< Nomery 29 >
1 Amy andro valoha’ i volam-pahafitoy, le hanao fañohara-miavake nahareo. Tsy hitolon-draha, fa andro fipoñafam-peo ho anahareo.
೧“‘ತುತ್ತೂರಿಗಳ ಧ್ವನಿಯಿಂದ ಪ್ರಕಟವಾಗುವ ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನೀವು ಯಾವ ಉದ್ಯೋಗವನ್ನೂ ನಡೆಸದೆ ದೇವಾರಾಧನೆಗಾಗಿ ಸಭೆಕೂಡಬೇಕು.
2 Mañengà soroñe, hàñin-kanintsiñe am’ Iehovà: ty bania, ty añondrilahy vaho ty vik’ añondrilahy fito tsy aman-kandra.
೨ಅದರಲ್ಲಿ ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ದೋಷವಿಲ್ಲದ ಸರ್ವಾಂಗಹೋಮಕ್ಕಾಗಿ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನು ಸಮರ್ಪಿಸಬೇಕು.
3 Ty enga-mahakama’e le mona linaro menake: telo am-pahafolo’ ty efà ho amy baniay, le roe am-pahafolo’ ty efà ho amy añondrilahiy,
೩ಧಾನ್ಯನೈವೇದ್ಯಕ್ಕಾಗಿ ಆ ಹೋರಿಗೆ ಎಣ್ಣೆ ಬೆರೆಸಿದ ಒಂಭತ್ತು ಸೇರು ಹಿಟ್ಟನ್ನು, ಟಗರಿಗೆ ಎಣ್ಣೆ ಬೆರೆಸಿದ ಆರು ಸೇರು ಹಿಟ್ಟನ್ನು,
4 le songa fahafolo’ ty efà ty vik’ añondrilahy amy fito rey;
೪ಆ ಏಳು ಕುರಿಮರಿಗಳಲ್ಲಿ ಒಂದೊಂದಕ್ಕೆ ಮೂರು ಸೇರು ಎಣ್ಣೆ ಬೆರಸಿದ ಹಿಟ್ಟನ್ನು,
5 vaho ty vik’ oselahy ho engan-kakeo hañeferañe anahareo,
೫ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ತಂದು ಸಮರ್ಪಿಸಬೇಕು.
6 ho tovo’ i enga hisoroñañe amy pea-bolañeiy, rekets’ i enga-mahakama’ey naho i soroñe boak’ àndroy rekets’ o enga-mahakama’eo naho o enga-rano’eo miomba ty fañè’ iareo, ho hàñin-kanintsiñe soroñañe am’Iehovà.
೬ಪ್ರತಿ ತಿಂಗಳಿನ ಮೊದಲನೆಯ ದಿನದಲ್ಲಿ ಮಾಡಬೇಕಾದ ಸರ್ವಾಂಗಹೋಮಗಳನ್ನೂ, ಅವುಗಳಿಗೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ, ನೈವೇದ್ಯಗಳನ್ನೂ ಮಾತ್ರವಲ್ಲದೆ ಮೇಲೆ ಹೇಳಿದ ಯಜ್ಞಗಳನ್ನು ಹೆಚ್ಚಾಗಿ ಮಾಡಬೇಕು. ಅವು ಯೆಹೋವನಿಗೆ ಸುಗಂಧಹೋಮವಾಗಿರುವುದು.
7 Amy andro faha-folo’ i volam-paha-fitoy ty hanoa’ areo fañohara-miavake, le hilie-batañe tsy hifanehak’ amo tolon-draha’ areoo.
೭“‘ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನೀವು ಯಾವ ಕೆಲಸವನ್ನೂ ಮತ್ತು ಊಟವನ್ನು ಮಾಡದೆ ನಿಮ್ಮನ್ನು ತಗ್ಗಿಸಿಕೊಳ್ಳುವುದಕ್ಕಾಗಿ ದೇವಾರಾಧನೆಗಾಗಿ ಸಭೆಕೂಡಬೇಕು.
8 Hañenga soroñe am’ Iehovà nahareo; hàñin-kanintsiñe: bania raike, añondrilahy raike, naho vik’ añondrilahy fito, songa tsy aman-kandra.
೮ನೀವು ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನು ಸಮರ್ಪಿಸಬೇಕು.
9 Ty enga-mahakama ama’e le mona linaro menake: fahafolo’ ty efà telo i baniay, fahafolo’ ty efà roe i añondrilahiy,
೯ಧಾನ್ಯನೈವೇದ್ಯಕ್ಕಾಗಿ ಹೋರಿಗೆ ಎಣ್ಣೆ ಬೆರೆಸಿದ ಒಂಭತ್ತು ಸೇರು ಹಿಟ್ಟನ್ನು, ಟಗರಿಗೆ ಆರು ಸೇರು ಎಣ್ಣೆ ಬೆರೆಸಿದ ಹಿಟ್ಟನ್ನು,
10 naho sindre fahafolo’ ty efà ty vik’ añondry amy vi’e fito rey;
೧೦ಏಳು ಕುರಿಗಳಲ್ಲಿ ಒಂದೊಂದಕ್ಕೆ ಎಣ್ಣೆ ಬೆರಸಿದ ಮೂರು ಸೇರು ಹಿಟ್ಟನ್ನು,
11 vaho ty vik’oselahy ho engan-kakeo, ho tovo’ i engan-kakeo ho, fijebañañey naho i soroñe boak’ àndroy rekets’ o enga-mahakama’eo naho o enga-rano’eo.
೧೧ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ತಂದು ಸಮರ್ಪಿಸಬೇಕು. ಆ ದಿನಕ್ಕೆ ನೇಮಕವಾದ ದೋಷಪರಿಹಾರಕ ಯಜ್ಞಕ್ಕಾಗಿ ನಿತ್ಯ ಸರ್ವಾಂಗಹೋಮ, ಧಾನ್ಯದ್ರವ್ಯ, ಪಾನದ್ರವ್ಯ, ನೈವೇದ್ಯಗಳನ್ನಲ್ಲದೆ ಮೇಲೆ ಕಂಡ ಯಜ್ಞಗಳನ್ನು ಹೆಚ್ಚಾಗಿ ಸಮರ್ಪಿಸಬೇಕು.
12 Amy andro faha folo-lime-ambi’ i volam-paha-fitoy, manoa fañohara-miavake le ko mitolon-draha, vaho ano sabadidak’ am’ Iehovà fito andro.
೧೨“‘ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆಕೂಡಬೇಕು. ನೀವು ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು. ಆ ದಿನ ಮೊದಲುಗೊಂಡು ಏಳು ದಿನಗಳವರೆಗೆ ಯೆಹೋವನಿಗೆ ಉತ್ಸವವನ್ನು ಆಚರಿಸಬೇಕು.
13 Mañengà soroñe, engan-koroañe ho hàñin-kanintsiñe am’ Iehovà: bania folo-telo’ amby, añondrilahy roe naho vik’ añondrilahy folo-efats’ amby, songa tsy aman-kandra.
೧೩ಆ ದಿನದಲ್ಲಿ ನಿತ್ಯ ಸರ್ವಾಂಗಹೋಮ, ಧಾನ್ಯದ್ರವ್ಯ, ಪಾನದ್ರವ್ಯ, ನೈವೇದ್ಯಗಳನ್ನೂ ಮಾತ್ರವಲ್ಲದೆ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಹದಿಮೂರು ಹೋರಿಗಳನ್ನೂ, ಎರಡು ಟಗರುಗಳನ್ನೂ, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಗಳನ್ನೂ,
14 Ty enga-mahakama’ iareo, le mona linaro menake: songa ty fahafolo’e telo i bania folo-telo’amby rey, sindre ty fahafolo’e roe i añondrilahy roe rey,
೧೪ಧಾನ್ಯನೈವೇದ್ಯಕ್ಕಾಗಿ ಪ್ರತಿಯೊಂದು ಹೋರಿಗೆ ಎಣ್ಣೆ ಬೆರಸಿದ ಒಂಭತ್ತು ಸೇರು ಹಿಟ್ಟನ್ನೂ, ಟಗರಿಗೆ ಎಣ್ಣೆ ಬೆರಸಿದ ಆರು ಸೇರು ಹಿಟ್ಟನ್ನು,
15 vaho sambe ty fahafolo’e i vik’ añondrilahy folo-efats’ amby rey
೧೫ಹದಿನಾಲ್ಕು ಕುರಿಮರಿಗಳಿಗೆ ಎಣ್ಣೆ ಬೆರಸಿದ ಮೂರು ಸೇರು ಹಿಟ್ಟನ್ನೂ ಸಮರ್ಪಿಸಬೇಕು.
16 le ty vik’ose ho engan-kakeo, tovo’ i soroñe boak’ andro rey, naho i enga-mahakama’ey naho i enga-rano’ey.
೧೬ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ನಿತ್ಯ ಸರ್ವಾಂಗಹೋಮವನ್ನು, ಧಾನ್ಯನೈವೇದ್ಯವನ್ನು, ಪಾನದ್ರವ್ಯವನ್ನು ತಂದು ಸಮರ್ಪಿಸಬೇಕು.
17 Amy andro faha-roey: bania folo-ro’ amby; añondrilahy roe, vik’ añondry folo-efats’ amby tsy aman-kandra,
೧೭“‘ಆ ಉತ್ಸವದ ಎರಡನೆಯ ದಿನದಲ್ಲಿ ನೀವು ನಿತ್ಯ ಸರ್ವಾಂಗಹೋಮವನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಹನ್ನೆರಡು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಯನ್ನು ಸಮರ್ಪಿಸಬೇಕು.
18 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey; le ty vik’oselahy ho engan-kakeo,
೧೮ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ,
19 tovo’ i soroñe boak’ àndroy naho i enga-mahakama’ey vaho i enga-rano’ey.
೧೯ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ, ನಿತ್ಯ ಸರ್ವಾಂಗಹೋಮಕ್ಕಾಗಿ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
20 Amy andro faha teloy: bania folo-raik’amby; añondrilahy roe, vik’ añondry folo-efats’amby tsy aman-kandra,
೨೦“‘ಮೂರನೆಯ ದಿನದಲ್ಲಿ ದೋಷವಿಲ್ಲದ ಹನ್ನೊಂದು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ,
21 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೨೧ನೈವೇದ್ಯಕ್ಕಾಗಿ ಹೋರಿ, ಟಗರು, ಮತ್ತು ಕುರಿಮರಿಗಳನ್ನು ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
22 le vik’ oselahy raike ho engan-kakeo, tovo’ i soroñe boak’ àndroy naho i enga-mahakama’ey naho i enga-rano’ey.
೨೨ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
23 Amy andro fahefatsey: bania folo, añondrilahy roe, vik’añondry folo-efats’ amby tsy aman-kandra,
೨೩“‘ನಾಲ್ಕನೆಯ ದಿನದಲ್ಲಿ ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ದೋಷವಿಲ್ಲದ ಹತ್ತು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.
24 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೨೪ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
25 le ty vik’oselahy ho engan-kakeo, tovo’ i soroñe boak’ àndroy naho i enga-mahakama’ey vaho i enga-rano’ey.
೨೫ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
26 Amy andro fahalimey: bania sive, añondrilahy roe, vik’ añondry folo-efats’amby tsy aman-kandra,
೨೬“‘ಐದನೆಯ ದಿನದಲ್ಲಿ ನೀವು ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ದೋಷವಿಲ್ಲದ ಒಂಭತ್ತು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.
27 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೨೭ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
28 le ty vik’ oselahy ho engan-kakeo tovo’ i soroñe boak’ àndroy naho i enga-mahakama’ey vaho i enga-rano’ey.
೨೮ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ, ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
29 Amy andro faheneñey: bania valo, añondrilahy roe, vik’ añondry folo-efats’amby tsy aman-kandra,
೨೯“‘ಆರನೆಯ ದಿನದಲ್ಲಿ ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ದೋಷವಿಲ್ಲದ ಎಂಟು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.
30 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೩೦ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
31 le ty vik’ oselahy ho engan-kakeo tovo’ i soroñe boak’ àndroy naho i enga-mahakama’ey vaho i enga-rano’ey.
೩೧ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
32 Amy andro faha-fitoy: bania fito, añondrilahy roe, vik’ añondry folo-efats’amby tsy aman-kandra,
೩೨“‘ಏಳನೆಯ ದಿನದಲ್ಲಿ ನಿತ್ಯ ಸರ್ವಾಂಗಹೋಮವನ್ನೂ ಅದಕ್ಕೆ ನೇಮಕವಾದ ದೋಷವಿಲ್ಲದ ಏಳು ಹೋರಿ, ಎರಡು ಟಗರು, ಹದಿನಾಲ್ಕು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.
33 naho ty enga-mahakama naho enga-rano amy bania rey naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೩೩ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
34 le ty vik’ oselahy ho engan-kakeo, tovo’ i soroñe boak’ àndroy naho i enga-mahakama’ey vaho i enga-rano’ey.
೩೪ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
35 Amy andro faha-valoy le manoa fifanontoñañe miavake naho ko mitolon-draha.
೩೫“‘ಎಂಟನೆಯ ದಿನದಲ್ಲಿ ದೇವಾರಾಧನೆಗೆ ಸಭೆ ಕೂಡಿಬರಬೇಕು. ಅದರಲ್ಲಿ ಯಾವ ಉದ್ಯೋಗವನ್ನೂ ನಡೆಸಬಾರದು.
36 Mañengà soroñe, banabana oroañe, hàñin-kanintsiñe am’ Iehovà: ty bania, le ty añondrilahy naho vik’ añondrilahy fito tsy aman-kandra,
೩೬ನೀವು ನಿತ್ಯ ಸರ್ವಾಂಗಹೋಮಕ್ಕಾಗಿ ಅದಕ್ಕೆ ನೇಮಕವಾದ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಮಾತ್ರವಲ್ಲದೆ ಯೆಹೋವನಿಗೆ ಸುವಾಸನೆಯನ್ನು ಉಂಟುಮಾಡುವ ಸರ್ವಾಂಗಹೋಮಕ್ಕಾಗಿ ದೋಷವಿಲ್ಲದ ಒಂದು ಹೋರಿ, ಒಂದು ಟಗರು, ಏಳು ಪೂರ್ಣಾಂಗವಾದ ಒಂದು ವರ್ಷದ ಕುರಿಮರಿಗಳನ್ನೂ ಸಮರ್ಪಿಸಬೇಕು.
37 naho ty enga-mahakama naho enga-rano amy baniay naho amy añondrilahy rey vaho amy vik’ añondrilahy rey, ty amy ia’ iareo naho i fañè’ey;
೩೭“‘ನೈವೇದ್ಯಕ್ಕಾಗಿ ಹೋರಿ, ಟಗರು ಮತ್ತು ಕುರಿಮರಿ ಈ ಪ್ರತಿಯೊಂದಕ್ಕೆ ನೇಮಕವಾದ ಪ್ರಕಾರವೇ ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು
38 le vik’oselahy raike ho engan-kakeo, tovo’ i soroñe boak’ àndroy naho i enga-mahakama’ey vaho i enga-rano’ey.
೩೮ದೋಷಪರಿಹಾರಕ ಯಜ್ಞಕ್ಕಾಗಿ ಒಂದು ಹೋತವನ್ನೂ ಅದರೊಂದಿಗೆ ನಿತ್ಯ ಸರ್ವಾಂಗಹೋಮಗಳನ್ನೂ, ಧಾನ್ಯದ್ರವ್ಯಗಳನ್ನೂ, ಪಾನದ್ರವ್ಯಗಳನ್ನೂ ಸಮರ್ಪಿಸಬೇಕು.
39 Ie ty hengae’ areo am’ Iehovà amo andro namantañañeo, (mandikoatse ze enga-ava-panta ndra engan-tsatrin’ arofo’ areo) ho fisoroña’ areo naho ho enga-rano’ areo vaho ho engam-pañanintsi’ areoo.
೩೯“‘ನೀವು ಯೆಹೋವನಿಗೆ ಕಾಣಿಕೆಯಾಗಿ ಹರಕೆಯನ್ನು ತೀರಿಸುವುದಕ್ಕಾಗಲಿ ಮಾಡುವ ಸರ್ವಾಂಗಹೋಮ, ಧಾನ್ಯದ್ರವ್ಯ ನೈವೇದ್ಯ, ಪಾನದ್ರವ್ಯ, ಸಮಾಧಾನಯಜ್ಞ ಇವುಗಳನ್ನಲ್ಲದೆ ಹಬ್ಬಗಳ ದಿನಗಳಲ್ಲಿ ಮೇಲೆ ಸೂಚಿಸಿರುವ ಯಜ್ಞಗಳನ್ನೂ ಹೆಚ್ಚಾಗಿ ಮಾಡಬೇಕು.’”
40 Aa le nitaroñe’ i Mosè amo ana’ Israeleo, ze hene nafanto’ Iehovà amy Mosèy.
೪೦ಯೆಹೋವನು ಮಾಡಿದ ಈ ಎಲ್ಲಾ ಆಜ್ಞೆಗಳನ್ನು ಮೋಶೆ ಇಸ್ರಾಯೇಲರಿಗೆ ತಿಳಿಸಿದನು.