< Levitikosy 25 >
1 Hoe ty nitsara’ Iehovà amy Mosè ambohi-Sinay añe:
ಯೆಹೋವ ದೇವರು ಸೀನಾಯಿ ಬೆಟ್ಟದಲ್ಲಿ ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ,
2 Misaontsia amo ana’ Israeleo, le ano ty hoe: Ie mimoak’ an-tane hatoloko anahareo ao le hambena’ i taney ty fitofàñe am’ Iehovà.
“ಇಸ್ರಾಯೇಲರೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು, ‘ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ, ದೇಶವು ಯೆಹೋವ ದೇವರಿಗಾಗಿ ಸಬ್ಬತ್ ದಿನವನ್ನು ಕೈಗೊಳ್ಳಬೇಕು.
3 Enen-taoñe ty hitongisa’o ami’ty tete’o, naho enen-taoñe ty hañetefa’o o valobo’oo vaho ty hanontoña’o ty voka’e,
ಆರು ವರ್ಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು. ಆರು ವರ್ಷ ನೀವು ನಿಮ್ಮ ದ್ರಾಕ್ಷಿತೋಟವನ್ನು ಕತ್ತರಿಸಬೇಕು, ಅವುಗಳಿಂದ ಫಲವನ್ನು ಕೂಡಿಸಬೇಕು.
4 fe ho Sabata àñom-pitofà’ i taney i taom-pahafitoy, Sabata am’ Iehovà. Tsy hitongisa’o ty tete’o ndra hetefa’o o valobo’oo.
ಆದರೆ ಏಳನೆಯ ವರ್ಷವು ನೆಲಕ್ಕೆ ವಿಶ್ರಾಂತಿಕಾಲವಾಗಿರುವುದು. ಅದು ಯೆಹೋವ ದೇವರಿಗೆ ಸಬ್ಬತ್ ಕಾಲವಾಗಿರುವುದು. ನೀವು ಆ ವರ್ಷದಲ್ಲಿ ನಿಮ್ಮ ಹೊಲವನ್ನು ಬಿತ್ತಬಾರದು. ಇಲ್ಲವೆ ದ್ರಾಕ್ಷಿತೋಟವನ್ನು ಕತ್ತರಿಸಬಾರದು.
5 Tsy ho tataheñe o misonjoñeo naho fa afake ty fitataha’o, le tsy hatontoñe ze valoboke mitiry amo vahe tsy nañetefañeo, amy t’ie taom-pitofàñe heneke ho a i taney.
ತನ್ನಷ್ಟಕ್ಕೆ ತಾನೇ ಬೆಳೆದಿರುವ ಪೈರನ್ನು ನೀವು ಕೊಯ್ಯಬಾರದು. ಇಲ್ಲವೆ ಕತ್ತರಿಸದಿರುವ ದ್ರಾಕ್ಷಿಯ ಬಳ್ಳಿಯ ದ್ರಾಕ್ಷಿಹಣ್ಣುಗಳನ್ನು ಕೂಡಿಸಬಾರದು. ಏಕೆಂದರೆ ಅದು ದೇಶಕ್ಕೆ ವಿಶ್ರಾಂತಿಯ ವರ್ಷವಾಗಿರುವುದು.
6 Fe ho fikama’ areo ty voka’ i fitofà’ i taneiy, ihe naho ty mpitoro’o lahy naho ty mpitoro’o ampela, naho ty mpièke, naho ty renetane mañialo ama’o,
ದೇಶದ ಆ ಸಬ್ಬತ್ ವರ್ಷದಲ್ಲಿ ತಾನಾಗಿಯೇ ಬೆಳೆದದ್ದು ನಿಮ್ಮ ಆಹಾರಕ್ಕಾಗಿ ಇರುವುದು. ಅದು ನಿಮಗೂ, ನಿಮ್ಮ ದಾಸದಾಸಿಯರಿಗೂ, ನಿಮ್ಮ ಕೂಲಿಯವರಿಗೂ, ನಿಮ್ಮೊಂದಿಗೆ ಪ್ರವಾಸಿಯಾಗಿರುವ ಪರಕೀಯರಿಗೂ,
7 vaho hihinana’ o hare’oo naho ze biby lý an-tane’o ao ze hene voka’e.
ನಿಮ್ಮ ದೇಶದಲ್ಲಿರುವ ಹುಟ್ಟುವಳಿಯೆಲ್ಲಾ ನಿಮ್ಮ ಪಶು ಮತ್ತು ಕಾಡುಮೃಗಗಳಿಗೆ ಆಹಾರವಾಗಬಹುದು.
8 Mañiaha taom-pitofàñe fito ho azo, fito taoñe atombo fito; le ty fitontoña’ i taom-pitofàñe fito rey ro mañomey efa-polo siv’amby taoñe.
“‘ಇದಲ್ಲದೆ ಏಳು ವರ್ಷಕ್ಕೆ ಒಂದರಂತೆ ಏಳು ಸಬ್ಬತ್ ವರ್ಷಗಳನ್ನು ಎಣಿಸಬೇಕು. ಆ ಏಳು ಸಬ್ಬತ್ ವರ್ಷಗಳ ಕಾಲವು ಒಟ್ಟು ನಾಲ್ವತ್ತೊಂಬತ್ತು ವರ್ಷಗಳಾಗಿರುವುವು.
9 Ie amy zay, ampipopoeñe antsiva-paniahiañe ty andro faha-folo’ i volam-pahafitoy, i andro fijebañañey, le ho tsitsihe’ areo fipopòn’ antsiva ty tane’ areo.
ಇದಾದ ಮೇಲೆ ಏಳನೆಯ ತಿಂಗಳಿನ ಹತ್ತನೆಯ ದಿವಸದಲ್ಲಿ ಐವತ್ತನೆಯ ವಾರ್ಷಿಕೋತ್ಸವಕ್ಕೆ ತುತೂರಿಯನ್ನು ಊದಿಸಬೇಕು. ಪ್ರಾಯಶ್ಚಿತ್ತದ ದಿನದಲ್ಲಿ ನಿಮ್ಮ ದೇಶದ ಎಲ್ಲಾ ಕಡೆಗಳಲ್ಲಿ ತುತೂರಿಯನ್ನು ಊದಿಸಬೇಕು.
10 Le ampiambaho i taom-paha limampoloy naho tsitsiho koim-pidadàñe i taney, amo mpimoneñe ama’e iabio. Ho Jobily ama’ areo, sindre himpoly amo fanaña’eo, songa himpoly aman-dongo’e.
ಐವತ್ತನೆಯ ವರ್ಷವನ್ನು ಪರಿಶುದ್ಧಮಾಡಿ ದೇಶದಲ್ಲಿ ಎಲ್ಲಾ ನಿವಾಸಿಗಳಿಗೆ ಬಿಡುಗಡೆಯನ್ನು ಪ್ರಕಟಿಸಬೇಕು. ಅದು ನಿಮಗೆ ಐವತ್ತನೆಯ ವರ್ಷದ ವಾರ್ಷಿಕೋತ್ಸವವಾಗಿರಬೇಕು. ನಿಮ್ಮಲ್ಲಿ ಪ್ರತಿಯೊಬ್ಬನು ಅವನವನ ಆಸ್ತಿಗೂ, ಅವನವನ ಕುಟುಂಬಕ್ಕೂ, ಹಿಂದಿರುಗಿ ಹೋಗಬೇಕು.
11 Jobily ho anahareo i taom-paha-limampoloy: tsy hitongy ama’e, le tsy ho tatahe’ areo ze sonjo’e vaho tsy hatonto’o ze am-bahe tsy hineteke,
ಐವತ್ತನೆಯ ಆ ವರುಷವು ನಿಮಗೆ ಜೂಬಿಲಿಯಾಗಿರುವುದು. ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವುದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷಿಬಳ್ಳಿಗಳಲ್ಲಿ ದ್ರಾಕ್ಷಿಹಣ್ಣುಗಳನ್ನು ಕೂಡಿಸಲೂಬಾರದು.
12 amy te Jobily, le hiavake ho anahareo izay; ho kamae’ areo ze mipike an-tetek’ ao.
ಏಕೆಂದರೆ ಅದು ಜೂಬಿಲಿ. ಅದು ನಿಮಗೆ ಪರಿಶುದ್ಧವಾಗಿರುವುದು. ಹೊಲದೊಳಗಿಂದ ಬೆಳೆದ ಹುಟ್ಟುವಳಿಯನ್ನು ನೀವು ತಿನ್ನಬೇಕು.
13 Songa hibalik’ amy lova’ey amy taon-Jobiliy nahareo.
“‘ಜೂಬಿಲಿಯ ಈ ವರ್ಷದಲ್ಲಿ ಪ್ರತಿಯೊಬ್ಬನು ತನ್ನ ಆಸ್ತಿಗೆ ಹಿಂದಿರುಗಬೇಕು.
14 Aa ie mandetake inoñ’inoñe am’ ondatio ndra mikalo am-pità’ ondaty, le asoao tsy hifampikatramo.
“‘ನೆರೆಯವನಿಗೆ ಏನಾದರೂ ಮಾರಾಟ ಮಾಡಿದ್ದರೆ, ಇಲ್ಲವೆ ನೆರೆಯವನಿಂದ ಕೊಂಡುಕೊಂಡಿದ್ದರೆ, ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು.
15 Ty ami’ ty ia’ o taoñe manonjohy i Jobilio ty ho vilie’o am’ondatio le ty ami’ty ia’ o taom-pamokarañe sisao ty handetaha’e.
ಜೂಬಿಲಿಯ ತರುವಾಯ ವರ್ಷಗಳ ಲೆಕ್ಕದ ಪ್ರಕಾರ ನಿನ್ನ ನೆರೆಯವನಿಂದ ಕೊಂಡುಕೊಳ್ಳಬೇಕು. ಫಲದ ವರ್ಷಗಳ ಪ್ರಕಾರ ಅವನು ನಿನಗೆ ಮಾರಾಟಮಾಡಬೇಕು.
16 Ty ami’ty hamaro’ o taoñeo ty hañonjona’o ty vili’e vaho ami’ty hatsiampe’ o taoñeo ty hampiketraha’o ty vili’e; ty ia’ o fitatahañeo ro haleta’e ama’o.
ವರ್ಷಗಳು ಹೆಚ್ಚಿದಂತೆಯೇ ಫಲದ ಬೆಲೆಯನ್ನೂ ಹೆಚ್ಚಿಸಬೇಕು. ವರ್ಷಗಳು ಕಡಿಮೆಯಿರುವಂತೆಯೇ ಫಲದ ಬೆಲೆಯನ್ನು ಕಡಿಮೆ ಮಾಡಬೇಕು. ಫಲದ ವರ್ಷಗಳ ಸಂಖ್ಯೆಗನುಸಾರವಾಗಿಯೇ ಅವನು ನಿನಗೆ ಮಾರಾಟಮಾಡಬೇಕು.
17 Aa le ko mifamorekeke, fa i Andrianañahare’o ro hañeveña’o; Izaho Iehovà Andrianañahare’ areo.
ಆದ್ದರಿಂದ ನೀವು ಒಬ್ಬರಿಗೊಬ್ಬರು ಅನ್ಯಾಯಮಾಡಬಾರದು. ಆದರೆ ದೇವರಿಗೆ ನೀನು ಭಯಪಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ.
18 Aa le ambeno o fañèkoo naho oriho aman-dili-po o fepèkoo, vaho hiaiñ’ añoleñañe amy taney nahareo,
“‘ಹೀಗೆ ನೀವು ನನ್ನ ನಿಯಮಗಳನ್ನು ಪಾಲಿಸಬೇಕು, ನನ್ನ ನಿರ್ಣಯಗಳನ್ನು ಕೈಗೊಂಡು ನಡೆಯಬೇಕು. ಆಗ ನೀವು ದೇಶದಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
19 le ho toly ty sabo’ i taney naho ho anjam-pikamañe nahareo vaho himoneñe ao tsy aman’ ore.
ಭೂಮಿಯು ತನ್ನ ಫಲವನ್ನು ಕೊಡುವುದು. ನೀವು ತಿಂದು ತೃಪ್ತರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
20 Aa naho hanoa’areo ty hoe, Ino ty ho hane’ay amy taom-pahafitoy, zahay tsy hitongy, tsy hanontoñe an-driha?
ನೀವು, “ನಾವು ಬಿತ್ತುವುದಿಲ್ಲ, ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವುದಿಲ್ಲ. ಏಳನೆಯ ವರ್ಷದಲ್ಲಿ ನಾವು ಏನು ತಿನ್ನೋಣ,” ಎನ್ನುವಿರಿ.
21 Fa ho lilieko ho anahareo ty fanintsiñako amy taom-paha-eneñey, hanataha’ areo ty mahakama tsahatse telo taoñe.
ಆಗ ನಾನು, “ಆರನೆಯ ವರ್ಷದಲ್ಲಿ ಮೂರು ವರ್ಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಕೊಡುವೆನು.
22 Ie hitongy ami’ty taom-paha-valo, le ho kamae’ areo ty voka’e nivokats’ ela; pak’ amy taom-pahasivey, ampara’ i fitatahañe ama’ey, ty hikama’ areo i elay.
ನೀವು ಎಂಟನೆಯ ವರ್ಷದಲ್ಲಿ ಬಿತ್ತಿ, ಅದರ ಫಲವನ್ನು ಒಂಬತ್ತನೆಯ ವರ್ಷದವರೆಗೆ ತಿನ್ನುವಿರಿ. ಅದರ ಫಲ ಬರುವವರೆಗೆ ತಿನ್ನುವಿರಿ, ಅದರ ಫಲ ಬರುವವರೆಗೆ ನೀವು ಸಂಗ್ರಹಿಸಿದ ಹಳೆಯದನ್ನೇ ತಿನ್ನುವಿರಿ,” ಎಂದು ಹೇಳುತ್ತೇನೆ.
23 Tsy haletake ho nainai’e i taney amy te ahiko o taneo; mpañialo naho renetane amako nahareo.
“‘ಇದಲ್ಲದೆ ಭೂಮಿಯನ್ನು ಎಂದಿಗೂ ಮಾರಬಾರದು. ಏಕೆಂದರೆ ಭೂಮಿಯು ನನ್ನದು. ನನ್ನೊಂದಿಗೆ ನೀವು ಪರಕೀಯರೂ, ಪ್ರವಾಸಿಗಳೂ ಆಗಿದ್ದೀರಿ.
24 Aa ty amo hene tanem-panaña’ areoo, añajào ty hijebañañe aze.
ನಿಮ್ಮ ಸ್ವಾಧೀನದಲ್ಲಿರುವ ನಿಮ್ಮ ಎಲ್ಲಾ ಭೂಮಿಗೆ ಬಿಡುಗಡೆಯನ್ನು ಕೊಡಬೇಕು.
25 Ie mifotsak’ an-kararahañe ty longo’o naho mandetake i hanaña’ey, le homb’eo ty longo’e marine aze, hijebañe i tane naletan-dongo’ey.
“‘ನಿಮ್ಮ ಸಹೋದರನು ಬಡತನದ ನಿಮಿತ್ತವಾಗಿ ತನ್ನ ಸೊತ್ತಿನಲ್ಲಿ ಸ್ವಲ್ಪವನ್ನು ಮಾರಿದರೆ, ಅವನ ಬಂಧುವು ಅದನ್ನು ಬಿಡಿಸಿಕೊಳ್ಳಬೇಕು.
26 Aa naho tsy amam-pijebañe t’indaty, fe am-pahimbañam-pità’e ro mahatontoñe ty hijebaña’e,
ಬಿಡಿಸುವ ಬಂಧುವು ಇಲ್ಲದೆ ಹೋದರೆ, ಮಾರಿದವನೇ ಸ್ಥಿತಿವಂತನಾಗಿ ಅದನ್ನು ಬಿಡಿಸಿಕೊಳ್ಳುವಂತಾದರೆ,
27 le hiahe’e o taoñe mifototse amy nandetaha’e azeio, le havaha’e amy nivily azey ty tsi’ri’e amo tao’eo vaho hibalik’ amy fanaña’ey re.
ಅವನು ಅದನ್ನು ಮಾರಿದ ವರ್ಷಗಳನ್ನು ಲೆಕ್ಕಿಸಿ, ಅದನ್ನು ಮಾರಿದವನಿಗೆ ಮಿಕ್ಕ ಕ್ರಯವನ್ನು ಪೂರ್ತಿಮಾಡಿ, ತನ್ನ ಸ್ವಂತ ಹೊಲವನ್ನು ಸ್ವಾಧೀನಪಡಿಸಿಕೊಳ್ಳಬಹುದು.
28 Aa naho tsy lefe’e ty hañitia’e fitàñe hahaeneñe ty hampibalihañe aze le hidok’ am-pità’ i nikalo azey i naletakey ampara’ ty Taon-Jobily; havotsotse amy Jobiliy izay le himpolia’e i fanaña’ey.
ತಿರುಗಿ ಸಲ್ಲಿಸುವುದಕ್ಕೆ ಅವನಿಗೆ ಆಗದಿದ್ದರೆ, ಅವನು ಮಾರಿದ್ದು ಜೂಬಿಲಿಯ ವರ್ಷದವರೆಗೆ ಕೊಂಡುಕೊಂಡವನ ಕೈಯಲ್ಲಿ ಇರಬೇಕು ಮತ್ತು ಸಂಭ್ರಮದ ವರ್ಷದಲ್ಲಿ ಅದು ಬಿಡುಗಡೆಯಾಗಬೇಕು, ಅವನು ತನ್ನ ಸೊತ್ತನ್ನು ಪಡೆಯಬೇಕು.
29 Aa naho aleta’ t’indaty ty anjomba-pimoneñañe an-drova finahetse ao le azo’e jebañeñe i anjombay añate’ ty taoñe mifototse amy nandetahañe azey; taoñe raike do’e ty mete hijebañañe aze.
“‘ಇದಲ್ಲದೆ ಒಬ್ಬನು ಗೋಡೆಯುಳ್ಳ ಪಟ್ಟಣದಲ್ಲಿರುವ ನಿವಾಸದ ಮನೆಯನ್ನು ಮಾರಿದರೆ, ಅದನ್ನು ಮಾರಿದ ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡುಗಡೆ ಮಾಡಬೇಕು. ಒಂದು ಪೂರ್ಣ ವರ್ಷದೊಳಗಾಗಿ ಅದನ್ನು ಬಿಡಿಸಬಹುದು.
30 F’ie tsy jebañe’e añate’ ty taoñe raike le mijadoñe ho fanaña’ i nikalo azey nainai’e pak’ añ’ afeafe’e i anjomba an-drova mifahetsey. Ie tsy havotsotse amo Jobilio.
ಆದರೆ ವರ್ಷವು ಪೂರ್ಣವಾಗುವುದರೊಳಗಾಗಿ ಅದು ಬಿಡುಗಡೆಯಾಗದಿದ್ದರೆ, ಗೋಡೆಯ ಪಟ್ಟಣದೊಳಗಿರುವ ಆ ಮನೆಯು ಅದನ್ನು ಕೊಂಡುಕೊಂಡವನಿಗೂ ಅವನ ಸಂತತಿಯವರಿಗೂ ಶಾಶ್ವತವಾಗಿ ನಿಲ್ಲುವುದು. ಜೂಬಿಲಿಯ ವರ್ಷದಲ್ಲಿ ಅದು ಬಿಡುಗಡೆಯಾಗಬಾರದು.
31 Fe ty anjomba tsy mifahetse ro volilieñe manahake o tetekeo: azo jebañeñe izay vaho havotsotse ami’ty Jobily.
ಆದರೆ ಸುತ್ತಲೂ ಗೋಡೆಗಳಿಲ್ಲದೆ ಹಳ್ಳಿಗಳಲ್ಲಿರುವ ಮನೆಗಳು ಬಯಲಿನ ಹೊಲಗಳಂತೆ ಎಣಿಸಬೇಕು. ಅವುಗಳನ್ನು ಬಿಡಿಸಿಕೊಳ್ಳುವ ಅಧಿಕಾರವಿರುವದು. ಜೂಬಿಲಿಯ ವರ್ಷದಲ್ಲಿ ಅವು ಬಿಡುಗಡೆ ಆಗಬೇಕು.
32 Fe ty amo rova’ o nte-Levio, toe manan-jo nainai’e o nte-Levio hijebañe o anjomba an-drovam-panaña’ iareoo.
“‘ಲೇವಿಯರ ಪಟ್ಟಣಗಳ ವಿಷಯವಾಗಿಯೂ, ಅವರ ಸ್ವಾಧೀನವಾಗಿರುವ ಪಟ್ಟಣಗಳ ಮನೆಗಳ ವಿಷಯವಾಗಿಯೂ ಲೇವಿಯರು ಯಾವ ಸಮಯದಲ್ಲಿಯಾದರೂ ಬಿಡಿಸಿಕೊಳ್ಳಬಹುದು.
33 Aa naho mivily anjomba amo nte-Levio t’indaty, le i anjomba naletak’ an-drova ao ho vara’ey ro havotso’e amy Jobiliy; amy te fanaña’ i nte-Leviý añivo’ o ana’ Israeleo ze anjomba’e an-drova’ o nte-Levio.
ಲೇವಿಯರಿಂದ ಏನಾದರೂ ಕೊಂಡುಕೊಂಡರೆ, ಕೊಂಡುಕೊಂಡ ಮನೆಯೂ, ಅವನ ಸ್ವಾಸ್ತ್ಯದ ಪಟ್ಟಣವೂ ಜೂಬಿಲಿಯ ವರ್ಷದಲ್ಲಿ ಬಿಡುಗಡೆಯಾಗಬೇಕು. ಏಕೆಂದರೆ ಲೇವಿಯರ ಪಟ್ಟಣಗಳ ಮನೆಗಳು ಇಸ್ರಾಯೇಲರ ಮಧ್ಯದಲ್ಲಿ ಅವರಿಗೆ ಸ್ವಾಧೀನವಾಗಿವೆ.
34 Fe tsy azo aletake o tanem-piandrazañe mañohoke o rova’ iareoo, amy t’ie fanaña’ iareo nainai’e.
ಆದರೆ ಅವರ ಪಟ್ಟಣಗಳ ಉಪನಗರಗಳ ಹೊಲವನ್ನು ಮಾರಬಾರದು. ಏಕೆಂದರೆ ಅದು ಅವರಿಗೆ ಶಾಶ್ವತವಾದ ಸೊತ್ತು.
35 Aa naho mivariñ’ an-tsotry ty longo’o vaho moly ama’o, rambeso himoneñe ama’o manahake t’ie renetane ndra mpañialo.
“‘ನಿನ್ನ ಸಹೋದರನು ಬಡವನಾಗಿ ನಿನ್ನ ಬಳಿಯಲ್ಲಿ ಕ್ಷೀಣವಾಗಿ ಬಿದ್ದುಕೊಂಡರೆ, ಅವನು ಪರಕೀಯನಾಗಿದ್ದರೂ, ಪ್ರವಾಸಿಯಾಗಿದ್ದರೂ ಅವನು ನಿನ್ನ ಬಳಿಯಲ್ಲಿ ಬದುಕುವ ಹಾಗೆ ಅವನಿಗೆ ಸಹಾಯಮಾಡಬೇಕು.
36 Ko angala’o anan-tsongo ndra ampandivà’o, fe añeveño t’i Andrianañahare’o, le angao himoneña’e.
ನೀನು ಅವನಿಂದ ಬಡ್ಡಿಯನ್ನಾಗಲಿ ಇಲ್ಲವೆ ಲಾಭವನ್ನಾಗಲಿ ತೆಗೆದುಕೊಳ್ಳಬಾರದು. ನಿನ್ನ ಸಹೋದರನು ನಿನ್ನೊಂದಿಗೆ ಬದುಕುವಂತೆ ನಿನ್ನ ದೇವರಿಗೆ ಭಯಪಡು.
37 Ko ampisongoen-drala hangala’o ana’e vaho ko ampanovoñe’o aze ze hanton-karo’e.
ನೀನು ಅವನಿಗೆ ಹಣವನ್ನು ಸಾಲವಾಗಿ ಕೊಟ್ಟರೆ ಬಡ್ಡಿಯನ್ನು ಕೇಳಬಾರದು, ನಿನ್ನ ಆಹಾರವನ್ನು ಲಾಭಕ್ಕಾಗಿ ಸಾಲವಾಗಿ ಕೊಡಬೇಡ.
38 Izaho Iehovà Andrianañahare’ areo nañavotse anahareo an-tane Mitsraime añe hitolorako i tane Kanàney, vaho ho Andrianañahare’ areo.
ನಿನಗೆ ಕಾನಾನ್ ದೇಶವನ್ನು ಕೊಡುವಂತೆಯೂ, ನಿನಗೆ ದೇವರಾಗಿರುವಂತೆಯೂ ನಿನ್ನನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಕರತಂದ ನಿನ್ನ ದೇವರಾಗಿರುವ ಯೆಹೋವ ದೇವರು ನಾನೇ.
39 Aa naho mifotsak’ an-kasotriañe ty longo’o ama’o, hera havili’e ama’o ty fiai’e, ko ampitoroñe’o hoe ondevo.
“‘ನಿನ್ನೊಂದಿಗೆ ವಾಸಿಸುವ ನಿನ್ನ ಸಹೋದರನು ಬಡವನಾಗಿದ್ದು ತನ್ನನ್ನೇ ಮಾರಿಕೊಂಡಿದ್ದರೆ, ದಾಸನ ಹಾಗೆ ಸೇವೆಯನ್ನು ಮಾಡುವಂತೆ ಅವನನ್ನು ನೀನು ಬಲಾತ್ಕರಿಸಬಾರದು.
40 Hoe mpikarama naho mpañialo ty hitraofa’e, hitoroñe ampara’ ty taon-Jobily;
ಆದರೆ ಕೂಲಿಯಾಳಂತೆಯೂ, ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದವರೆಗೆ ನಿನಗೆ ಸೇವೆಮಾಡಲಿ.
41 ie amy zay ro hieng’ azo rekets’ o keleia’eo, himpoly mb’ aman-drolongo’e mb’eo, mb’am-panañan-droae’e añe.
ತರುವಾಯ ಅವನು ನಿನ್ನ ಬಳಿಯಿಂದ ತನ್ನ ಮಕ್ಕಳೊಂದಿಗೆ ಹೊರಟು ತನ್ನ ಕುಟುಂಬಕ್ಕೆ ಹಿಂದಿರುಗಬೇಕು. ತನ್ನ ಪಿತೃಗಳ ಸೊತ್ತಿಗೂ ಅವನು ಹಿಂದಿರುಗಬೇಕು.
42 Ahiko iereo, mpitoroko nampiavoteko an-tane Mitsraime añe; tsy haletake ho ondevo.
ಏಕೆಂದರೆ ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಕರತಂದ ಇಸ್ರಾಯೇಲರು ನನ್ನ ಸೇವಕರಾಗಿದ್ದಾರೆ, ದಾಸರನ್ನು ಮಾರುವಂತೆ ಅವರನ್ನು ಮಾರಬಾರದು.
43 Ko silofe’o ami’ty famehea’o aze, fe añeveño t’i Andrianañahare’o.
ನೀನು ಕಠಿಣವಾಗಿ ಅವನ ಮೇಲೆ ಅಧಿಕಾರ ಚಲಾಯಿಸಬಾರದು. ನಿನ್ನ ದೇವರಿಗೆ ಭಯಪಡಬೇಕು.
44 Aa ty am’ ondevo lahilahy ndra ampela fanaña’oo; le boak’ amo fifeheañe mañohokeo ty ivilia’ areo ondevo.
“‘ನಿನ್ನ ಸುತ್ತಲೂ ಇರುವ ಇತರ ಜನರು ನಿನಗೆ ದಾಸ ದಾಸಿಯರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.
45 Azo’ areo vilieñe ka ty anan-drenetane mañialo ama’ areo, naho amo hasavereña’ iareo nisamak’ an-tane’ areoo; mete ho fanaña’ areo ka iereo.
ಇದಲ್ಲದೆ ನಿನ್ನ ಮಧ್ಯದೊಳಗಿರುವ ಪರಕೀಯ ಪ್ರವಾಸಿಗಳ ಮಕ್ಕಳಿಂದ ಮತ್ತು ನಿನ್ನ ಬಳಿಯಲ್ಲಿರುವ ಅವರ ಕುಟುಂಬಗಳಲ್ಲಿ ದೇಶದೊಳಗೆ ಅವರು ಪಡೆದವರಿಂದ ನೀನು ಕೊಂಡುಕೊಳ್ಳಬಹುದು ಮತ್ತು ಅವರು ನಿನ್ನ ಸ್ವತ್ತಾಗಿರುವರು.
46 Azo’ areo ampandovaeñe amo ana’ areo mandimbeo ho fanaña’e, ho ondevo’ areo nainai’e. Fe o longo’ areo ana’ Israeleo, le tsy ho fehe’ ty raike ty raike am-pisengean-kery.
ನಿಮ್ಮ ತರುವಾಯ ಅವರನ್ನು ನಿಮ್ಮ ಮಕ್ಕಳಿಗೆ ಸ್ವತ್ತಾಗುವ ಬಾಧ್ಯತೆಯಾಗಿ ತೆಗೆದುಕೊಳ್ಳಬೇಕು. ಅವರು ಶಾಶ್ವತವಾಗಿ ನಿಮ್ಮ ದಾಸರಾಗಿರುವರು. ಆದರೆ ಇಸ್ರಾಯೇಲರಾದ ನಿಮ್ಮ ಸಹೋದರರಲ್ಲಿ ಒಬ್ಬರ ಮೇಲೊಬ್ಬರು ಕಠಿಣವಾದ ದಬ್ಬಾಳಿಕೆಯನ್ನು ನಡೆಸಬೇಡಿರಿ.
47 Aa naho miraorao ty renetane ndra ty mpañialo ama’o, le ie mivariñ’ an-tsotry ty longo’o marine aze vaho mandeta vatañe ke amy renetaney he amy mpañialo ama’oy, hera ami’ty tarira’ i ambahiniy,
“‘ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿಯ ಸಂಪತ್ತು ಹೆಚ್ಚಾಗಲಾಗಿ ನಿನ್ನ ಸಹೋದರನು ಅವನ ಬಳಿಯಲ್ಲಿ ಬಡವನಾಗಿ ನಿನ್ನ ಬಳಿಯಲ್ಲಿರುವ ಪರಕೀಯ ಇಲ್ಲವೆ ಪ್ರವಾಸಿ ಇಲ್ಲವೆ ಪರಕೀಯನ ಸಂತತಿಯಲ್ಲಿ ಹುಟ್ಟಿದವನಿಗೆ ತನ್ನನ್ನು ಮಾರಿಕೊಂಡಿದ್ದರೂ ಅವನಿಗೆ ಬಿಡುಗಡೆಯಾಗಬಹುದು.
48 ie naletake ro mete jebañeñe. Hijebañe aze ty raik’ amo rahalahi’eo;
ಅವನ ಸಹೋದರರಲ್ಲಿ ಒಬ್ಬನು ಈಡುಕೊಟ್ಟು ಅವನನ್ನು ವಿಮೋಚಿಸಬಹುದು.
49 mete hijebañ’aze ka i rahalahin-drae’ey ndra i ana-drahalahin-drae’ey; ndra ze amy fifokoa’ey ty hijebañe aze; he ie miraorao ro hahaava-piaiñe.
ಅವನ ಚಿಕ್ಕಪ್ಪನಾಗಲಿ ಇಲ್ಲವೆ ಅವನ ಚಿಕ್ಕಪ್ಪನ ಮಗನಾಗಲಿ ಇಲ್ಲವೆ ಅವನ ಕುಟುಂಬದಲ್ಲಿ ಸಮೀಪವಾಗಿರುವ ಸಂಬಂಧಿಕರಲ್ಲಿ ಯಾರಾಗಲಿ ಅವನನ್ನು ವಿಮೋಚಿಸಬಹುದು. ಇಲ್ಲವೆ ಅವನು ಶಕ್ತನಾಗಿದ್ದರೆ ತನ್ನನ್ನು ತಾನೇ ವಿಮೋಚಿಸಿಕೊಳ್ಳಬಹುದು.
50 Ty hifamolilia’e amy nivily azey, le boak’ amy taoñe nandetaha’e vatañey pak’amy Jobiliy; ty amo taoñeo ty vilin’ aim-pijebañañe aze; ampiraeñe ami’ty taom-pikarama i nitraofa’ey.
ಅವನು ತನ್ನನ್ನು ಮಾರಿಕೊಂಡ ವರುಷ ಮೊದಲುಗೊಂಡು ಮುಂದಿನ ಜೂಬಿಲಿ ಸಂವತ್ಸರದವರೆಗೆ ಅವನೊಂದಿಗೆ ಲೆಕ್ಕಮಾಡಬೇಕು. ಅವನ ಮಾರಾಟದ ಕ್ರಯವು ವರುಷಗಳ ಲೆಕ್ಕದ ಪ್ರಕಾರ ಕೂಲಿಯಾಳಿನ ಸಮಯಕ್ಕೆ ತಕ್ಕಂತೆ ಅವನೊಂದಿಗೆ ಅದು ಇರುವುದು.
51 Ie mbe maro taoñe ty añe, le izay ty añavaha’e ty vilin’ ai’e amy drala nikaloañe azey;
ಜೂಬಿಲಿ ಸಂವತ್ಸರದವರೆಗೆ ಇನ್ನು ಬಹಳ ವರುಷಗಳಿದ್ದರೆ ಅವುಗಳ ಪ್ರಕಾರ ತನ್ನ ವಿಮೋಚನೆಯ ಕ್ರಯವನ್ನು ಕೊಡಬೇಕು.
52 ie tsy ampe ty taoñe pak’ amy taon-Jobiliy le inao ty hamoliliañe iareo roe: ty amo tao’eo ty añavahañe ty vilin’ai’e.
ಜೂಬಿಲಿ ಸಂವತ್ಸರದವರೆಗೆ ಕೆಲವು ವರುಷಗಳು ಮಾತ್ರ ಉಳಿದಿದ್ದರೆ ಅವನೊಂದಿಗೆ ಎಣಿಸಬೇಕು. ಅವನ ವರ್ಷಗಳ ಮೇರೆಗೆ ತನ್ನ ವಿಮೋಚನೆಯ ಕ್ರಯವನ್ನು ತಿರುಗಿ ಅವನಿಗೆ ಸಲ್ಲಿಸಬೇಕು.
53 Ho ama’e re manahake ty mpikarama mpitoloñe taoñ’ an-taoñe; tsy hisengean-kery am-pahaisaha’o.
ವರ್ಷದ ಕೂಲಿಯಾಳಿನಂತೆ ಅವನ ಬಳಿಯಲ್ಲಿ ಇರಬೇಕು. ಆದರೆ ಯಜಮಾನನು ಅವನನ್ನು ಕಠಿಣವಾಗಿ ನಡೆಸಿಕೊಳ್ಳುತ್ತಿರುವುದನ್ನು ನೀವು ನೋಡುತ್ತಾ ಸುಮ್ಮನಿರಬಾರದು.
54 Aa naho tsy jebañeñe amy hoe zay, mbe hienga avao amy taon-Jobiliy, ie rekets’ o keleia’eo.
“‘ಈ ವರುಷಗಳಲ್ಲಿ ಅವನು ಬಿಡಿಸಿಕೊಳ್ಳದೆ ಹೋದರೆ, ಜೂಬಿಲಿ ಸಂವತ್ಸರದಲ್ಲಿ ಅವನು ಮಕ್ಕಳೊಂದಿಗೆ ಬಿಡುಗಡೆಯಾಗಬೇಕು.
55 Ahiko o ana’ Israeleo; mpitoroko nakareko an-tane Mitsraime añe: Izaho Iehovà Andrianañahare’ areo.
ಏಕೆಂದರೆ ಇಸ್ರಾಯೇಲರು ನನ್ನ ದಾಸರು ಈಜಿಪ್ಟ್ ದೇಶದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿನ್ನ ದೇವರಾದ ಯೆಹೋವ ದೇವರು ನಾನೇ.