ: ‘ನೀವು ಯೊರ್ದನನ್ನು ದಾಟಿ, ಕಾನಾನ್ ದೇಶಕ್ಕೆ ಬರುವಾಗ,
52 le fonga hanoe’ areo soike ze mpimoneñe amy tane aolo’ areoy, arotsaho o vato-sinoki’e iabio, ampiantò o sare tineno’ iareo iabio le demoho o tamboho’ iareo iabio;
ನಿಮ್ಮ ಮುಂದೆ ಆ ದೇಶದ ಸಮಸ್ತ ನಿವಾಸಿಗಳನ್ನು ಹೊರಡಿಸಿ, ಅವರ ಚಿತ್ರಗಳನ್ನೂ ಅವರು ಕೆತ್ತಿದ ವಿಗ್ರಹಗಳನ್ನೂ ನಾಶಮಾಡಿ, ಅವರ ಸಮಸ್ತ ಪವಿತ್ರ ಸ್ಥಳಗಳನ್ನೂ ಹಾಳುಮಾಡಬೇಕು.
53 ho tavane’ areo i taney vaho himoneñe ao, amy te natoloko anahareo i taney ho fanañañe.
ನೀವು ಆ ದೇಶವನ್ನು ತೆಗೆದುಕೊಂಡು ಅದರಲ್ಲಿ ವಾಸಮಾಡಿರಿ. ಏಕೆಂದರೆ ಅದನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.
54 Le ho zarae’ areo an-tsapake i taney ho lova’ o hasa­vereña’ areoo; ty maro ho tolora’ areo lova bey, le ty tsy ampe ho tolora’ areo lova kede; ze nitsatoha’ i tsapakey ty ho fanaña’ indatiy ho lova’e; ty amo fifokoañeo ty anjarañe aze.
ನೀವು ದೇಶವನ್ನು ನಿಮ್ಮ ಗೋತ್ರಗಳ ಪ್ರಕಾರ ಚೀಟುಹಾಕಿ, ಸ್ವಾಧೀನಮಾಡಿ ಹಂಚಿಕೊಳ್ಳಬೇಕು. ಹೆಚ್ಚಾದವರಿಗೆ ಸೊತ್ತನ್ನು ಹೆಚ್ಚಿಸಿ, ಕಡಿಮೆಯಾದವರಿಗೆ ಸೊತ್ತನ್ನು ಕಡಿಮೆ ಮಾಡಬೇಕು. ಒಬ್ಬೊಬ್ಬನಿಗೆ ಚೀಟು ಎಲ್ಲಿ ಬೀಳುವುದೋ, ಅದೇ ಅವನಿಗಾಗಬೇಕು. ನಿಮ್ಮ ಪಿತೃಗಳ ಗೋತ್ರದ ಪ್ರಕಾರ ನೀವು ಸ್ವಾಧೀನಮಾಡಿಕೊಳ್ಳಬೇಕು.
55 Fa naho tsy hatao soike aolo’ areo mb’eo o mpimoneñe an-taneo le ho fatik’ am-pihaino’ areo, naho fitsipok’ an-deme’ areo o nisisa’ areo ama’eo, vaho hitsibore anahareo an-tane himoneña’ areo ao.
“‘ಆದರೆ ನೀವು ನಿಮ್ಮ ಮುಂದೆ ದೇಶದ ನಿವಾಸಿಗಳನ್ನು ಹೊರಡಿಸದಿದ್ದರೆ, ನೀವು ಉಳಿಸಿದವರು ನಿಮ್ಮ ಕಣ್ಣುಗಳಲ್ಲಿ ಮುಳ್ಳುಗಳಾಗಿಯೂ, ನಿಮ್ಮ ಪಕ್ಕೆಗಳಲ್ಲಿ ಕಂಟಕಗಳಾಗಿಯೂ ಇರುವರು. ನೀವು ವಾಸಿಸುವ ದೇಶದಲ್ಲಿ ಅವರು ನಿಮ್ಮನ್ನು ಶ್ರಮೆಪಡಿಸುವರು.
56 Le hanoeko ama’ areo i sinafiriko hanoeñe am’ iareoy.
ಇದಲ್ಲದೆ ನಾನು ಅವರಿಗೆ ಮಾಡಬೇಕೆಂದಿದ್ದ ಹಾಗೆ ನಿಮಗೆ ಮಾಡುವೆನು.’”

< Nomery 33 >