< Ezayi 54 >
1 Oh mwasi ekomba, yemba nzembo na esengo, yo oyo obotaka te! Yemba nzembo mpe ganga na esengo, yo mwasi oyo oyoki nanu pasi ya kobota te! Pamba te bana ya mwasi oyo basundola bakozala ebele koleka bana ya mwasi ya libala, elobi Yawe.
೧“ಹೆರದವಳೇ, ಬಂಜೆಯೇ, ಹರ್ಷಧ್ವನಿಗೈ! ಪ್ರಸವ ವೇದನೆಯನ್ನು ಅನುಭವಿಸದವಳೇ, ಆನಂದ ಸ್ವರವೆತ್ತಿ ಕೂಗು! ಗಂಡನುಳ್ಳವಳಿಗಿಂತ ಗಂಡಬಿಟ್ಟವಳಿಗೆ ಮಕ್ಕಳು ಹೆಚ್ಚು” ಎಂದು ಯೆಹೋವನು ಹೇಳುತ್ತಾನೆ.
2 Yeisa ndako na yo ya kapo monene, bakisa bakapo na ndako yango mpo ete eya monene; kokanga motema te! Benda na molayi basinga na yo mpe pika banzete na yo makasi!
೨ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು.
3 Pamba te okofungwama na ngambo ya loboko na yo ya mobali mpe na ngambo ya loboko na yo ya mwasi; bakitani na yo bakokonza bikolo mosusu mpe bakosala ete bato bavanda lisusu na bingumba na bango oyo etikalaki lisusu na bato te.
೩ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳು ಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು.
4 Kobanga te, pamba te okoyoka lisusu soni te! Kozala na mawa te, pamba te okotiolama lisusu te! Okobosana soni ya bolenge na yo mpe okokanisa lisusu te pasi na yo ya kokufisa mobali;
೪“ಹೆದರಬೇಡ, ನಿನಗೆ ಅವಮಾನವಾಗುವುದಿಲ್ಲ, ನಾಚಿಕೆಪಡದಿರು, ನಿನಗೆ ಆಶಾಭಂಗವಾಗದು; ಯೌವನದಲ್ಲಿ ನಿನಗಾದ ಅವಮಾನವನ್ನು ಮರೆತುಬಿಡುವಿ, ವೈಧವ್ಯದಲ್ಲಿ ನಿನಗೆ ಸಂಭವಿಸಿದ ನಿಂದೆಯು ಇನ್ನು ನಿನ್ನ ನೆನಪಿಗೆ ಬಾರದು.
5 pamba te Mokeli na yo nde mobali na yo, Kombo na Ye: Yawe, Mokonzi ya mampinga; Mosantu ya Isalaele azali Mosikoli na yo; babengaka Ye: Nzambe ya mokili mobimba.
೫“ನಿನ್ನ ಸೃಷ್ಟಿಕರ್ತನೇ ನಿನ್ನ ಪತಿ, ಆತನ ಹೆಸರು ಸೇನಾಧೀಶ್ವರನಾದ ಯೆಹೋವ; ಇಸ್ರಾಯೇಲಿನ ಸದಮಲಸ್ವಾಮಿಯು ನಿನ್ನ ನ್ಯಾಯಸ್ಥಾಪಕನಾಗಿದ್ದಾನೆ; ಸರ್ವಲೋಕದ ದೇವರೆಂಬ ನಾಮಧೇಯವನ್ನು ಹೊಂದಿರುವನು.
6 Pamba te Yawe abengi yo lisusu lokola mwasi oyo basundola, bongo azali na pasi na motema. Ndenge nini bakoki solo kosundola mwasi oyo babala na bolenge, elobi Nzambe na yo?
೬ನೀನು ತ್ಯಜಿಸಿದ ಮನನೊಂದ ಹೆಂಡತಿ, ಹೌದು, ತ್ಯಜಿಸಲ್ಪಟ್ಟವಳಾದ ನನ್ನ ಯೌವನಕಾಲದ ಪತ್ನಿ ಎಂದು ಯೆಹೋವನು ನಿನ್ನನ್ನು ಕನಿಕರಿಸಿ ಕರೆದಿದ್ದಾನೆ” ಎಂಬುದು ನಿನ್ನ ದೇವರ ನುಡಿ.
7 Nasundolaki yo kaka mpo na tango moke; kasi na bolingo nyonso, nakozongisa yo.
೭“ಕ್ಷಣಮಾತ್ರ ನಿನ್ನನ್ನು ಬಿಟ್ಟಿದ್ದೆನು, ಮಹಾ ಕೃಪೆಯಿಂದ ಸೇರಿಸಿಕೊಳ್ಳುವೆನು.
8 Mpo ete nazalaki na kanda makasi, nabombelaki yo elongi na Ngai kaka mpo na tango moke; kasi nakolakisa yo bolamu mpo na bolingo oyo ezangi suka, elobi Yawe, Mosikoli na yo.
೮ತಟ್ಟನೆ ಉಬ್ಬಿ ಹರಿಯುವ ಕೋಪದಿಂದ ಒಂದು ಕ್ಷಣ ಮಾತ್ರ ನನ್ನ ಮುಖವನ್ನು ನಿನಗೆ ಮರೆಮಾಡಿಕೊಂಡಿದ್ದೆನು, ಶಾಶ್ವತ ಕೃಪೆಯಿಂದ ನಿನ್ನನ್ನು ಕರುಣಿಸುವೆನು” ಎಂದು ನಿನ್ನ ವಿಮೋಚಕನಾದ ಯೆಹೋವನು ಅನ್ನುತ್ತಾನೆ.
9 Na miso na Ngai, ezali lokola na mikolo ya Noa, tango nalapaki ndayi ete mayi ya Noa ekozindisa lisusu mabele te. Boye, nalapi solo ndayi sik’oyo ete nakosilikela yo lisusu te mpe nakopamela yo lisusu te.
೯“ನಿನ್ನನ್ನು ತ್ಯಜಿಸಿದ್ದು ನನಗೆ ನೋಹನ ಕಾಲದ ಜಲಪ್ರಳಯದಂತಿದೆ; ಇಂತಹ ಜಲಪ್ರಳಯವು ಭೂಮಿಯನ್ನು ಪುನಃ ಆವರಿಸುವುದಿಲ್ಲ ಎಂದು ನಾನು ಹೇಗೆ ಪ್ರಮಾಣಮಾಡಿದೆನೋ ಹಾಗೆಯೇ ನಾನು ನಿನ್ನ ಮೇಲೆ ಇನ್ನು ಕೋಪಮಾಡುವುದಿಲ್ಲ, ಗದರಿಸುವುದಿಲ್ಲ ಎಂದು ಈಗ ಪ್ರಮಾಣಮಾಡಿದ್ದೇನೆ.
10 Ata bangomba milayi eningani, ata bangomba mikuse elongwe na bisika na yango, bolingo na Ngai epai na yo ekoningana te, mpe boyokani na Ngai ya kimia ekotikala kolongwa te, elobi Yawe oyo alingaka yo.
೧೦ಬೆಟ್ಟಗಳು ಸ್ಥಳವನ್ನು ಬಿಟ್ಟುಹೋದಾವು, ಗುಡ್ಡಗಳು ಕದಲಿಯಾವು; ಆದರೆ ನನ್ನ ಕೃಪೆಯು ನಿನ್ನನ್ನು ಬಿಟ್ಟುಹೋಗದು, ಸಮಾಧಾನದ ನನ್ನ ಒಪ್ಪಂದವು ಕದಲದು ಎಂದು ನಿನ್ನನ್ನು ಕರುಣಿಸುವ ಯೆಹೋವನು ಅನ್ನುತ್ತಾನೆ.
11 Oh engumba ya mawa, engumba oyo mopepe makasi esili kobuka mpe ezangeli kobondisama, nakotonga yo lisusu na mabanga ya talo mpe nakosala miboko na yo na mabanga ya safiri,
೧೧ಕುಗ್ಗಿದವಳೇ, ಗಾಳಿಯ ಬಡಿತಕ್ಕೆ ಗುರಿಯಾದವಳೇ, ಯಾರೂ ಸಂತೈಸದವಳೇ, ಇಗೋ, ಇಂದ್ರನೀಲಮಣಿಗಳಿಂದ ನಿನಗೆ ಅಸ್ತಿವಾರವನ್ನು ಹಾಕಿ, ನಿನ್ನ ಕಲ್ಲುಗಳನ್ನು ನೀಲಾಂಜನದ ಗಾರೆಯಿಂದ ಕಟ್ಟುವೆನು.
12 nakotonga bamir ya lopango na yo na mabanga ya ribi, nakosala bikuke na yo na biloko ya ngelingeli, mpe bamir na yo nyonso, na mabanga ya talo.
೧೨ನಿನ್ನ ಶಿಖರಗಳನ್ನು ಮಾಣಿಕ್ಯಗಳಿಂದ, ನಿನ್ನ ಬಾಗಿಲುಗಳನ್ನು ಪದ್ಮರಾಗಗಳಿಂದ, ನಿನ್ನ ಪೌಳಿಗೋಡೆಯನ್ನು ಮನೋಹರ ರತ್ನಗಳಿಂದ ನಿರ್ಮಿಸುವೆನು.
13 Yawe akoteya bana na yo nyonso, mpe kimia ya bana na yo ekozala monene.
೧೩ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವುದು.
14 Okolendisama kati na bosembo: minyoko ekozala mosika na yo, okobanga lisusu eloko moko te, mpe somo ekokende mosika na yo; ekomeka kopusana lisusu pene na yo te.
೧೪ಧರ್ಮವೇ ನಿನಗೆ ಆಧಾರ; ನೀನು ಹಿಂಸೆಗೆ ದೂರವಾಗಿರುವಿ, ನಿನಗೆ ಹೆದರಿಕೆ ಇರುವುದಿಲ್ಲ, ನಾಶನವು ದೂರವಾಗಿರುವುದು, ನಿನ್ನ ಹತ್ತಿರಕ್ಕೆ ಬಾರದು.
15 Soki babundisi yo, ekowuta epai na Ngai te; moto nyonso oyo akobundisa yo akokweya liboso na yo.
೧೫ನೋಡು, ಯಾರಾದರೂ ನಿನ್ನ ಸಂಗಡ ವ್ಯಾಜ್ಯವಾಡಿದರೆ ಅದು ನನ್ನ ಅಪ್ಪಣೆಯಿಂದ ಅಲ್ಲ; ಯಾರು ನಿನ್ನ ಮೇಲೆ ವ್ಯಾಜ್ಯವಾಡುತ್ತಾರೋ ಅವರು ನಿನ್ನ ನಿಮಿತ್ತ ಕೆಡವಲ್ಪಡುವರು.
16 Tala, ezali Ngai nde nakelaki monyangwisi bibende na moto oyo apelisaka moto makasi na makala mpe asalaka ebundeli mpo ete esala mosala na yango. Ezali mpe kaka Ngai nde nakelaki mobebisi mpo ete asala mosala ya kobebisa.
೧೬ಕೇಳು, ಕೆಂಡವನ್ನು ಊದುತ್ತಾ ಉಪಯುಕ್ತವಾದ ಆಯುಧವನ್ನು ಉಂಟುಮಾಡುವ ಕಮ್ಮಾರನನ್ನು ಸೃಷ್ಟಿಸಿದವನು ನಾನೇ, ಹಾಳುಮಾಡುವ ಕೆಡುಕನನ್ನು ನಿರ್ಮಿಸಿದವನೂ ನಾನೇ.
17 Nzokande, ebundeli moko te oyo esalemi mpo na kosala yo mabe ekolonga; mpe monoko nyonso oyo ekotelemela yo na kosambisa, okokatela yango etumbu. Yango nde ekozala libula ya basali ya Yawe, mpe elonga na bango kowuta epai na Ngai, elobi Yawe.
೧೭ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ. ಈ ಸ್ಥಿತಿಯೇ ಯೆಹೋವನ ಸೇವಕರ ಸ್ವಾಸ್ತ್ಯವೂ, ನಾನು ದಯಪಾಲಿಸುವ ಸದ್ಧರ್ಮಫಲವೂ ಆಗಿದೆ” ಎಂದು ಯೆಹೋವನು ಅನ್ನುತ್ತಾನೆ.