< Psalmorum 75 >

1 Psalmus Cantici Asaph, in finem, ne corrumpas. Confitebimur tibi Deus: confitebimur, et invocabimus nomen tuum. Narrabimus mirabilia tua:
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಟೇತೆಂಬ ರಾಗ. ಆಸಾಫನ ಕೀರ್ತನೆ. ಒಂದು ಗೀತೆ. ನಿಮ್ಮನ್ನು ಕೊಂಡಾಡುತ್ತೇವೆ; ದೇವರೇ, ನಿಮ್ಮನ್ನು ಕೊಂಡಾಡುತ್ತೇವೆ; ಏಕೆಂದರೆ ಜನರು ನಿಮ್ಮ ನಾಮವನ್ನು ಜಪಿಸಿ, ನಿಮ್ಮ ಅದ್ಭುತಗಳನ್ನು ಕುರಿತು ಹೇಳುತ್ತಾರೆ.
2 cum accepero tempus, ego iustitias iudicabo.
“ನಿಯಮಿತ ಸಮಯವನ್ನು ಆಯ್ದುಕೊಳ್ಳುವೆನು. ನ್ಯಾಯಕ್ಕೆ ಸರಿಯಾಗಿ ನ್ಯಾಯತೀರಿಸುವೆನು,
3 Liquefacta est terra, et omnes qui habitant in ea: ego confirmavi columnas eius.
ಭೂಮಿಯೂ ಅದರ ನಿವಾಸಿಗಳೆಲ್ಲರೂ ಬೆರಗಾಗಿದ್ದಾರೆ. ನಾನು ಅದರ ಸ್ತಂಭಗಳನ್ನು ನಿಲ್ಲಿಸಿದ್ದೇನೆ.
4 Dixi iniquis: Nolite inique agere: et delinquentibus: Nolite exaltare cornu:
‘ಅಹಂಕಾರದಿಂದ ವರ್ತಿಸಬೇಡಿರಿ,’ ಎಂದು ಅಹಂಕಾರಿಗೆ ಹೇಳುತ್ತೇನೆ. ‘ನಿಮ್ಮ ಕೊಂಬು ಎತ್ತಬೇಡಿರಿ,’ ಎಂದು ದುಷ್ಟರಿಗೆ ಹೇಳುವೆನು.
5 Nolite extollere in altum cornu vestrum: nolite loqui adversus Deum iniquitatem.
ನಿಮ್ಮ ಕೊಂಬನ್ನು ಪರಲೋಕದ ಕಡೆಗೆ ಎತ್ತಬೇಡಿರಿ. ಹಟಮಾರಿತನದಿಂದ ಮಾತನಾಡಬೇಡಿರಿ,” ಎಂದು ನೀವು ಹೇಳಿದ್ದೀರಿ.
6 Quia neque ab Oriente, neque ab Occidente, neque a desertis montibus:
ಏಕೆಂದರೆ ಉದ್ಧಾರವು ಪೂರ್ವದಿಂದಲೂ ಪಶ್ಚಿಮದಿಂದಲೂ ಅಲ್ಲ, ಇಲ್ಲವೆ ದಕ್ಷಿಣದ ಮರುಭೂಮಿಯಿಂದಲೂ ಬರುವುದಿಲ್ಲ.
7 quoniam Deus iudex est. Hunc humiliat, et hunc exaltat:
ಆದರೆ ದೇವರು ನ್ಯಾಯತೀರಿಸುವವರಾಗಿದ್ದಾರೆ. ದೇವರು ಒಬ್ಬನನ್ನು ತಗ್ಗಿಸುತ್ತಾರೆ, ಒಬ್ಬನನ್ನು ಎತ್ತುತ್ತಾರೆ.
8 quia calix in manu Domini vini meri plenus misto. Et inclinavit ex hoc in hoc: verumtamen faex eius non est exinanita: bibent omnes peccatores terrae.
ಯೆಹೋವ ದೇವರ ಕೈಯಲ್ಲಿ ಒಂದು ಪಾತ್ರೆಯು ಇದೆ. ಔಷಧಿಮಿಶ್ರವಾಗಿ ಉಕ್ಕುವ ದ್ರಾಕ್ಷಾರಸದಿಂದ ತುಂಬಿ ಇದೆ. ಅದನ್ನು ಅವರು ಹೊಯ್ಯುತ್ತಾರೆ. ಅದರ ಮಡ್ಡಿಯನ್ನು ಸಹ ಭೂಮಿಯ ದುಷ್ಟರೆಲ್ಲರೂ ಹೀರಿಕೊಂಡು ಕುಡಿಯುವರು.
9 Ego autem annunciabo in saeculum: cantabo Deo Iacob.
ನಾನಾದರೋ ಸದಾ ವರ್ಣಿಸುವವನಾಗಿ ಯಾಕೋಬ ವಂಶದವರ ದೇವರನ್ನು ಸಂಕೀರ್ತಿಸುವೆನು.
10 Et omnia cornua peccatorum confringam: et exaltabuntur cornua iusti.
ದುಷ್ಟರ ಕೊಂಬುಗಳನ್ನೆಲ್ಲಾ ಕಡಿದುಹೋಗುವುದು. ಆದರೆ ನೀತಿವಂತನ ಕೊಂಬುಗಳು ಎತ್ತಲಾಗುವುದು.

< Psalmorum 75 >